ಅಕ್ರಮ ಗೋಸಾಟ ಮಾಡುತ್ತಿದ್ದ ವಾಹನದ ಮೇಲೆ ಇಂದು ಮುಂಜಾನೆ ಪೋಲೀಸರು ಫೈರಿಂಗ್
Jayram Udupi:
ಪುತ್ತೂರು:
ಅಕ್ರಮ ಗೋಸಾಟ ಮಾಡುತ್ತಿದ್ದ ವಾಹನದ ಮೇಲೆ ಇಂದು ಮುಂಜಾನೆ ಪೋಲೀಸರು ಫೈರಿಂಗ್ ಮಾಡಿದ ಘಟನೆ ಈಶ್ವರಮಂಗಲದ ಬೆಳ್ಳಿಚಡವು ಎಂಬಲ್ಲಿ ನಡೆದಿದೆ.
ಕರ್ನಾಟಕದಿಂದ ಕೇರಳಕ್ಕೆ ಸಾಗುತ್ತಿದ್ದ ಈಚರ್ ವಾಹನದಲ್ಲಿ ಅಕ್ರಮ ಗೋಸಾಟ ಮಾಡುತ್ತಿದ್ದ ವಾಹನ ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ, ಆದರೆ ಪೋಲೀಸರ ಮೇಲೆಯೇ ವಾಹನ ಚಲಾಯಿಸಲು ಆರೋಪಿಗಳು ಯತ್ನಿಸಿದ್ದಾರೆ.
ಈ ಸಮಯದಲ್ಲಿ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ ಜಂಭೂರಾಜ್ ಮಹರಾಜ್ ಪೈರಿಂಗ್ ಮಾಡಿದ್ದಾರೆ. ಅಬ್ದುಲ್ಲಾ (40) ಪೋಲೀಸ್ ಫೈಯರಿಂಗ್ ನಲ್ಲಿ ಗಾಯಗೊಂಡ ಆರೋಪಿ, ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಓರ್ವ ಆರೋಪಿ ನಾಪತ್ತೆಯಾಗಿದ್ದು ಪೋಲೀಸರು ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಬಂದೋಬಸ್ತ್ ಮಾಡಿದ್ದಾರೆ. ಹಿಂದೂ ಸಂಘಟನೆಗಳ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
[22/10, 1:03 pm] Jayram Udupi: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಕ್ರಮ ಗೋಸಾಗಾಟಗಾರನ ಕಾಲಿಗೆ ಗುಂಡು ಹೊಡೆದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಡಾ. ಅರುಣ್ ಹೇಳಿಕೆ ನೀಡಿದ್ದಾರೆ.
ಅಕ್ರಮವಾಗಿ ಹತ್ತು ಜಾನುವಾರುಗಳನ್ನು ಸಾಗಿಸುತ್ತಿದ್ದ ಈಚರ್ ಟೆಂಪೋವನ್ನು ಪೊಲೀಸರು ಬೆನ್ನಟ್ಟಿದ್ದು ಈ ವೇಳೆ ಪೊಲೀಸ್ ಜೀಪಿಗೆ ಡಿಕ್ಕಿಯಾಗಿಸಲು ಯತ್ನಿಸಿದಾಗ ಪುತ್ತೂರು ಗ್ರಾಮಾಂತರ ಠಾಣೆ ಪಿಎಸ್‌ಐ ಅವರು ಒಬ್ಬನಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಿದ್ದಾರೆ ಎಂದು ಡಾ.ಅರುಣ್ ಹೇಳಿದ್ದಾರೆ.
ಸುಮಾರು ಹತ್ತು ಕಿಮೀ ಉದ್ದಕ್ಕೆ ಪೊಲೀಸರು ಬೆನ್ನಟ್ಟಿದ್ದು ಈ ವೇಳೆ ಜೀಪಿಗೆ ಡಿಕ್ಕಿಪಡಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ನೆಟ್ಟಣಿಗೆ ಮುನ್ನೂರು ಬೆಳ್ಳಿಚಡವು ಒಳರಸ್ತೆಯ ಮೂಲಕ ಕೇರಳಕ್ಕೆ ಸಾಗುತ್ತಿದ್ದಾಗ ಪೊಲೀಸರು ಅಡ್ಡಹಾಕಿದ್ದಾರೆ.
ವಾಹನ ನಿಲ್ಲಿಸಲು ಸೂಚಿಸಿದ ಪೊಲೀಸರ ಮೇಲೆ ಲಾರಿ ಹತ್ತಿಸಲು ಯತ್ನಿಸಿದ್ದಾರೆ. ಅಲ್ಲದೆ, ವಾಹನ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿದ್ದಾರೆ. ಬೆಳ್ಳಿಚಡವು ಬಳಿ ಲಾರಿ ಬಿಟ್ಟು ಒಬ್ಬಾತ ಓಡಿದ್ದು ಈ ವೇಳೆ ಪಿಎಸ್‌ಐ ಜಂಬುರಾಜ್ ಮಹಾಜನ್ ತನ್ನ ಪಿಸ್ತೂಲಿನಿಂದ ಫೈರ್ ಮಾಡಿದ್ದಾರೆ. ಒಂದು ಗುಂಡು ಈಚರ್ ಲಾರಿ ಮೇಲೆ ಬಿದ್ದಿದ್ದು, ಇನ್ನೊಂದು ಗುಂಡು ಲಾರಿ ಚಲಾಯಿಸುತ್ತಿದ್ದ ಅಬ್ದುಲ್ಲಾ (40) ಎಂಬಾತನ ಕಾಲಿಗೆ ಬಿದ್ದಿದೆ. ಈ ವೇಳೆ, ಲಾರಿ ನಿಲ್ಲುತ್ತಲೇ ಇನ್ನೊಬ್ಬ ಆರೋಪಿ ಇಳಿದು ಪರಾರಿಯಾಗಿದ್ದು ಗಾಯಾಳು ಚಾಲಕನನ್ನು ಬಂಧಿಸಿ ಮಂಗಳೂರಿನ ವೆನ್ಹಾಕ್ ಆಸ್ಪತ್ರೆಗೆ ತರಲಾಗಿದೆ. ಆರೋಪಿ ಅಬ್ದುಲ್ಲಾ ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾಗಿದ್ದು ಅಕ್ರಮವಾಗಿ ಗೋವುಗಳನ್ನು ಸುಳ್ಯ ಪುತ್ತೂರು ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದ.
ಲಾರಿಯಲ್ಲಿದ್ದ 10 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಬ್ದುಲ್ಲಾ ವಿರುದ್ಧ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.