ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣ ಬರಬೇಕು ಎಂಬ ಭಾವನೆ ಜನರಲ್ಲಿದೆ;ನಿಖಿಲ್ ಕುಮಾರಸ್ವಾಮಿ

Chikkaballapura:

Font size:

ಸಮೃದ್ಧ ಕರ್ನಾಟಕ ಕಟ್ಟೋಣ ಬನ್ನಿ ಎಂದು ಯುವಕರಿಗೆ ನಿಖಿಲ್ ಮನವಿ

ಚಿಕ್ಕಬಳ್ಳಾಪುರ,ಚಿಂತಾಮಣಿ: ಗ್ಯಾರಂಟಿ ಯೋಜನೆಗಳನ್ನ ಪ್ರತಿ ತಿಂಗಳು ಕೊಡ್ತೀವಿ ಅಂತ ಅವರ ಪ್ರಣಾಳಿಕೆ ಹೇಳಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ ಎಂದು ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು.

ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮಗಳ ಜತೆ ಮಾತನಾಡಿದರು.

ಗೃಹಲಕ್ಷ್ಮಿ ಹಣ ನೀಡುವುದಕ್ಕೆ ತೊಡಕುಗಳಿವೆ ಎಚ್.ಎಂ.ರೇವಣ್ಣ ಹೇಳಿಕೆ ಪ್ರತಿಕ್ರಿಯೆಸಿದ ಅವರು. ರಾಜ್ಯದ ಜನತೆ ಯಾರು ಕೂಡ ಗ್ಯಾರಂಟಿ ಯನ್ನು ಕೊಡಿ ಎಂದು ಕೇಳಿಲ್ಲ. ಜನರು ಸ್ವಾವಲಂಬಿಗಳಾಗಿ ಸ್ವಾಭಿಮಾನ ಬದುಕನ್ನ ಕಟ್ಟುವಂತ ಕಾರ್ಯಕ್ರಮಗಳನ್ನ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು

ಗ್ಯಾರಂಟಿ ಯೋಜನೆಗಳಿಂದ ಜನ ಬೇಸತ್ತಿದ್ದಾರೆ.ಅವರೇ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಉಪಮುಖ್ಯಮಂತ್ರಿಗಳು ಪ್ರತಿ ತಿಂಗಳು ಕೊಡ್ತೀವಿ ಅಂತ ನಾವು ಹೇಳಿಲ್ಲ, ಯಾವಾಗ ಆಗುತ್ತೋ ಆಗ ಕೊಡ್ತೀವಿ ಅಂತ ಹೇಳಿದ್ದಾರೆ. ಅವರ ಪ್ರಕಾರ ಜಿಪಂ, ತಾಪಂ ಚುನಾವಣೆಗೆ ಗೃಹಲಕ್ಷ್ಮಿ ನೀಡಲು ಕಾಯುತ್ತಿದ್ದಾರೆ ಎಂದು ಆರೋಪಿಸಿದರು.

ಎಚ್‌ಎನ್‌ ವ್ಯಾಲಿ ಮತ್ತು ಕೆಸಿ ವ್ಯಾಲಿ ನೀರು ಯೋಗ್ಯವಲ್ಲ

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ರೈತರು ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದಾರೆ, ಅವರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ, ಕೃಷಿ ಚುಟುವಟಿಕೆಗಳಿಗೆ ಎಚ್‌ಎನ್‌ ವ್ಯಾಲಿ ಮತ್ತು ಕೆಸಿ ವ್ಯಾಲಿ ನೀರು ಯೋಗ್ಯವಲ್ಲ, ರೈತರ ವಿಚಾರಗಳನ್ನು ನಮ್ಮ ಪಕ್ಷ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಎತ್ತಿನಹೊಳೆ ಯೋಜನೆ ಪ್ರಾರಂಭವಾಗಿದ್ದು ಸಿದ್ದರಾಮಯ್ಯನವರ ಕಾಲದಲ್ಲಿ. ಈ ಯೋಜನೆ ಮೂಲಕ
ಕೋಲಾರ ಚಿಕ್ಕಬಳ್ಳಾಪುರ ಜನತೆಗೆ ಶಾಶ್ವತ ನೀರಾವರಿ ಕೊಡ್ತೀರಾ.? ಸಕಲೇಶಪುರದಲ್ಲಿ ಈ ಯೋಜನೆ ನಿಂತಿದೆ. ಅಲ್ಲಿಂದ ಕೆಳಗಡೆ ಇಲ್ಲಿವರೆಗೂ ಬಂದಿಲ್ಲ.11ವರ್ಷ ಆಗಿದೆ.
ಈ ಯೋಜನೆ ಪೂರ್ಣ ಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಜನರೊಂದಿಗೆ ಜನತಾದಳ ಕಾರ್ಯಕ್ರಮದ ಹೆಸರಿನಲ್ಲಿ ಪ್ರವಾಸ ಕೈಗೊಂಡಿದ್ದು, ಪಕ್ಷದ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಿ ಸಹಕರಿಸಬೇಕು, ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳಲ್ಲಿ ಪಕ್ಷದಿಂದ ಅತಿ ಹೆಚ್ಚು ಸ್ಥಾನಗಳನ್ನು ಪಡೆಯಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನೀಡಿರುವ ಮಾತನ್ನು ನೆರವೇರಿಸುವುದೇ ತಮ್ಮ ಧ್ಯೇಯ ಎಂದರು ಹೇಳಿದರು.

ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಎಂಬ ಭಾವನೆ ಕೇವಲ ಜೆಡಿಎಸ್‌‍ ಕಾರ್ಯಕರ್ತರಲ್ಲಿ ಮಾತ್ರವಲ್ಲ, ರಾಜ್ಯದ ಜನರಲ್ಲೂ ಇದೆ ಎಂದು ಜೆಡಿಎಸ್‌‍ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ,

ಪರ್ಸೆಂಟೇಜ್ ಕೊಟ್ಟರೆ ಮಾತ್ರ ವಸತಿ ಕೊಡ್ತಾರೆ

ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಂದು ಚರಂಡಿ, ರಸ್ತೆ, ಶಾಲಾ ಕಟ್ಟಡ ರೆಡಿ ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ಆಗಿದೆ. ಅಭಿವೃದ್ಧಿಗೆ ಒಂದು ರೂ. ಹಣ ನೀಡುತ್ತಿಲ್ಲ. ಪರ್ಸೆಂಟೇಜ್ ಕೊಟ್ಟರೆ ಮಾತ್ರ ವಸತಿ ಕೊಡುತ್ತಿದ್ದಾರಂತೆ. ಇತಿಹಾಸದಲ್ಲಿ ಇಂಥ ಕೆಟ್ಟ ಸರ್ಕಾರವನ್ನು ನೋಡಿಲ್ಲ ಎಂದು ಕಿಡಿಕಾರಿದರು

ಮಾವು ಬೆಳೆಗಾರರ ಪರ ನಿಂತಿದ್ದು ಕುಮಾರಣ್ಣ

ಈ ಭಾಗದಲ್ಲಿ ಮಾವಿನ ಬೆಲೆ ಕುಸಿತವಾಗಿ, ರೈತರು ಕಂಗಾಲಾಗಿರುವ ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಕೂಡಲೇ, ಮಾವು ಬೆಳೆಗಾರರ ಪರಿಸ್ಥಿತಿಯನ್ನು ಗಮನಿಸಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ಬೆಂಬಲ ಬೆಲೆ ನೀಡಲು ಕ್ರಮ ಕೈಗೊಂಡು ಬೆಂಬಲ ಬೆಲೆ ಕೊಡಿಸಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ನಿಖಿಲ್ ಕುಮಾರಸ್ವಾಮಿಯವರನ್ನ ಸಂತೇಕಲ್ಲಳ್ಳಿಯಲ್ಲಿ ಬೃಹತ್ ಹೂವಿನ ಹಾರ ಹಾಕುವುದರ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ನಂತರ ತಾಲ್ಲೂಕಿನ ಐತಿಹಾಸಿಕ ಶ್ರೀ ಕ್ಷೇತ್ರ ಕೈವಾರ ತಾತಯ್ಯ ದೇವಾಲಯಕ್ಕೆ ಭೇಟಿ ನಿಖಿಲ್ ಕುಮಾರಸ್ವಾಮಿ ಅವರು ಆಶೀರ್ವಾದ ಪಡೆದೆ.

ಇದೇ ವೇಳೆ ಸಂತೇಕಲ್ಲಳ್ಳಿ, ಪೆರೇಮಚನಹಳ್ಳಿ ಮತ್ತು ಚಿನ್ನಸಂದ್ರ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ಮೂಲಕ ರೋಡ್ ಶೋ ನಡೆಸಿದರು.

ಈ ಸಂದರ್ಭದಲ್ಲಿ ಕೋಲಾರ ಸಂಸದರಾದ ಮಲ್ಲೇಶ್ ಬಾಬು, ಶಾಸಕರಾದ ಜಿ.ಕೆ ವೆಂಕಟಶಿವಾರೆಡ್ಡಿ, ವೇಲೂರು ರವಿಕುಮಾರ್, ಮಾಜಿ ಶಾಸಕರಾದ ಜೆ. ಕೆ. ಕೃಷ್ಣಾರೆಡ್ಡಿ, ಮಾಜಿ ವಿಧಾನಪರಿಷತ್ ಸದಸ್ಯರಾದ ಆರ್. ಚೌಡರೆಡ್ಡಿ ರವರು, ರಾಜ್ಯ ಪ್ರಧಾಕಾರ್ಯದರ್ಶಿಗಳಾದ ರೋಷನ್ ಅಬ್ಬಾಸ್, ಜಿಲ್ಲಾಧ್ಯಕ್ಷರಾದ ಮುಕ್ತಾ ಮುನಿಯಪ್ಪ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Prev Post ನೀರಾವರಿ ವಿಚಾರದಲ್ಲಿ ದೆಹಲಿ ಪ್ರವಾಸ ಫಲಪ್ರದ: ಡಿಸಿಎಂ ಡಿ.ಕೆ. ಶಿವಕುಮಾರ್
Next Post ಡಿಫೆನ್ಸ್ ಕಾರಿಡಾರ್ ಸಂಬಂಧ ಸದ್ಯದಲ್ಲೇ ಪ್ರಧಾನಿ ಭೇಟಿ: ಎಂ ಬಿ ಪಾಟೀಲ