ಪ್ರಧಾನಿ ನರೇಂದ್ರಮೋದಿ ಶುದ್ದ ಕುಡಿಯುವ ನೀರಿನ ಘಟಕ, ರಕ್ತದಾನ, ನೇತ್ರದಾನ,ಹಿರಿಯ ನಾಗರಿಕರ, ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು 75ದಿನ ಮಧ್ಯಾಹ್ನ ಬಿಸಿಯೂಟ ವಿತರಣೆ ಕಾರ್ಯಕ್ರಮ

Banglore:

Font size:

ಪ್ರಧಾನಿ ನರೇಂದ್ರಮೋದಿ ಶುದ್ದ ಕುಡಿಯುವ ನೀರಿನ ಘಟಕ, ರಕ್ತದಾನ, ನೇತ್ರದಾನ,ಹಿರಿಯ ನಾಗರಿಕರ, ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು 75ದಿನ ಮಧ್ಯಾಹ್ನ ಬಿಸಿಯೂಟ ವಿತರಣೆ ಕಾರ್ಯಕ್ರಮ

ಪ್ರಧಾನಿ ನರೇಂದ್ರಮೋದಿ ಶುದ್ದ ಕುಡಿಯುವ ನೀರಿನ ಘಟಕ, ರಕ್ತದಾನ, ನೇತ್ರದಾನ,ಹಿರಿಯ ನಾಗರಿಕರ, ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು 75ದಿನ ಮಧ್ಯಾಹ್ನ ಬಿಸಿಯೂಟ ವಿತರಣೆ ಕಾರ್ಯಕ್ರಮ

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ವಾರ್ಡ್ ನಲ್ಲಿ ಪ್ರಧಾನಿ ನರೇಂದ್ರಮೋದಿರವರ 75ನೇ ಹುಟ್ಟುಹಬ್ದದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ.

ಶಾಸಕರಾದ ಎಸ್.ಸುರೇಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಸಂಸದ ಪಿ.ಸಿ.ಮೋಹನ್ ರವರು, ಜಿಲ್ಲಾಧ್ಯಕ್ಷ ಸಪ್ತಗಿರಿಗೌಡರು ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಎಂ.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜುರವರು, ಮಂಡಲದ ಅಧ್ಯಕ್ಷರಾದ ಸುದರ್ಶನ್, ರಾಜಾಜಿನಗರ ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸಂಜಯ್ ಕುಮಾರ್ ರವರು ಕರುಮಾರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ 75ಕೆ.ಜಿ.ಗಾತ್ರದ ಕೇಕ್ ಕತ್ತರಿಸಿದರು.

ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಇಡಿ ದೇಶದಲ್ಲಿ ನರೇಂದ್ರಮೋದಿರವರ ಹುಟ್ಟುಹಬ್ಬವನ್ನು ಅಚರಿಸುತ್ತಿದ್ದಾರೆ.
ನಮ್ಮ ದೇಶದಲ್ಲಿ ವಿಶಿಷ್ಟ ವೈದ್ಯರಿದ್ದಾರೆ ಅವರು ಪೌರ ಕಾರ್ಮಿಕರು ಅವರಿಂದ ನಮ್ಮ ರಾಜ್ಯದ ಜನರು ಆರೋಗ್ಯವಂತರಾಗಿ ಇರುವಂತೆ ನೋಡಿಕೊಳ್ಳುತ್ತಾರೆ.

ಪ್ರತಿಯೊಬ್ಬ ಭಾರತೀಯ ಮನಸ್ಸಿನಲ್ಲಿ ವಿಶ್ವಾಸ ಮೂಡಿಸಿದ್ದಾರೆ, ಅಮೇರಿಕಾ ಟ್ರಂಪ್ ಸರಿಯಾದ ಉತ್ತರ ನೀಡಿದ್ದಾರೆ ಪ್ರಧಾನಿ ನರೇಂದ್ರಮೋದಿರವರು.

ಜಿ.ಎಸ್.ಟಿ.ಕಡಿಮೆ ಮಾಡಿ ಜನಸಾಮಾನ್ಯರಿಗೆ ಒಳ್ಳೆಯದು ಮಾಡಿದ್ದಾರೆ. 80ಕೋಟಿ ಜನರಿಗೆ ಆಹಾರ ಭದ್ರತೆ ನೀಡಿದ್ದಾರೆ. ಔಷಧಿಗಳ ಮೇಲಿನ ಬೆಲೆ ಬಡವರಿಗೆ ಕೈಗೆಟ್ಟುವಂತೆ ಮಾಡಿದ್ದಾರೆ.

ಸಂಸದ ಪಿ.ಸಿ.ಮೋಹನ್ ರವರು ಮಾತನಾಡಿ ಪ್ರಧಾನಿ ನರೇಂದ್ರಮೋದಿರವರ ಹುಟ್ಟುಹಬ್ಬದ ಅಂಗವಾಗಿ ಸೇವಾ ಪಾಕ್ಷಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ರಕ್ತದಾನ, ನೇತ್ರದಾನ ಮತ್ತು ವಿವಿಧ ಸಮಾಜಮುಖಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಧಾನಿ ನರೇಂದ್ರಮೋದಿರವರು ತಿಳಿಸಿದಂತೆ ಜನಸೇವಕ ಎಂದರೆ ಜನಸೇವೆ ಮಾಡು ಎಂದು ಪ್ರತಿದಿನ, ಪ್ರತಿಕ್ಷಣ ಜನರ ಸೇವೆ ಮಾಡಲು ಅವರ ಸ್ಪೂರ್ತಿಯಾಗಿದ್ದಾರೆ ಎಂದು ಹೇಳಿದರು.

ಪ್ರಧಾನಿ ರವರ ಹುಟ್ಟುಹಬ್ಬದ ಅಂಗವಾಗಿ ಶ್ರೀ ನರೇಂದ್ರ ಮೋದಿ ಶುದ್ದ ಕುಡಿಯುವ ನೀರಿನ ಘಟಕ ಹುಟ್ಟುಹಬ್ಬದ ಪ್ರಯುಕ್ತ ಮೋದಿರವರ ಜೀವನ ಚರಿತ್ರೆ ಛಾಯಚಿತ್ರ ಪ್ರದರ್ಶನ, ಬೈಕ್ ಜಾಥ, 75ದಿನ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮ ಚಾಲನೆ ಹಾಗೂ ಹಿರಿಯ ನಾಗರಿಕರು, ಪೌರ ಕಾರ್ಮಿಕರಿಗೆ ಸನ್ಮಾನ , ರಕ್ತದಾನ ಶಿಬಿರ, ನೇತ್ರದಾನ ಶಿಬಿರ , ಉಚಿತವಾಗಿ ಸಾರ್ವಜನಿಕರಿಗೆ 500ನೀರಿನ ಕ್ಯಾನ್ ವಿತರಣೆ ಕಾರ್ಯಕ್ರಮ ನೇರವೆರಿತು.

Prev Post ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (PPP) ಶಿರಾದಲ್ಲಿ ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ
Next Post ದೊಡ್ಡ ವಿಮಾನ, ರಾತ್ರಿ ಹೊತ್ತಿನ ಕಾರ್ಯಾಚರಣೆ ವ್ಯವಸ್ಥೆ ಕಲ್ಪಿಸಲು ಅನುಮೋದನೆ