ಸಿದ್ದರಾಮಯ್ಯನೇ ಇಲ್ಲಿಯವರೆಗೂ ಸಿಎಂ ಅಂತ ಅಂದುಕೊಂಡಿದ್ದೀವಿ ಕಾಂಗ್ರೆಸ್ ನಾಯಕರ ಕುರ್ಚಿ ಬಡಿದಾಟಕ್ಕೆ ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ

Bagalkote:

Font size:

ಐತಿಹಾಸಿಕ ಪ್ರಸಿದ್ಧ ಬಾದಾಮಿಯ ಬನಶಂಕರಿ ಅಮ್ಮನ ಆಶೀರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ ಪಕ್ಷಕ್ಕಾಗಿ ದುಡಿದವರಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಟಿಕೆಟ್

ಬಾಗಲಕೋಟೆ: ಏಳೂವರೆ ಕೋಟಿ ಕನ್ನಡಿಗರು ಸಿದ್ದರಾಮಯ್ಯ ಸಿಎಂ ಅಂತ ಅಂದುಕೊಂಡಿದ್ವಿ. ಆದ್ರೆ ಕೇಂದ್ರದ ಕಾಂಗ್ರೆಸ್ ನಾಯಕ ಸುರ್ಜೇವಾಲ ಸೂಪರ್ ಸಿಎಂ ಎಂಬುದ್ರಲ್ಲಿ ಯಾವುದೇ ಡೌಟ್ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.

ಬಾದಾಮಿ ವಿಧಾನಸಭಾ ಕ್ಷೇತ್ರದ ವೀರ ಪುಲಕೇಶಿ ಕಾಲೇಜು ಆವರಣದಲ್ಲಿ ನಡೆದ ಜನರೊಂದಿಗೆ ಜನತಾದಳ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಕಾಂಗ್ರೆಸ್ ನಾಯಕರ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆ ರಾಜ್ಯದ ಜನತೆ ಸೂಕ್ಷ್ಮವಾಗಿ ನೋಡ್ತಿದ್ದಾರೆ. ಸುರ್ಜೇವಾಲ ಕಾಂಗ್ರೆಸ್ ನ ಕೇಂದ್ರ‌ ನಾಯಕರಿಗೆ ಸಿಎಂ ಸ್ಥಾನದ ಅಗ್ರಿಮೆಂಟ್ ಮಾಡಿದ್ದಾರಾ? ಎಂಬ ಅನುಮಾನ ಜನರಲ್ಲಿ ಕಾಡ್ತಿದೆ ಎಂದು ಕಾಂಗ್ರೆಸ್ ಕಾಲೆಳೆದರು.

ಕಾಂಗ್ರೆಸ್ ಪಕ್ಷದ ಶಾಸಕರು ಅನುದಾನ ಪಡೆಯಬೇಕಾದ್ರೆ ಸಿಎಂ ಕಡೆ ಮುಖ ಮಾಡ್ತಿಲ್ಲ, ಬದಲಾಗಿ ಸುರ್ಜೇವಾಲ ಅವರನ್ನ ಭೇಟಿ ಮಾಡ್ತೀವಿ ಅಂತಿದ್ದಾರೆ. ಈ ಪರಿಸ್ಥಿತಿ ರಾಜ್ಯದ ಜನಕ್ಕೆ ಬಂದಿದೆ ಎಂದು ಹೇಳಿದರು.

ಸಾಂವಿಧಾನಿಕ ಹುದ್ದೆ ಅಲಂಕರಿಸಿ ಸಿಎಂ ಸಿದ್ದರಾಮಯ್ಯ ಅವರು ಕುಳಿತಿದ್ದಾರೆ. ಆದ್ರೆ ಯಾವ ರೀತಿ ಇವತ್ತು ಸರ್ಕಾರ ನಡೆಯುತ್ತಿದೆ ಎಂಬುದನ್ನು ಇದು ಸಣ್ಣ ಉದಾಹರಣೆ ಎಂದು ಹೇಳಿದರು.

ಸೋಲು ಜೀವನದಲ್ಲಿ ಮುಂದಿನ ಜೀವನಕ್ಕೆ ಪರಿಪಕ್ವತೆ ಕಲಿಸುತ್ತೆ

2018ರಲ್ಲಿ ಜನತಾದಳದಿಂದ ಬಾದಾಮಿ ಕ್ಷೇತ್ರದಲ್ಲಿ ಹನುಮಂತ ಮಾವಿನಮರದ ಸ್ಪರ್ಧೆ ಮಾಡಿದ್ರು,ಆ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಆಗ ಬಿಜೆಪಿಯಿಂದ ನಮ್ಮ ಮಿತ್ರಪಕ್ಷದಿಂದ ಶ್ರೀರಾಮುಲು, ಕಾಂಗ್ರೆಸ್ ನಿಂದ ಈಗಿನ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರು ಎಂದರು.

ಆಗ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡಿ ಕ್ಷೇತ್ರದ ವರದಿಯನ್ನು ತರಿಸಿಕೊಂಡಿದ್ದರು.ಅಲ್ಲಿನ ಜನ ಕೈ ಹಿಡಿಯೋದಿಲ್ಲ ಅಂತ ಗೊತ್ತಾಗಿ. ಬಾದಾಮಿಯನ್ನು ಆರಿಸಿಕೊಳ್ತಾರೆ. ಆಗ ಅವರು ಬಹಳ ಅಂತರದಿಂದ ಗೆದ್ದಿಲ್ಲ ಎಲ್ಲರಿಗೂ ಗೊತ್ತಿದೆ‌ ಎಂದು ಹೇಳಿದರು.

ಕುಮಾರಣ್ಣ ಮುಖ್ಯಮಂತ್ರಿಯಾಗಿದ್ದ ವೇಳೆ 2018ರಲ್ಲಿ ರಲ್ಲಿ ಸಮ್ಮಿಶ್ರ ಸರಕಾರ ವೇಳೆ ಕೆರೂರು ಏತ ನೀರಾವರಿಗೆ ಅನುಮೋದನೆ ಕೊಟ್ಟರು. ಮುಂದೆ ಸಮಿಶ್ರ ಸರಕಾರ ಪತನದ ನಂತರ ಕೇವಲ 80 ಕೋಟಿ ಹಣ ಕೊಟ್ಟರು. ಉಳಿದ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

2018 ರಲ್ಲಿ ನೀವು ಅವಕಾಶ ಕೊಡದಿದ್ರೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನವೇ ಮುಗಿದು ಹೋಗ್ತಿತ್ತು.
ಬಾದಾಮಿ ಜನತೆ ಹೃದಯ ವಿಶಾಲತೆ ಮೆರೆದಿರಿ.ಆದರೆ ಗೆದ್ದ ಸಿದ್ದರಾಮಯ್ಯ ಕೇವಲ ಚುನಾವಣೆಗೆ ನಿಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಬಾದಾಮಿ ಜನತೆ ಸಿಎಂಗೆ ರಾಜಕೀಯ ಪುನರ್ಜನ್ಮ ಕೊಟ್ಡಿದೆ‌

ಬಾದಾಮಿ ಜನತೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಡಿದೆ‌. ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಎರಡು ವರ್ಷ ಕಳೆದಿದೆ. ಬಾದಾಮಿ ತಾಲ್ಲೂಕನ್ನ ಬದಲಿಸಬಹುದದಿತ್ತು ಎಂದು ಹೇಳಿದರು.

ಸಿದ್ದರಾಮಯ್ಯ ಹಿಂದೆ ದೇವೆಗೌಡರ ಜೊತೆಗೆ ಇದ್ದರು. ಆಗಿನ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯ ಮಂತ್ರಿಯಾಗಿದ್ದರು. ಪಕ್ಷ ಬಿಟ್ಟು ಹೋಗಿ ನನ್ನನ್ನು ಹೊರ ಹಾಕಿದರು ಅಂತ ಎಂದು ಹೇಳಿದ್ರು, ಸಿದ್ದರಾಮಯ್ಯ ಅವರನ್ನು ಗುರುತಿಸಿ ಅವರ ಕೈಯಲ್ಲಿ ಬಜೆಟ್ ಮಂಡಿಸಿದ್ದು ಸನ್ಮಾನ್ಯ ಹೆಚ್ ಡಿ ದೇವೆಗೌಡರು ಅದನ್ನು ಸಿದ್ದರಾಮಯ್ಯ ಅವರು ಮರೆತಿದ್ದಾರೆ ಎಂದು ಹೇಳಿದರು.

ಪಕ್ಷ ತಾಯಿ ಸಮಾನ ಪಕ್ಷಕ್ಕೆ ಗೌರವ ಕೊಡಬೇಕು

ಸುಮ್ಮನೆ ನನ್ನ ಹೊರಹಾಕಿದರು ಅಂತ ದೇವೆಗೌಡರು ಹಾಗೂ ಜೆಡಿ ಎಸ್ ವಿರುದ್ಧ ಮಾತಾಡ್ತಾರೆ. ಪಕ್ಷ ತಾಯಿ ಸಮಾನ ಪಕ್ಷಕ್ಕೆ ಗೌರವ ಕೊಡಬೇಕು.ನಮ್ಮ ಪಕ್ಷದಿಂದ ಮೇಲೆ ಬಂದು ಬಿಟ್ಟು ಹೋದವರು ಬಹಳಷ್ಟಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು ಎಂದರು.

ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿದ್ದೀರಿ.ಯಾವುದೇ ತೀರ್ಮಾನ ಸ್ವತಂತ್ರವಾಗಿ ತೆಗೆದುಕೊಳ್ಳುವ ಅಧಿಕಾರ ಇದೆ. ಬಾದಾಮಿ ಜನತೆ ನಿಮಗೆ ಮರುಜನ್ಮ ಕೊಟ್ಟಿದ್ದಾರೆ.
ಅವರು ನಿಮಗೆ ಏನು ಅನ್ಯಾಯ ಮಾಡಿದ್ದಾರೆ, ಏನು ತಪ್ಪು ಮಾಡಿದ್ದಾರೆ
ಈಗಲಾದರೂ ಬಾದಾಮಿ ಜನರು ಕಣ್ತೆರೆದು ನೋಡಿ ಎಂದ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಇದಕ್ಕೂ ಮೊದಲು ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಬಾದಾಮಿಯ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ನಂತರ ಸುಕ್ಷೇತ್ರ ಶ್ರೀಮದ್ವೀರಶೈವ ಶಿವಯೋಗ ಮಂದಿರಕ್ಕೆ ಭೇಟಿ ನೀಡಿ ಶ್ರೀ ಗುರು ಕುಮಾರ ಶಿವಯೋಗಿಗಳ ಗದ್ದುಗೆಗೆ ನಮಸ್ಕರಿಸಿ ಪರಮಪೂಜ್ಯ ಸದಾಶಿವ ಸ್ವಾಮೀಜಿಯ ಆಶೀರ್ವಾದ ಪಡೆದು ಸನ್ಮಾನಿಸಿ ಗೌರವಿಸಿದರು.

ಹಾಗೆಯೇ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠಕ್ಕೆ ಭೇಟಿ ನೀಡಿ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮಿ ಹಾಗೂ ಶ್ರೀ ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ ಗಳ ಆಶೀರ್ವಾದ ಪಡೆದುಕೊಂಡರು.

ನಂತರ ಬಾದಾಮಿ ಪಟ್ಟಣದ ಕಬ್ಬಲಗೇರಿಯಿಂದ ಯುವನಾಯಕರಿಗೆ ಅದ್ದೂರಿ ಸ್ವಾಗತಕೋರಿದರು, ಸಹಸ್ತ್ರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿ ಮಾಡಿ ಬೃಹತ್ ಮೆರವಣಿಗೆ ಮೂಲಕ ಪ್ರಮುಖ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ರವರು, ಮಾಜಿ ಸಚಿವರಾದ ಹನಮಂತಪ್ಪ ಆಲ್ಕೋಡ್ ರವರು,ಅಪ್ಪುಗೌಡ ಪಾಟೀಲ್ ಮನಗೂಳಿ , ದೇವರಹಿಪ್ಪರಗಿ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ್, ಮಾಜಿ ಶಾಸಕಾರದ ವೀರಭದ್ರಪ್ಪ ಹಾಲಹರವಿ,ರಾಜ್ಯ ಮಹಿಳಾ ಅಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡ ರವರು, ಮುಖಂಡರಾದ ಹನಮಂತಣ್ಣ ಮಾವಿನಮರದ, ವಿಜಯಪುರ ಜಿಲ್ಲಾಧ್ಯಕ್ಷರಾದ ಬಸವನಗೌಡ್ ಮಾಡಗಿ, ಕಲಬುರಗಿ ಜಿಲ್ಲಾಧ್ಯಕ್ಷರಾದ ಬಾಲರಾಜ್ ಗುತ್ತೇದಾರ, ಧಾರವಾಡ ಜಿಲ್ಲಾಧ್ಯಕ್ಷರಾದ ಗುರುರಾಜ ಹುಣಸಿಮರದ, ಮುಖಂಡರಾದ ಸಿ.ವಿ. ಚಂದ್ರಶೇಖರ್ ಸೇರಿದಂತೆ ಪಕ್ಷದ ಸ್ಥಳೀಯ ಜನಪ್ರತಿನಿಧಿಗಳು, ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Prev Post ವಿಶ್ವ ಹಾವುಗಳ ದಿನ ಆಚರಣೆ
Next Post ಕಾಮಿಕರ ಕಲ್ಯಾಣಕ್ಕಾಗಿ SPREE ಯೋಜನೆ ಜಾರಿ