ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಿಗೆ ಜುಲೈ 8 ರಿಂದ 120 ದಿನಗಳವರೆಗೂ ನೀರು: ಸಚಿವ ಆರ್.ಬಿ. ತಿಮ್ಮಾಪೂರ

Banglore:

Font size:

ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಿಗೆ ಜುಲೈ 8 ರಿಂದ 120 ದಿನಗಳವರೆಗೂ ನೀರು: ಸಚಿವ ಆರ್.ಬಿ. ತಿಮ್ಮಾಪೂರ

ಬೆಂಗಳೂರು: ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ 80.58 ಟಿಎಂಸಿ ನೀರು ಸಂಗ್ರಹವಾಗಿದ್ದು, ಜುಲೈ 8ರಿಂದ ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಿಗೆ ಹೆಚ್ಚು ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಬಕಾರಿ ಮತ್ತು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್ ಬಿ ತಿಮ್ಮಾಪೂರ ಅವರು ತಿಳಿಸಿದ್ದಾರೆ.

ಇಂದು ವಿಕಾಸಸೌಧದಲ್ಲಿ ಸಚಿವ ಆರ್ ಬಿ ತಿಮ್ಮಾಪೂರ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 2025-26 ನೇ ಸಾಲಿನ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಯಿತು.

ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಂಗಳಲ್ಲಿ 80.58 ನೀರು ಸಂಗ್ರಹವಾಗಿದ್ದು, ಕಳೆದ ಸಾಲಿಗಿಂತ 54.77 ಟಿಎಂಸಿ ಹೆಚ್ಚುವರಿ ನೀರು ಸಂಗ್ರಹವಾಗಿದೆ. ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶವು ಮುಂಗಾರು ಹಂಗಾಮಿನ ಮಳೆ ಆಧರಿತವಾಗಿದ್ದು, ಮಳೆಯನ್ನು ಆಧರಿಸಿ ಅವಶ್ಯಕತೆಗೆ ತಕ್ಕಂತೆ ನೀರು ಹರಿಸಲು ಸಚಿವರು ಸೂಚಿಸಿದರು.

ಜುಲೈ 8 ರಿಂದ ಮುಂದಿನ 120 ದಿನಗಳಿಗೆ‌ ಮುಂಗಾರು ಹಂಗಾಮಿಗೆ ನೀರು ಪೂರೈಸಲು ತೀರ್ಮಾನಿಸಲಾಗಿದೆ. ಒಳಹರಿವು ಆಧರಿಸಿ ಕಾಲುವೆಗಳಿಗೆ ಸತತವಾಗಿ ನೀರು ಬಿಡಲು ಸಚಿವ ತಿಮ್ಮಾಪೂರ ಅವರು ಅಧಿಕಾರಿಗಳಿಗೆ ತಿಳಿಸಿದರು.

Prev Post ಗ್ರೀನ್‌ ಸ್ಟೀಲ್‌, ಉನ್ನತ ದರ್ಜೆಯ ಅಲ್ಯೂಮೀನಿಯಂ; ಭಾರತ -ಯುಎಇ ಸಹಯೋಗಕ್ಕೆ ಒತ್ತು ಕೈಗಾರಿಕಾ, ಖನಿಜ ಪಾಲುದಾರಿಕೆ ವಿಸ್ತರಿಸಲು ಯುಎಇ ಉನ್ನತಾಧಿಕಾರಿಗಳ ಜತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತುಕತೆ
Next Post ಗಡಿ ಉಸ್ತುವಾರಿ ಸಚಿವರಾಗಿ ಶ್ರೀ ಎಚ್.ಕೆ. ಪಾಟೀಲ ನೇಮಕ: ಕನ್ನಡ ಚಳವಳಿ ಕೇಂದ್ರ ಸಮಿತಿ ಅಭಿನಂದನೆ