ದಿ. ಬಿ . ಸರೋಜಾದೇವಿ , ದಿ.ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ

Banglore:

Font size:

ದಿ. ಬಿ . ಸರೋಜಾದೇವಿ , ದಿ.ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ

ಬೆಂಗಳೂರು,ಸೆ.11- ಖ್ಯಾತ ಅಭಿನೇತ್ರಿ ಬಿ.ಸರೋಜಾದೇವಿ ಹಾಗೂ ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸರ್ಕಾರ ಘೋಷಣೆ ಮಾಡಿದೆ. ಹಾಗೆಯೇ ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ.

ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಭಾರತಿ ವಿಷ್ಣುವರ್ಧನ್, ಅನಿರುದ್ಧ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಅಲ್ಲದೇ, ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲಾ, ಶ್ರುತಿ, ಮಾಳವಿಕಾ ಅವಿನಾಶ್ ಅವರು ಕೂಡ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದರು.

ಇತ್ತೀಚೆಗೆ ಬೆಂಗಳೂರಿನ ಅಭಿಮಾನ್ ಸ್ಟೂಡಿಯೋದಲ್ಲಿದ್ದ ವಿಷ್ಣುವರ್ಧನ್ ಸ್ಮಾರಕವನ್ನು ರಾತ್ರೋರಾತ್ರಿ ತೆರವು ಮಾಡಲಾಗಿದ್ದರಿಂದ, ಅಭಿಮಾನಿಗಳ ಆಕ್ರೋಶ ವ್ಯಕ್ಯಪಡಿಸಿದ್ದರು ,ಅಭಿಮಾನ್ ಸ್ಟೂಡಿಯೋದಲ್ಲಿ 20 ಅಡಿ ಜಾಗ ಕೊಡದ ಸರ್ಕಾರದ ವಿರುದ್ಧ ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೀಗ ಸಾಹಸಸಿಂಹ ವಿಷ್ಣುವರ್ಧನ್‌ಗೆ ಕರ್ನಾಟಕ ಪ್ರಶಸ್ತಿ ನೀಡುವ ಮೂಲಕ ಎಲ್ಲರ ಆಕ್ರೋಶ ತಣಿಸುವ ಕಾರ್ಯಕ್ಕೆ ಮುಂದಾಗಿದೆ.

ಬಿ. ಸರೋಜದೇವಿ

ಬಿ. ಸರೋಜದೇವಿ (7 ಜನವರಿ 1934 - ಮರಣ 14 ಜುಲೈ 2025) ಕನ್ನಡದ ಹಿರಿಯ ಚಲನಚಿತ್ರತಾರೆಯರಲ್ಲಿ ಒಬ್ಬರು.ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿ. ಅವರು ಏಳು ದಶಕಗಳಲ್ಲಿ ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯನ್ನು ಕನ್ನಡದಲ್ಲಿ "ಅಭಿನಯ ಸರಸ್ವತಿ" (ನಟನೆಯ ಸರಸ್ವತಿ) ಮತ್ತು ತಮಿಳಿನಲ್ಲಿ "ಕನ್ನಡತು ಪೈಂಗಿಲಿ" (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು.

17 ನೇ ವಯಸ್ಸಿನಲ್ಲಿ, ಅವರನ್ನು ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್‌ಸ್ಟಾರ್ ಎಂದೂ ಕರೆದರು. ಸರೋಜಾದೇವಿ ಅವರು ತಮ್ಮ ಕನ್ನಡ ಚಲನಚಿತ್ರ ಮಹಾಕವಿ ಕಾಳಿದಾಸ (1955) ಚಿತ್ರದ ಮೂಲಕ ದೊಡ್ಡ ಬ್ರೇಕ್ ಪಡೆದರು. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು. ಅವರು ಪಾಂಡುರಂಗ ಮಹಾತ್ಯಂ (1957) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಮತ್ತು 1970ರ ದಶಕದ ಅಂತ್ಯದವರೆಗೆ ಹಲವಾರು ಯಶಸ್ವಿ ಚಲನಚಿತ್ರಗಳಲ್ಲಿ ನಟಿಸಿದರು. ತಮಿಳು ಚಲನಚಿತ್ರ ನಾಡೋಡಿ ಮನ್ನನ್ (೧೯೫೮) ಅವರನ್ನು ತಮಿಳು ಚಿತ್ರರಂಗದ ಅಗ್ರ ನಟಿಯರಲ್ಲಿ ಒಬ್ಬರನ್ನಾಗಿ ಮಾಡಿತು. 1963 ರಲ್ಲಿ ಅವರ ಮದುವೆಯ ನಂತರ, ಅವರು ೧೯೭೪ ರವರೆಗೆ ತಮಿಳು ಚಲನಚಿತ್ರಗಳಲ್ಲಿ ಬೇಡಿಕೆಯ ನಟಿಯಾಗಿ ಎರಡನೇ ಸ್ಥಾನದಲ್ಲಿ ಮುಂದುವರೆದರು, ಆದರೆ ಅವರು 1958ರಿಂದ 1980 ರವರೆಗೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅಗ್ರ ನಟಿಯಾಗಿ ಮುಂದುವರೆದರು. ಪೈಘಮ್ (1959) ದಿಂದ ಪ್ರಾರಂಭಿಸಿ 1960 ರ ದಶಕದ ಮಧ್ಯಭಾಗದವರೆಗೆ ಅವರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದರು.

1955ಮತ್ತು 1984ರ ನಡುವಿನ 29ವರ್ಷಗಳಲ್ಲಿ ಸತತ 161 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸರೋಜಾ ದೇವಿಯವರು 1969ರಲ್ಲಿ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಶ್ರೀ ಮತ್ತು 1992ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ, ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದರು. ಹಾಗೆಯೇ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಪಡೆದರು.

ಆರಂಭಿಕ ಜೀವನ

ಸರೋಜಾದೇವಿಯವರು ಬೆಂಗಳೂರು, ಮೈಸೂರು ಸಾಮ್ರಾಜ್ಯ (ಈಗಿನ ಬೆಂಗಳೂರು, ಕರ್ನಾಟಕ)ದಲ್ಲಿ 7 ಜನವರಿ 1938ರಂದು ಒಕ್ಕಲಿಗ ಕುಟುಂಬದಲ್ಲಿ ಜನಿಸಿದರು.ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಆಕೆಯ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು ಮತ್ತು ತಾಯಿ ರುದ್ರಮ್ಮ ಗೃಹಿಣಿಯಾಗಿದ್ದರು. ಅವಳು ಅವರ ನಾಲ್ಕನೇ ಮಗಳು. ಭೈರಪ್ಪ ಆಕೆಗೆ ನೃತ್ಯ ಕಲಿಯಲು ಹೇಳಿದರು ಮತ್ತು ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ಯುವತಿಯಾದ ಸರೋಜಾ ದೇವಿಯು ಆಕೆಯ ತಂದೆ ಸ್ಟುಡಿಯೋಗಳಿಗೆ ಆಗಾಗ್ಗೆ ಜೊತೆಯಾಗುತ್ತಿದ್ದರು. ಆಕೆಯ ತಾಯಿ ಆಕೆಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ನೀಡಿದರು: ಈಜುಡುಗೆಗಳು ಮತ್ತು ತೋಳಿಲ್ಲದ ಬ್ಲೌಸ್ಗಳಿಲ್ಲ, ಅವರು ತಮ್ಮ ವೃತ್ತಿಜೀವನದ ಉಳಿದ ಅವಧಿಗೆ ಇದನ್ನು ಅನುಸರಿಸಿದರು. ಅವಳು ೧೩ ನೇ ವಯಸ್ಸಿನಲ್ಲಿ ಒಂದು ಸಮಾರಂಭದಲ್ಲಿ ಹಾಡುತ್ತಿದ್ದಾಗ, ಅದನ್ನ ಕಂಡು ಬಿ.ಆರ್. ಕೃಷ್ಣಮೂರ್ತಿ‍ಯವರು ಚಿತ್ರದ ಪ್ರಸ್ತಾಪ ಮಾಡಿದಾಗ, ಅವಳು ಅದನ್ನು ನಿರಾಕರಿಸಿದಳು.

ಬಹುಭಾಷಾತಾರೆ

ಕನ್ನಡದಲ್ಲಿ ಡಾ.ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯಕುಮಾರ್ ಅವರ ಜೊತೆ ನಟಿಸಿದರು. ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್ ಅವರ ಜೊತೆ ನಟಿಸಿದರು. ತಮಿಳಿನಲ್ಲಿ ಜೆಮಿನಿ ಗಣೇಶನ್, ಶಿವಾಜಿಗಣೇಶನ್ ಜೊತೆಗೆ 22 ಹಿಟ್ ಚಿತ್ರಗಳಲ್ಲಿ, ಎಂ.ಜಿ. ರಾಮಚಂದ್ರನ್ ಜೊತೆ 26 ಹಿಟ್ ಚಿತ್ರಗಳಲ್ಲಿ ನಟಿಸಿದರು. ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನಿಲ್‌ದತ್ ಜೊತೆ ನಟಿಸಿದ ಸರೋಜಾದೇವಿ, ಚತುರ್ಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಕನ್ನಡ ನಟಿ. ದಶಕಗಳ ನಂತರ ಜಯಂತಿ ನಾಲ್ಕು ಭಾಷೆಯಲ್ಲಿ ನಟಿಸಿದರು.

ಡಾ. ವಿಷ್ಣುವರ್ಧನ್

ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ 18, 1950 | ಮರಣ :ಡಿಸೆಂಬರ್ 30, 2009) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು. ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ

ಹುಟ್ಟು, ವಿದ್ಯಾಭ್ಯಾಸ, ಬಾಲ್ಯ

ಡಾ. ವಿಷ್ಣುವರ್ಧನ್ ಅವರು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. 6 ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು.

ನಟನೆ/ಕಲಾಜೀವನ

ವಿಷ್ಣು ಅಭಿನಯದ "ಸಾಮ್ರಾಟ್" ಚಿತ್ರದ ಭಿತ್ತಿ ಪತ್ರ

ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ 1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು.
ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ
1980 ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್‌ ನಾಗ್‌ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಥೆಯೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು.

ಸಿನಿಮಾರಂಗಕ್ಕೆ ನಡೆದು ಬಂದ ಹಾದಿ:

ವಿಷ್ಣು 1955ರಲ್ಲಿ "ಶಿವಶರಣ ನಂಬೆಯಕ್ಕ" ಎಂಬ ಸಿನೆಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ "ಕೋಕಿಲವಾಣಿ" ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರು.

1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಇವರ ಮೊದಲ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂದು ಜನಪ್ರಿಯರಾಗಿದ್ದರು.1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್” ಎಂಬ ಕಿರುತೆರೆಯಲ್ಲಿ ನಟಿಸಿದರು. ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ, ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು. ಹೀಗೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣು 30 ಡಿಸೆಂಬರ್ 2009 ರಲ್ಲಿ ವಿಧಿವಶರಾದರು. ಇವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

ಕನ್ನಡ ಚಿತ್ರರಂಗದಲ್ಲೆ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಸುಮಾರು ೧೪ ಚಿತ್ರಗಳು)
ವಿಷ್ಣುವರ್ಧನ್-ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿ ಅವರಿಗೆ ಸಲ್ಲುತ್ತದೆ.
ಬನ್ನಂಜೆ ಗೋವಿಂದಾಚಾರ್ಯರು ಇವರ ಆದ್ಯಾತ್ಮಿಕ ಗುರುವಾಗಿದ್ದರು, ಸಂಖ್ಯಾಭವಿಷ್ಯಶಾಸ್ತ್ರವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು.
ಬೆಂಗಳೂರು ವಿಶ್ವವಿದ್ಯಾಲಯವು 2005ನೇ ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ.
ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿತ್ತು.

Prev Post ಬಿಜೆಪಿ ಸರ್ಕಾರವೇ ಮತಪತ್ರ ಬಳಕೆಗೆ ಕಾನೂನಿನಲ್ಲಿ ಅವಕಾಶ ನೀಡಿದೆ: ಡಿಸಿಎಂ ಡಿ.ಕೆ. ಶಿವಕುಮಾರ್
Next Post ದಿನಾಂಕ: 11-09-2025 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು: