|| ಜೆಡಿಎಸ್ ನಮ್ಮ ಮನೆತನದ ಪಕ್ಷವಲ್ಲ, ಇದು ಕಾರ್ಯಕರ್ತರ ಪಕ್ಷ || || ಜೆಡಿಎಸ್ ಪಕ್ಷ ಸಂಘಟನೆಗಾಗಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡ ದೇವೇಗೌಡರು|| || ಕೃಷ್ಣಾ ಬಚಾವತ್ ತೀರ್ಪಿಂನತೆ ನಮಗೆ ನೀರು ಸಿಕ್ಕಿಲ್ಲ -HDD ||
ರಾಯಚೂರು: ನಮ್ಮದು ಕುಟುಂಬ ರಾಜಕಾರಣವಲ್ಲ. ನಮ್ಮ ಪಕ್ಷದಿಂದಲೇ ಉನ್ನತ ಸ್ಥಾನ ಪಡೆದುಕೊಂಡು ನಮ್ಮ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರಿನ ದೇವದುರ್ಗದಲ್ಲಿ ಆಯೋಜಿಸಿದ್ದ ಜನರೊಂದಿಗೆ ಜನತಾದಳ ಹಾಗೂ ಮಾಜಿ ಪ್ರಧಾನಿಗಳ ಹಾಗೂ ಅಭಿನಂದನಾ ಸಮಾರಂಭದಲ್ಲಿಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೃಷ್ಣಾ ಬಚಾವತ್ ತೀರ್ಪೀನಂತೆ ಕರ್ನಾಟಕದ ಪಾಲಿಗೆ ನೀರು ಸಿಕ್ಕಿಲ್ಲ. ನೀರನ್ನು ಪಡೆಯಲು ಹಾಗೂ ರಾಜ್ಯವನ್ನು ಹಸಿರನ್ನಾಗಿ ಮಾಡಲು ರಾಜ್ಯದ ಜನತೆ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೇಳೆಯುವ ಅಗತ್ಯ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಪಕ್ಷತೀತಾಗಿ ಎಲ್ಲರ ರೈತರ ಪರವಾಗಿ ಹೋರಾಟ ಮಾಡಬೇಕು. ಇದರಿಂದ ರಾಜ್ಯದ ಜನರು ಸಮೃದ್ಧಿಗೊಳ್ಳುತ್ತಾರೆ. ಎಲ್ಲ ಸಮುದಾಯದವರು ಎಲ್ಲ ರಂಗಗಳಲ್ಲೂ ಮುಖ್ಯವಾಹಿನಿಯಲ್ಲಿ ಇರುತ್ತಾರೆ ಎಂದು ತಿಳಿಸಿದರು.
ನಮ್ಮ ಮುಖಂಡರು ನನ್ನನ್ನ ಪುತ್ಥಳಿ ಅನಾವರಣಕ್ಕೆ ಬಂದಿದ್ದಾರೆ ಅಂತ ಅಂದುಕೊಳ್ಳಬೇಡಿ. ನಿಮ್ಮನ್ನ ದೇವದುರ್ಗದಲ್ಲಿ ನೋಡಬೇಕೆಂದು ಬಂದಿದ್ದೇನೆ. ನಾನೋಬ್ಬ ಸಾಮಾನ್ಯ ರಾಜಕಾರಣಿ. ನಾನು ಎಂದು ದೊಡ್ಡ ವ್ಯಕ್ತಿ ಅಂತ ಹೇಳಿಕೊಂಡಿಲ್ಲ ನಾನು ಸಾಮಾನ್ಯ ವ್ಯಕ್ತಿ ಅಂದು ತಿಳಿಸಿದರು.
ನನ್ನ ಜೀವ ಇರುವವರೆಗೂ ರೈತಪರ ಹೋರಾಟ ಮಾಡುತ್ತೇನೆ
ನಾನು ರಾಜಕೀಯಕ್ಕೆ ಪ್ರವೇಶ ಮಾಡಿದಾಗಿನಿಂದಲ್ಲೂ ರೈತರು ಹಾಗೂ ಜನಪರವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ. ನನ್ನ ಜೀವನ ಇರವವರೆಗೂ ರೈತರ ಪರವಾಗಿ ಹೋರಾಟ ಮಾಡುತ್ತೇನೆ. ಇದರ ಬಗ್ಗೆ ಎರಡು ಮಾತಿಲ್ಲ ಎಂದು ಹೇಳಿದರು.ನಮ್ಮದು ಕುಟುಂಬ ರಾಜಕಾರಣ ಎಂದು ಹೇಳುತ್ತಿದ್ದಾರೆ.
ನನಗೀಗ 93 ವರ್ಷ ಆದರೆ ಇನ್ನೂ ಎಷ್ಡು ಕಾಲ ಇರಬಹುದು ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿ ಆದಾಗ 30 ಟಿಎಂಸಿ ನೀರನ್ನು ಹಿಡಿದಿದ್ರು. ನಮ್ಮ ನೀರು 129 ಟಿಎಂಸಿ. ಇಂದಿರಾ ಗಾಂಧಿ ಅವರು ಆಗ ತಮಿಳುನಾಡಿಗೆ ಕುಡಿಯಲು ನೀರಿಲ್ಲ ಅಂತ 5 ಟಿಎಂಸಿ ಬಿಡಿಸಿದ್ರು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯ ಆರ್ಥಿಕ ದಿವಾಳಿಯಾಗಿದೆ. ಸರ್ಕಾರಿ ನೌಕರಿಗೆ ವೇತನ ನೀಡಲು ಹಣವಿಲ್ಲ. ಬೆಂಗಳೂರು ಮಹಾ ನಗರ ಪಾಲಿಕೆ ಸಿಬ್ಬಂಧಿಗೆ ವೇತನವಿಲ್ಲದೆ ಪರಡಾಡುವಂತಾಗಿದೆ ಸ್ಥಿತಿ ನಿರ್ಮಾಣವಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಂಚರತ್ನ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮರು ಜಾರಿಗೊಳಿಸ ಬೇಕು
ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಆರ್ಥಿಕವಾಗಿ ದಿವಾಳಿಯಾಗಿದೆ. ಕುಮಾರಸ್ವಾಮಿ ಅವರು ಹಿಂದಿನ ಆಡಳಿತ ಅವಧಿಯಲ್ಲಿ ಜಾರಿಗೊಳಿಸಿದ ಪಂಚರತ್ನ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮರು ಜಾರಿಗೊಳಿಸಿ ಬಡ ಸಾಮಾನ್ಯರ ಬದುಕನ್ನು ಹಸನಗೊಳಿಸಬೇಕು ಎಂದು ಆಗ್ರಹಿಸಿದರು.
ಶಾಸಕಿ ಕರೆಮ್ಮ ಅವರಿಗೆ ನನ್ನ ಆಶೀರ್ವಾದ ಯಾವಗಲೂ ಇರುತ್ತೆ
ದೇವದುರ್ಗ ಶಾಸಕಿ ಕರೆಮ್ಮ ಅವರು, ಜನರ ಆಶದಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಅವರಿಗೆ ನನ್ನ ಆಶೀರ್ವಾದ ಯಾವಗಲೂ ಇರುತ್ತದೆ. ಜನರ ಮಧ್ಯೆ ಇದ್ದೂ ಜನ ಸೇವೆ ಮಾಡುತ್ತಾ ಜನಮನದಲ್ಲಿ ಉಳಿಯಬೇಕು. ಮುಂದಿನ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಅವರನ್ನ ಗೆಲ್ಲಿಸುವಂತೆ ಮನವಿ ಮಾಡಿದರು.
ಶಾಸಕಿ ಕರೆಮ್ಮ ಜಿ. ನಾಯಕ. ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು, ಮಾಜಿ ಮಂತ್ರಿ ವೆಂಕಟರಾವ್ ನಾಡಗೌಡ, ಹನುಮಂತಪ್ಪ ಆಲ್ಕೋಡ್, ಮಾಜಿ ಶಾಸಕರಾದ ಬಂಡೇಪ್ಪ ಕಾಶಂಪೂರು, ರಾಜಾ ವೆಂಕಟಪ್ಪ ನಾಯಕ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ವೀರುಪಾಕ್ಷಿ, ಮಹಾಂತೇಶ ಪಾಟೀಲ್ ಅತ್ತನೂರು, ತಾಲೂಕ ಜೆಡಿಎಸ್ ಅಧ್ಯಕ್ಷ ಬುಡನಗೌಡ ಪಾಟೀಲ್, ಮುಖಂಡರಾದ ಸಿದ್ದನತಾತ ಮುಂಡರಗಿ, ಸಿದ್ದನಗೌಡ ಮೂಡಲಗುಂಡ, ನಾಗರಾಜ ಪಾಟೀಲ್ ನೀಲಗಲ್ ಸೇರಿದಂತೆ ಇತರರು ಇದ್ದರು.