ಮದ್ದೂರು ಘಟನೆಗೆ ಗೃಹ ಸಚಿವ ಪರಮೇಶ್ವರ್ ಅವರೇ ಕಾರಣ ನಿಖಿಲ್ ಕುಮಾರಸ್ವಾಮಿ ಆರೋಪ ಶಾಂತಿ ನೆಮ್ಮದಿಗೆ ಹೆಸರುವಾಸಿಯಾಗಿದ್ದ ಮಂಡ್ಯ ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಇಷ್ಟೆಲ್ಲಾ ಅನಾಹುತ ನಡೆಯುತ್ತಿದೆ |ಜನಸಾಮಾನ್ಯರ ಮೇಲೆ ಲಾಠಿಚಾರ್ಜ್ ಮಾಡಿದ್ದಕ್ಕೆ ಕೆಂಡ ಕಾರಿದ ನಿಖಿಲ್
ಮಂಡ್ಯ: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಿ ಅಶಾಂತಿ ಸೃಷ್ಟಿಸಿರುವ ಸಮಾಜಘಾತುಕರನ್ನು ಬಂಧಿಸಿ, ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಅವರು ಆಗ್ರಹಿಸಿದರು.
ಮದ್ದೂರಿನ ಗಣೇಶೋತ್ಸವ ಮೆರವಣಿಗೆ ವೇಳೆ ನಿನ್ನೆ ನಡೆದ ಕಲ್ಲುತೂರಾಟದ ವಿರುದ್ಧ ಹಾಗೂ ಹಿಂದೂಗಳ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ನೆಡೆದ ಪ್ರತಿಭಟನೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
ಮದ್ದೂರು ಘಟನೆ ಹೊಣೆಯನ್ನು ಗೃಹ ಸಚಿವರು, ಉಸ್ತುವಾರಿ ಸಚಿವರು ಹೊರಬೇಕು. ಮದ್ದೂರುನಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ. ಸರ್ಕಾರ ವೋಟ್ ಬ್ಯಾಂಕ್‌ಗಾಗಿ ಈ ರೀತಿ ಒಂದು ಅಮುದಾಯವನ್ನ ಓಲೈಸುವ ಕೆಲಸ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ಗುಡುಗಿದರು.
ಗೃಹ ಸಚಿವರು ಏನೇ ಕೇಳಿದ್ರು ಗೊತ್ತಿಲ್ಲ ಎನ್ನುತ್ತಾರೆ.
ಮದ್ದೂರಿನ ಘಟನೆ ರಾಜ್ಯವ್ಯಾಪಿ ಚರ್ಚೆ ಆಗುತ್ತಿದೆ.
ಕೆರಗೋಡು, ನಾಗಮಂಗಲ ಬಿಟ್ಟು ಈಗ ಮದ್ದೂರಿಗೆ ಬಂದು ನಿಂತಿದೆ. ನಾವು ಹಿಂದೆ ಕರಾವಳಿ ಭಾಗದಲ್ಲಿ ಈ ರೀತಿ ಘಟನೆ ನೋಡುತ್ತಿದ್ದೆವು. ಈಗ ನಮ್ಮಲ್ಲಿಗೇ ಬಂದು ನಿಂತಿದೆ ಕಿಡಿಕಾರಿದರು.
ನಾವೆಲ್ಲ ಹಿಂದೂ ಧರ್ಮದವರು.ನಮ್ಮ ಸಂಸ್ಕೃತಿ ನಮ್ಮ ಪದ್ಧತಿ ಆಚಾರ, ವಿಚಾರಗಳ ಮೇಲೆ ನಂಬಿಕೆ ಇಟ್ಟು ಬದುಕುವಂಥ ಜನ. ನಮಗೆ ಧಕ್ಕೆ ಆದ ಸಂದರ್ಭದಲ್ಲಿ ನಾವು ಎಲ್ಲರ ಪರವಾಗಿ ನಿಂತು ಜಿಲ್ಲೆಯ ಜನರ ಜೊತೆ ನಿಂತು ಹೋರಾಟಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಂದ ದಿನಗಳಿಂದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ನಡವಳಿಕೆ ಮುಂದುವರೆಸಿದೆ. ಕಳೆದ ವರ್ಷ ಕೆರೆಗೋಡು, ಗಲಾಟೆ, ಧರ್ಮಸ್ಥಳ, ಚಾಮುಂಡಿ ತಾಯಿಬಗ್ಗೆ ಮಾತನಾಡಿರೋ ಮಾತುಗಳೆ ಸಾಕ್ಷಿ ಎಂದು ಹೇಳಿದರು.
ನಮ್ಮ ಧರ್ಮವನ್ನು ನಾವು ರಕ್ಷಣೆ ಮಾಡಬೇಕು. ಅದರ ಹೊಣೆ ನಮ್ಮೆಲ್ಲರ ಮೇಲಿದೆ ಇಲ್ಲಿ ಬಂದು ಪ್ರತಿಭಟನೆ ಮಾಡಿದವರು ಪಕ್ಷಾತೀತವಾಗಿ ಬಂದಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೂ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಈ ರೀತಿಯ ನಿಯಮಗಳನ್ನು ಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಜಿಲ್ಲೆಗಳಲ್ಲಿ ಮೂರು ಬಾರಿ ಗಲಾಟೆ ನಡೆಯುತ್ತಿದ್ದವು. ಆ ಕೆಟ್ಟ ಪರಿಸ್ಥಿತಿ ಕಾಂಗ್ರೆಸ್ ಆಡಳಿತದಲ್ಲಿ ಇಡೀ ರಾಜ್ಯಕ್ಕೆ ವ್ಯಾಪಿಸಿದೆ. ಕೇವಲ ಓಲೈಕೆ ರಾಜಕಾರಣದಿಂದ ಇಷ್ಟೆಲ್ಲಾ ನಡೆಯುತ್ತಿದೆ ಎಂದು ಕೇಂದ್ರ ಸಚಿವರು ದೂರಿದರು.
ಮದ್ದೂರಿನಲ್ಲಿ ನಡೆದಿರುವ ಘಟನೆ ತುಂಬಾ ನೋವಾಗಿದೆ. ಮಂಡ್ಯ ಜಿಲ್ಲಾ ಜನತೆ ಯಾರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. ಮಂಡ್ಯ ಜಿಲ್ಲೆಯಲ್ಲಿ ಹಲವಾರು ಮಹನಿಯರು ಬೆಳೆದ ಹೋರಾಟದ ಇತಿಹಾಸವಿದೆ. ಅದಕ್ಕೆ ಧಕ್ಕೆ ತರುವಂತೆ ನಡೆದಕೊಳ್ಳಬಾರದು ಎಂದು ನಿಖಿಲ್ ಅವರು ತಿಳಿಸಿದರು.
ಈ ಸರ್ಕಾರದಲ್ಲಿ ಪೊಲೀಸರು ಅಸಹಾಯಕರಾಗಿದ್ದಾರೆ, ಅವರ ಹಿಂದೆ ಸರ್ಕಾರ ನಿಂತಿದೆ.ಒಂದು ವರ್ಗದ ಮತ ಗಟ್ಟಿ ಮಾಡಿಕೊಳ್ಳೋಕೆ ರಾಜ್ಯ ಸರ್ಕಾರ ಈ ರೀತಿ ಮಾಡುತ್ತಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಯಕರಾದ ಶ್ರೀ ಡಿ.ಸಿ ತಮ್ಮಣ್ಣ, ಶ್ರೀ ಸಿ.ಎಸ್ ಪುಟ್ಟರಾಜು, ಶ್ರೀ ಪ್ರತಾಪ್ ಸಿಂಹ, ಶ್ರೀ ಅನ್ನದಾನಿ, ಶ್ರೀ ಸುರೇಶ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.