ದಿನಾಂಕ: ೨೪.೦೭.೨೦೨೫ರ ಸಚಿವ ಸಂಪುಟದ ನಿರ್ಣಯಗಳು

BANGALORE:

Font size:

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನ ಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ನಡೆದ 2025ನೇ ಸಾಲಿನ 16ನೇ ಸಭೆಯ ಬಳಿಕ, ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಸಚಿವ ಶ್ರೀ ಎಚ್.ಕೆ. ಪಾಟೀಲ್, ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಶ್ರೀ ಕೆ.ಹೆಚ್.ಮುನಿಯಪ್ಪ ಮತ್ತು ಮಾನ್ಯ ಅಬಕಾರಿ ಸಚಿವ ಶ್ರೀ ಆರ್.ಬಿ.ತಿಮ್ಮಾಪುರ ಅವರು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದರು.

***********************
ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಠತಾ ಕೇಂದ್ರ

ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಠತಾ ಕೇಂದ್ರ (ಅoಇ) ವನ್ನು ಐದು ವರ್ಷಗಳ ಅವಧಿಯಲ್ಲಿ ಒಟ್ಟು ರೂ.೧೦.೦೦ ಕೋಟಿಗಳ ಆಯವ್ಯಯದಲ್ಲಿ ಸ್ಥಾಪಿಸಲು; ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಕಂಪನಿ ಕಯ್ದೆ, ೨೦೧೩ರಡಿ ಸೆಕ್ಷನ್-ಬಿ ಕಂಪನಿಯಾಗಿ ಸ್ಥಾಪಿಸಲು; ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಕುರಿತು ಅನುಷ್ಠಾನ ಪಾಲುದಾರರಾಗಿ ಆಯ್ಕೆ ಮಾಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, ೧೯೯೯ರ ಸೆಕ್ಷನ್ ೪(ಜಿ) ರಡಿ ವಿನಾಯಿತಿ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಇಸ್ರೋ, ಡಿಆರ್‌ಡಿಒ ಮತ್ತು ಇತರ ಸರ್ಕಾರಿ ಪರೀಕ್ಷಾ ಸೌಲಭ್ಯಗಳು ಸಂಪೂರ್ಣ ಸಾಮರ್ಥ್ಯ ತಲುಪಿರುವುದರಿಂದ ಮತ್ತು ತಮ್ಮದೇ ಆದ ಮಿಷನ್‌ಗಳತ್ತ ಗಮನಹರಿಸುವ ಅಗತ್ಯದಿಂದಾಗಿ ಪರೀಕ್ಷಾ ಸೌಲಭ್ಯಗಳಲ್ಲಿ ಕೊರತೆಯುಂಟಾಗಿದೆ. ನವೋದ್ಯಮ ವಲಯವು ಪ್ರತಿ ತಿಂಗಳು ಕನಿಷ್ಠ ೩೦ ಕಾರ್ಯನಿರತ ಮಾದರಿಗಳನ್ನು ಪರೀಕ್ಷೆಗೆ ಸಿದ್ದವಾಗಿ ಹೊರತರುತ್ತದೆ. ನವೋದ್ಯಮ ವಲಯದಿಂದ ಪರೀಕ್ಷಾ ಸೌಲಭ್ಯಗಳಿಗೆ ಬಲವಾದ ಬೇಡಿಕೆಯಿದೆ. ಆದ್ದರಿಂದ ಸ್ಪೇಸ್‌ಟೆಕ್‌ನಲ್ಲಿ ಉತ್ಕೃಷ್ಟತಾ ಕೇಂದ್ರ ಅಗತ್ಯವಿದೆ ಎಂದು ಪ್ರಸ್ತಾಪಿಸಲಾಗಿತ್ತು.

********************************
ಐದು (೫) ವರ್ಷಗಳ ಅವಧಿಯಲ್ಲಿ ರೂ.೧೦೦೦.೦೦ ಕೋಟಿಗಳ ಒಟ್ಟು ಬಜೆಟ್ ಹಂಚಿಕೆಯೊAದಿಗೆ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮವನ್ನು ಪ್ರಾರಂಭಿಸುವುದು. ಮೊದಲ ವರ್ಷದಲ್ಲಿ ಐಇಂP ಯೋಜನೆಯ ಅನುಷ್ಟಾನಕ್ಕಾಗಿ ರೂ.೨೦೦.೦೦ ಕೋಟಿಗಳ ಮೊತ್ತವನ್ನು ಮಂಜೂರು ಮಾಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಐಇಂP ಎಂಬುದು ಕರ್ನಾಟಕದ ಉದಯೋನ್ಮುಖ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸಹಾಯ ಮಾಡುವ ಒಂದು ಉಪಕ್ರಮವಾಗಿದ್ದು, ಈ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಮತ್ತು ಮುಂಬರುವ ನವೋದ್ಯಮಗಳಿಗೆ ನಿರ್ಣಾಯಕ ಮತ್ತು ಅಗತ್ಯ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಐಇಂP ಕರ್ನಾಟಕವನ್ನು ಜಗತ್ತಿಗೆ ಭವಿಷ್ಯದ ಸಿದ್ಧ ನವೋದ್ಯಮ ನಾಯಕನನ್ನಾಗಿಸಲು ಮುಂದಿನ ೫ ವರ್ಷಗಳಲ್ಲಿ ರೂ.೧೦೦೦.೦೦ ಕೋಟಿ ಬಂಡವಾಳ ಹೂಡುವ ಮಹಾತ್ವಾಕಾಂಕ್ಷಿ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
*******************************
ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿಗೆ ತಿದ್ದುಪಡಿ
ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರ ನೀತಿ ೨೦೨೪-೨೦೨೯ಕ್ಕೆ ತಿದ್ದುಪಡಿ ಮಾಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ನೀತಿ ದಾಖಲೆಯಲ್ಲಿ ಸ್ಪಷ್ಟತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಅಗತ್ಯ ತಿದ್ದುಪಡಿಗಳು ಮತ್ತು ಸ್ಪಷ್ಟಿಕರಣಗಳನ್ನು ಮಾಡಲು ಇಲಾಖೆ ಪ್ರಸ್ತಾಪಿಸಿದೆ. ಈ ಮಾರ್ಪಾಡುಗಳು ಕೇವಲ ಭಾಷೆ ಮತ್ತು ನಿರೂಪಣೆಯ ಸುಧಾರಣೆಗೆ ಮಾತ್ರ ಸೀಮಿತವಾಗಿವೆ, ಅದರ ಮೂಲ ನಿಬಂಧನೆಗಳು ಅಥವಾ ಮೂಲ ಉದ್ದೇಶವನ್ನು ಬದಲಾಯಿಸದೆ ನಿಖರವಾದ ವ್ಯಾಖ್ಯಾನವನ್ನು ಖಚಿತಪಡಿಸಿಕೊಳ್ಳಲು, ಸಂಭಾವ್ಯ ಅಸ್ಪಷ್ಟತೆಯನ್ನು ತಪ್ಪಿಸಲು ಮತ್ತು ಎಲಾ ಪಾಲುದಾರರಿಂದ ಅನುಷ್ಠಾನವನ್ನು ಸುಗಮಗೊಳಿಸಲು ಇದು ಅತ್ಯಗತ್ಯ. ಆದ್ದರಿಂದ ಜಿಸಿಸಿ ನೀತಿಯನ್ನು ತಿದ್ದುಪಡಿಸಲು ಮಾಡಲು ಪ್ರಸ್ತಾಪಿಸಲಾಗಿತ್ತು.
**********************************
ರಾಯಚೂರಿನಲ್ಲಿ ಪೆರಿಫರಲ್ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ
ರಾಯಚೂರಿನ ರಾಜೀವ್‌ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ರೂ.೨೦.೦೦ ಕೋಟಿಗಳ ಸಿವಿಲ್ ಕಾಮಗಾರಿ ಹಾಗೂ ರೂ.೩೦.೦೦ ಕೋಟಿಗಳ ಉಪಕರಣಗಳ ಖರೀದಿಯನ್ನೊಳಗೊಂಡಂತೆ ಒಟ್ಟು ರೂ.೫೦.೦೦ ಕೋಟಿ ವೆಚ್ಚದಲ್ಲಿ ಕಿದ್ವಾಯಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲು ಹಾಗೂ ಸದರಿ ವೆಚ್ಚವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
ರಾಯಚೂರಿನಲ್ಲಿ ಫೆರಿಫೆರಲ್ ಕ್ಯಾನ್ಸರ್ ಚಿಕಿತ್ಸಾ ಘಟಕವನ್ನು ಸ್ಥಾಪಿಸುವುದರಿಂದ ಸುತ್ತಮುತ್ತಲಿನ ಜಿಲ್ಲೆಗಳ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ನೀಡಲು ಸಹಕಾರಿಯಾಗುತ್ತದೆ.
***********************************
ಇಂದಿರಾಗಾAಧಿ ಮಕ್ಕಳ ಆಸ್ಪತ್ರೆ ಸಾಮರ್ಥ್ಯ ಹೆಚ್ಚಳ
ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ೪೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ಸ್ಥಾಪಿಸಲು ಹೆಚ್ಚುವರಿಯಾಗಿ ಅವಶ್ಯವಿರುವ ವೈದ್ಯಕೀಯ ಉಪಕರಣ, ಪೀಠೋಪಕರಣ ಹಾಗೂ ಇತರೆ ಬಾಬ್ತುಗಳ ಒಟ್ಟಾರೆ ರೂ.೬೨.೦೦ ಕೋಟಿಗಳ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಇಂದಿರಾಗಾAಧಿ ಮಕ್ಕಳ ಆರೋಗ್ಯ ಸಂಸ್ಥೆಯ ೪೫೦ ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣದಿಂದಾಗಿ ರಾಜ್ಯದ ಬಡಮಕ್ಕಳಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಕಡಿಮೆ ದರದಲ್ಲಿ ಪರಿಣಾಮಕಾರಿಯಾಗಿ ಒದಗಿಸಲು ಪ್ರಸ್ತಾಪಿಸಲಾಗಿತ್ತು.
*********************************
ಕೆರೆಗಳ ವಿಸ್ತೀರ್ಣಕ್ಕೆ ಬಫರ್ ಜೋನ್ ತಿದ್ದುಪಡಿ
ಕೆರೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಫರ್ ಜೋನ್ ನಿಗದಿಪಡಿಸುವುದಕ್ಕಾಗಿ; ಕೆರೆಯ ಬಫರ್ ಜೋನ್‌ನಲ್ಲಿ ಹಾಗೂ ಕೆರೆಯಲ್ಲಿ ಸಾರ್ವಜನಿಕ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿನಿಯಮ ೨೦೧೪ಕ್ಕೆ ತಿದ್ದುಪಡಿ ತರುವುದಕ್ಕಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕ ೨೦೨೫ನ್ನು ವಿಧಾನ ಮಂಡಲದಲ್ಲಿ ಮಂಡಿಸಲು; ಸಚಿವ ಸಂಪುಟ ಅನುಮೋದಿಸಿದೆ.
**********************************
ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ೦೭ ಪ್ರಾಧಿಕಾರಗಳ ಅಧ್ಯಕ್ಷತೆಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿತ್ತು. ಮುಖ್ಯಮಂತ್ರಿಗಳಿಗಿರುವ ಕಾರ್ಯಭಾರದ ಜೊತೆ ಈ ಮಂಡಳಿ/ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸುವುದು ಕಷ್ಟಸಾಧ್ಯವಾಗುವುದರಿಂದ ಕಂದಾಯ ಸಚಿವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಅಧಿಸೂಚನೆ ಹೊರಡಿಸಿರುವುದರಿಂದ ಪ್ರಸ್ತಾವಿತ ಮಂಡಳಿ/ಪ್ರಾಧಿಕಾರಿಗಳ ಅಧಿನಿಯಮ ತಿದ್ದುಪಡಿ ಮಾಡಲು ನಿರ್ಣಯಿಸಲಾಗಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
೧. ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ ೨೦೨೫.
೨. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ ೨೦೨೫.
೩. ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ ೨೦೨೫.
೪. ಬನವಾಸಿ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ ೨೦೨೫.
೫. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ ೨೦೨೫.
೬. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ ೨೦೨೫.
೭. ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ ೨೦೨೫.
ಮೇಲಿನ ಮಸೂದೆಗಳನ್ನು ವಿಧಾನಮಂಡಲದ ಮುಂದೆ ಮಂಡಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
************************************
ಯರಗಟ್ಟಿ ಏತ ನೀರಾವರಿ ಆಧುನೀಕರಣ
ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನಲ್ಲಿ ಅಸ್ಥಿತ್ವದಲ್ಲಿರುವ ಯರಗಟ್ಟಿ ಏತ ನೀರಾವರಿ ಯೋಜನೆಯ ನವೀಕರಣ ಕಾಮಗಾರಿಯನ್ನು ರೂ.೨೫.೦೦ ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಸವದತ್ತಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಯರಗಟ್ಟಿ ಏತ ನೀರಾವರಿ ಯೋಜನೆಯು ೧೯೮೫ ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಮೇಲ್ಪಟ್ಟ ಮತ್ತು ಕೆಳಮಟ್ಟ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಎರಡು ವಿಭಾಗಗಳಿಂದ ಸವದತ್ತಿ ತಾಲ್ಲೂಕಿನ ಹಾಲಿಕಟ್ಟಿ, ಮಲಸೂರ, ಯರಗಟ್ಟೆ, ಜೀವಾಪೂರ, ರೈನಾಪೂರ, ಸೊಪ್ಪಡ್ಲ, ಕಟಕೋಳ, ಗೊಂದಿ ಗ್ರಾಮಗಳ ಒಟ್ಟು ೧೬೮೫೦ ಎಕರೆ (೬೮೧೯.೧೦ ಹೆಕ್ಟೇರ್) ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದ್ದು, ಮಲಪ್ರಭಾ ಯೋಜನಾ ವಲಯದ ೧೦ ಏತ ನೀರಾವರಿ ಯೋಜನೆಗಳನ್ನು ಪರಿವೀಕ್ಷಣೆ ಮಾಡಿ, ಸದರಿ ಏತ ನೀರಾವರಿ ಯೋಜನೆಯ ಪಂಪಿAಗ್ ಮಷಿನರಿಗಳನ್ನು ಬದಲಾಯಿಸಿ, ನವೀಕರಣ ಗೊಳಿಸಲು ಪ್ರಸ್ತಾಪಿಸಿ, ಈ ಯೋಜನೆ ರೂಪಿಸಲಾಗಿದೆ.
**************************************
ರೇಣುಕಾ ಏತ ನೀರಾವರಿ ನವೀಕರಣ
ಬೆಳಗಾವಿ ಜಿಲ್ಲೆ, ಸವದತ್ತಿ ತಾಲ್ಲೂಕಿನಲ್ಲಿ ಅಸ್ಥಿತ್ವದಲ್ಲಿರುವ ರೇಣುಕಾ ಏತ ನೀರಾವರಿ ಯೋಜನೆಯ ನವೀಕರಣ ಕಾಮಗಾರಿಯನ್ನು ರೂ.೨೦.೦೦ ಕೋಟಿಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಸವದತ್ತಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ರೇಣುಕಾ ಏತ ನೀರಾವರಿ ಯೋಜನೆಯು ೧೯೭೮ ರಿಂದ ಕಾರ್ಯ ನಿರ್ವಹಿಸುತ್ತಿದ್ದು, ಸವದತ್ತಿ ತಾಲ್ಲೂಕಿನ ಕುರುವಿನಕೊಪ್ಪ, ಹೂಲಿ, ಹೊಲಿಕಟ್ಟಿ, ಉಗರಗೊಳ, ಹರಳಕಟ್ಟಿ, ಗ್ರಾಮಗಳ ಒಟ್ಟು ೨೦೧೭೬ ಎಕರೆ (೮೧೬೫.೧೧ ಹೆಕ್ಟೇರ್) ಪ್ರದೇಶಕ್ಕೆ ಸೌಲಭ್ಯ ಒದಗಿಸಲಾಗುತ್ತಿದ್ದು, ಈ ಮೋಟಾರುಗಳು ಸುಮಾರು ೩೫ ವರ್ಷಗಳಿಂದ ಚಾಲನೆಯಲ್ಲಿದ್ದು, ಅವುಗಳ ಕಾರ್ಯಕ್ಷಮತೆ ಕುಂಠಿತವಾಗಿದ್ದು, ಆದ್ದರಿಂದ ಸದರಿ ಏತ ನೀರಾವರಿ ಯೋಜನೆಯ ಪಂಪಿAಗ್ ಮಷೀನ್‌ಗಳನ್ನು ಬದಲಾಯಿಸಿ, ನವೀಕರಣಗೊಳಿಸಲು ಪ್ರಸ್ತಾಪಿಸಲಾಗಿತ್ತು.
*************************************

ಸಾಲಗುಂದ ಏತ ನೀರಾವರಿ ಆಧುನೀಕರಣ
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸಾಲಗುಂದ ಗ್ರಾಮದ ಹತ್ತಿರ ತುಂಗಭದ್ರಾ ನದಿಯಿಂದ ನೀರನ್ನೆತ್ತಿ ತುಂಗಭದ್ರಾ ಎಡದಂಡೆ ಕಾಲುವೆಯ ಡಿ-೩೨ ಮತ್ತು ಡಿ-೩೬ ವ್ಯಾಪ್ತಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ರೂ.೧೭೮.೦೦ ಕೋಟಿ ಅಂದಾಜು ಮೊತ್ತದ (೨೦೨೩-೨೪ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ಸಾಲಗುಂದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ; ಮತ್ತು ಸದರಿ ಯೋಜನೆಯನ್ನು ಎರಡು ಹಂತದಲ್ಲಿ ಅಂದರೆ ಮೊದಲನೇ ಹಂತದಲ್ಲಿ ರೂ.೭೧.೦೦ ಕೋಟಿ ಹಾಗೂ ಎರಡನೇ ಹಂತದಲ್ಲಿ ರೂ.೧೦೭.೦೦ ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಡಿ-೩೨ ಮತ್ತು ಡಿ-೩೬ರ ವ್ಯಾಪ್ತಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಸಾಲಗುಂದ ಏತ ನೀರಾವರಿಯ ಬಾಧಿತ ರೈತರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳ ಕೋರಿಕೆಯ ಮೇರೆಗೆ ಬಾಧಿತ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಮಸ್ಯೆಯನ್ನು ಸರಿದೂಗಿಸುವ ಸಲುವಾಗಿ ಸಾಲಗುಂಧ ಏತ ನೀರಾವರಿಯನ್ನು ಪ್ರಸ್ತಾಪಿಸಲಾಗಿದೆ.
***************************************
ಸಿಂಧನೂರು ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಮುಳ್ಳೂರು ಗ್ರಾಮದ ಬಳಿ ಸಿಂಧನೂರು ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸಿ, ತುಂಗಭದ್ರಾ ಎಡದಂಡೆ ಕಾಲುವೆಯ ಉಪ ವಿತರಣಾ ಕಾಲುವೆ ೫೪/೩ಆರ್ ರಡಿಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಯೋಜನೆಯನ್ನು ರೂ.೨೯.೦೦ ಕೋಟಿಗಳ ಅಂದಾಜು ಮೊತ್ತದ (೨೦೨೩-೨೪ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಉಪ ವಿತರಣಾ ಕಾಲುವೆ ೫೪/೩ಆರ್ ಕೊನೆ ಅಂಚಿನ ಪಗಡದಿನ್ನಿ, ಮುಳ್ಳೂರು ಮತ್ತು ಕಲ್ಲೂರು ಗ್ರಾಮಗಳ ಸುಮಾರು ೨,೦೯೮.೨೦ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಹಲವು ವರ್ಷಗಳಿಂದ ನೀರು ತಲುಪುತ್ತಿಲ್ಲವಾದ್ದರಿಂದ ಸಿಂಧನೂರು ತಾಲ್ಲೂಕಿನ ಮುಳ್ಳೂರು-ಮಲ್ಲಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಮುಳ್ಳೂರು ಗ್ರಾಮದ ಹತ್ತಿರ ಸಿಂಧನೂರು ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್‌ನ್ನು ನಿರ್ಮಿಸಿ, ಮಳೆಗಾಲದ ಅವಧಿಯಲ್ಲಿ ೦.೧೦೩ ಟಿಎಮ್‌ಸಿ ಪ್ರಮಾಣದ ನೀರನ್ನೆತ್ತಿ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಈ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
***********************************

ಎತ್ತಿನಹೊಳೆ ಯೋಜನೆ ಕುಡಿಯುವ ನೀರಿನ ಘಟಕಕ್ಕೆ ಅನುಮೋದನೆ
ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನಲ್ಲಿ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರಿಗಾಗಿ ಹಂಚಿಕೆಯಾಗಿರುವ ೦.೫೧೨ ಟಿಎಂಸಿ ನೀರನ್ನು ಸಂಗ್ರಹಣಾ ಸ್ಥಳಕ್ಕೆ ಪೂರೈಸಲು ಅರಸೀಕೆರೆ ತಾಲ್ಲೂಕಿನ ೧೦ ಕೆರೆಗಳಿಗೆ ನೀರು ತುಂಬಿಸುವ ರೂ.೧೪೮.೮೦ ಕೋಟಿಗಳ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಈ ಪ್ರಸ್ತಾವನೆಯು ಈ ಹಿಂದೆ ಸಲ್ಲಿಸಲಾದ ರೂ.೩೭೨.೮೦ ಕೋಟಿ ಮೊತ್ತದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಎತ್ತಿನಹೊಳೆ ಗುರುತ್ವಾಕರ್ಷಣೆಯ ಕಾಲುವೆಯಿಂದ ೫೫.೮೦೦ ಕಿ.ಮೀ ನಿಂದ ೧೦೨.೮೭೦ ಕಿ.ಮೀ ರವರೆಗೆ ಸಣ್ಣ ನೀರಾವರಿ ಇಲಾಖೆಯ ೩೨ ಕೆರೆಗಳನ್ನು ತುಂಬಿಸುವ ಪರಿಷ್ಕೃತ ಪ್ರಸ್ತಾವನೆಯನ್ನು ಕುಡಿಯುವ ನೀರಿಗೆ ಆದ್ಯತೆ ನೀಡಿ, ಅಂದಾಜು ಮೊತ್ತವನ್ನು ರೂ.೧೪೮.೮೦ ಕೋಟಿಗಳಿಗೆ ಪರಿಷ್ಕರಿಸಿ ಪ್ರಸ್ತಾಪಿಸಲಾಗಿದೆ.
***********************************

ಅಂಬ್ಯುಲೆನ್ಸ್ ನಿರ್ವಹಣೆಗೆ ತಿದ್ದುಪಡಿ ವಿಧೇಯಕ
“ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, ೨೦೨೫”ಕ್ಕೆ ಅನುಮೋದನೆ ನೀಡಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಖಾಸಗಿ ಅಂಬ್ಯುಲೆನ್ಸ್ ಸೇವಾ ನಿರ್ವಾಹಕರನ್ನು ನಿಯಂತ್ರಿಸಲು ಮತ್ತು ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯೆAದು ನೊಂದಾಯಿಸಲು ಅವಶ್ಯಕವಾಗಿರುವುದರಿಂದ ಮತ್ತು ಮೂವತ್ತು ದಿನಗಳೊಳಗಾಗಿ ಖಾಯಂ ನೋಂದಣಿ ನೀಡಲು ತಿದ್ದುಪಡಿಯನ್ನು ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ.
********************************************
ಔಷಧ ಖರೀದಿಗೆ ಅನುಮೋದನೆ
“೨೦೨೫-೨೬ನೇ ಸಾಲಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಬೇಡಿಕೆಗಳಿಗನುಸಾರವಾಗಿ ೮೯೦ ಔಷಧಗಳು, ಉಪಭೋಗ್ಯ ವಸ್ತುಗಳು ಹಾಗೂ ರಾಸಾಯನಿಕಗಳನ್ನು ರೂ.೮೮೦.೬೮ ಕೋಟಿಗಳ ಅಂದಾಜು ವೆಚ್ಚದಲ್ಲಿ ಕೆಟಿಪಿಪಿ ಕಾಯ್ದೆ ೧೯೯೯ ಹಾಗೂ ಕೆಟಿಪಿಪಿ ನಿಯಮ ೨೦೦೦ ಗಳನ್ನು ಅನುಸರಿಸಿ ಟೆಂಡರ್ ಮೂಲಕ ಸಂಗ್ರಹಿಸಿ ಸರಬರಾಜು ಮಾಡಲು ಹಾಗೂ ಅಗತ್ಯ ವಿರುವ ಅನುದಾನವನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಲೆಕ್ಕ ಶೀರ್ಷಿಕೆ ೨೨೧೦-೦೧-೧೦೪-೦-೦೧-೨೨೨ ರಲ್ಲಿ ಒದಗಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಔಷಧಗಳ ದರ ಪರಿಗಣನೆಗಾಗಿ ಪ್ರಸಕ್ತ ಔಷಧಿಗಳಿಗೆ ಅನ್ವಯಿಸುವ ಹಿಂದಿನ ದರ / ಅಂದಾಜು ದರವನ್ನು ಆಧಾರವಾಗಿಟ್ಟುಕೊಂಡು ದರ ನಿರ್ಧರಿಸಲಾಗಿದೆ. ಹೊಸ ಔಷಧಿಗಳಿಗೆ ಅನ್ವಯಿಸುವ ಇತರೆ ರಾಜ್ಯಗಳ ವೈದ್ಯಕೀಯ ಸರಬರಾಜು ನಿಗಮಗಳಲ್ಲಿ ಖರೀದಿಸಿದ ಕನಿಷ್ಠ ದರಗಳು ಅಥವಾ ಮಾರುಕಟ್ಟೆಯ ಶೇ.೪೦ರ ದರದಂತೆ ಪರಿಗಣಿಸಿ, ೮೮೩ ಔಷಧಗಳನ್ನು ರೂ.೮೩೮.೧೩ ಕೋಟಿಗಳ ಅಂದಾಜಲ್ಲಿ ಖರೀದಿಸಲು ಪ್ರಸ್ತಾಪಿಸಲಾಗಿದೆ.
*****************************************

ಜೀವಾವಧಿ ಶಿಕ್ಷಾ ಬಂದಿಗಳ ಬಿಡುಗಡೆ
“ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ನಮೂದಿಸಿರುವ ೪೬ ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು ಹಾಗೂ ಅನುಬಂಧ-೨ ರಲ್ಲಿ ನಮೂದಿಸಿರುವ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ೦೩ ಶಿಕ್ಷಾ ಬಂದಿಗಳನ್ನು ಕೇಂದ್ರ ಗೃಹ ಮಂತ್ರಾಲಯದ ಸಹಮತಿ ದೊರಕಿದ ನಂತರ ಭಾರತ ಸಂವಿಧಾನದ ಅನುಚ್ಛೇದ-೧೬೧ರ ಪ್ರಕಾರ ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಕಾರಾಗೃಹ ವಾಸದಲ್ಲಿ ಸನ್ನಡತೆ ಹೊಂದಿದ ಜೀವಾವಧಿ ಶಿಕ್ಷಾ ಬಂದಿಗಳಿಗೆ ಮಾಫಿ ಹಾಗೂ ಕ್ಷಮಾದಾನ ನೀಡಿ, ಅವಧಿಪೂರ್ವ ಬಿಡುಗಡೆ ಮಾಡುವ ಪ್ರಸ್ತಾಪವನ್ನು ಮಂಡಿಸಲಾಗಿತ್ತು.
*****************************************

“ಕರ್ನಾಟಕ ಅಗ್ನಿಶಾಮಕ (ತಿದ್ದುಪಡಿ) ವಿಧೇಯಕ, ೨೦೨೫”ಕ್ಕೆ ಅನುಮೋದನೆ ನೀಡಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮೊದಲು ೧೯೬೪ರ ಕಲಂ ೧೫ಕ್ಕೆ ತಿದ್ದುಪಡಿ ತಂದು ನಂತರ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.೧ರ ದರದಲ್ಲಿ ಈiಡಿe ಅess ಅನ್ನು ವಿಧಿಸಲು ಕ್ರಮವಹಿಸಲು ಪ್ರಸ್ತಾಪಿಸಲಾಗಿದೆ.
*****************************************
ಗಿಗ್ ಕಾರ್ಮಿಕರ ಸುಗ್ರೀವಾಜ್ಞೆ ವಿಧೇಯಕವಾಗಿ ಪರಿವರ್ತಿಸಲು ನಿರ್ಣಯ
ಕರ್ನಾಟಕ ಪ್ಲಾಟ್‌ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ) ವಿಧೇಯಕ-೨೦೨೫ ೩೦.೦೫.೨೦೨೫) ಹಾಗೂ ಸದರಿ ವಿಧೇಯಕವನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು; ಸಚಿವ ಸಂಪುಟವು ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಪೂರ್ಣಕಾಲಿಕ / ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರ ಸಂಖ್ಯೆ ಕರ್ನಾಟಕದಲ್ಲಿ ಸುಮಾರು ೨.೩೦ ಲಕ್ಷದಷ್ಟು ಇದೆ ಎಂದು ಅಂದಾಜು ಮಾಡಲಾಗಿದೆ.
ದೇಶದ ದುಡಿಯುವ ವರ್ಗದಲ್ಲಿ ಶೇ.೮೩ ಕ್ಕಿಂತ ಹೆಚ್ಚು ಕಾರ್ಮಿಕರು ಅಸಂಘಟಿತ ವಲಯಗಳಲ್ಲಿ ಇರುವುದಾಗಿ ಅಂದಾಜು ಮಾಡಿದ್ದು, ಅವರಿಗೆಲ್ಲ ಶಾಸನಬದ್ಧ ಸೌಲಭ್ಯಗಳಿಂದ ವಂಚಿತರಾಗದAತೆ ಕ್ರಮವಹಿಸಿ, ಅವರ ಜೀವನಮಟ್ಟವನ್ನು ಉತ್ತಮಪಡಿಸಿ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಇ-ಕಾಮರ್ಸ್ ವಲಯಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರಿಗೆ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಪಘಾತ ಪರಿಹಾರ ಮತ್ತು ಜೀವವಿಮೆ ಸೇರಿ ಒಟ್ಟು ರೂ.೪.೦೦ ಲಕ್ಷಗಳು ಜೀವವಿಮೆ ರೂ.೨.೦೦ ಲಕ್ಷಗಳು ಒದಗಿಸಲು ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ ಎಂಬ ಹೊಸ ಯೋಜನೆ ರೂಪಿಸಿದೆ.
*************************************
ರಂಗಶAಕರ ಸಂಸ್ಥೆ ಗುತ್ತಿಗೆ ವಿಸ್ತರಣೆ
ಮೆ|| ಸಂಕೇತ್ ಟ್ರಸ್ಟ್ ರವರ ಪರವಾಗಿ “ಇsಣಚಿbಟishiಟಿg ಖಿheಚಿಣಡಿe ಜಿoಡಿ ಠಿeಡಿಜಿoಡಿmiಟಿg ಂಡಿಣs” ಉದ್ದೇಶಕ್ಕಾಗಿ ಹಂಚಿಕೆ ಮಾಡಿರುವ ಜೆ.ಪಿ ನಗರ ೨ನೇ ಹಂತದ ಬಡಾವಣೆಯಲ್ಲಿನ ೧೩೫೪.೫೦ ಚ.ಮೀ ವಿಸ್ತೀರ್ಣದ ನಾಗರೀಕ ಸೌಲಭ್ಯ ನಿವೇಶನ ಸಂಖ್ಯೆ: ೩೬/೨ಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ವಿಧಿಸಿರುವ ಒಟ್ಟಾರೆ ಗುತ್ತಿಗೆ ಮೌಲ್ಯ / ವರ್ಷಾಸನದ ಶೇ.೨೫ ರಷ್ಟು ಮೊತ್ತವನ್ನು ಮತ್ತು ಅದಕ್ಕೆ ಅನ್ವಯಿಸುವ ಜಿ.ಎಸ್.ಟಿ ಅನ್ನು ಗುತ್ತಿಗೆ ಮೌಲ್ಯವಾಗಿ ಪಾವತಿಸಿಕೊಂಡು ಗುತ್ತಿಗೆ ನವೀಕರಿಸಲು ಅನುಮತಿ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ದಿ.ಶ್ರೀ ಶಂಕರನಾಗ ರವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ “ರಂಗಶAಕರ” ಸಂಸ್ಥೆಯು ಲಾಭರಹಿತ ಸಂಸ್ಥೆಯಾಗಿರುವುದರಿAದ ಗುತ್ತಿಗೆ ನವೀಕರಣ ಮೊತ್ತವನ್ನು ಪಾವತಿಸಲು ಕಷ್ಟಕರವಾಗಿರುತ್ತದೆ. ಆದ್ದರಿಂದ ಗುತ್ತಿಗೆ ನವೀಕರಣ ಮೊತ್ತದಲ್ಲಿ ಶೇ.೧೦ ರಷ್ಟನ್ನು ಮಾತ್ರ ಪಾವತಿಸಿಕೊಳ್ಳಲು ಸಂಸ್ಥೆಯು ಕೋರಿರುವ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ನಾಗರಿಕ ಸೌಲಭ್ಯದ ನಿವೇಶನದ ನವೀಕರಣದ ಮೌಲ್ಯಕ್ಕೆ ರಿಯಾಯಿತಿ ನೀಡಲು ಪ್ರಸ್ತಾಪಿಸಲಾಗಿತ್ತು.
****************************************
ಅಲ್ಲೀಪುರ ಗ್ರಾಮ ಪಂಚಾಯಿತಿ ಇನ್ನು ಪಟ್ಟಣ ಪಂಚಾಯಿತಿ
“ಕರ್ನಾಟಕ ಪೌರಸಭೆಗಳ ಕಾಯ್ದೆ ೧೯೬೪ರ ಕಲಂ-೩, ೪, ೯, ೩೪೯, ೩೫೦, ೩೫೧ ಮತ್ತು ೩೫೫ ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಲ್ಲೀಪುರ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ‘ಅಲ್ಲೀಪುರ ಪಟ್ಟಣ ಪಂಚಾಯಿತಿ’ ಪ್ರದೇಶವೆಂದು ಉದ್ಘೋಷಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಅಲ್ಲೀಪುರ ಗ್ರಾಮ ಪಂಚಾಯಿತಿಯು ೨೦೧೧ರ ಜನಗಣತಿಯನ್ವಯ ೧೦,೯೧೫ ಜನಸಂಖ್ಯೆ ಹೊಂದಿದ್ದು, ೧.೮೯ ಚ.ಕಿ.ಮೀ ವಿಸ್ತೀರ್ಣ ಹಾಗೂ ಪ್ರತಿ ಚ.ಕಿ.ಮೀ ಗೆ ೫೭೭೫ ಜನಸಾಂದ್ರತೆ ಹೊಂದಿದೆ. ಕೃಷಿಯೇತರ ಚಟುವಟಿಕೆಗಳು ಶೇ.೬೨ ರಷ್ಟೀವೆ. ೨೦೨೫ರ ಸಾಲಿಗೆ ೧೮೧೩೫ ರಷ್ಟು ಅಂದಾಜು ಜನಸಂಖ್ಯೆ ಇರಬಹುದೆಂದು ಪರಿಗಣಿಸಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಲಾಗಿರುತ್ತದೆ.
*********************************************
ಸೂಳೆಕೆರೆ ಆಧುನೀಕರಣ
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೂಳೆಕೆರೆಯ ಜೀರ್ಣೋದ್ಧಾರ ಕಾಮಗಾರಿಯನ್ನು ರೂ.೩೪.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಸೂಳೆಕೆರೆಯಲ್ಲಿ ಶೇಖರಣೆಯಾಗಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಿ, ವಾಡಿಕೆ ಬೆಳೆಗಳಾದ ಭತ್ತ, ಕಬ್ಬು, ರಾಗಿ ತೋಟಗಾರಿಕಾ ಇತರ ಬೆಳೆಗಳನ್ನು ಬೆಳೆಯಲು ಸಮರ್ಪಕ ನೀರು ಒದಗಿಸಲು ಹಾಗೂ ಜನ-ಜಾನುವಾರುಗಳಿಗೆ, ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು, ಅಂತರ್ಜಲ ಮಟ್ಟವನ್ನು ಹೆಚ್ಚಿಸಲು, ಹಳ್ಳದ ಎರಡು ಪಾರ್ಶ್ವಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ.
*********************************************
ಮದಗ-ಮಾಸೂರು ಕೆರೆ ಆಧುನೀಕರಣ
ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲ್ಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ರೂ.೫೨.೨೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳನ್ನು ೧೮೬೨ ರಲ್ಲಿ ನಿರ್ಮಾಣಗೊಂಡಿದ್ದು, ಪ್ರಸ್ತುತ ಈ ಕಾಲುವೆಗಳು ಭಾಗಶ: ಲೈನಿಂಗ್ ಹೊಂದಿದ್ದು, ಮುಖ್ಯ ನಾಲೆಗಳ ಆಧುನಿಕರಣ ಕಾಮಗಾರಿಗಳೊಂದಿಗೆ ಸಾರ್ವಜನಿಕರ ಬೇಡಿಕೆಯಂತೆ ಕೆಲವು ಹೆಚ್ಚುವರಿ ಸಿ.ಡಿ ಕಾಮಗಾರಿಗಳನ್ನು ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.
************************************************
ನಂಜಾಪುರ ಏತ ನೀರಾವರಿ ಆಧುನೀಕರಣ
ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕಿನ ನಂಜಾಪುರ ಏತ ನೀರಾವರಿ ಯೋಜನೆಯ ಆಧುನೀಕರಣ ಕಾಮಗಾರಿಗಳ ರೂ.೨೦.೦೦ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ನಂಜಾಪುರ ಏತ ನೀರಾವರಿ ಯೋಜನೆಯನ್ನು ನಿರ್ಮಿಸಿ, ಸುಮಾರು ೧೫ ವರ್ಷಕ್ಕೂ ಅಧಿಕ ಕಾಲ ಚಾಲನೆಯಲ್ಲಿದ್ದು, ಪಂಪುಗಳ ಕ್ಷಮತೆ ಕಡಿಮೆಯಾಗಿ ಆಗಾಗ್ಗೆ ರಿಪೇರಿಗೆ ಒಳಪಡುತ್ತಿರುವುದರಿಂದ ಅಚ್ಚುಕಟ್ಟೆಗೆ ಸಮರ್ಪಕವಾಗಿ ನೀರು ತಲುಪದೆ ಬಹಳಷ್ಟು ಅಚ್ಚುಕಟ್ಟು ಪ್ರದೇಶವು ಬಾದಿತಗೊಂಡಿರುತ್ತದೆ. ಈ ಯೋಜನೆಯನ್ನು ಸುಸ್ಥಿತಿಯಲ್ಲಿಡಲು ಹಾಗೂ ಬಾದಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ಕೆಲವು ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿತ್ತು.
***********************************************
ಸೂಳೆಕೆರೆ ಉತ್ತರ ನಾಲೆಗಳ ಅಭಿವೃದ್ಧಿ
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೂಳೆಕೆರೆಯ ಉತ್ತರ ನಾಲೆಗಳ ಅಭಿವೃದ್ಧಿ ಕಾಮಗಾರಿಯನ್ನು ರೂ.೪೭.೭೫ ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲು; ಸಚಿವ ಸಂಪುಟ ನಿರ್ಣಯಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಸೂಳೆಕೆರೆಯ ಉತ್ತರ ನಾಲೆಗಳ ಅಡ್ಡಮೋರಿ ಕಾಮಗಾರಿಗಳನ್ನು ಸೈಜುಕಲ್ಲು ಕಟ್ಟಡದಿಂದ ಹಾಗೂ ಪೈಪ್‌ಗಳಿಂದ ನಿರ್ಮಿಸಲಾಗಿದ್ದು, ಪೂರ್ಣವಾಗಿ ಶಿಥಿಲಗೊಂಡಿವೆ. ಕಲ್ಲುಗಳ ಸಂದಿಯಲ್ಲಿದ್ದ ಸಿಮೆಂಟ್ ಗಾರೆ ಪೂರ್ಣ ಉದುರಿ ಹೋಗಿದ್ದು, ಏರುಗಳು ದುರ್ಬಲಗೊಂಡಿವೆ. ಈ ಸಮಸ್ಯೆಯನ್ನು ಪರಿಹರಿಸಿ, ಕೊನೆಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕವಾಗಿ ನಿಗದಿತ ಅವಧಿಯೊಳಗೆ ನೀರು ಹರಿಸಲು ಆಧುನೀಕರಣ ಕಾಮಗಾರಿಯನ್ನು ಪ್ರಸ್ತಾಪಿಸಲಾಗಿದೆ.
*******************************************

ಬಾಲ್ಯವಿವಾಹ ಅಷ್ಟೇ ಅಲ್ಲ ನಿಶ್ಚಿತಾರ್ಥವು ಶಿಕ್ಷಾರ್ಹ
“ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, ೨೦೨೫”ಕ್ಕೆ ಅನುಮೋದನೆ; ಮತ್ತು ಸದರಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
೨೦೨೩-೨೪ರ ಅವಧಿಯಲ್ಲಿ ಸುಮಾರು ೭೦೦ ಬಾಲ್ಯವಿವಾಹಗಳು ರಾಜ್ಯಾದ್ಯಂತ ವರದಿಯಾಗಿವೆ. ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮಗಳು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಈ ಪ್ರಸ್ತಾವನೆ ಮಂಡಿಸಲಾಗಿತ್ತು.

Prev Post ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಿಂಪಡೆದು, ಮಹದಾಯಿ ಯೋಜನೆ ಕಾಮಗಾರಿ ಶೀಘ್ರ ಪ್ರಾರಂಭ ಮಾಡುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್ ಗುಡುಗು
Next Post ಸ್ಮಾರ್ಟ್ ಮೀಟರ್ ಹಗರಣದ ;ಇಂಧನ ಸಚಿವ ಕೆ.ಜೆ.ಜಾರ್ಜ್ ಅವರನ್ನು ವಜಾಗೊಳಿಸಿ ;ಡಾ.ಅಶ್ವತ್ಥನಾರಾಯಣ್