ಕುಂದಾಪುರ: ತಾಲೂಕಿನ ಗಂಗೊಳ್ಳಿಯಲ್ಲಿ ಮಂಗಳವಾರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭ ದೋಣಿ ಮಗುಚಿ ಮೂವರು ಸಮುದ್ರಪಾಲಾಗಿದ್ದು, ಓರ್ವ ವ್ಯಕ್ತಿ ಈಜಿ ದಡ ಸೇರಿರುವ ಘಟನೆ ನಡೆದಿದೆ.

Kundapura:

Font size:

ದುರಂತದಲ್ಲಿ ಗಂಗೊಳ್ಳಿ ನಿವಾಸಿಗಳಾದ ಸುರೇಶ್ ಖಾರ್ವಿ (48), ಲೋಹೀತ್ ಖಾರ್ವಿ (34), ಜಗದೀಶ್ ಖಾರ್ವಿ (50) ಎಂಬ ಮೂವರು ಮೀನುಗಾರರು ನಾಪತ್ತೆಯಾಗಿದ್ದಾರೆ.

ಮಂಗಳವಾರ ಬೆಳಿಗ್ಗೆ ಕಿರುದೋಣಿಯಲ್ಲಿ ನಾಲ್ವರು ಮೀನುಗಾರರು ಎಂದಿನಂತೆ ಮೀನುಗಾರಿಕೆಗಾಗಿ ತೆರಳಿದ್ದು, ಮೀನು ತುಂಬಿಸಿಕೊಂಡು ಗಂಗೊಳ್ಳಿ ಬಂದರಿಗೆ ಹಿಂದಿರುಗುತ್ತಿದ್ದ ವೇಳೆ ಬ್ರೇಕ್ ವಾಟರ್ ತುದಿಯಲ್ಲಿ ಈ ಅವಘಡ ನಡೆದಿದೆ. ಹಿಂದಿರುಗುವಾಗ ಗಾಳಿ ಹಾಗೂ ಅಬ್ಬರದ ತೆರೆಗಳ ರಭಸಕ್ಕೆ ದೋಣಿಯಲ್ಲಿದ್ದ ಓರ್ವ ಮೀನುಗಾರ ಕೆಳಕ್ಕೆ ಬಿದ್ದಿದ್ದರು. ಅವರನ್ನು ರಕ್ಷಣೆ ಮಾಡುವ ಸಲುವಾಗಿ ದೋಣಿಯನ್ನು ತಿರುಗಿಸಲಾಗಿದ್ದು, ಅದೇ ವೇಳೆ ಮತ್ತೆ ಅಬ್ಬರದ ಅಲೆಗಳು ಬಡಿದು ದೋಣಿ ಮಗುಚಿದೆ. ಸುರೇಶ್ ಖಾರ್ವಿ, ಲೋಹೀತ್, ಜಗದೀಶ್ ಎಂಬ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಸಂತೋಷ ಖಾರ್ವಿ (35) ಎಂಬುವವರು ಈಜಿಕೊಂಡು ದಡ ಸೇರಿದ್ದಾರೆ. ಶೋಧ ಕಾರ್ಯ:

ನಾಪತ್ತೆಯಾಗಿರುವ ಮೂವರು ಮೀನುಗಾರರ ರಕ್ಷಣೆಗೆ ಶೋಧಕಾರ್ಯ ನಡೆಸಲಾಗುತ್ತಿದೆ. ಕರಾವಳಿ ಕಾವಲು ಪಡೆ ಗಂಗೊಳ್ಳಿ ಠಾಣೆಯ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ.

ನಿರಂತರವಾಗಿ ಸುರಿಯುತ್ತಿರುವ ಗಾಳಿಮಳೆ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದೆ.

Prev Post ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಐತಿಹಾಸಿಕ ನಿರ್ಧಾರ ರೈತ ಹೋರಾಟಗಾರರು, ಭೂ ಹೋರಾಟಗಾರರ ಪರವಾಗಿ ಗಟ್ಟಿ ನಿಲುವು ತಳೆದು ಖಚಿತವಾಗಿ ನಿಂತ ಸರ್ಕಾರ
Next Post ಹಿಮಾಚಲ ಪ್ರದೇಶ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ದೇವೇಂದ್ರ ಸಿಂಗ್ ಶ್ಯಾಮ್ ರವರಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣನವರಿಂದ ಸನ್ಮಾನ