ಮಂಗಳೂರಿನ ಹೆಸರಾಂತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೋರೇಷನ್ ಗೆ ಬ್ರಾಂಡ್ ಅಂಬಾಸಿಡರ್ ;ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನೇಮಕ
From; Jayaram Udupi
ಮಂಗಳೂರಿನ ಹೆಸರಾಂತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೋರೇಷನ್ ಗೆ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ನೇಮಕಗೊಂಡಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ತಮ್ಮ ಸಂಸ್ಥೆಗೆ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯನಿರ್ವಹಿಸುವರು ಎಂದು ಘೋಷಿಸಿದ ರೋಹನ್ ಕಾರ್ಪೋರೇಷನ್ ಮುಖ್ಯಸ್ಥ ಡಾ. ರೋಹನ್ ಮೊಂತೆರೋ ಕರ್ನಾಟಕದಲ್ಲಿ ಶಾರುಖ್ ಖಾನ್ ಅವರು ಬ್ರಾಂಡ್ ಅಂಬಾಸಿಡರ್ ಆಗಿರುವುದು ಇದೇ ಪ್ರಥಮ ಎಂದರು.
ಇದರಿಂದಾಗಿ ನಮ್ಮ ಸಂಸ್ಥೆಯ ಮೂವತ್ತೆರಡು ವರ್ಷದ ಪಯಣಕ್ಕೆ ಇನ್ನಷ್ಟು ಉತ್ತೇಜನ ಮತ್ತು ರೋಮಾಂಚಕತೆ ಬಂದಿದೆ. ಗುಣಮಟ್ಟ, ಶ್ರೇಷ್ಠತ್ವದ ಜೊತೆ ಗ್ಲಾಮರ್ ಕೈಜೋಡಿಸಿದಂತಾಗಿದೆ ಎಂದವರು ನುಡಿದರು.
ಸಮಾರಂಭದಲ್ಲಿ ರೋಹನ್ ಕಾರ್ಪೋರೇಷನ್ ಸಂಸ್ಥೆಯ ಬೆಳವಣಿಗೆಯ ಪ್ರಯಾಣ ಮತ್ತು ಶಾರುಖ್ ಖಾನ್ ಅವರ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ವೀಡಿಯೋವನ್ನು ಪ್ರದರ್ಶಿಸಲಾಯಿತು.
ರೀನಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ರೋಹನ್ ಕಾರ್ಪೋರೇಷನ್ ಸಂಸ್ಥೆ ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಜಾಗತಿಕ ಗುಣಮಟ್ಟದ ವಸತಿ ಹಾಗು ವಾಣಿಜ್ಯ ಸಮುಚ್ಚಯಗಳನ್ನು ನಿರ್ಮಿಸುತ್ತಿದೆ.ಇದುವರೆಗೆ ಐದು ಸಾವಿರಕ್ಕೂ ಅಧಿಕ ಸಂತೃಪ್ತ ಗ್ರಾಹಕ ಬಳಗಕ್ಕೆ ನೆಮ್ಮದಿಯ ವಸತಿಯನ್ನು ಒದಗಿಸಿಕೊಟ್ಟಿದೆ.
ಮೂರು ದಶಕಗಳಲ್ಲಿ ಮಂಗಳೂರಿನಲ್ಲಿ ತನ್ನದೇ ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ವಿಶ್ವಾಸದ ಪ್ರತೀಕವಾಗಿ ಅದರ ನಿರ್ಮಾಣಗಳು ಮಂಗಳೂರಿನ ಹೆಮ್ಮೆಯ ಹೆಗ್ಗುರುತುಗಳಾಗಿ ಕಂಗೊಳಿಸುತ್ತಿವೆ.


