ವಿಶ್ವ ಹಾವುಗಳ ದಿನ ಆಚರಣೆ
ಬೆಂಗಳೂರು, ಜುಲೈ 17
ಬನ್ನೇರುಘಟ್ಟ ಜೈವಿಕ ಉದ್ಯಾನವನವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಅಂಚೆ ಇಲಾಖೆ, ಕಳಿಂಗ ಫೌಂಡೇಶನ್, ಪೆÇೀಸ್ಟ್ ಕ್ರಾಸಿಂಗ್ ವೆಲ್ಫೇರ್ ಸೊಸೈಟಿ ಆಫ್ ಇಂಡಿಯಾ, ಡಬ್ಲ್ಯೂ.ಆರ್.ಆರ್.ಸಿ ಮತ್ತು ರೌಂಡ್ ಗ್ಲಾಸ್ ಸಸ್ಟೈನ್ ಸಂಸ್ಥೆಗಳ ಸಹಯೋಗದೊಂದಿಗೆ ಜುಲೈ 16 ರಂದು ವಿಶ್ವ ಹಾವುಗಳ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಾವುಗಳ ಸಂರಕ್ಷಣೆ, ಜಾಗೃತಿ ಕುರಿತು ಕಳಿಂಗ ಫೌಂಡೇಶನ್ ನ ವತಿಯಿಂದ ಪ್ರಿಯಾಂಕ ಸ್ವಾಮಿ ಮತ್ತು ಡಬ್ಲ್ಯೂ.ಆರ್.ಆರ್.ಸಿ ಸಿಬ್ಬಂದಿಗಳು ಮಕ್ಕಳೊಂದಿಗೆ ಮಾಹಿತಿಯನ್ನು ಹಂಚಿಕೊಂಡರು. ಅತಿಥಿಗಳಾದ ಸಂದೇಶ್ ಮಹಾದೇವಪ್ಪ, ಐಪಿಒಎಸ್, ಎ.ವಿ. ಸೂರ್ಯ ಸೇನ್, ಭಾ.ಅ.ಸೇ ಮತ್ತು ಕುಮಾರಿ ಕಾಜೋಲ್ ಅಜಿತ್ ಪಾಟೀಲ್, ಭಾ.ಅ.ಸೇ ರವರು ಹಾವುಗಳ ವಿಶೇಷ ಚಿತ್ರವುಳ್ಳ ಪೆÇೀಸ್ಟ್‍ಕಾರ್ಡ್ ಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಬಿ.ಜಿ.ಎಸ್ ನ್ಯಾಷನಲ್ ಪಬ್ಲಿಕ್ ಶಾಲೆ, ಎಎಂಸಿ ಕಾಲೇಜು, ವಿವಿ ಪುರಂ ಕಾನೂನು ಕಾಲೇಜು, ರಾಯಲ್ ಪಬ್ಲಿಕ್ ಶಾಲೆ ಮತ್ತು ಆರ್ಕಿಡ್ ಇಂಟರ್ ನ್ಯಾಷನಲ್ ಶಾಲೆಗಳಿಂದ ಸುಮಾರು 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.