ಗಡಿ ಉಸ್ತುವಾರಿ ಸಚಿವರಾಗಿ ಶ್ರೀ ಎಚ್.ಕೆ. ಪಾಟೀಲ ನೇಮಕ: ಕನ್ನಡ ಚಳವಳಿ ಕೇಂದ್ರ ಸಮಿತಿ ಅಭಿನಂದನೆ
ಗಡಿ ಉಸ್ತುವಾರಿ ಸಚಿವರಾಗಿ
ಶ್ರೀ ಎಚ್.ಕೆ. ಪಾಟೀಲ ನೇಮಕ:
ಕನ್ನಡ ಚಳವಳಿ ಕೇಂದ್ರ ಸಮಿತಿ ಅಭಿನಂದನೆ
ಕನ್ನಡ ಚಳವಳಿ ಕೇಂದ್ರ ಸಮಿತಿ ಮತ್ತು ಗಡಿಭಾಗದ ಕನ್ನಡ ಸಂಘಟನೆಗಳ ದೀರ್ಘ
ಕಾಲದ ಬೇಡಿಕೆಯಾಗಿದ್ದ ಗಡಿ ಉಸ್ತುವಾರಿ ಸಚಿವರ ನೇಮಕವಾಗಿದ್ದು ಹಿರಿಯ
ಸಚಿವ ಶ್ರೀ ಎಚ್.ಕೆ.ಪಾಟೀಲಅವರನ್ನು ಗಡಿ ಹಾಗೂ ಜಲ ವಿವಾದಗಳ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ
ಇಂದು ರಾಜ್ಯ ಸರ್ಕಾರ ಆದೇಶ ಹೊರಡಿಸಲಾಗಿದೆ.
2013 ರಲ್ಲಿ ಸಿದ್ದರಾಮಯ್ಯ ಅವರ ಸರಕಾರ ಅಧಿಕಾರಕ್ಕೆ ಬಂದ
ನಂತರ ಎಚ್.ಕೆ.ಪಾಟೀಲ ಅವರನ್ನು
ಗಡಿ ಉಸ್ತುವಾರಿ ಸಚಿವರನ್ನಾಗಿ
ನೇಮಿಸಲಾಗಿತ್ತು. 2018 ರ ನಂತರ
ಅಧಿಕಾರಕ್ಕೆ ಬಂದ ಯಾವದೇ ಸರಕಾರ
ಗಡಿ ಉಸ್ತುವಾರಿ ಸಚಿವರನ್ನು
ನೇಮಿಸಿರಲಿಲ್ಲ.
ಮಹಾರಾಷ್ಟ್ರ ಸರಕಾರವು ಗಡಿವಿವಾದ ಸಂಬಂಧ ಇಬ್ಬರೂ ಉಸ್ತುವಾರಿ ಸಚಿವರನ್ನು ಇತ್ತೀಚೆಗೆ ನೇಮಿಸಿತ್ತು. ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿ, ದಿನಾಂಕ 24 ಫೆಬ್ರವರಿ 2025ರಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀ ಗುರುದೇವ್ ನಾರಾಯಣ್ ಕುಮಾರ್ ಅವರು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.
ಮನವಿ ಪುರಸ್ಕರಿಸಿ ಇಂದಿನ ನೇಮಕ ಆದೇಶಕ್ಕಾಗಿ
ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಶ್ರೀ ಎಚ್.ಕೆ.ಪಾಟೀಲರನ್ನು ಅಭಿನಂದಿಸಿದೆ.
ಈ ಕುರಿತು ಮಾರ್ಗದರ್ಶನ ನೀಡಿದ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ, ಅಶೋಕ ಚಂದರಗಿ ಅವರ ಪ್ರಯತ್ನಕ್ಕೆ ಜಯ ಸಿಕ್ಕಂತಾಗಿದೆ. ಅವರಿಗೂ ಧನ್ಯವಾದಗಳು.
ಕೂಡಲೇ ಸಚಿವರಾದ ಹೆಚ್.ಕೆ. ಪಾಟೀಲ್ ಗಡಿ ಜಿಲ್ಲೆಗಳಿಗೆ ಭೇಟಿ ನೀಡಿ ಕಾರ್ಯಪ್ರವೃತ್ತರಾಗಬೇಕೆಂದು ಕೋರುತ್ತಿದ್ದೇನೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ಶ್ರೀ ಗುರುದೇವ್ ನಾರಾಯಣ್ ಕುಮಾರ್
ಅಧ್ಯಕ್ಷರು, ಕನ್ನಡ ಚಳವಳಿ ನಾಯಕರು.
ಕನ್ನಡ ಚಳವಳಿ ಕೇಂದ್ರ ಸಮಿತಿ.
ಬೆಂಗಳೂರು.
ದಿನಾಂಕ:30 ಜೂನ್ 2025