ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (PPP) ಶಿರಾದಲ್ಲಿ ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ
ಶಿರಾ ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಭುವನಹಳ್ಳಿ ಸಮೀಪ ಹೆರಿಟೇಜ್ ಪಾರ್ಕ್ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.
ಈ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಆಯುಕ್ತರದ ಅಕ್ರಂ ಪಾಷ ಜಂಟಿ ಆಯುಕ್ತರಾದ ಶ್ರೀನಿವಾಸ ಹೆಚ್ .ಎಂ.
ಜಂಟಿ ನಿರ್ದೇಶಕರಾದ ಅನುಪಮ ಸಹಾಯಕ ನಿರ್ದೇಶಕರುಗಳಾದ ಸಂಜೀವ್ ಕುಮಾರ್, ವಿನೋದ್ ಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಶಿರಾ ಸಮೀಪದ
ಭುವನ ಹಳ್ಳಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೆರಿಟೇಜ್ ಪಾರ್ಕ್ ನಿರ್ಮಾಣ ಮಾಡಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಭುವನಹಳ್ಳಿ ಸಮೀಪ ಸರ್ಕಾರಕ್ಕೆ ಸೇರಿರುವ 811 ಎಕರೆ ಜಮೀನು ಇದೆ.
ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಿ ಕೊಡುವುದಾಗಿ ಟಿ.ಬಿ.ಜಯಚಂದ್ರ ಅವರು ಇದೇ ವೇಳೆ ತಿಳಿಸಿದರು
ತುಮಕೂರು ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ತ್ವರಿತವಾಗಿ ವರ್ಗಾಯಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಲಾಯಿತು.
ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಸಹ ಇದೇ ವೇಳೆ ನಿರ್ಧರಿಸಲಾಯಿತು.
ಗುಜರಾತ್ ರಾಜ್ಯದಲ್ಲಿರುವ ಏಕತಾ ನಗರ್, ರಾಜಸ್ಥಾನದ ಜೈಪುರದಲ್ಲಿರುವ ಚೌಕಿದಾನಿ
ಒರಿಸ್ಸಾದ ಕೋನಾರ್ಕ್ ದೇವಾಲಯ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಿರ್ಮಾಣ ಮಾಡಿರುವ ಹೆರಿಟೇಜ್ ಪಾರ್ಕ್ ಗಳಿಗೆ ಭೇಟಿ ಮಾಡಿ ಅಧ್ಯಯನ ಮಾಡಿ ಸಮಗ್ರ ಯೋಜನಾ ವರದಿ ತಯಾರಿಸಿ ಕೊಡುವುದಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದರು.
ಶಿರಾ ನಗರಕ್ಕೆ 1500 ವರ್ಷಗಳ ಇತಿಹಾಸವಿದ್ದು ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ .ರೈಲ್ವೆ ನಿಲ್ದಾಣ ಸಹ ಭುವವನಳ್ಳಿ ಸಮೀಪವೇ ನಿರ್ಮಾಣವಾಗುತ್ತಿದೆ. ರಾಜಧಾನಿಬೆಂಗಳೂರಿಗೆ 150 ಕಿ.ಮೀ ದೂರದಲ್ಲಿರುವ ಶಿರಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ. ಹೆರಿಟೇಜ್ ಪಾರ್ಕ್ ನಿರ್ಮಾಣ ಮಾಡಿ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಯಚಂದ್ರ ಅವರು ಸೂಚಿಸಿದರು..
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಮಾಡಲು ಹಲವಾರು ಉದ್ಯಮಿಗಳು ಮುಂದೆ ಬಂದಿದ್ದು ಬಂಡವಾಳ ಹೂಡಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದೆ ವೇಳೆ ಜಯಚಂದ್ರ ಅವರ ಗಮನಕ್ಕೆ ತಂದರು.
ಹೆರಿಟೇಜ್ ಪಾರ್ಕ್ ನ ಸಮಗ್ರ ಯೋಜನಾ ವರದಿ ಸಿದ್ದವಾದ ಮೇಲೆ ಉದ್ಯಮಿಗಳ ಸಭೆ ಕರೆದು ಮುಂದಿನ ರೂಪರೇಷೆಗಳನ್ನು ಸಿದ್ಧಪಡಿಸಲು ಸಹ ಸಭೆ ನಿರ್ಧರಿಸಿತು.