ಅರಣ್ಯ ಹಾಗೂ ಸಾರ್ವಜನಿಕ ಹಿತಾಸಕ್ತಿಗಳೆರೆಡೂ ಮುಖ್ಯ: ಎನ್ ಚಲುವರಾಯಸ್ವಾಮಿ ಸಮನ್ವಯ ಕಾಯ್ದುಕೊಳ್ಳಲು

Bangalore:

Font size:

ಅರಣ್ಯ ಹಾಗೂ ಸಾರ್ವಜನಿಕ ಹಿತಾಸಕ್ತಿಗಳೆರೆಡೂ ಮುಖ್ಯ: ಎನ್ ಚಲುವರಾಯಸ್ವಾಮಿ ಸಮನ್ವಯ ಕಾಯ್ದುಕೊಳ್ಳಲು

ಬೆಂಗಳೂರು ಜು 24:

ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಅರಣ್ಯ ಸಂರಕ್ಷಣೆಗಳೆರೆಡೂ ಮುಖ್ಯ.ಸಮತೋಲನ ಕಾಯ್ದುಕೋಂಡು ಪರಸ್ಪರ ಸಮನ್ವಯದಿಂದ ಯೋಜನೆಗಳನ್ನು ಅನುಷ್ಠಾನ ಗೊಳಿಸಿ ಎಂದು ಕೃಷಿ ಸಚಿವರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.

ವಿಧಾ ಸೌಧದ ಸಮಿತಿ ಕೊಠಡಿಯಲ್ಲಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರ ಉಪಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಕಂದಾಯ ಅರಣ್ಯ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕೃಷಿ ಸಚಿವರು ಮಾತನಾಡಿದರು.

ಮಂಡ್ಯ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಸಂದರ್ಭಗಳಲ್ಲಿ ಅರಣ್ಯದ ವಿಚಾರವಾಗಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಉಬಯ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವು ಸಲಹೆ, ಸೂಚನೆ ನಿರ್ದೇಶನಗಳನ್ನು ನೀಡಿದರು.

ಅರಣ್ಯ ನಿಯಮಾವಳಿಗಳ ಬಗ್ಗೆ ಸರ್ವೊಚ್ಚ ನ್ಯಾಯಾಲಯ ಬಿಗಿ ನಿಲುವು ಹೊಂದಿರುವುದು ಗಮನಾರ್ಹ ಅದರೆ ಕುಡಿಯುವ ನೀರು,ವಿದ್ಯುತ್ ಸಂಪರ್ಕಗಳಂತಹ ಮೂಲಭೂತ ಸೌಕರ್ಯಗಳಿಗೆ ಮಾನವೀಯ ದೃಷ್ಟಿ ಅಗತ್ಯ ಎಂದು ಚಲುವರಾಯಸ್ವಾಮಿ ಹೇಳಿದರು.

ಕುಡಿಯುವ ನೀರು ವಿದ್ಯುತ್ ಸರಬರಾಜಿನಂತಹ ಮೂಲಭೂತ ಸೌಕರ್ಯ ಪೂರೈಕೆಗೆ ಅಡ್ಡಿ ಮಾಡಡೆ ಅರಣ್ಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪರಿಭಾವಿತ ಅರಣ್ಯ ಪ್ರದೇಶಗಳ ನಕಾಶೆ ಸರಿಪಡಿಸಬೇಕಿದೆ ಎಂದು ಅಧಿಕಾರಿಗಳು ಶಾಸಕರು ಅಭಿಪ್ರಾಯ ಪಟ್ಟಿದ್ದು ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸಿ ಗೊಂದಲಗಳನ್ನು ಇತ್ಯರ್ಥ ಪಡಿಸುವಂತೆ ಸೂಚಿಸಲಾಯಿತು.

ಬೆಂಗಳೂರು ಸೋಮವಾರ ಪೇಟೆ ರಾಜ್ಯ ಹೆದ್ದಾರಿ ಕಾಮಗಾರಿ, ವಿವಿಧ ರಸ್ತೆ ಕಾಮಗಾರಿಗಳು ನೀರು ಸರಬರಾಜು ಯೋಜನೆಗಳ ಅನುಷ್ಠಾನಕ್ಕೆ ಉಂಟಾಗಿರುವ ಅಡ್ಡಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಅಧಿಕಾರಿಗಳು ನಿಯಮಾವಳಿಗಳ ವ್ಯಾಪ್ತಿಯೊಳಗೆ ಇರುವ ಪರಿಹಾರ ಮಾರ್ಗಗಳನ್ನು ಕಂಡಕೊಳ್ಳುಬೇಕು. ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಹಾಗೂ ಮಾನವ ವನ್ಯಜೀವಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವರಾದ ಎನ್. ಚಲುವರಾಯಸ್ವಾಮಿ ಹಾಗೂ ಈಶ್ವರ್ ಖಂಡ್ರೆ ಅವರು ನಿರ್ದೇಶನ ನೀಡಿದರು.

ನಿಯಮಾವಳಿಗಳ ಒಳಗೆ ರಾಜ್ಯ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಪರಿಹಾರದ ಕ್ರಮಗಳು,ಬದಲಿ ಜಾಗ ಪಡೆದು‌ ಮಾಡಬಹುದಾದ ಮಾರ್ಪಾಡುಗಳ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಅರಣ್ಯ ಸಚಿವರಾದ ಈಶ್ಚರ್ ಖಂಡ್ರೆ ಸೂಚನೆ ನೀಡಿದರು

ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರು ಜಿಲ್ಲೆಯ ವ್ಯಾಪ್ತಿ ಅರಣ್ಯ ಇಲಾಖೆಯಿಂದ ಅನುಮತಿ ಬೇಕಿರುವ ಕಾಮಗಾರಿಗಳ ವಿವರ ಮಂಡಿಸಿದರು.
ಚೆಸ್ಕಾಂ ಅಧ್ಯಕ್ಷರು ಹಾಗೂ ಶ್ರವಣಬೆಳಗೊಳ ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ, ಶಾಸಕರಾರ ಉದಯ್ ಗೌಡ ,ದರ್ಶನ್ ಪುಟ್ಟಣಯ್ಯ,ರವಿ ಗೌಡ, ಹೆಚ್.ಟಿ ಮಂಜು, ಮಧು‌ಮಾದೇಗೌಡ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Prev Post ಕೇಂದ್ರ ವಿಮಾನಯಾನ ಸಚಿವ ನಾಯ್ಡು ಜತೆ ಎಂ ಬಿ ಪಾಟೀಲ ಭೇಟಿ*
Next Post ಕಾಂಗ್ರೆಸ್ಸಿನ 9 ಲೋಕಸಭಾ ಸೀಟ್ ಗೆಲುವಿನಲ್ಲಿ ಯಾವುದೋ ಷಡ್ಯಂತ್ರ: ಸಿ.ಟಿ.ರವಿ ಆರೋಪ