ಬೆಂಗಳೂರು ಭೇಟಿಗಾಗಿ ಆಗಮಿಸಿದ ಫಿಲಿಪೈನ್ಸ್ ದೇಶದ ಅಧ್ಯಕ್ಷ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್ - ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಂದ ಆತ್ಮೀಯ ಸ್ವಾಗತ

BANGALORE:

Font size:

ಬೆಂಗಳೂರು ಭೇಟಿಗಾಗಿ ಆಗಮಿಸಿದ ಫಿಲಿಪೈನ್ಸ್ ದೇಶದ ಅಧ್ಯಕ್ಷ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್ - ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಂದ ಆತ್ಮೀಯ ಸ್ವಾಗತ

ಬೆಂಗಳೂರು, ಆ .7 -

ಫಿಲಿಪೈನ್ಸ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರಾದ ಪರ್ಡಿನ್ಯಾಂಡ್ ರೊಮುಡ್ಜ್ ಮಾರ್ಕೋಸ್ ಜ್ಯೂನಿಯರ್, ಫಿಲಿಪೈನ್ಸ್ ದೇಶದ ಪ್ರಥಮ ಮಹಿಳೆ ಲೂಯಿಸ್ ಅರ್ನೆಟಾ ಮಾರ್ಕೋಸ್ ಅವರು ತಮ್ಮ ದೇಶದ ನಿಯೋಗದೊಂದಿಗೆ ಬೆಂಗಳೂರು ಭೇಟಿಗಾಗಿ ಇಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಫಿಲಿಪೈನ್ಸ್ ಗಣರಾಜ್ಯದ ಗೌರವಾನ್ವಿತ ಅಧ್ಯಕ್ಷರನ್ನು
ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ ಗುಪ್ತ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಎ.ಬಿ. ಬಸವರಾಜು, ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಗಳು ಹಾಗೂ ಫಿಲಿಪೈನ್ಸ್ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Prev Post 08.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :
Next Post ಪ್ರಧಾನಮಂತ್ರಿ ಮೋದಿಯವರಿಂದ ಯೆಲ್ಲೋ ಮೆಟ್ರೊ ಲೈನ್ ಆ. 10ರಂದು ಲೋಕಾರ್ಪಣೆ: ಬಿ.ವೈ.ವಿಜಯೇಂದ್ರ