ಮೈಶುಗರ್ ಅನುದಾನ ದುರ್ಬಳಕೆ ತನಿಖೆ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಕಾಲಮಿತಿಯಲ್ಲಿ ಪಿಎಂ ಮಿತ್ರ ಪಾರ್ಕ್ ಯೋಜನೆ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಮೈಸೂರು ವಿಶ್ವ ವಿದ್ಯಾನಿಲಯ - ವಿವಿಧ ಸಂಯೋಜಿತ ಕಾಲೇಜುಗಳಿಂದ ಅರ್ಹ ಮಾರ್ಗದರ್ಶಕರನ್ನು ಪಡೆಯಲು ಕ್ರಮ ವಹಿಸಲಾಗಿದೆ – ಸಚಿವ ಡಾ. ಎಂ.ಸಿ. ಸುಧಾಕರ್ ಬಾಗಲಕೋಟೆ ಕೃಷಿ ವಿಶ್ವವಿದ್ಯಾನಿಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಲಾಗುವುದಿಲ್ಲ – ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಿಧಾನ ಪರಿಷತ್‍ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿ ಅಭಿನಂದನೆ
2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ ಅಂಗೀಕಾರ
ಬೆಂಗಳೂರು,ಆಗಸ್ಟ್ 19
2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕವನ್ನು ಉಪಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ಸದನದಲ್ಲಿ ಸಚಿವರು ಹಾಗೂ ಶಾಸಕರು ವಿಧೇಯಕದ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕ ಅಂಗೀಕಾರ
2025ನೇ ಸಾಲಿನ ಕರ್ನಾಟಕ ಸೌಹಾರ್ಧ ಸಹಕಾರಿ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಮುಖ್ಯಮಂತ್ರಿಗಳ ಪರವಾಗಿ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಪರ್ಯಾಲೋಚಿಸಿ ಅಂಗೀಕರಿಸಬೇಕೆಂದು ಕೋರಿದರು.
ಸೌಹಾರ್ದ ಸಹಕಾರಿ ಬ್ಯಾಂಕುಗಳನ್ನು ಹೊರತುಪಡಿಸಿ, ಪ್ರತಿಯೊಂದು ಸಹಕಾರಿಯು ಸಹಕಾರಿ ವರ್ಷದ ಪ್ರತಿ ತ್ರೈಮಾಸಿಕದ ಅಂತ್ಯಕ್ಕೆ ಹೊಂದಿರುವ ಒಟ್ಟು ಠೇವಣಿಯ ಶೇ 20 ರಷ್ಟನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯ ರೂಪದಲ್ಲಿ ಕಡ್ಡಾಯವಾಗಿ ಪ್ರಕರಣ 18ರ ನಿರ್ವಹಣೆ ಮಾಡತಕ್ಕದ್ದು. ಸೌಹಾರ್ದ ಸಹಕಾರಿಗೆ ತಕ್ಷಣದ ಬಳಕೆಗಾಗಿ ಅಗತ್ಯವಿಲ್ಲದ ನಿಧಿಗಳನ್ನು ಅದರ ವ್ಯವಹಾರಗಳ ಹೊರಗೆ ಹೂಡಲು ಮತ್ತು ಠೇವಣಿಯಿರಿಸಲು ಉಪಬಂಧ ಕಲ್ಪಿಸಲು, ಪತ್ತಿನ ಚಟುವಟಿಕೆ ನಡೆಸುವ ಯಾವುದೇ ಸಹಕಾರಿಯು ತಾನು ಸಂಗ್ರಹಿಸಿದ ಠೇವಣಿಯನ್ನು ಸಾಲ ನೀಡಿಕೆ ಅಥವಾ ಹೂಡಿಕೆಯ ಹೊರತಾಗಿ ಯಾವುದೇ ಪತ್ತೇತರ ಚಟುವಟಿಕೆಗಳಿಗೆ ವಿನಿಯೋಗಿಸತಕ್ಕದಲ್ಲ, ವಂಚನೆಯ ವರದಿಯಲ್ಲಿರುವ ಅಕ್ರಮ ಅಥವಾ ವಂಚನೆ ದುರ್ವಿನಿಯೋಗದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದು. ಒಟ್ಟಾರೆ ಆರ್ಥಿಕ ಶಿಸ್ತು ಮತ್ತು ಹೊಣೆಗಾರಿಕೆ ಇರಬೇಕು.
ಸದನದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ್, ಮಹಾಂತೇಶ್ ಕೌಜಲಗಿ, ಜೆ.ಟಿ.ಪಾಟೀಲ್, ಯಶ್ ಪಾಲ್, ಸ್ವಾಮಿ ಇನ್ನಿತರ ಶಾಸಕರು ಸದರಿ ವಿಧೇಯಕದಲ್ಲಿ ಕೆಲವೊಂದು ತಿದ್ದುಪಡಿಗಳನ್ನು ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಕೆಲವೊಂದು ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಸದನದ ಗಮನಕ್ಕೆ ತಿಳಿಸಿದರು. ತಿದ್ದುಪಡಿಯೊಂದಿಗೆ ವಿಧೇಯಕವು ಅಂಗೀಕಾರವಾಯಿತು.
ವಿಧಾನಸಭೆಯಲ್ಲಿ ವಿಧೇಯಕಗಳ ಅಂಗೀಕಾರ
ಬೆಂಗಳೂರು,ಆಗಸ್ಟ್ 19
2025ನೇ ಸಾಲಿನ ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ (ತಿದ್ದುಪಡಿ) ವಿಧೇಯಕವನ್ನು ಸಾರಿಗೆ ಮತ್ತು ಮುಜುರಾಯಿ ಸಚಿವ ರಾಮಾಲಿಂಗಾರೆಡ್ಡಿ ಅವರು ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕವನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರು ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
2025ನೇ ಸಾಲಿನ ಕರ್ನಾಟಕ ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ಫೀಜುಗಳು (ತಿದ್ದುಪಡಿ) ವಿಧೇಯಕವನ್ನು ಮೀನುಗಾರಿಕೆ. ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರು ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು
2025ನೇ ಸಾಲಿನ ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕವನ್ನು ಕಾರ್ಮಿಕ ಸಚಿವರ ಸಂತೋμï ಎಸ್ ಲಾಡ್ ಅವರು ಪರ್ಯಾಲೋಚಿಸಿ ಅಂಗೀಕರಿಸಲು ಕೋರಿದರು. ಸದನದಲ್ಲಿ ಸಚಿವರು ಹಾಗೂ ಶಾಸಕರು ವಿಧೇಯಕದ ಕುರಿತು ಚರ್ಚಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ವಿಧೇಯಕವು ಪರ್ಯಾಲೋಚನೆ ನಂತರ ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕಾರವಾಯಿತು.
ಮೈಶುಗರ್ ಅನುದಾನ ದುರ್ಬಳಕೆ ತನಿಖೆ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್
ಬೆಂಗಳೂರು, ಆಗಸ್ಟ್ 19,
ಈ ಹಿಂದೆ ಮೈಶುಗರ್ಸ್ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ರೂ 100 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿದ್ದು, ತನಿಖೆ ಮಾಡಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೈಶುಗರ್ಸ್ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದು, ಪ್ರತಿಶತ 3.5ರಷ್ಟಿದ್ದ ಸಕ್ಕರೆ ಇಳುವರಿ ಪ್ರಮಾಣ ಈಗ ಪ್ರತಿಶತ 8ರಷ್ಟಿದೆ. ಸಹ ವಿದ್ಯುತ್ ಘಟಕವನ್ನೂ ನಮ್ಮ ಸರ್ಕಾರ ಬಂದ ನಂತರವೇ ಆರಂಭ ಮಾಡಲಾಗಿದೆ ಎಂದು ತಿಳಿಸಿದರು.
12.21ಲಕ್ಷ ವಿದ್ಯುತ್ ಉತ್ಪಾದನೆ ಮಾಡಲಾಗಿದ್ದು, 7.28 ಲಕ್ಷ ಯೂನಿಟ್ ಗಳನ್ನು ಕಾರ್ಖಾನೆಗೆ ಬಳಕೆ ಮಾಡಲಾಗಿದೆ. 4.93 ಲಕ್ಷ ಯೂನಿಟ್‍ಗಳನ್ನು ಚೆಸ್ಕಾಂಗೆ ಪೂರೈಕೆ ಮಾಡಲಾಗಿದೆ. ಪ್ರತಿ ಯೂನಿಟ್‍ಗೆ ರೂ 5.91 ಗಳಂತೆ ರೂ 29.14 ಲಕ್ಷ ಆದಾಯ ಬಂದಿದೆ. ಉತ್ಪಾದಿಸಿದ ಎಲ್ಲ ವಿದ್ಯುತ್ತನ್ನು ಚೆಸ್ಕಾಂಗೆ ಪೂರೈಕೆ ಮಾಡಿದರೆ ರೂ 9.48 ಕೋಟಿ ಆದಾಯ ಬರಲಿದೆ ಎಂದರು.
ಬೆಂಗಳೂರಿನಲ್ಲಿರುವ ಮೈಶುಗರ್ ಕಂಪನಿಯ ಆಡಳಿತ ಕಚೇರಿಯ ಆಸ್ತಿ ತೆರಿಗೆ ರೂ6.50 ಕೋಟಿಗಳಷ್ಟಿದ್ದು, ಏಕ ತೀರುವಳಿ ಅಡಿಯಲ್ಲಿ ರೂ 2.04 ಕೋಟಿ ಪಾವತಿಸಿ ರೂ 4.50 ಕೋಟಿಗಳನ್ನು ಕಂಪನಿಗೆ ಉಳಿತಾಯ ಮಾಡಲಾಗಿದೆ. ಮೈಶುಗರ್ಸ್ ಕಂಪನಿ ಒಡೆತನದಲ್ಲಿ 235.10 ಎಕರೆ ಇದ್ದು, ಎಷ್ಟು ಒತ್ತುವರಿಯಾಗಿದೆ ಎಂಬ ಬಗ್ಗೆ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಹೇಳಿದರು.
ಶಿವಾನಂದ ಪಾಟೀಲ ಅವರು ಸಕ್ಕರೆ ಸಚಿವರಾದ ನಂತರ ಮೈಶುಗರ್ಸ್ ಪುನರಾರಂಭ ಮಾಡಿದ್ದು, ಕಾರ್ಖಾನೆ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲಮಿತಿಯಲ್ಲಿ ಪಿಎಂ ಮಿತ್ರ ಪಾರ್ಕ್ ಯೋಜನೆ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್
ಬೆಂಗಳೂರು, ಆಗಸ್ಟ್ 19,
ಕಲಬುರಗಿಯಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಬ್ಬು ಅಭಿವೃದ್ಧಿ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಜಗದೇವ್ ಗುತ್ತೇದಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಯಲ್ಲಿ ನೂಲಿನಿಂದ ಸಿದ್ದ ಉಡುಪು ಉತ್ಪಾದನೆ ಹಂತದವರೆಗೆ ಉದ್ಯಮಗಳು ಇರಲಿವೆ. ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಮೂಲ ಸೌಕರ್ಯ ನಿರ್ಮಿಸಲು ರೂ 390 ಕೋಟಿ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.
ಕಲಬುರಗಿ ತಾಲೂಕಿನ ನದಿ ಸಿನ್ನೂರು, ಕಿರಣಗಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ವಿವಿಧ ಸರ್ವೆ ನಂಬರ್‍ಗಳ ಒಟ್ಟು ಒಂದು ಸಾವಿರ ಎಕರೆ ಭೂಮಿಯನ್ನು ಪಿಎಂ ಮಿತ್ರ ಪಾರ್ಕ್ ಕರ್ನಾಟಕ ಲಿಮಿಟೆಡ್‍ಗೆ 99 ವರ್ಷಗಳ ಅವಧಿಗೆ ಹಸ್ತಾಂತರ ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್‍ನಲ್ಲಿ ವರದಿಗಳ ಮಂಡನೆ
ಬೆಂಗಳೂರು, ಆಗಸ್ಟ್ 19,
ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಅಧ್ಯಕ್ಷರಾದ ಶರವಣ ಟಿ.ಎ. ಅವರು 2023 -24 ಮತ್ತು 2024-25ನೇ ಸಾಲಿನ ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿಯ 50ನೇ ವರದಿಯನ್ನು ಸದನದಲ್ಲಿ ಮಂಡಿಸಿದರು.
ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಸದಸ್ಯರಾದ ಡಿ.ಟಿ. ಶ್ರೀನಿವಾಸ್ (ಡಿ.ಟಿ.ಎಸ್.) ಅವರು ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ 43ನೇ ವರದಿಯನ್ನು ಸದನದಲ್ಲಿ ಮಂಡಿಸಿದರು.
ಕರ್ನಾಟಕ ವಿಧಾನಮಂಡಲದ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರ್ ಅವರು ಕರ್ನಾಟಕ ವಿಧಾನಮಂಡಲದ ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ 40ನೇ ವರದಿಯನ್ನು ಸದನದಲ್ಲಿ ಮಂಡಿಸಿದರು.
ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯ ಸದಸ್ಯರಾದ ಎ. ವಸಂತ ಕುಮಾರ್ ಅವರು ಕರ್ನಾಟಕ ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿಯ 53ನೇ ವರದಿಯನ್ನು ಸದನದಲ್ಲಿ ಮಂಡಿಸಿದರು.
ಪರಿಷತ್‍ನಲ್ಲಿ ಕಾಗದ ಪತ್ರಗಳ ಮಂಡನೆ
ಬೆಂಗಳೂರು, ಆಗಸ್ಟ್ 19,
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ಅವರು ಮಾರ್ಚ್ 2023-2024ಕ್ಕೆ ಕೊನೆಗೊಂಡ ವರ್ಷಕ್ಕೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ರಾಜ್ಯದ ಹಣಕಾಸಿನ ವ್ಯವಹಾರಗಳ ಲೆಕ್ಕಪರಿಶೋಧನಾ ವರದಿ (2025ರ ವರದಿ ಸಂಖ್ಯೆ-4) ಯನ್ನು ಸಭೆಯ ಮುಂದೆ ಮಂಡಿಸಿದರು.
ಅದೇ ರೀತಿ ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷಕ್ಕೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ರಾಜ್ಯ ಕಂದಾಯದ ವರದಿ (2025ನೇ ವರ್ಷದ ವರದಿ ಸಂಖ್ಯೆ-5) ಯನ್ನು ಸಭೆಯ ಮುಂದೆ ಮಂಡಿಸಿದರು.
2020-2022ನೇ ಸಾಲಿನ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮೇಲಿನ ಸಂಯೋಜಿತ ವಾರ್ಷಿಕ ತಾಂತ್ರಿಕ ಪರಿಶೀಲನಾ ವರದಿಯನ್ನು ಸಭೆಯ ಮುಂದೆ ಮಂಡಿಸಿದರು.
ಮಾರ್ಚ್ 2023ಕ್ಕೆ ಕೊನೆಗೊಂಡ ವರ್ಷಕ್ಕೆ ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ಅನುಸರಣಾ ಲೆಕ್ಕಪರಿಶೋಧನೆ ವರದಿ (2025ನೇ ವರ್ಷದ ವರದಿ ಸಂಖ್ಯೆ-3) ಯನ್ನು ಸಭೆಯ ಮುಂದೆ ಮಂಡಿಸಿದರು.
ವಿಶೇಷ ಸದನ ಸಮಿತಿ ಕಾಲಾವಕಾಶವನ್ನು ವಿಸ್ತರಿಸುವ ಪ್ರಸ್ತಾವ ಮಂಡನೆ
ಬೆಂಗಳೂರು, ಆಗಸ್ಟ್ 19,
ವಿಶೇಷ ಸದನ ಸಮಿತಿ ಅಧ್ಯಕ್ಷರಾದ ನಿರಾಣಿ ಹಣಮಂತ್ ರುದ್ರಪ್ಪ (ಅವರು, ರಾಜ್ಯದ ವಿವಿಧ ನಿಗಮಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೈಗೊಂಡಿರುವ ಮಗಾರಿಗಳಲ್ಲಿ ನಡೆದಿರುವ ಅವ್ಯವಹಾರಗಳ ಸಂಬಂಧ ಪರಿಶೀಲಿಸಿ ವರದಿಯನ್ನು ಸಲ್ಲಿಸಲು ವಿಶೇಷ ಸದನ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲು ದಿನಾಂಕ: 22.04.2025 ರಿಂದ 06 ತಿಂಗಳುಗಳ ಕಾಲಾವಕಾಶವನ್ನು ಸದನದ ಸಹಮತಿಯನ್ನು ಕಾಯ್ದಿರಿಸಿ ವಿಸ್ತರಿಸಲಾಗಿರುವ ಪ್ರಸ್ತಾವನೆಗೆ ಸದನದ ಸಹಮತಿ ಕೋರಿ ಪ್ರಸ್ತಾವವನ್ನು ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಮಂಡಿಸಿದರು.
ಮೈಸೂರು ವಿಶ್ವ ವಿದ್ಯಾನಿಲಯ - ವಿವಿಧ ಸಂಯೋಜಿತ ಕಾಲೇಜುಗಳಿಂದ ಅರ್ಹ ಮಾರ್ಗದರ್ಶಕರನ್ನು ಪಡೆಯಲು ಕ್ರಮ ವಹಿಸಲಾಗಿದೆ – ಸಚಿವ ಡಾ. ಎಂ.ಸಿ. ಸುಧಾಕರ್
ಬೆಂಗಳೂರು, ಆಗಸ್ಟ್ 19,
ಮೈಸೂರು ವಿಶ್ವವಿದ್ಯಾನಿಲಯವು ದಿನಾಂಕ:23-12-2024 ಹಾಗೂ 24-12-2024ರಂದು ಪಿಎಚ್.ಡಿ. ಪದವಿಗೆ ನೋಂದಣಿ ಮಾಡಿಕೊಳ್ಳಲು ವಿವಿಧ ವಿಷಯಗಳಲ್ಲಿ ಪ್ರವೇಶ ಪರೀಕ್ಷೆಗಳನ್ನು ಆಯೋಜಿಸಿ ದಿನಾಂಕ: 03-03-2025 ಫಲಿತಾಂಶ ಪ್ರಕಟಿಸಿದೆ. ಪಿಎಚ್.ಡಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪಡೆದ 186 ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವನ್ನು ಒಳಗೊಂಡಂತೆ ತನ್ನ ವ್ಯಾಪ್ತಿಯಲ್ಲಿ ಬರುವ ವಿವಿಧ ಸಂಯೋಜಿತ ಕಾಲೇಜುಗಳಿಂದ ಅರ್ಹ ಮಾರ್ಗದರ್ಶಕರಾಗಿ ಪಡೆಯಲು ಕ್ರಮವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ, ಪರಿಷತ್ ಸದಸ್ಯೆ ಡಾ. ಉಮಾಶ್ರೀ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಪಿ.ಎಚ್.ಡಿ ನೋಂದಣಿ ಮಾಡಿಕೊಳ್ಳಲು ಮಾರ್ಗದರ್ಶಕರ ಬಳಿ ಅಭ್ಯರ್ಥಿಗಳ ಲಭ್ಯತೆ ಖಾಲಿ ಇದ್ದಲ್ಲಿ ಅರ್ಹ ಅಭ್ಯರ್ಥಿಗಳು ಅಂತಹ ಮಾರ್ಗದರ್ಶಕರಿಂದ ಸಮ್ಮತಿ ಪತ್ರ ಪಡೆದು, ಸಲ್ಲಿಸಿದ್ದಲ್ಲಿ ವಿಶ್ವವಿದ್ಯಾನಿಲಯವು ಅಂತಹ ವಿದ್ಯಾರ್ಥಿಗಳಿಗೆ ಪ್ರಥಮವಾಗಿ ತಾತ್ಕಾಲಿಕ ನೋಂದಣಿಗೆ ಅನುಮತಿ ನೀಡಲು ಕ್ರಮವಹಿಸುತ್ತಿದೆ. ವಿಶ್ವವಿದ್ಯಾನಿಲಯವು ನಡೆಸುವ ಪಿಎಚ್.ಡಿ. ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಪ್ರಮಾಣ ಪತ್ರಕ್ಕೆ ಮೂರು ವರ್ಷಗಳವರೆಗೆ ಮಾನ್ಯತೆಯಿದ್ದು, ಆಯಾ ಮಾರ್ಗದರ್ಶಕರ ಅಡಿಯಲ್ಲಿ ಖಾಲಿಯಾಗುವ ಎದುರಿಗೆ ಅವರ ಸಮ್ಮತಿ ಪತ್ರದೊಡನೆ ನಿಯಮಾನುಸಾರ ಭರ್ತಿ ಮಾಡಿಕೊಳ್ಳಲು ವಿಶ್ವವಿದ್ಯಾಲಯವು ಅವಕಾಶ ಕಲ್ಪಿಸಿರುತ್ತದೆ.
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ಪ್ರಕರಣ 33 ಅಧ್ಯಯನ ಮಂಡಳಿ (Board of Studies) ರನ್ವಯ ವಿಶ್ವವಿದ್ಯಾಲಯವು ಪದವಿ ಪೂರ್ವ ಅಧ್ಯಯನಗಳಿಗಾಗಿ ಮತ್ತು ಸ್ನಾತಕೋತ್ತರ ಅಧ್ಯಯನಗಳಿಗಾಗಿ ಪ್ರತ್ಯೇಕ ಅಧ್ಯಯನ ಮಂಡಳಿಯಿದ್ದು, UGC (Minimum Standards and Procedures for Award of PhD Degree) Regulations, 2022ರಲ್ಲಿ ಸಂಶೋಧಕರ ಮೇಲ್ವಿಚಾರಕರಿಗೆ ಸಂಬಂಧಿಸಿದಂತೆ, Adjunct Faculty members shall not act as Research Supervisors and can only act as co-supervisors; (1) An eligible Professor/Assistant Professor can guide up to eight (8)/six (06)/ four (04), Ph.D scholars, respectively, at any given time. (2) In case of interdisciplinary/ multidisciplinary research work, if required, a Co-Supervisor from outside the Department/School/Centre/University may be appointed ನಿಯಮಗಳನ್ನು ಉಪಬಂಧಿಸಲಾಗಿರುತ್ತದೆ;
ಈ ಮಾರ್ಗಸೂಚಿಗಳನ್ವಯ ವಿಶ್ವವಿದ್ಯಾಲಯದಲ್ಲಿ ಬೋಧಕ ಹುದ್ದೆಗಳ ಕೊರತೆಯಿರುವುದರಿಂದ ಪಿ.ಎಚ್.ಡಿ ಸಾಮಾನ್ಯ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಅರ್ಹತೆ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರನ್ನು ನೇಮಕ ಮಾಡಲು ಸಾಧ್ಯವಾಗುತ್ತಿಲ್ಲ.
ಮೈಸೂರು ವಿಶ್ವವಿದ್ಯಾಲಯವನ್ನು ಒಳಗೊಂಡಂತೆ ರಾಜ್ಯದ ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿಗಳ ಬಗ್ಗೆ, ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡುವಂತೆ ಸರ್ಕಾರದಿಂದ ಮಾನ್ಯ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಸದರಿ ಸಮಿತಿಯು ದಿನಾಂಕ, 13.02.2025 ಮತ್ತು 09.05.2025ರಂದು ಸಭೆಗಳನ್ನು ನಡೆಸಿದ್ದು ಪ್ರಸ್ತುತ ಇಲ್ಲಿಯವರೆಗೆ ಶಿಫಾರಸ್ಸುಗಳನ್ನು ನೀಡಿರುವುದಿಲ್ಲ. ಸಮಿತಿಯ ವರದಿ ನಿರೀಕ್ಷಿಸಲಾಗಿದ್ದು, ಸಮಿತಿ ನೀಡುವ ಶಿಫಾರಸ್ಸುಗಳನ್ನು, ಸಚಿವ ಸಂಪುಟದ ಮುಂದೆ ಮಂಡಿಸಿ ವಿಶ್ವವಿದ್ಯಾಲಯಗಳು ಶೈಕ್ಷಣಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸದೃಢಗೊಳ್ಳಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಬಾಗಲಕೋಟೆ ಕೃಷಿ ವಿಶ್ವವಿದ್ಯಾನಿಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಲಾಗುವುದಿಲ್ಲ – ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
ಬೆಂಗಳೂರು, ಆಗಸ್ಟ್ 19,
ಬಾಗಲಕೋಟೆಯ ಕೃಷಿ ವಿಶ್ವವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ಮುಚ್ಚಲಾಗುವುದಿಲ್ಲ ಅಥವಾ ಯಾವುದೇ ವಿಶ್ವವಿದ್ಯಾನಿಲಯದ ಜೊತೆ ವಿಲೀನಗೊಳಿಸಲಾಗುವುದಿಲ್ಲ ಎಂದು ಕೃಷಿ ಸಚಿವ ಎನ್, ಚಲುವರಾಯಸ್ವಾಮಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ನಿರಾಣಿ ಹಣಮಂತ್ ರುದ್ರಪ್ಪ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರ ಪರವಾಗಿ ಉತ್ತರಿಸಿದ ಸಚಿವರು, ಕೃಷಿ ವಿಶ್ವವಿದ್ಯಾನಿಲಯಗಳ ಮರು ಸಂಘಟಿಸುವ ಕುರಿತು ನಿವೃತ್ತ ಐ.ಎ.ಎಸ್. ಅಧಿಕಾರಿ ವಿಜಯ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಸಲ್ಲಿಸುವ ಸಮಗ್ರ ವರದಿಯನ್ನು ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್‍ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಸುದೀರ್ಘ ಸೇವೆಯನ್ನು ಶ್ಲಾಘಿಸಿ ಅಭಿನಂದನೆ
ಬೆಂಗಳೂರು, ಆಗಸ್ಟ್ 19,
ಸುಮಾರು 45 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕಿ ಇಲ್ಲದೇ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿರುವ ಸಭಾಪತಿ ಬಸವರಾಜ ಹೊರಟ್ಟಿಯವರ ಸೇವೆಯನ್ನು ಸಚಿವರು ಹಾಗೂ ವಿಧಾನ ಪರಿಷತ್ತಿನ ಸದಸ್ಯರು ಶ್ಲಾಘಿಸಿ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
ಮೊದಲಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಸಭಾಪತಿ ಬಸವರಾಜ ಹೊರಟ್ಟಿ ಅವರು 1980ರಲ್ಲಿ ವಿಧಾನ ಪರಿಷತ್ತಿನ ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿ ಅಲ್ಲಿಂದ ಇಲ್ಲಿಯವರಗೂ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಸೋಲನ್ನು ಕಾಣದೆ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. ಆಂದ್ರ ಪ್ರದೇಶದ ಪೆÇ್ರ. ರಂಗ ಅವರು 10 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ, ಕರ್ನಾಟಕದಲ್ಲಿ ತಾವು ಒಬ್ಬರೇ ಇಷ್ಟು ಸುದೀರ್ಘ ಸೇವೆ ಸಲ್ಲಿಸಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಸಭಾಪತಿಗಳಾಗಿ ತಾವು ಯಾವುದೇ ಪಕ್ಷ ಭೇದ ಮರೆತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವ ರೀತಿ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ. ತಮ್ಮ ಕುರ್ಚಿಗೆ ಅಪಮಾನವಾದಗ ಸೂಕ್ತ ರೀತಿಯ ತೀರ್ಮಾನ ತೆಗೆದುಕೊಂಡು ಕ್ರಮ ವಹಿಸಬೇಕಾಗಿತ್ತು. ಆದರೆ ತಾವು ಆ ಕೆಲಸ ಮಾಡಲಿಲ್ಲ. ತಾವು ಕಿರಿಯರಿಗೆ ಮಾರ್ಗದರ್ಶಕರಾಗಿದ್ದೀರಿ. ತಮ್ಮ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ತಿಳಿಸಿದರು.
ಪರಿಷತ್ ಸದಸ್ಯ ಮಂಜುನಾಥ ಬಂಡಾರಿ ಮಾತನಾಡಿ, ತಮ್ಮ ಸುದೀರ್ಘ ಸೇವೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 8 ಬಾರಿ ಆಯ್ಕೆಯಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿಧಾನ ಪರಿಷತ್ ಸಭಾಪತಿಗಳಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ತಮ್ಮ ಸೇವಾಧಿಯಲ್ಲಿ 17 ಜನ ಮುಖ್ಯಮಂತ್ರಿಗಳೊಂದಿಗೆ ಕಾರ್ಯನಿವಹಿಸಿರುತ್ತೀರಿ. ತಾವು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿರುವ ಅಪಾರಾದ ಕೊಡುಗೆ ಯಾರಿಂದಲೂ ಮರೆಯಲು ಸಾಧ್ಯವಿಲ್ಲ. ಶಾಲೆ ತೆರಯುವ ಸಲುವಾಗಿ ತಮ್ಮ ಊರಿನಲ್ಲಿ ಸ್ವಂತ ಜಾಗವನ್ನು ದಾನ ಮಾಡಿ, ಶಾಲೆಯನ್ನು ನಿರ್ಮಿಸಿ ಆರ್ಥಿಕತೆಯಿಂದ ಹಿಂದುಳಿದ ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದೀರಿ. ಮಂಗಳೂರಿಗೆ ಭೇಟಿ ನೀಡಿದ ಸಮಯದಲ್ಲಿ ನಮ್ಮ ಕಾಲೇಜಿಗೆ ಬಂದು ಸುಮಾರು 5 ಗಂಟೆಗಳಿಗೂ ಹೆಚ್ಚು ಕಾಲ ನಮ್ಮ ಕಾಲೇಜಿನ ಸಿಬ್ಬಂದಿಯೊಂದಿಗೆ ಮಾತನಾಡಿ ಅವರಿಗೆ ಮಾರ್ಗದರ್ಶನ ನೀಡಿದ್ದೀರಿ ಈ ಸಂದರ್ಭವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ಟಿ. ನಾರಾಯಣ ಸ್ವಾಮಿ ಅವರು ಮಾತನಾಡಿ, ರಾಜಕೀಯ ಜೀವನದಲ್ಲಿ 45 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಮುನ್ನಡೆಯುತ್ತಿದ್ದೀರಿ. ತಮ್ಮ ಜೀವನದ ಸಾಧನೆಯನ್ನು ಅರ್ಥ ಮಾಡಿಕೊಳ್ಳಲು ಪಿ.ಹೆಚ್.ಡಿ ಮಾಡಬೇಕಾಗಿದೆ. ಜನಪರ ಸೇವೆ ಮಾಡುತ್ತಾ ಜನರ ಮನ ಗೆದ್ದಿದ್ದೀರಿ. ಒಂದು ವಿಪರ್ಯಾಸ ಎಂದರೆ ತಮ್ಮದು 45 ವರ್ಷಗಳ ಸುದೀರ್ಘ ಸೇವೆ ಆಯಿತು ಆದರೆ ನಾನು ಸದನಕ್ಕೆ ಬರಬೇಕಾದಲ್ಲಿ 45 ವರ್ಷ ಆಯಿತು ಎಂದರು.
ಅದೇ ರೀತಿ ವಿಧಾನ ಪರಿಷತ್ತಿನ ಸದಸ್ಯರಾದ .ಹೆಚ್. ವಿಶ್ವನಾಥ್, ಐವಾನ್ ಡಿಸೋಜಾ, ಡಿ.ಟಿ. ಶ್ರೀನಿವಾಸ್, ಹೇಮಲತಾ ನಾಯಕ್, ಪಿ.ಹೆಚ್. ಪೂಜಾರ್ ಪುಟ್ಟಣ್ಣ, ಡಾ. ಧನಂಜಯ ಸರ್ಜಿ, ಶಶೀಲ್ ನಮೋಶಿ, ಹಣಮಂತ ನಿರಾಣಿ ರುದ್ರಪ್ಪ, ಸಲೀಮ್ ಅಹಮ್ಮದ್, ನಜೀರ್ ಅಹಮ್ಮದ್, ಬಲ್ಕಿಸ್ ಬಾನು, ತಿಪ್ಪಣ್ಣ ಕಮಕನೂರ, ಟಿ.ಎ. ಶರವಣ, ಕೆ.ಎಸ್. ನವೀನ್, ಕಿಶೋರ್ ಕುಮಾರ್ ಪುತ್ತೂರ್ ಹಾಗೂ ಸಚಿವರಾದ ಎಂ.ಬಿ. ಪಾಟೀಲ್ ಅವರುಗಳು ಸಭಾಪತಿ ಬಸವರಾಜ ಹೊರಟ್ಟಿಯವರ 45 ವರ್ಷಗಳ ಸುದೀರ್ಘ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಅಭಿನಂದಿಸಿದರು.