ಬಯೋ ಸಿಎನ್‍ಜಿ ಪ್ಲಾಂಟ್‍ಗೆ ಕಾರ್ಬನ್ ಕ್ರೆಡಿಟ್ಸ್ ಬಳಕೆ: ಕೃಷಿ ಮಾರುಕಟ್ಟೆ ಸಚಿವರೊಂದಿಗೆ ಕೊಸ್ಯಾಂಬೊ ಅಧಿಕಾರಿ ಚರ್ಚೆ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ-2025 ರ ಕಾರ್ಯಕ್ರಮ ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರ ಪ್ರವಾಸ ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ಶಿಕ್ಷಣ ಕೃಷಿ ಇಲಾಖೆಯಿಂದ ಸಾವಯವ ಮತ್ತು ಜೈವಿಕ ಗೊಬ್ಬರಗಳ ಗುಣಮಟ್ಟ ನಿಯಂತ್ರಣ ಬಂಜಾರರ ಮೌಖಿಕ ಸಾಹಿತ್ಯ ಹಾಗೂ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಕಲಾವಿದರು, ಸಾಹಿತಿಗಳ ಸಹಕಾರ ಅಗತ್ಯ - ಡಾ. ಎ.ಆರ್ ಗೋವಿಂದಸ್ವಾಮಿ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 33ನೇ ಯುವ ಸಂಘಟನೆ ಆಯೋಜನೆ
ಬಯೋ ಸಿಎನ್‍ಜಿ ಪ್ಲಾಂಟ್‍ಗೆ ಕಾರ್ಬನ್ ಕ್ರೆಡಿಟ್ಸ್ ಬಳಕೆ: ಕೃಷಿ ಮಾರುಕಟ್ಟೆ ಸಚಿವರೊಂದಿಗೆ ಕೊಸ್ಯಾಂಬೊ ಅಧಿಕಾರಿ ಚರ್ಚೆ
ಬೆಂಗಳೂರು, ಜೂ. 23 -
ತರಕಾರಿ ಮತ್ತು ಇತರ ತ್ಯಾಜ್ಯ ಬಳಕೆ ಮಾಡಿ ಬಯೋ ಸಿಎನ್‍ಜಿ ಪ್ಲಾಂಟ್‍ಗಳ ಸ್ಥಾಪನೆಗೆ ಕೇಂದ್ರ ಸರ್ಕಾರದ ಕಾರ್ಬನ್ ಕ್ರೆಡಿಟ್ಸ್ ಅನುದಾನ ಬಳಕೆ ಬಗ್ಗೆ ದೆಹಲಿಯ ಕೊಸ್ಯಾಂಬೋ ( ಕೌನ್ಸಿಲ್ ಆಫ್ ಸ್ಟೇಟ್ ಅಗ್ರಿಕಲ್ಚರ್ ಮಾರ್ಕೆಟಿಂಗ್ ಡಿಪಾರ್ಟ್‍ಮೆಂಟ್) ವ್ಯವಸ್ಥಾಪಕ ನಿರ್ದೇಶಕ ಡಾ. ಜೆ.ಎಸ್. ಯಾದವ್ ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಇಂದು ಭೇಟಿ ಮಾಡಿ ಚರ್ಚಿಸಿದರು.
ರಾಜ್ಯದಲ್ಲಿ ಬೆಂಗಳೂರಿನ ದಾಸನಪುರ, ಮೈಸೂರು ಮತ್ತು ಕೋಲಾರಗಳಲ್ಲಿ ಈಗಾಗಲೇ ಬಯೋ ಸಿಎನ್‍ಜಿ ಪ್ಲಾಂಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಅವರು ಡಾ. ಜೆ.ಎಸ್. ಯಾದವ್ ಅವರ ಗಮನಕ್ಕೆ ತಂದರು.
ತರಕಾರಿ ಮತ್ತಿತರ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ಉತ್ಪಾದನೆ ಮಾಡುವುದರಿಂದ ಪರಿಸರಕ್ಕೆ ವಿಷಕಾರಿ ಅನಿಲ ಸೇರ್ಪಡೆಯಾಗುವುದನ್ನು ತಡೆಗಟ್ಟಬಹುದು. ಘನ ತ್ಯಾಜ್ಯ ನಿರ್ವಹಣೆ ಕಾಯ್ದೆಗೆ ಕೇಂದ್ರ ಸರ್ಕಾರ ಅಕ್ಟೋಬರ್‍ನಲ್ಲಿ ತಿದ್ದುಪಡಿ ತರಲಿದ್ದು, ಈ ಮೂಲಕ ಲಭ್ಯವಾಗುವ ನೆರವನ್ನು ಬಳಕೆ ಮಾಡಿಕೊಂಡು ಎಪಿಎಂಸಿಗಳಲ್ಲಿ ಬಯೋ ಗ್ಯಾಸ್ ಪ್ಲಾಂಟ್‍ಗಳನ್ನು ನಿರ್ಮಾಣ ಮಾಡುವುದು ಸೂಕ್ತ ಎಂದು ಡಾ. ಜೆ.ಎಸ್. ಯಾದವ್ ಸಲಹೆ ಮಾಡಿದರು.
ಪ್ರತಿದಿನ 50 ಟನ್ ಉತ್ಪಾದನೆ ಮಾಡಿದರೆ ಮಾತ್ರ ಈ ಯೋಜನೆ ಲಾಭದಾಯಕವಾಗಲಿದೆ. ಇದು ಲಾಭದಾಯಕ ಎಂದಾಗ ಮಾತ್ರ ಖಾಸಗಿಯವರೂ ಬಯೋ ಗ್ಯಾಸ್ ಪ್ಲಾಂಟ್ ನಿರ್ಮಿಸಲು ಮುಂದೆ ಬರುತ್ತಾರೆ. ರಾಜ್ಯದ ಯಾವ ಯಾವ ಎಪಿಎಂಸಿಗಳಲ್ಲಿ ಪ್ರತಿದಿನ ಎಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಎಲ್ಲೆಲ್ಲಿ ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಿದರೆ ಲಾಭದಾಯಕ ಎಂಬುದನ್ನು ಗುರುತಿಸಿ ಯೋಜನೆ ರೂಪಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಯಿತು.
ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಬೆಂಗಳೂರು, ಮೈಸೂರು ಮತ್ತು ಕೋಲಾರಗಳಲ್ಲಿ ಸ್ಥಾಪನೆ ಮಾಡುವುದು ಸೂಕ್ತ ಎಂಬ ಸಲಹೆ ವ್ಯಕ್ತವಾಯಿತು.
ಹಣ್ಣುಗಳ ಪ್ಯಾಕಿಂಗ್ ಮಾಡಲು ಹಾನಿಕಾರಕ ರಾಸಾಯನಿಕ ಬಳಕೆ, ಸೇಬು ಸೇರಿದಂತೆ ಇತರ ಹಲವು ಹಣ್ಣುಗಳ ಬ್ರಾಂಡ್‍ಗಳನ್ನು ಗುರುತಿಸಲು ಅವುಗಳ ಮೇಲೆ ಸ್ಟಿಕ್ಕರ್‍ಗಳನ್ನು ಹಚ್ಚುವುದು ಅಪಾಯಕಾರಿ. ಇಂತಹ ಹಣ್ಣುಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಬಗ್ಗೆ ಕೂಡ ಚರ್ಚೆ ನಡೆಯಿತು.
ಆಹಾರ ಸುರಕ್ಷತೆ ಕಾಯ್ದೆಯಲ್ಲಿ ಈ ಎಲ್ಲ ಅಂಶಗಳು ಬರುತ್ತವೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಂಶಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ನಿಯಮಗಳನ್ನು ಪಾಲನೆ ಮಾಡಲು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಕಲ್ಲಂಗಡಿ, ಬೆಂಡೆಕಾಯಿ, ಕ್ಯಾರೆಟ್ ಸೇರಿದಂತೆ ಕೆಲವು ಹಣ್ಣು, ತರಕಾರಿಗಳಿಗೆ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಗರಿಷ್ಠ ಪ್ರಮಾಣದಲ್ಲಿ ಕೀಟನಾಶಕ ಬಳಸುವುದೂ ಕೂಡ ಅಪಾಯಕಾರಿ. ಆದ್ದರಿಂದ ತರಕಾರಿಗೆ ಕೃತಕ ಬಣ್ಣ ಬಳಕೆ ಮತ್ತು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಕೀಟನಾಶಕ ಬಳಸುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲವಾದರೆ ಭವಿಷ್ಯದ ದಿನಗಳಲ್ಲಿ ಆರೋಗ್ಯದ ಮೇಲೆ ಗರಿಷ್ಠ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಲಿದೆ ಎನ್ನುವ ಅಂಶಗಳ ಬಗ್ಗೆ ಕೂಡ ಚರ್ಚೆ ನಡೆಯಿತು.
ತೋಟಗಾರಿಕೆ, ಪುμÉ್ಪೂೀದ್ಯಮ ಮತ್ತು ಹೈನುಗಾರಿಕೆ ಉದ್ಯಮದಲ್ಲಿ ಕರ್ನಾಟಕ ರಾಜ್ಯ ಮಂಚೂಣಿಯಲ್ಲಿದೆ ಎಂದು ಸಚಿವ ಶಿವಾನಂದ ಪಾಟೀಲ ಅವರು ಜೆ.ಎಸ್.ಯಾದವ್ ಅವರ ಗಮನಕ್ಕೆ ತಂದರು.
ಈ ಸಮಯದಲ್ಲಿ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಅಧೀಕ್ಷಕ ಅಭಿಯಂತರ ರಘುನಂದನ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ರವಿಪ್ರಕಾಶ್, ಕರ್ನಾಟಕ ಕೃಷಿ ಮಾರಾಟ ಮಹಾ ಮಂಡಳದ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ್ ಪಾಟೀಲ ಉಪಸ್ಥಿತರಿದ್ದರು. .
ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ-2025 ರ ಕಾರ್ಯಕ್ರಮ
ಬೆಂಗಳೂರು ಜೂ. 23 -
ಇಂಧನ ಇಲಾಖೆಯ ವಿದ್ಯುತ್ ಪರಿವೀಕ್ಷಣಾಲಯ ವತಿಯಿಂದ “ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ-2025" ರ ಕಾರ್ಯಕ್ರಮವನ್ನು 2025ರ ಜೂನ್ 26 ರಿಂದ ಜುಲೈ 2 ರವರೆಗೆ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಓರಾಯನ್ ಮಾಲ್ ನಲ್ಲಿನ ಆಂಫಿಥಿಯೇಟರ್‍ನಲ್ಲಿ ಜೂನ್ 26 ರಂದು ಬೆಳಗ್ಗೆ 08.30 ಗಂಟೆಗೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ ಅವರು ನೆರವೇರಿಸಲಿದ್ದು, ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ತೀತಿರಾ.ಎನ್.ಅಪ್ಪಚ್ಚು.. ಹಾಗೂ ಇಂಧನ ಇಲಾಖೆಯ ಗಣ್ಯರು ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮಕ್ಕೆ ಕೈಗಾರಿಕೆಗಳ ಪ್ರತಿನಿಧಿಗಳು, ಇಂಧನ ಇಲಾಖೆ ಹಾಗೂ ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರ ಪ್ರವಾಸ
ಬೆಂಗಳೂರು ಜೂ. 23-
ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ ಅವರು ಜೂನ್ 26 ರಂದು ಪ್ರವಾಸ ಕೈಗೊಂಡು ಜೂನ್ 27 ರಂದು ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿರುವ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅಂದೇ ಕೇಂದ್ರಸ್ಥಾನಕ್ಕೆ ವಾಪಸ್ಸಾಗಲಿದ್ದಾರೆ ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ಕಾಲೇಜುಗಳಲ್ಲಿನ 310 ಪ್ರಾಂಶುಪಾಲರ ನೇಮಕಾತಿ ಪ್ರಕಟ
ಬೆಂಗಳೂರು, ಜೂ. 23 -
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 310 ಪ್ರಾಂಶುಪಾಲರು (ಯು.ಜಿ.) ಹುದ್ದೆಗಳನ್ನು ನೇರ ನೇಮಕಾತಿ ನಿಯಮಗಳಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಜೂನ್ 18 ರಂದು ಕಾಲೇಜು ಶಿಕ್ಷಣ ಇಲಾಖೆಯ ವೆಬ್‍ಸೈಟ್ https://dce.karnataka.gov.in ನಲ್ಲಿ ಪ್ರಕಟಿಸಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 310 ಪ್ರಾಂಶುಪಾಲರು (ಯು.ಜಿ.) ಹುದ್ದೆಗಳನ್ನು ನೇರ ನೇಮಕಾತಿ ನಿಯಮಗಳಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿತ್ತು.
ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳು ವಿದ್ಯಾರ್ಹತೆ, ಮೀಸಲಾತಿಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ದಾಖಲೆಗಳನ್ನು ಪ್ರಾಂಶುಪಾಲರ ನೇಮಕಾತಿ ವಿಶೇಷ ನಿಯಮಗಳು, 2020ರ ನಿಯಮ 3(1)ರಲ್ಲಿ ನಿಗದಿಪಡಿಸಲಾದ ಶೈಕ್ಷಣಿಕ ಅರ್ಹತೆಯನ್ವಯ ಪರಿಶೀಲಿಸಿ, ಶೈಕ್ಷಣಿಕವಾಗಿ ಅರ್ಹರಾಗಿರುವ ಹಾಗೂ ಅನರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಇಲಾಖೆಯ ವೆಬ್‍ಸೈಟ್ https://dce.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ.
ಸಂಬಂಧಪಟ್ಟ ಅಭ್ಯರ್ಥಿಗಳು ಸದರಿ ಪಟ್ಟಿಗಳಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಅಂತಹ ಆಕ್ಷೇಪಣೆಗಳನ್ನು ಇ-ಮೇಲ್ ವಿಳಾಸ dceprincipals@gmail.com ಮೂಲಕ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಕಾಲೇಜು ಮತ್ತು ತಾಂತ್ರಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ಶಿಕ್ಷಣ
ಬೆಂಗಳೂರು, ಜೂ. 23 -
ಕೆನರಾ ಬ್ಯಾಂಕ್ ಸಂಸ್ಥೆಯು ನಿರುದ್ಯೋಗಿ ಯುವಕ-ಯುವತಿಯರಿಗೆ ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಶನ್ ಹಾಗೂ ಹಾರ್ಡ್ ವೇರ್ ಮತ್ತು ನೆಟ್‍ವರ್ಕ್ ಅಡ್ಮಿನಿಸ್ಟ್ರೇಶನ್, ಮೈಕ್ರೋಸಾಫ್ಟ್ ಆಫೀಸ್, ಟ್ಯಾಲಿ, ಡಿಟಿಪಿ (ಕೋರೆಲ್ ಡ್ರಾ, ಪೋಟೀಶಾಪ್) ಸ್ಪೋಕನ್ ಇಂಗ್ಲೀಷ್, ವ್ಯಕ್ತಿತ್ವ ವಿಕಸನ, ಬ್ಯಾಂಕಿಂಗ್ ಉತ್ಪನ್ನಗಳ ಪರಿಚಯ ಸೇರಿದಂತೆ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಶಿಕ್ಷಣವನ್ನು ನೀಡಲಿದೆ. ಕಂಪ್ಯೂಟರ್ ತರಬೇತಿಯು 2025 ಜುಲೈ 1 ರಂದು ಪ್ರಾರಂಭವಾಗಲಿದೆ.
ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಪಿಯುಸಿ, ಡಿಗ್ರಿ, ಡಿಪೆÇ್ಲಮಾ ಹೊಂದಿದವವರಿಗೆ ಆದ್ಯತೆ ನೀಡಲಾಗುವುದು ಮತ್ತು ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ / ವರ್ಗದವರಿಗೆ ಗರಿಷ್ಟ ವಯಸ್ಸು 35 ನಿಗದಿಪಡಿಸಲಾಗಿದೆ.
ತರಬೇತಿಗೆ ಸೇರ ಬಯಸುವವರು ನೇರ ಸಂದರ್ಶನಕ್ಕೆ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು. ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನಗಳು ನಡೆಯಲ್ಲಿದ್ದು, ಅರ್ಜಿ ಫಾರಂಗಳನ್ನು ಪರೀಕ್ಷೆಗೆ ಹಾಜರಾಗುವ ಸಂದರ್ಭದಲ್ಲಿ ಪಡೆಯಬಹುದಾಗಿದೆ. ತರಬೇತಿ ಅವಧಿಯು ಮೂರು ತಿಂಗಳಾಗಿದ್ದು, ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ನಡೆಯಲಿದೆ. ತರಬೇತಿ ಅವಧಿಯಲ್ಲಿ ಮಧ್ಯಾಹ್ನದ ಉಪಹಾರ ನೀಡಲಾಗವುದು.
ಹೆಚ್ಚಿನ ವಿವರಗಳಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ, ಚಿತ್ರಾಪುರ ಭವನ, 3 ನೇ ಮಹಡಿ, 15 ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು-560055 ಹಾಗೂ ದೂರವಾಣಿ ಸಂಖ್ಯೆ: 080-23440036 / 23463580 / 94485 38107 ಅಥವಾ ಇ-ಮೇಲ್ blorecbiit@gmail.com, cbiitblr@canarabank.com ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೃಷಿ ಇಲಾಖೆಯಿಂದ ಸಾವಯವ ಮತ್ತು ಜೈವಿಕ ಗೊಬ್ಬರಗಳ ಗುಣಮಟ್ಟ ನಿಯಂತ್ರಣ
ಬೆಂಗಳೂರು, ಜೂ. 23 -
"ಗುಣಮಟ್ಟ ನಿಯಂತ್ರಣ ಕಾರ್ಯಕ್ರಮದ" ಅಡಿಯಲ್ಲಿ ರೈತರಿಗೆ ಗುಣಮಟ್ಟದ ಸಾವಯವ/ ಅಜೈವಿಕ ರಸಗೊಬ್ಬರಗಳ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು, ಕೃಷಿ ಇಲಾಖೆಯ ರಸಗೊಬ್ಬರ ನಿರೀಕ್ಷಕರು ಇವುಗಳ ಉತ್ಪಾದನಾ ಘಟಕಗಳು / ಮಾರಾಟ ಕೇಂದ್ರಗಳು / ಗೋದಾಮುಗಳಿಗೆ ನಿಯಮಿತ/ದಿಢೀರ್ ತಪಾಸಣೆಗಳನ್ನು ನಡೆಸುತ್ತಿದ್ದಾರೆ ಮತ್ತು ಎಫ್.ಸಿ.ಒ. 1985 ರ ಷರತ್ತು 29 ರಲ್ಲಿ ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ಮಾದರಿಗಳನ್ನು ತೆಗೆದುಕೊಂಡು ಅವನ್ನು ಅಧಿಸೂಚಿತ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ.
ಸಾವಯವ ಮತ್ತು ಜೈವಿಕ ಗೊಬ್ಬರಗಳ ಗುಣಮಟ್ಟವನ್ನು ವಿಶ್ಲೇಷಿಸಲು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿಯಲ್ಲಿ ಕೃಷಿ ಇಲಾಖೆಯ ಅಡಿಯಲ್ಲಿ ಮೂರು ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಕ್ಷೇತ್ರ ಮಟ್ಟದ ಅಧಿಕಾರಿಗಳು ಸಾವಯವ ಮತ್ತು ಜೈವಿಕ ಗೊಬ್ಬರಗಳ ಮಾದರಿಗಳನ್ನು ತೆಗೆದುಕೊಂಡು ಈ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತದೆ. 2024-25ರ ಅವಧಿಯಲ್ಲಿ 893 ಮಾದರಿಗಳನ್ನು ತೆಗೆದುಕೊಂಡು ಗುಣಮಟ್ಟಕ್ಕಾಗಿ ವಿಶ್ಲೇಷಿಸಲಾಗಿದೆ. 13 ಮಾದರಿಗಳು ಪ್ರಮಾಣಿತವಲ್ಲದ್ದು ಎಂದು ಕಂಡುಬಂದಿದೆ ಮತ್ತು ರಸಗೊಬ್ಬರ ನಿಯಂತ್ರಣ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.
ಮೆ. ಗ್ರೋ ಭೂಮಿ ಬಯೋ ಆರ್ಗಾನಿಕ್ ಫರ್ಟಿಲೈಸರ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ ಇದು ಎನ್.ಪಿ.ಕೆ ಮಿಶ್ರಣ ರಸಗೊಬ್ಬರಗಳು ಮತ್ತು ಸಾವಯವ ರಸಗೊಬ್ಬರಗಳ ತಯಾರಿಕೆಗೆ ಉತ್ಪಾದನಾ ಪರವಾನಗಿಯನ್ನು ಹೊಂದಿದೆ. ಪ್ರಸ್ತುತ, ಘಟಕವು ಸಾವಯವ ರಸಗೊಬ್ಬರಗಳಾದ ಫಾಸ್ಫೇಟ್ ಸಮೃದ್ಧ ಸಾವಯವ ಗೊಬ್ಬರ ಮತ್ತು ಮೊಲಾಸಸ್‍ನಿಂದ ಪಡೆದ ಪೆÇಟ್ಯಾಶ್ ಅನ್ನು ಮಾತ್ರ ತಯಾರಿಸುತ್ತಿದೆ. ಈ ಸಾವಯವ ರಸಗೊಬ್ಬರಗಳನ್ನು ರಸಗೊಬ್ಬರ (ಅಜೈವಿಕ, ಸಾವಯವ ಅಥವಾ ಮಿಶ್ರ) (ನಿಯಂತ್ರಣ) ಆದೇಶ, 1985 ರ ವೇಳಾಪಟ್ಟಿ IV ರ ಅಡಿಯಲ್ಲಿ ಅಧಿಸೂಚಿಸಲಾಗುತ್ತದೆ.
ನ್ಯಾಯಾಧಿಕಾರ ವ್ಯಾಪ್ತಿಯ ರಸಗೊಬ್ಬರ ನಿರೀಕ್ಷಕರು ಮೆ. ಗ್ರೋ ಭೂಮಿ ಬಯೋ ಆರ್ಗಾನಿಕ್ ಫರ್ಟಿಲೈಸರ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿಯಿಂದ ಫಾಸ್ಫೇಟ್ ಸಮೃದ್ಧ ಸಾವಯವ ಗೊಬ್ಬರ ಮತ್ತು ಮೊಲಾಸಸ್‍ನಿಂದ ಪಡೆದ ಪೆÇಟ್ಯಾಶ್ ಮಾದರಿಯನ್ನು ಪಡೆದು ವಿಶ್ಲೇಷಣೆಗಾಗಿ ಕ್ರಮವಾಗಿ ಧಾರವಾಡದ ಜೈವಿಕ ಮತ್ತು ಸಾವಯವ ರಸಗೊಬ್ಬರ ಪರೀಕ್ಷಾ ಪ್ರಯೋಗಾಲಯ ಮತ್ತು ಬೆಳಗಾವಿಯ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಫಲಿತಾಂಶಗಳಿಗಾಗಿ ಕಾಯಲಾಗುತ್ತಿದೆ. ಮಾದರಿಗಳು ಗುಣಮಟ್ಟವಾಗಿಲ್ಲ ಎಂದು ಕಂಡುಬಂದರೆ, ರಸಗೊಬ್ಬರ (ನಿಯಂತ್ರಣ) ಆದೇಶ, 1985 ಮತ್ತು ಅಗತ್ಯ ಸರಕುಗಳ ಕಾಯ್ದೆ, 1955ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
ಕೃಷಿ ಒಳಹರಿವುಗಳನ್ನು (ರಸಗೊಬ್ಬರಗಳು / ಕೀಟನಾಶಕಗಳು / ಬೀಜಗಳು) ಖರೀದಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಇಲಾಖೆಯು ರೈತರಿಗೆ ತರಬೇತಿ ನೀಡುತ್ತಿದೆ. ಉದಾಹರಣೆಗೆ ಕಡ್ಡಾಯವಾಗಿ ನಗದು ಬೇಡಿಕೆ ಮೆಮೊ/ಬಿಲ್, ಅಧಿಕೃತ ವಿತರಕರಿಂದ ಮಾತ್ರ ಖರೀದಿಸಲು, ಮಾರುಕಟ್ಟೆಯಲ್ಲಿ ಯಾವುದೇ ನಕಲಿ ರಸಗೊಬ್ಬರಗಳು ಕಂಡುಬಂದರೆ ಇಲಾಖೆಗೆ ತಿಳಿಸುವುದು.
ಇಲಾಖೆಯು ತಾಲ್ಲೂಕು/ಜಿಲ್ಲಾ ಮಟ್ಟದಲ್ಲಿ ರಸಗೊಬ್ಬರ ವಿತರಕರೊಂದಿಗೆ ನಿಯಮಿತ ಸಭೆಗಳನ್ನು ನಡೆಸುತ್ತಿದೆ. ಅಲ್ಲದೆ ಎಫ್.ಸಿ.ಒ. 1985 ರ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೦೦
ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ ಶಿಬಿರ
ಬೆಂಗಳೂರು, ಜೂ. 23 -
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ನಡೆಸಲಿರುವ ಕೆ-ಸೆಟ್ ಹಾಗೂ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸುವ ಯುಜಿಸಿ-ನೆಟ್ ಮತ್ತು ಕಿರಿಯ ಶಿಷ್ಯವೇತನ ಸಂಶೋಧನ ಸಹಾಯಕರ (ಜೆ.ಆರ್.ಎಫ್) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು ನಿರ್ಧರಿಸಿದೆ.
ಆಸಕ್ತರು 2025 ರ ಜೂನ್ 30 ರೊಳಗಾಗಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‍ಸೈಟ್ www.ksoumysuru.ac.in ಮತ್ತು ಪ್ರಾದೇಶಿಕ ನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಛೇರಿ ದೂರವಾಣಿ ಸಂಖ್ಯೆ: 080-26603664 ಹಾಗೂ 98449-65515 ಅನ್ನು ಸಂಪರ್ಕಿಸಬಹುದಾಗಿದೆ ಕರಾಮುವಿ ಕುಲಸಚಿವÀರಾದ ಪ್ರೊ. ನವೀನ್‍ಕುಮಾರ್ ಎಸ್.ಕೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಜಾರರ ಮೌಖಿಕ ಸಾಹಿತ್ಯ ಹಾಗೂ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಲು ಕಲಾವಿದರು, ಸಾಹಿತಿಗಳ ಸಹಕಾರ ಅಗತ್ಯ - ಡಾ. ಎ.ಆರ್ ಗೋವಿಂದಸ್ವಾಮಿ
ಬೆಂಗಳೂರು, ಜೂ. 23 -
ಬಂಜಾರ ಭಾಷೆ ಕನ್ನಡ ಭಾಷೆಯಷ್ಟೇ ಹಿಂದಿನ ಅಳಿಮೆಯನ್ನು ಹೊಂದಿದ್ದು ಭಾಷೆಯಲ್ಲಿ ಸಾಹಿತ್ಯ ರಚನೆಯು ಅಗತ್ಯವಾಗಿದೆ. ಬಂಜಾರರ ಮೌಖಿಕ ಸಾಹಿತ್ಯ ಹಾಗೂ ಕಲೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಗೆ ಬಂಜಾರ ಕಲಾವಿದರು, ಸಾಹಿತಿಗಳ ಸಹಕಾರ ಅಗತ್ಯವಿದೆ ಎಂದು ಬಂಜಾರ ಅಕಾಡೆಮಿ ಅಧ್ಯಕ್ಷರಾದ ಡಾ. ಎ.ಆರ್ ಗೋವಿಂದಸ್ವಾಮಿ ಹೇಳಿದರು.
ಇಂದು ʻʻಬಂಜಾರ ಅಕಾಡೆಮಿ ನಡೆ ತಾಂಡಗಳ ಕಡೆ 2025-26ʼʼ ಬಂಜಾರ ಕಲೆ, ಸಾಹಿತ್ಯ -ಸಂಸ್ಕøತಿ ಹಾಗೂ ಶಿಕ್ಷಣದ ಕುರಿತು ಜಾಗೃತಿ ಅಭಿಯಾನವನ್ನು ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಹೋಬಳಿಯ ಲೋಕನಾಯ್ಕನ ತಾಂಡದಲ್ಲಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಕಲಾವಿದರು, ಸಾಹಿತಿಗಳು ತಮ್ಮ ಮಾನವ ಸಂಪನ್ಮೂಲವನ್ನು ಅಕಾಡೆಮಿ ಜೊತೆಗೆ ಗುರುತಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಇಂದು ಬಂಜಾರರ ಸಮಗ್ರ ಅಭಿವೃದ್ಧಿಗೆ ಅಕಾಡೆಮಿ ಸಾಹಿತ್ಯ, ಸಂಸ್ಕøತಿ ಸಮಾಜಿಕ ಶಿಕ್ಷಣ ಇತರೆ ಅಭಿವೃದ್ಧಿಗೆ ಅಕಾಡೆಮಿಯು ಸರ್ವಾಂಗೀಣವಾಗಿ ಕೆಲಸ ನಿರ್ವಹಿಸುತ್ತಿದೆ. ಹೀಗಾಗಿ ಅಕಾಡೆಮಿಯು ಒಂದು ಅತ್ಯುತ್ತಮವಾದ ಸಂಸ್ಥೆಯಾಗಿದ್ದು ಇದಕ್ಕೆ ಬಂಜಾರರೆಲ್ಲರಿಗೂ ನನ್ನ ಸಂಸ್ಥೆಯೆಂದು ಪರಿಭಾವಿಸಿ ಸಹಕಾರ ನೀಡಿದರೆ ಅಕಾಡೆಮಿ ಅತ್ಯುತ್ತಮವಾಗಿ ಕೆಲಸ ಮಾಡಲು ಅನುಕೂಲವಾಗುವುದು ಎಂದರು.
ಎಲ್ಲಾ ಜಿಲ್ಲಾ ವಲಯಗಳಲ್ಲಿ ಇದೇ ರೀತಿ ನಾವು ಜಾಗೃತಿ ಕಾರ್ಯಕ್ರಮಗಳು, ಬಂಜಾರ ಸಂಸ್ಕøತಿ ಕೋಶ, ಬಂಜಾರರ ಪ್ರಮುಖರ ಸಾಮಾಜಿಕ ಸ್ವಾತಂತ್ರ್ಯ ಹೋರಾಟ ಚಿಂತಕರ 70ಕ್ಕೂ ಹೆಚ್ಚು ಕೃತಿಗಳನ್ನು ಈ ವರ್ಷ ರಚನೆ ಮಾಡುತ್ತಿದ್ದೇವೆ, ಸಾಕ್ಷ್ಯಾಚಿತ್ರ, ತರಬೇತಿ, ಸಮೇಳನ ಮಾಡುತ್ತಿದ್ದೇವೆ. ಅಂತರಾಷ್ಟ್ರೀಯ ಮಟ್ಟದ ಒಂದು ಸಮ್ಮೇಳನಕ್ಕೆ ವಿದೇಶಿ ಬಂಜಾರರಿಂದ ಮೌಖಿಕವಾಗಿ ಒಂದು ಬೇಡಿಕೆ ಬಂದಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಅಂತರಾಷ್ಟ್ರೀಯ ಬಂಜಾರ ಸಾಹಿತ್ಯ, ಸಂಸ್ಕøತಿ, ಕಲಾ ಮಹಾ ಸಮ್ಮೇಳನವನ್ನು ನಡೆಸುವ ಅಲೋಚನೆ ಇರುವುದಾಗಿ ತಿಳಿಸಿದರು.
ನಮಗೆ ಈ ವರ್ಷ ಹೆಚ್ಚಿನ ಬಜೆಟ್ ನ ಅಗತ್ಯವಿದೆ ಇತರೆ ಅಕಾಡೆಮಿಗಳಿಗೆ ಕೊಟ್ಟಿರುವ ಹಾಗೆ ನಮಗೂ ಕನಿಷ್ಠ 5 ಕೋಟಿಗಿಂತ ಹೆಚ್ಚಿನ ಬಜೆಟ್‍ನ್ನು ಆರಂಭದಲ್ಲಿ ಕೊಟ್ಟರೆ ಅಕಾಡೆಮಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯ. ಹೀಗಾಗಲೆ ಸರ್ಕಾರ ನಮಗೆ ಉತ್ತಮ ರೀತಿಯಲ್ಲಿ ಸಹಕಾರ ಕೊಡುತ್ತಿರುವುದಕ್ಕೆ ಧನ್ಯವಾದ ಎಂದು ಹೇಳಿದರು. ಹೀಗಾಗಲೆ ಎಲ್ಲಾ ಕಡೆ ಸಾಹಿತ್ಯ ಸಮ್ಮೇಳನ, ತರಬೇತಿ ಶಿಬಿರಗಳು ಕಾರ್ಯಗಾರಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ ಎಂದು ತಿಳಿಸಿದರು.
ಪ್ರೊ. ಶಿವಣ್ಣ ನಾಯಕ್ ಅವರು ಮಾತನಾಡಿ, ಅಕಾಡೆಮಿ ನಮ್ಮಂತಹ ಕುಕ್ಕುಗ್ರಾಮದಲ್ಲೂ ಬಂದು ಈ ರೀತಿಯ ಒಂದು ಮಹೋನ್ನತವಾದಂತಹ ನಮ್ಮ ಹಳ್ಳಿ ಗಾಡಿನ ಜನರನ್ನು ಸಾಹಿತ್ಯ, ಸಾಂಸ್ಕøತಿಕ ಪ್ರಬುದ್ದತೆ ಬೆಳೆಸುವುದಕ್ಕೆ ಜಾಗೃತಿ ಅರಿವು, ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಹೆಮ್ಮೆಯ ಕೆಲಸವಾಗಿದೆ ಎಂದರು.
ಸಮಾರಂಭದಲ್ಲಿ ಡಾ.ಎಂ.ನಾಗರಾಜ ನಾಯ್ಕ, ಡಾ.ಶಿವಣ್ಣ ನಾಯ್ಕ, ಶ್ರೀಮತಿ ಅನಸೂಯಮ್ಮ ಎಂ, ರಮೇಶ್ ನಾಯ್ಕ, ಶ್ಯಾಮರಾಜ್ ನಾಯ್ಕ ಸ್ವಾಮೀಜಿ, ಮರಿಯಪ್ಪ ನಾಯ್ಕ, ಗಿರಿಶ್ ನಾಯ್ಕ್ ಉಪಸ್ಥಿತರಿದ್ದರು.
ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ 33ನೇ ಯುವ ಸಂಘಟನೆ ಆಯೋಜನೆ
ಬೆಂಗಳೂರು, ಜೂ. 23 -
ಶ್ರೀ ಚಾಮರಾಜೇಂದ್ರ ಮೃಗಾಲಯವು 12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 33ನೇ ಯುವ ಸಂಘಟನೆಯನ್ನು ಆಯೋಜಿಸಲು ಉದ್ದೇಶಿಸಿದ್ದು, ಕಾರ್ಯಕ್ರಮವನ್ನು ಜುಲೈ 2025 ರಿಂದ ಜನವರಿ 2026 ರವರೆಗೆ 25 ಭಾನುವಾರಗಳಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ಗÀಂಟೆವರೆಗೆ ನಡೆಸಲಾಗುವುದು.
ಮೊದಲು ಬಂದವರಿಗೆ ಮೊದಲ ಆದ್ಯತೆ ಅಧಾರದ ಮೇಲೆ 60 ಮಂದಿ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವನ್ಯಪ್ರಾಣಿಗಳ ವೈವಿಧ್ಯತೆ, ಸಂರಕ್ಷಣೆ ಹಾಗು ಮೃಗಾಲಯ ಪರಿಸರದಲ್ಲಿ ಅವುಗಳ ನಿರ್ವಹಣೆ, ಪ್ರಾಣಿ ವರ್ತನೆ ಅಧ್ಯಯನದ ಬಗ್ಗೆ ಕಾಲಕಾಲಕ್ಕೆ ತರಗತಿಗಳ ಮೂಲಕ ತಿಳಿಯಪಡಿಸಲಾಗುವುದು.
ಆಸಕ್ತಿಯುಳ್ಳವರು ಜೂನ್ 25 ರಿಂದ ಜೂನ್ 28 ರವರೆಗೆ ಮೃಗಾಲಯದ ಕಛೇರಿಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಅರ್ಜಿಯನ್ನು ಕಚೇರಿಯ ವೇಳೆಯಲ್ಲಿ ಸಲ್ಲಿಸುವುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ವಯಸ್ಸಿನ ಪುರಾವೆಗಾಗಿ ಆಧಾರ್ ಕಾರ್ಡ್ ಅಥವಾ ಜನನ ಪ್ರಮಾಣ ಪತ್ರದ ನಕಲು ದಾಖಲಾತಿಗಳನ್ನು ಸಲ್ಲಿಸಬೇಕು.
ಶಿಬಿರದ ಶುಲ್ಕ ರೂ. 2,500/- ಪಾವತಿಸಬೇಕು. ಭರ್ತಿ ಮಾಡಿದ ಅರ್ಜಿಯನ್ನು 2025 ನೇ ಜೂನ್ 28ರ ಸಂಜೆ 4:00 ಗಂಟೆಯೊಳಗಾಗಿ ಸಲ್ಲಿಸುವುದು. ಶಿಬಿರಕ್ಕೆ ಹಾಜರಾಗಲು ಆಯ್ಕೆಯಾದ ಸದಸ್ಯರಿಗೆ ಇ-ಮೇಲ್ ಮೂಲಕ ಸೂಚನೆ ಮತ್ತು ಹೆಚ್ಚಿನ ವಿವರಗಳನ್ನು ಕಳುಹಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಮೃಗಾಲಯದ ವೆಬ್‍ಸೈಟ್ www.mysuruzoo.info ಅಥವಾ ಇ-ಮೇಲ್ edumysore99@gmail.com ಗೆ ಸಂಪರ್ಕಿಸಬಹುದು ಎಂದು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.