ಏಳು ದಿನಗಳ ನಿರಂತರ ಭರತನಾಟ್ಯ ಪ್ರದರ್ಶನ ರೆಮೋನಾ ಪಿರೇರಾ ವಿಶ್ವ ದಾಖಲೆ

Mangalore:

Font size:

ಏಳು ದಿನಗಳ ನಿರಂತರ ಭರತನಾಟ್ಯ ಪ್ರದರ್ಶನ ರೆಮೋನಾ ಪಿರೇರಾ ವಿಶ್ವ ದಾಖಲೆ

from : Jayaram Udupi

ಏಳು ದಿನಗಳ ನಿರಂತರ ಭರತನಾಟ್ಯ ಪ್ರದರ್ಶನ
ರೆಮೋನಾ ಪಿರೇರಾ ವಿಶ್ವ ದಾಖಲೆ

ಮಂಗಳೂರು: ಏಳು ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ದಾಖಲೆ ಮಾಡುವ ಮೂಲಕ ಮಂಗಳೂರಿನ ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾರೆ.

ಸಂತ ಅಲೋಶಿಯಸ್ ವಿ.ವಿ.ಯಲ್ಲಿ ಜು.೨೮ ರಂದು ನಡೆದ ಕಾರ್ಯಕ್ರಮದಲ್ಲಿ ರೆಮೋನಾ ಪಿರೇರಾ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡದಿಂದ ಅಧಿಕೃತವಾಗಿ ಘೋಷಣೆ ಪಡೆದುಕೊಂಡು, ಪ್ರಶಸ್ತಿ ಸ್ವೀಕರಿಸಿದರು.

ಮಂಗಳೂರಿನ ಸಂತ ಅಲೋಶಿಯಸ್ ವಿ.ವಿ.ಯ ವಿದ್ಯಾರ್ಥಿನಿ ರೆಮೋನಾ ಅವರು ಇದೇ ಕಾಲೇಜಿನ ರಾಬರ್ಟ್ ಸಿಕ್ವೇರಾ ಹಾಲ್‌ನಲ್ಲಿ ಜು. ೨೧ರಂದು ಬೆಳಗ್ಗೆಯಿಂದ ಆರಂಭಿಸಿದ ಭರತನಾಟ್ಯ ಪ್ರದರ್ಶನ ಹಗಲು-ರಾತ್ರಿ ನಿರಂತರವಾಗಿ ಜು.೨೮ ರ ಮಧ್ಯಾಹ್ನದವರೆಗೆ ನಡೆದಿತ್ತು. ಈ ಮೂಲಕ ೧೭೦ ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಲಾತೂರ್‌ನ ೧೬ ವರ್ಷದ ಸುಧೀರ್ ಜಗಪತ್ ಅವರು ೨೦೨೩ರಲ್ಲಿ ೧೨೭ ಗಂಟೆಗಳ ಕಾಲ ನಿರಂತರ ನೃತ್ಯ ಪ್ರದರ್ಶನ ನೀಡಿರುವುದು ಈವರೆಗಿನ ದಾಖಲೆ. ರೆಮೋನಾ ಪಿರೇರಾ ಅವರು ಈ ದಾಖಲೆಯನ್ನು ಜು.೨೬ ರ ಸಂಜೆಯೇ ಮುರಿದಿದ್ದು ಸೋಮವಾರ ಮಧ್ಯಾಹ್ನದವರೆಗೆ ಭರತನಾಟ್ಯ ಪ್ರದರ್ಶನವನ್ನು ಮುಂದುವರೆಸಿದ್ದರು. ಪ್ರತೀ ೩ ಗಂಟೆಗೆ ೧೫ ನಿಮಿಷ ಮಾತ್ರ ಬಿಡುವು ಇರುತ್ತಿತ್ತು.

Prev Post ಧರ್ಮಸ್ಥಳ ಪ್ರಕರಣ ಅನಾಮಿಕ ವ್ಯಕ್ತಿ ಜತೆ ಎಸ್‌ಐಟಿ ಸ್ಥಳ ಮಹಜರು
Next Post ಆಗಸ್ಟ್ 4 ರಿಂದ ಅಮೇರಿಕಾದಲ್ಲಿ ಶಾಸಕಾಂಗ ಶೃಂಗಸಭೆ 2025: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಯಾಣ