ಆರ್.ವಿ ದೇಶಪಾಂಡೆ ಸರ್ಕಾರದ ವಾಸ್ತವ ಅಂಶವನ್ನ ತೆರೆದಿಟ್ಟಿದ್ದಾರೆ - ನಿಖಿಲ್ ಕುಮಾರಸ್ವಾಮಿ

Banglore:

Font size:

ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಕುಂಟಿತಗೊಂಡಿದೆ ಕರ್ಮ ಯಾರನ್ನು ಬಿಡೋದಿಲ್ಲ - ನಿಖಿಲ್ ಕುಮಾರಸ್ವಾಮಿ

ಬೆಂಗಳೂರು : ರಾಜ್ಯದಲ್ಲಿ ಗ್ಯಾರಂಟಿಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಾಸ್ತವಾಂಶವನ್ನು ಕಾಂಗ್ರೆಸ್‌ ಹಿರಿಯ ಶಾಸಕರಾದ ಆರ್‌.ವಿ. ದೇಶಪಾಂಡೆ ತೆರೆದಿಟ್ಟಿದ್ದಾರೆ. ಇದ್ರಲ್ಲಿ ತಪ್ಪೇನಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು

ದೇಶಪಾಂಡೆ ಅವರು ಗ್ಯಾರಂಟಿಗಳ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅವರು ಹೇಳಿದ್ರಲ್ಲಿ ತಪ್ಪೇನಿಲ್ಲ. ಸರ್ಕಾರದ ವಾಸ್ತವ ಅಂಶವನ್ನ ತೆರೆದಿಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು.

ರಾಜ್ಯದ ಮುಖ್ಯಮಂತ್ರಿಗಳು ದೊಡ್ಡ ಗಾತ್ರದ ಬಜೆಟ್ ಕೊಟ್ಟಿದ್ದೇವೆ ಅಂತ ಹೇಳ್ತಾರೆ. ಅದರಲ್ಲಿ ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ಮಿಸಲಿಟ್ಟಿದ್ದೇವೆ ಅಂತ ಹೇಳ್ತಾರೆ. ಇಲ್ಲಿವರೆಗೂ ಪ್ರತಿ ತಿಂಗಳು ಸಮರ್ಪಕವಾಗಿ ಗ್ಯಾರಂಟಿಗಳನ್ನ ಕೊಟ್ಟಿಲ್ಲ. ಅಭಿವೃದ್ಧಿ ಸಂಪೂರ್ಣವಾಗಿ ಕುಂಟಿತಗೊಂಡಿದೆ ಎಂದು ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ಮ ಯಾರನ್ನು ಬಿಡೋದಿಲ್ಲ

ಕುಮಾರಸ್ವಾಮಿ ಮೇಲೆ ಮಾಟ ಮಂತ್ರ ಮಾಡಿಸಲಾಗಿದೆ ಎಂಬ ಮುನಿರತ್ನ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ನಾನು ಇದ್ಯಾವುದರಲ್ಲು ನಂಬಿಕೆ ಇಟ್ಕೊಂಡಿಲ್ಲ. ನಮಗೆ ಗೊತ್ತಿರೋದು ಒಂದೇ ಕಾಯಕವೇ ಕೈಲಾಸ ಅಂತ. ನಾವು ಶಿವನ ಆರಾಧಕರು ಭಕ್ತಿ ಪೂರಕವಾಗಿ ಪೂಜೆ ಮಾಡ್ತೀವಿ. ಅವರು ಹೇಳಿರುವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.

ಕರ್ಮ ಯಾರನ್ನು ಬಿಡೋದಿಲ್ಲ. ನಾವು ಏನ್ ಮಾಡ್ತೀವೋ ಅದು ನಮಗೆ ವಾಪಸ್ ಕೊಡುತ್ತೆ. ನನಗೆ ಈ ಬ್ಲ್ಯಾಕ್ ಮ್ಯಾಜಿಕ್ ಬಗ್ಗೆ ಎಲ್ಲಾ ಗೊತ್ತಿಲ್ಲ ಅದನ್ನ ಗಂಭೀರವಾಗಿ ತೆಗೆದುಕೊಳ್ಳೋದು ಬೇಡ ಎಂದು ನಿಖಿಲ್ ಅವರು ಹೇಳಿದರು.

RSS ಬ್ಯಾನ್ ವಿಚಾರ

ಆರ್ ಎಸ್ ಎಸ್ ನಮ್ಮ ಭಾರತ ದೇಶದಲ್ಲಿ ಸಮಾಜವನ್ನು ಒಳ್ಳೆ ದಿಕ್ಕಿಗೆ ತೆಗೆದುಕೊಂಡು ಹೋಗ್ತಿದೆ. ಸಾಕಷ್ಟು ಒಳ್ಳೆಯ ಕೆಲಸ ಮಾಡಿದೆ. ಈಗಾಗಲೇ ನೂರು ವರ್ಷ ಆರ್ ಎಸ್ ಎಸ್ ಪೂರೈಸಿದೆ. ಇದನ್ನ ರಾಜಕೀಯ ಹೇಳಿಕೆಗೆ ಬಳಸಬಾರದು ಎಂದು ಹೇಳಿದರು.

ದೇವೇಗೌಡರಿಗೆ ದೈವದ ಅನುಗ್ರಹವಿದೆ

ಮಾಜಿ ಪ್ರಧಾನಿ ಸನ್ಮಾನ್ಯ ದೇವೇಗೌಡರಿಗೆ ದೈವದ ಅನುಗ್ರಹವಿದೆ. ಎಂಥ ಸಮಸ್ಯೆ ಬಂದರು ಗೆದ್ದು ಬರುತ್ತೇನೆಂದು ಆತ್ಮವಿಶ್ವಾಸ ಇದೆ. ಬಹಳ ಬೇಗ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿರುವ ವೈದ್ಯರಿಗೂ ಧನ್ಯವಾದಗಳು. ಅವರ ಶ್ರಮವು ಅಷ್ಟೇ ಇದೆ. ರಾಜ್ಯದ ಹೇಳುವರು ಕೋಟಿ ಕನ್ನಡಿಗರ ಆಶೀರ್ವಾದ, ಆರೈಕೆ, ಪ್ರೀತಿ ವಾತ್ಸಲ್ಯ ದೇವೇಗೌಡರ ಮೇಲಿದೆ. ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿದಿದೆ. ಯಾರು ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಇದೇ ವೇಳೆ ತಿಳಿಸಿದರು.

Prev Post ಸರ್ಕಾರಿ ಸ್ಥಳದಲ್ಲಿ ಆರ್ ಎಸ್ ಎಸ್ ಚಟುವಟಿಕೆ ನಿರ್ಬಂಧ : ಪರಿಶೀಲನೆಗೆ ಸ ಮುಖ್ಯಕಾರ್ಯದರ್ಶಿಗಳಿಗೆ ಸಿಎಂ ಸೂಚನೆ
Next Post ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ