ಇಂಡಿಯಾನಾ ಆಸ್ಪತ್ರೆಯಲ್ಲಿ ಯಶಸ್ವಿ ‘ವಾಲ್ವ್-ಇನ್ ವಾಲ್ವ್ ಟಿಎವಿಆರ್ ಚಿಕಿತ್ಸೆ

Mangalore:

Font size:

ಇಂಡಿಯಾನಾ ಆಸ್ಪತ್ರೆಯಲ್ಲಿ ಯಶಸ್ವಿ ‘ವಾಲ್ವ್-ಇನ್ ವಾಲ್ವ್ ಟಿಎವಿಆರ್ ಚಿಕಿತ್ಸೆ

ಇಂಡಿಯಾನಾ ಆಸ್ಪತ್ರೆಯಲ್ಲಿ ಯಶಸ್ವಿ
‘ವಾಲ್ವ್-ಇನ್ ವಾಲ್ವ್ ಟಿಎವಿಆರ್ ಚಿಕಿತ್ಸೆ

From Jayaram Udupi

ಮಂಗಳೂರು: ನಗರದ ಇಂಡಿಯಾನಾ ಆಸ್ಪತ್ರೆಯಲ್ಲಿ ಮಂಗಳೂರು ನಗರದ ಮೊಟ್ಟಮೊದಲ ಯಶಸ್ವಿ ವಿಶಿಷ್ಟ ಹೃದಯ ಕವಾಟ ‘ವಾಲ್ವ್-ಇನ್ ವಾಲ್ವ್ ಟಿಎವಿಆರ್ ಚಿಕಿತ್ಸೆ ನಡೆಸಲಾಗಿದೆ ಎಂದು ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್‌ನ ಚೀಫ್ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಮತ್ತು ಎಂಡಿ ಡಾ. ಯೂಸೂಫ್ ಕುಂಬ್ಳೆ ತಿಳಿಸಿದರು.
ತೀವ್ರವಾದ ಆಯೊರ್ಟಿಕ್ ವಾಲ್ವ್ ರೋಗ ಹೊಂದಿರುವ ರೋಗಿಗಳಿಗೆ ಸಾಮಾನ್ಯವಾಗಿ ಶಸಚಿಕಿತ್ಸೆ ಮೂಲಕ ವಾಲ್ವ್ ಬದಲಾವಣೆ ಮಾಡಲಾಗುತ್ತದೆ. ಆದರೆ, ೧೦-೧೫ ವರ್ಷಗಳಲ್ಲಿ ಆ ವಾಲ್ವ್‌ಗಳು ಕುಗ್ಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ವಾಲ್ವ್ ಬದಲಿಸಲು ಮತ್ತೆ ತೆರೆದ ಹೃದಯ ಶಸಚಿಕಿತ್ಸೆ ಅಗತ್ಯವಿದ್ದು, ಇದು ವಯಸ್ಕ ರೋಗಿಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ ನೂತನ ತಂತ್ರಜ್ಞಾನ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಬಹುಮಟ್ಟಿಗೆ ಸುರಕ್ಷಿತವಾದ ಆಯ್ಕೆ. ಇದರಲ್ಲಿ ಹಳೆಯ ವಾಲ್ವ್ ಒಳಗೆ Zಠಿeಛಿಠಿಛ್ಟಿ ಮೂಲಕ ಹೊಸ ವಾಲ್ವ್‌ನ್ನು ಸ್ಥಾಪಿಸಲಾಗುತ್ತದೆ. ಈ ವಿಧಾನ ಸಾಮಾನ್ಯ ಟಿಎವಿಆರ್‌ಗಿಂತ ಹೆಚ್ಚು ಜಟಿಲ ಹಾಗೂ ಹೆಚ್ಚಿನ ತಾಂತ್ರಿಕ ನಿಪುಣತೆ ಅಗತ್ಯವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಗಂಭೀರ ಸ್ಥಿತಿಯ ರೋಗಿಗೆ ಚಿಕಿತ್ಸೆ:
೧೧೦ ಕೆಜಿ ತೂಕದ ಮಧುಮೇಹ, ರಕ್ತದೊತ್ತಡ, ಹೃದಯಾಘಾತ ಮುಂತಾದ ಹಲವಾರು ಸಮಸ್ಯೆಗಳುಳ್ಳ ೭೨ ವರ್ಷದ ರೋಗಿಯೊಬ್ಬರು ೨೦ ವರ್ಷದ ಹಿಂದೆ ಕೊಚ್ಚಿಯಲ್ಲಿ ಎಸ್‌ಎವಿಆರ್ ಚಿಕಿತ್ಸೆಗೆ ಒಳಗಾಗಿದ್ದರು. ಪ್ರಸ್ತುತ ಹೃದಯ ವಿಫಲತೆಯ ಲಕ್ಷಣದೊಂದಿಗೆ ಇಂಡಿಯಾನಾ ಆಸ್ಪತ್ರೆಗೆ ಆಗಮಿಸಿದ್ದರು. ಅವರಿಗೆ ಮತ್ತೆ ಶಸಚಿಕಿತ್ಸೆ ಮಾಡಬೇಕೆಂದು ಸೂಚಿಸಲಾಗಿತ್ತು. ಆದರೆ, ಅವರ ಹೆಚ್ಚಿನ ಅಪಾಯದ ಕಾರಣದಿಂದ ಹಲವು ಆಸ್ಪತ್ರೆಗಳು ನಿರಾಕರಿಸಿದ್ದವು. ವಿವಿಧ ಕಡೆ ನಿರಾಕರಣೆ ಅನುಭವಿಸಿದ ಅವರು ಅಂತಿಮವಾಗಿ ಡಾ. ಯೂಸುಫ್ ಕುಂಬ್ಳೆ ಅವರನ್ನು ಸಂಪರ್ಕಿಸಿದರು.
ಸಂಪೂರ್ಣ ತಪಾಸಣೆಯ ನಂತರ ಅವರಿಗೆ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಸೂಕ್ತ ಮತ್ತು ಸುರಕ್ಷಿತ ಎಂದು ನಿರ್ಧರಿಸಲಾಯಿತು. ರೋಗಿಗೆ ವಾಲ್ವ್ ಸಮಸ್ಯೆ ಜತೆಗೆ ಪ್ರಮುಖ ರಕ್ತನಾಳಗಳ ಅಡಚಣೆಯೂ ತಪಾಸಣೆಯಲ್ಲಿ ಪತ್ತೆಯಾಗಿತ್ತು. ತಜ್ಞರ ತಂಡ ಈ ಎರಡೂ ಸಮಸ್ಯೆಗಳಿಗೆ ಒಂದೇ ಸಂದರ್ಭದಲ್ಲಿ ಪರಿಹಾರ ನೀಡಲು ನಿರ್ಧರಿಸಿತು. ಮೊದಲು ಆಂಜಿಯೋಪ್ಲಾಸ್ಟಿ ನಡೆಸಿ ಪ್ರಮುಖ ರಕ್ತನಾಳಗಳ ಅಡಚಣೆಗೆ ಚಿಕಿತ್ಸೆ ನೀಡಲಾಯಿತು. ಬಳಿಕ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲಾಯಿತು ಎಂದು ವಿವರಿಸಿದರು.
ಅದೇ ದಿನ ೮೦ ವರ್ಷದ ಮಹಿಳೆಗೂ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಪ್ರಕ್ರಿಯೆ ನಡೆಸಲಾಯಿತು. ೨೦ ವರ್ಷದ ಹಿಂದೆ ವಾಲ್ವ್ ಬದಲಾವಣೆ ಶಸಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆ ಮತ್ತೆ ಹೃದಯ ವಿಫಲತೆಯಿಂದ ಬಳಲುತ್ತಿದ್ದರು. ಅವರು ಇನ್ನೊಂದು ಶಸಚಿಕಿತ್ಸೆಗೆ ಸಿದ್ದರಿದ್ದರೂ, ಹೆಚ್ಚಿನ ಅಪಾಯದ ಕಾರಣದಿಂದ ಯಾವುದೇ ವೈದ್ಯರು ಶಸಚಿಕಿತ್ಸೆ ನಡೆಸಲು ಒಪ್ಪಿರಲಿಲ್ಲ. ಮೊದಲ ರೋಗಿಗೆ ಯಶಸ್ವಿ ಚಿಕಿತ್ಸೆ ನಡೆದಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಗೆ ಮಹಿಳೆ ಒಪ್ಪಿಗೆ ಸೂಚಿಸಿದರು. ಒಂದು ಗಂಟೆಯೊಳಗೆ ಅವರಿಗೂ ವಾಲ್ವ್-ಇನ್ ವಾಲ್ವ್ ಟಿಎವಿಆರ್ ಮಾಡಲಾಯಿತು. ಆ ಮೂಲಕ ಇಂಡಿಯಾನಾ ಆಸ್ಪತ್ರೆ ಈಗ ಟಿಎವಿಆರ್/ ಟಿಎವಿಐ ಮತ್ತು ಸ್ಟ್ರಕ್ಚುರಲ್ ಹಾರ್ಟ್ ಕೇರ್ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರವಾಗಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದರು.
ಇಂಡಿಯಾನಾ ಆಸ್ಪತ್ರೆ ಮಾರುಕಟ್ಟೆ ಸಲಹೆಗಾರ ಶಿವಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Prev Post ಹಿರಿಯ ಕಲಾವಿದೆ, ಬಿ.ಸರೋಜಾದೇವಿ ಅವರ ಹೆಸರಿನಲ್ಲಿ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡುವಂತೆ ಒತ್ತಾಯಿಸಿ ನಟಿ ತಾರಾ ಅನುರಾಧ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಅರ್ಪಿಸಿದರು.
Next Post ಬೆಂಗಳೂರಿನ ಕೆರೆಗಳ ಕರೆಗೆ ಮಿಡಿದ ಸ್ಥಾಯಿ ಸಮಿತಿ