Font size:
ಭಾನುವಾರ ಬೆಳಗ್ಗೆ ಜೆಪಿ ಪಾರ್ಕ್ ಉದ್ಯಾನದಲ್ಲಿ ಜನಸಾಮಾನ್ಯರ ಜತೆ ಹೆಜ್ಜೆ ಹಾಕಿಅಹವಾಲು ಆಲಿಸಿದ ಡಿಸಿಎಂ ಡಿಕೆಶಿ
ಬೆಂಗಳೂರಿನ ಉದ್ಯಾನವನಗಳಲ್ಲಿ ನಾಗರೀಕರು ಹಾಗೂ ವಾಯು ವಿಹಾರಿಗಳ ಧ್ವನಿ ಆಲಿಸಲು ವಿನೂತನವಾಗಿ ರೂಪಿಸಿರುವ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ಬೆಳಗ್ಗೆ ಜೆಪಿ ಪಾರ್ಕ್ ಉದ್ಯಾನದಲ್ಲಿ ಜನಸಾಮಾನ್ಯರ ಜತೆ ಹೆಜ್ಜೆ ಹಾಕಿದರು. ಅವರ ಅಹವಾಲು ಆಲಿಸಿದರು, ಸಲಹೆಗಳನ್ನು ಪಡೆದರು. ಸಂವಾದ ನಡೆಸಿದರು, ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು. ಮುಖ್ಯ ಆಯುಕ್ತ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್, ಪೊಮ್ಮಲ ಸುನೀಲ್ ಕುಮಾರ್, ಮಾಜಿ ಕಾರ್ಪೊರೇಟರ್ ನಂಜುಂಡಪ್ಪ, ಅಪರ ಆಯುಕ್ತರಾದ ಲತಾ, ಜಂಟಿ ಆಯುಕ್ತರಾದ ಮೊಮಿನ್, ಬಿ.ಎಸ್.ಡಬ್ಲ್ಯೂ.ಎಂ.ಎಲ್ ನ ಸಿಇಒ ಕರೀಗೌಡ ಮತ್ತಿತರರು ಉಪಸ್ಥಿತರಿದ್ದರು.