ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಬಾಗ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಚಾಲನೆ ನೀಡಿದರು

BANGALORE:

Font size:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಬಾಗ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಚಾಲನೆ ನೀಡಿದರು

ಪರಿಸರ ವಾಹಿನಿ ವಾಹನಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಅಕ್ಟೋಬರ್ 06, (ಕರ್ನಾಟಕ ವಾರ್ತೆ):

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಸ 68 ಪರಿಸರ ವಾಹಿನಿ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಇಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಧಾನಸೌಧ ಭವ್ಯ ಮೆಟ್ಟಿಲುಗಳ ಮುಂಭಾಗ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಹೊಸ ಪರಿಸರ ವಾಹಿನಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 7,67,25,498/- ರೂ ವೆಚ್ಚದಲ್ಲಿ ಒಟ್ಟು 68 ವಾಹನಗಳನ್ನು ಖರೀದಿಸಿದ್ದು, ಈ ವಾಹನಗಳನ್ನು ರಾಜ್ಯದ್ಯಾದಂತ ಇರುವ ಮಂಡಳಿಯ ಪ್ರಾದೇಶಿಕ ಕಛೇರಿ ಮತ್ತು ವಲಯ ಕಛೇರಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಿದೆ.

ಮೆ. ಮಹೇಂದ್ರ & ಮಹೇಂದ್ರ ಸಂಸ್ಥೆಯಿಂದ 48 ಸಂಖ್ಯೆಯ ಬುಲೇರೋ ನಿಯೋ ಎನ್ 4 ಮತ್ತು ಎನ್ 10 ವಾಹನಗಳನ್ನು ಖರೀದಿಸಿದ್ದು. ಸದರಿ ವಾಹನಗಳನ್ನು ರಾಜ್ಯದ್ಯಾದಂತ ಇರುವ ಪ್ರಾದೇಶಿಕ ಕಛೇರಿ ಹಾಗೂ ಬೆಂಗಳೂರು ನಗರ ಹೊರತು ಪಡಿಸಿ ಇರುವ ವಲಯ ಹಿರಿಯ ಪರಿಸರ ಅಧಿಕಾರಿಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಿದೆ.

ಹಾಗೆಯೇ ಬೆಂಗಳೂರು ನಗರದಲ್ಲಿ ವಾಹನಗಳಿಂದ ಹೊರಸೂಸುವ ಕಾರ್ಬನ್ ಡೈಆಕ್ಸೆಡ್ ಕಡಿಮೆ ಮಾಡುವ ಉದ್ದೇಶದಿಂದ 16 ಸಂಖ್ಯೆಯ ವಿದ್ಯುತ್ ಚಾಲಿತ ಮಹೀಂದ್ರ ಎಕ್ಸ್ ಯು ವಿ 400 ವಾಹನಗಳನ್ನು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಂಡಳಿಯ ವಲಯ ಹಿರಿಯ ಪರಿಸರ ಅಧಿಕಾರಿಗಳಿಗೆ ಮತ್ತು ಕೇಂದ್ರ ಕಛೇರಿಯ ಅಧಿಕಾರಿಗಳ ಕಾರ್ಯಚಟುವಟಿಕೆಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಿಲಾಗಿದೆ ಎಂದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ವಾಯುಗುಣಮಟ್ಟ ಮಾಪನ ಮಾಡುವ ಸಲುವಾಗಿ 04 ಮಹೀಂದ್ರ & ಮಹೀಂದ್ರ ಸಂಸ್ಥೆಯ BS IV ಮೊಬೈಲ್ ವ್ಯಾನ್ ವಾಹನಗಳನ್ನು ಖರೀದಿಸಿದ್ದು, ಸದರಿ ವಾಹನಗಳಲ್ಲಿ Air Quality Monitoring Equipment ಗಳನ್ನು ಅಳವಡಿಸಿ ಬೆಂಗಳೂರು ನಗರದ್ಯಾದಂತ ಕಾರ್ಯನಿರ್ವಹಿಸುತ್ತಿರುವ 04 ಹಿರಿಯ ಪರಿಸರ ಅಧಿಕಾರಿಗಳ ಕಛೇರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.

ಈ 68 ವಾಹನಗಳ ಪೈಕಿ 49 ವಾಹನಗಳ ಖರೀದಿಯ ವೆಚ್ಚ ರೂ. 5,67,04,003/-ಮೊತ್ತಗಳಾಗಿದ್ದು, ಇದನ್ನು ಮಂಡಳಿಯ ಆಂತರಿಕ ಸಂಪನ್ಮೂಲದಿಂದ ಬರಿಸಲಾಗಿದೆ ಹಾಗೂ ಇನ್ನೂಳಿದ 19 ವಾಹನಗಳ ಖರೀದಿಯ ವೆಚ್ಚ ರೂ. 1,99,34,998/- ಮೊತ್ತಗಳಾಗಿದ್ದು, ಇದನ್ನು National Clear Air Quality Programme ಯೋಜನೆಯಡಿಯಲ್ಲಿ ಭರಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಬಾಗ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಚಾಲನೆ ನೀಡಿದರು. ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಶಾಸಕ ನರೇಂದ್ರಸ್ವಾಮಿ ಅವರು ಉಪಸ್ಥಿತರಿದ್ದರು.

Prev Post ನಾನು ಬಸವಣ್ಣನವರ ಅಭಿಮಾನಿ: ಬಸವ ತತ್ವದಲ್ಲಿ‌ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ: ಸಿ.ಎಂ ಸಿದ್ದರಾಮಯ್ಯ
Next Post ಕಾಫ್‌ ಸಿರಫ್‌ ದುರಂತ; ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ - ದಿನೇಶ ಗುಂಡೂರಾವ್‌