4 ಜಿಲ್ಲೆ 19 ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸಂಚಾರ/ 5 ಲಕ್ಷ ಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ,1ಲಕ್ಷಕ್ಕೂ ಅಧಿಕ ಸಕ್ರೀಯ ಸದಸ್ಯರು.

ಕಲಬುರಗಿ::

Font size:

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು 4 ಜಿಲ್ಲೆ 19 ವಿಧಾನಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸಂಚಾರ/ 5 ಲಕ್ಷ ಕ್ಕೂ ಹೆಚ್ಚು ಸದಸ್ಯತ್ವ ನೋಂದಣಿ,1ಲಕ್ಷಕ್ಕೂ ಅಧಿಕ ಸಕ್ರೀಯ ಸದಸ್ಯರು. |ಸರ್ಕಾರದ ವಿರುದ್ಧ ಹೋರಾಟಕ್ಕೆ ವಿಧಾನಸಭೆಯಲ್ಲಿ HDK ಇರ್ಬೇಕು

ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಗ್ಗೆ ಸರ್ಕಾರ ಗಂಭೀರವಾಗಿಚಿಂತನೆಮಾಡಬೇಕು13 ಸಾವಿರ ಕೋಟಿ ಅಭಿವೃದ್ಧಿಗೆ ಕೊಟ್ಟಿದ್ದೇವೆ ಅಂತ ಹೇಳಿದ್ದಾರೆ ಎಲ್ಲಿ ಅಭಿವೃದ್ಧಿ ಆಗ್ತಿದೆ ತೋರಿಸಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದರು ನಡೆಸಿದರು.

ಕಲಬುರಗಿಯ ಜಿಲ್ಲಾ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಕೆಆರ್ ಡಿಬಿ ಮೂಲಕ ಸಾಕಷ್ಟು ಪ್ರಮಾಣದ ಹಣವನ್ನು ಖರ್ಚು ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ ಆ ಹಣ ಎಲ್ಲಿ ಖರ್ಚಾಗುತ್ತಿದೆ ಹೇಳಿ ಎಂದು ಪ್ರಶ್ನೆ ಮಾಡಿದರು.

ಕೆಕೆಆರ್ ಡಿ ಅಡಿಯಲ್ಲಿ ಅನುಷ್ಠಾನಕ್ಕೆ ಬರಬೇಕಾದ ಹಣ ಎಲ್ಲಿ ಬಳಕೆ ಆಗ್ತಿದೆ. ಕೆಕೆಆರ್ ಡಿಬಿಗೆ ದೊಡ್ಡಮಟ್ಟದ ಹಣ ಕೊಟ್ಟಿದ್ದೇವೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಇದೂ ಎಲ್ಲಿ ಅಭಿವೃದ್ಧಿ ಆಗ್ತಿದೆ, ಎಲ್ಲಿ ಕಾಣ್ತಿದೆ ಅಭಿವೃದ್ದಿಯ ಶ್ಚೇತ ಪತ್ರ ಹೊರಡಿಸಿ ಎಂದು ಅವರು ಆಗ್ರಹಿಸಿದರು.

ಕಲಬುರಗಿ ಜಿಲ್ಲೆಯ ಸೇಡಂ, ಚಿತ್ತಾಪುರ ಈ ಭಾಗದಲ್ಲಿ ಸ್ಯಾಂಡ್ ಮಾಫೀಯಾ ಹೆಚ್ಚು ನಡೆಯುತ್ತಿದೆ. ಸುಮಾರು150 ಕೋಟಿಗೂ ಹೆಚ್ಚು ಸ್ಯಾಂಡ್ ಮಾಫಿಯಾ ನಡೆದಿದೆ. ರಾಜ್ಯ ಸರ್ಕಾರ ಕಂಡು ಕಾಣದೆ ಕುರುಡಾಗಿದೆ. ಈ ಬಗ್ಗೆ ಸರ್ಕಾರ ಗಮನಹರಿಸಿಬೇಕು ಎಂದು ಒತ್ತಾಯಹಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕೂಡ ಸಂಪೂರ್ಣ ಕುಸಿದಿದೆ. ಇದನ್ನ ನೋಡಿದ್ರೆ ಮುಂದಿನ ಮಕ್ಕಳ ಭವಿಷ್ಯದ ಕೈ ಕಟ್ಟಿದಂತಾಗಿದೆ.

ಜೆಡಿಎಸ್ ಪಕ್ಷದ ಜನರೊಂದಿಗೆ ಜನತಾದಳ ಅಭಿಯಾನ ಯಶಸ್ವಿಯಾಗಿ ಜರುಗುತ್ತಿದ್ದು ಈ ವರೆಗೆ 4 ಲಕ್ಷ ಸದಸ್ಯರ ನೋಂದಣಿಯಾಗಿದ್ದು, ಇದರಲ್ಲಿ 1ಲಕ್ಷಕ್ಕೂ ಅಧಿಕ ಸಕ್ರೀಯ ಸದಸ್ಯರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಅಲ್ಲದೇ ಆಗಷ್ಟ್ 20 ನಂತರ ಹಳೇ ಮೈಸೂರು ಭಾಗದಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೃಹತ್ ಸಮಾವೇಶ ನಡೆಸಲು ವರಿಷ್ಠರು ಚರ್ಚೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ಮೈತ್ರಿ ವಿಚಾರಕ್ಕೆ ಮಾತನಾಡಿದ ಅವರು, ನಮ್ಮ ಹಾಗೂ ಬಿಜೆಪಿ ಮೈತ್ರಿ ಪರಸ್ಪರ ಪ್ರೀತಿ , ವಿಶ್ವಾಸದಿಂದ ಸಾಗುತ್ತಿದ್ದು ನಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಮಾಧ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸಿದರು.

ರಾಜ್ಯವ್ಯಾಪ್ತಿ ಜನತಾದಳ ಸದಸ್ಯಸತ್ವ ನೋಂದಣಿ ಮಾಡಲಾಗ್ತಿದೆ. ನಾಲ್ಕು ಜಿಲ್ಲೆಗಳಲ್ಲಿ ಈಗಾಗಲೆ ಸಂಚಾರ ಮಾಡಿ ಜೆಡಿಎಸ್ ಸದಸ್ಯತ್ವ ನೋಂದಣಿ ನಡೆಯುತ್ತಿದೆ. ಈ ವರೆಗೆ 19 ವಿಧಾನಸಭೆ ಕ್ಷೇತ್ರದಲ್ಲಿ ಸಂಚಾರ ಮಾಡಲಾಗಿದೆ.ಇದು ಮೊದಲೇ ಹಂತದ ಪ್ರವಾಸ 2ನೇ ಹಂತದಲ್ಲೂ ಸಂಚಾರ ಮಾಡುತ್ತೇವೆ ಎಂದು ಹೇಳಿದರು.

ಜೆಡಿಎಸ್ ಪಕ್ಷವನ್ನ ತಳಮಟ್ಟದಿಂದ ಕಟ್ಟುವ ಉದ್ದೇಶದಿಂದ ಜನರೊಂದಿಗೆ ಜನತಾದಳ ಪ್ರವಾಸ ಮಾಡಲಾಗ್ತಿದೆ. ಮುಂದಿನ ದಿನಗಳಲ್ಲಿ ಉತ್ತರ, ದಕ್ಷಿಣದಲ್ಲಿ ನೋಂದಣಿ ಆಭಿಯಾನ ನಡೆಯುತ್ತೆ. ಈವರೆಗೆ ಸುಮಾರು 5 ಲಕ್ಷ ಸದಸ್ಯತ್ವ ನೋಂದಣಿ ಆಗಿದೆ ಎಂದು ತಿಳಿಸಿದರು.

ಆಗಸ್ಟ್ ತಿಂಗಳ ಮೊದಲನೇ ಹಂತದ ಈ ಕಾರ್ಯಕ್ರಮ ಮುಗಿಯೋವರೆಗೆ 50 ಲಕ್ಷ ನೋಂದಣಿ ಗುರಿ ಇಟ್ಟುಕೊಂಡು ಹೋಗುತ್ತಿದ್ದೇವೆ. ಸದಸ್ಯತ್ವ ನೋಂದಣಿ ಮುಗಿದ ಬಳಿಕ ದೊಡ್ಡ ಮಟ್ಟದ ಸಮಾವೇಶ ಮಾಡಲಾಗುವುದು. ಕಲಬುರಗಿಯಲ್ಲೇ ಬೃಹತ್ ಸಮಾವೇಶ ಮಾಡುವ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

ಕುಮಾರಣ್ಣಾ ನೇತೃತ್ವದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ. ಯಾವುದೇ ಅನುಮಾನ ಇಲ್ಲದೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದರು

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವೆಂಕಟರಾವ ನಾಡಗೌಡ, ಶಾಸಕರಾದ ಶರಣಗೌಡ ಕಂದಕೂರ. ಜೆಡಿಎಸ್ ಪಕ್ಷದ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ, ಮಾಜಿ ಸಚಿವರಾದ ನಾಡಗೌಡರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೊಳ, ಮುಖಂಡರಾದ ಶಿವಕುಮಾರ್ ನಾಟಿಕಾರ್, ಕೃಷ್ಣ ರೆಡ್ಡಿ, ಮಹೇಶ್ವರಿ ವಾಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು

Prev Post ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ
Next Post ದೇವನಹಳ್ಳಿ ಚನ್ನರಾಯಪಟ್ಟಣದ ರೈತ ಹೋರಾಟಗಾರರು, ಸ್ಥಳೀಯ ಮುಖಂಡರು ಹಾಗೂ ಹೋರಾಟ ಒಕ್ಕೂಟದ ಮುಖಂಡರುಗಳ ಜೊತೆ ಸಿಎಂ ಚರ್ಚೆ