ಪಡೆದ ಜ್ಞಾನವನ್ನು ದೇಶದ ಸೇವೆಗೆ ಮುಡಿಪಿಡಿ ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 25ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ

ಬೆಳಗಾವಿ / ಬೆಂಗಳೂರು,:

Font size:

ಪಡೆದ ಜ್ಞಾನವನ್ನು ದೇಶದ ಸೇವೆಗೆ ಮುಡಿಪಿಡಿ ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 25ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ

ಬೆಳಗಾವಿ / ಬೆಂಗಳೂರು, ಜು .4-

ಸವಾಲುಗಳು ಬರುತ್ತವೆ, ವೈಫಲ್ಯಗಳು ಇರುತ್ತವೆ, ಆದರೆ ಪ್ರತಿಯೊಂದು ವೈಫಲ್ಯವು ಒಂದು ಪಾಠ ಮತ್ತು ಪ್ರತಿಯೊಂದು ಹೋರಾಟವು ಒಂದು ಅವಕಾಶ ಎಂಬುದನ್ನು ನೆನಪಿಡಿ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 25ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹೇಳುತ್ತಿದ್ದರು - ಕನಸು ನೀವು ಮಲಗಿರುವಾಗ ಕಾಣುವುದಲ್ಲ; ಅದು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ.. ಎಂದು. ಅದರಂತೆ ಕನಸು ಕಾಣಿರಿ, ದೊಡ್ಡ ಕನಸು ಕಾಣಿರಿ, ರಾಷ್ಟ್ರೀಯ ಹಿತಾಸಕ್ತಿಗಾಗಿ ಕನಸು ಕಾಣಿರಿ ಮತ್ತು ಅವುಗಳನ್ನು ನನಸಾಗಿಸಲು ಪ್ರತಿಜ್ಞೆ ಮಾಡಿ ಎಂದರು.

ಭಾರತದ ಮಹಾನ್ ಎಂಜಿನಿಯರ್ ಮತ್ತು ರಾಷ್ಟ್ರ ನಿರ್ಮಾಪಕ, ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಉನ್ನತ ತಾಂತ್ರಿಕ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳೇ, ಸರ್ ವಿಶ್ವೇಶ್ವರಯ್ಯನವರು ತಾಂತ್ರಿಕ ಶ್ರೇಷ್ಠತೆಯ ಸಾರಾಂಶ ಮತ್ತು ದೃಷ್ಟಿಕೋನ, ನಾವೀನ್ಯತೆ ಮತ್ತು ದೇಶಭಕ್ತಿಯ ಸಾಕಾರವಾಗಿದ್ದರು. ಜ್ಞಾನವು ಉದ್ಯೋಗ ಪಡೆಯಲು ಕೇವಲ ಒಂದು ಸಾಧನವಲ್ಲ, ಸಮಾಜ ಮತ್ತು ರಾಷ್ಟ್ರವನ್ನು ಸುಧಾರಿಸುವ ಜವಾಬ್ದಾರಿಯೂ ಆಗಿದೆ ಎಂಬ ಸಿದ್ಧಾಂತದ ಸಾಕಾರ ರೂಪವಾಗಿದ್ದರು. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗ ಎಂದು ಕರೆಯಲ್ಪಡುವ ಯುಗವನ್ನು ಪ್ರವೇಶಿಸಿದ್ದೇವೆ. ಕೃತಕ ಬುದ್ಧಿಮತ್ತೆ, ಇಂಟರ್ನೆಟ್ ಆಫ್ ಥಿಂಗ್ಸ್, ಡೇಟಾ ಸೈನ್ಸ್, ಮೆಷಿನ್ ಲರ್ನಿಂಗ್, ರೊಬೊಟಿಕ್ಸ್ ಮತ್ತು ಶುದ್ಧ ಇಂಧನದಂತಹ ತಂತ್ರಜ್ಞಾನಗಳು ಇಡೀ ಜಗತ್ತನ್ನು ಜಾಗತಿಕ ಹಳ್ಳಿಯಾಗಿ ಪರಿವರ್ತಿಸಿವೆ. ಈ ಬದಲಾವಣೆಯ ನಡುವೆ, ನಿಮ್ಮಂತಹ ಯುವಕರ ಪಾತ್ರ ಅತ್ಯಂತ ಮುಖ್ಯವಾಗುತ್ತದೆ ಎಂದು ಹೇಳಿದರು.

ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಯೋಜನೆಗಳ ಜೊತೆಗೆ ನಿಮ್ಮ ನಾವೀನ್ಯತೆಗಳು, ನಿಮ್ಮ ಚಿಂತನೆ ಮತ್ತು ನಿಮ್ಮ ಕೆಲಸದ ಸಂಸ್ಕøತಿ ಬಹಳ ಮುಖ್ಯ. ಭಾರತವು ಸ್ಟಾರ್ಟ್‍ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂತಹ ಉಪಕ್ರಮಗಳೊಂದಿಗೆ ಜಾಗತಿಕ ವೇದಿಕೆಯಲ್ಲಿ ತನ್ನ ಛಾಪನ್ನು ಮೂಡಿಸಿದೆ. ದೇಶದಲ್ಲಿ ಸಾವಿರಾರು ಸ್ಟಾರ್ಟ್‍ಅಪ್‍ಗಳು ಹೊರಹೊಮ್ಮುತ್ತಿದ್ದು, ನಿಮ್ಮಂತಹ ತಾಂತ್ರಿಕ ವಿದ್ಯಾರ್ಥಿಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಭಾರತ ಎದುರಿಸುತ್ತಿರುವ ಸಾಮಾಜಿಕ, ಪರಿಸರ ಮತ್ತು ಆರ್ಥಿಕ ಸವಾಲುಗಳು ನಿಮ್ಮ ನಾವೀನ್ಯತೆಗೆ ಕಾಯುತ್ತಿವೆ. ಗ್ರಾಮೀಣ ನೀರಾವರಿ, ಹಸಿರು ಇಂಧನ, ನಗರ ಸಾರಿಗೆ, ಆರೋಗ್ಯ ರಕ್ಷಣೆ, ನೀರಿನ ನಿರ್ವಹಣೆ, ಸೈಬರ್ ಭದ್ರತೆ - ಈ ಎಲ್ಲಾ ಕ್ಷೇತ್ರಗಳಲ್ಲಿ ಅಪಾರ ಸಾಮಥ್ರ್ಯವಿದೆ ಎಂದು ತಿಳಿಸಿದರು.

ಪ್ರಸ್ತುತ ಜಗತ್ತಿನಲ್ಲಿ, ಹೊಸ ಆವಿμÁ್ಕರಗಳು ಮತ್ತು ಹೊಸ ತಂತ್ರಜ್ಞಾನಗಳು ಪ್ರತಿದಿನ ಹೊರಹೊಮ್ಮುತ್ತಿವೆ. ಆದ್ದರಿಂದ, ವಿದ್ಯಾರ್ಥಿಗಳು ಜೀವನಪಯರ್ಂತ ವಿದ್ಯಾರ್ಥಿಯಾಗಿ ಕೆಲಸ ಮಾಡಬೇಕು. ಇಂದಿನ ಹೊಸ ತಂತ್ರಜ್ಞಾನವು ನಾಳೆ ಹಳೆಯದಾಗುತ್ತದೆ. ಆದ್ದರಿಂದ ಕುತೂಹಲ ಮತ್ತು ನಾವೀನ್ಯತೆಯ ಹಸಿವನ್ನು ಕಾಪಾಡಿಕೊಳ್ಳಿ. ಕರ್ನಾಟಕ ತಾಂತ್ರಿಕ ಶಿಕ್ಷಣದ ಕೇಂದ್ರವಾಗಿದೆ ಮತ್ತು ಬೆಂಗಳೂರು ಇಂದು ವಿಶ್ವದ ತಂತ್ರಜ್ಞಾನ ಕೇಂದ್ರವಾಗಿದೆ. ಈ ರಾಜ್ಯವು ಐಟಿ ಮತ್ತು ಬಿಟಿ ಮತ್ತು ಸ್ಟಾರ್ಟ್‍ಅಪ್‍ಗಳು ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ದೇಶ ಮತ್ತು ಪ್ರಪಂಚದಲ್ಲಿ ತನ್ನ ಛಾಪು ಮೂಡಿಸಿದೆ. ಈಗ ಈ ಸಂಪ್ರದಾಯವನ್ನು ಮತ್ತಷ್ಟು ಕೊಂಡೊಯ್ದು ಭಾರತವನ್ನು ತಾಂತ್ರಿಕ ಸೂಪರ್‍ಪವರ್ ಮಾಡುವಲ್ಲಿ ಕೊಡುಗೆ ನೀಡುವುದು ಯುವಜನತೆಯ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.

ನಮ್ಮ ಜ್ಞಾನ ಮತ್ತು ಪ್ರತಿಭೆಯನ್ನು ಮುಂದೆ ಸಾಗಲು, ಕಲಿಯಲು, ಸೃಷ್ಟಿಸಲು ಮತ್ತು ನಮ್ಮ ರಾಜ್ಯ ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡಲು ಬಳಸುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.
ಘಟಿಕೋತ್ಸವದಲ್ಲಿ ಪ್ರಾಧ್ಯಾಪಕ ಅಜಯ್ ಕುಮಾರ್ ಸೂದ್, ಕುಲಪತಿ ಪೆÇ್ರಫೆಸರ್ ಎಸ್.ವಿದ್ಯಾಶಂಕರ್, ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Prev Post ದೇವನಹಳ್ಳಿ ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರುಗಳ ಜೊತೆ ಸಿಎಂ ಚರ್ಚೆ
Next Post ವಸತಿ ಇಲಾಖೆಯಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅಧಿಕಾರಿಗಳಿಗೆ ಹೆಚ್.ಡಿ. ಕುಮಾರಸ್ವಾಮಿ ಸೂಚನೆ