ರಾಜ್ಯ ಪ್ರವಾಸ ಬೈಕ್ ರ‍್ಯಾಲಿ ಮೂಲಕ ಕೊರಟಗೆರೆ ಕ್ಷೇತ್ರದಲ್ಲಿ "ಜನರೊಂದಿಗೆ ಜನತಾದಳ"

Tumkur Koratagere:

Font size:

ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಇದು ಕಾರ್ಯಕರ್ತರ ಪಕ್ಷ ತುಮಕೂರು ಜಿಲ್ಲೆಯಲ್ಲಿ ಮೂರನೇ ದಿನ ಮುಂದುವರೆದ ಜನರೊಂದಿಗೆ ಜನತಾದಳ ಪ್ರವಾಸ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಸ್ಯೆಗಳನ್ನು ಆಲಿಸುತ್ತಿರುವ ನಿಖಿಲ್ ಕುಮಾರಸ್ವಾಮಿ |ಹೊಸ ಬದಲಾವಣೆ ಬೇಕೆಂದರೆ ನಾವು ಬಿದಿಗಿಳಿದು ಹೋರಾಟ ಮಾಡುತ್ತೇನೆ-ನಿಖಿಲ್

ತುಮಕೂರು, ಕೊರಟಗೆರೆ : ರಾಜ್ಯದ ಜನ ಕಾಂಗ್ರೆಸ್ ಆಡಳಿತದಿಂದ ರೋಸಿಹೋಗಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ, ಕುಮಾರಣ್ಣನವರ ನಾಯಕತ್ವದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು ನಿಮ್ಮ ಜೊತೆ ನಾನಿದ್ದೇನೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಜನರೊಂದಿಗೆ ಜನತಾದಳ ಇಂದು ಮೂರನೇ ದಿನದ ರಾಜ್ಯ ಪ್ರವಾಸ ಬೈಕ್ ರ್ಯಾಲಿ ಮೂಲಕ ಕೊರಟಗೆರೆ ಕ್ಷೇತ್ರದಲ್ಲಿ "ಜನರೊಂದಿಗೆ ಜನತಾದಳ" ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.

ಸುಧಾಕರ್ ಲಾಲ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರಲು ಪೂರಕವಾಗಿ ಕೆಲಸ ಮಾಡಿ ಮಾಡುತ್ತಿದ್ದೇವೆ. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಕಾರ್ಯಕರ್ತರ ಪಕ್ಷ ಜಿಲ್ಲಾ ಮಟ್ಟದಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಜತೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.

ಪ್ರವಾಸ ಅವಧಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲ್ಲೂಕಿನ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಸಾಮಾನ್ಯ ಜನರನ್ನ ಭೇಟಿ ಮಾಡಳಿದ್ದೇನೆ. ಪಕ್ಷದ ಬಗ್ಗೆ
ಕಾರ್ಯಕರ್ತರು ಹೊಂದಿರುವ ಭಾವನೆಯನ್ನು ಅರ್ಥಮಾಡಿಕೊಳ್ಳಳಿದ್ದೇನೆ. ಪಕ್ಷವನ್ನು ಮತ್ತೆ ತಳ ಮಟ್ಟದಿಂದ ಗಟ್ಟಿಗೊಳಿಸಲು ಏನು ಮಾಡಬೇಕೆಂದು ಜನರಿಂದ ಕೇಳಲಿದ್ದೆನೇ ಎಂದರು.

ನನ್ನ ರಾಜ್ಯ ಪ್ರವಾಸ ವೇಳೆ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ದದಲ್ಲಿನ ಸ್ಥಳೀಯ ಸಮಸ್ಯೆ ಆಲಿಸುತ್ತಿದ್ದು, ಕಾರ್ಯಕರ್ತರ ಜತೆ ಬೆರೆತು ಅದಕ್ಕೆ ಪರಿಹಾರ ಉತ್ತರವನ್ನು ಕಂಡುಕೊಳ್ಳಲು ಇದೊಂದು ಉತ್ತಮ ವೇದಿಕೆ ಎಂದು ತಿಳಿಸಿದರು.

58 ದಿನಗಳ ಕಾಲ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ.ನಮ್ಮ ಪಕ್ಷವನ್ನು ಹಲವು ದಶಕಗಳಿಂದ ಕಟ್ಟಿ ಬೆಳೆಸಿದ ದೇವೇಗೌಡರ ಕಾಲಘಟ್ಟದ ಸಾಕಷ್ಟು ಹಿರಿಯ ನಾಯಕರಿದ್ದೀರಾ.ನಿಮ್ಮ ಸಂಪರ್ಕ ಬಯಸಿ ಪ್ರವಾಸ ಕೈಗೊಂಡಿದ್ದೇನೆ. ಜಿಲ್ಲೆಯಲ್ಲಿ ದೇವೇಗೌಡರ ಹೋರಾಟಕ್ಕೆ ಜೊತೆಯಾಗಿ ನಿಂತು ಬೆಂಬಲ ನೀಡಿದ್ದೀರಾ.

ಜನತಾದಳ ಪಕ್ಷ ಮುಗಿದೆ ಹೋಯ್ತು ಅಂತ ವಿರೋಧ ಪಕ್ಷದವರು ಹೇಳುತ್ತಿದ್ದಾರೆ.. ಆದರೆ ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಕ್ಕಿಂತ ಹೆಚ್ಚಿನ ವೋಟಿಂಗ್ ಪರ್ಸೆಂಟೇಜ್ ಅನ್ನ ಜೆಡಿಎಸ್ ಪಕ್ಷಕ್ಕೆ ಕೊಟ್ಟಿದ್ದೀರ ನಿಮ್ಮ ಋಣ ತೀರಿಸಲು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದರು.

ಡಿಸೆಂಬರ್ ನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಬರಲಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷದಲ್ಲಿ ಬೇರು ಇದ್ದಂತೆ.ಪಕ್ಷ ಎಲ್ಲಾದಕ್ಕೂ ತಯಾರಿ ಮಾಡಿಕೊಳ್ಳಬೇಕು. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ನಾನು ಮೂರು ಬಾರಿ ಚುನಾವಣೆಯಲ್ಲಿ ಪೆಟ್ಟು ತಿಂದಿರಬಹುದು. ನಾನು ಒಳ್ಳೆ ಉದ್ದೇಶದಿಂದ ನಾನು ಪ್ರವಾಸಕ್ಕೆ ಬಂದಿದ್ದೇನೆ ನಿಮ್ಮ ಪ್ರೀತಿ ಸಹಕಾರ ಇರಲಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ದೇವೇಗೌಡರ ಮಾರ್ಗರ್ದಶದಲ್ಲಿ ಪಕ್ಷವನ್ನು ಬೇರು ಮಟ್ಟದಲ್ಲಿ ಪ್ರಾದೇಶಕ ಪಕ್ಷವನ್ನು ಕಟ್ಟಿಬೆಳೆಸಬೇಕು ಅಂತ ಹೊರಟ್ಟಿದ್ದೇನೆ.ರಾಜ್ಯದ ಸಮಸ್ಯೆಗಳನ್ನ ಅರ್ಥೈಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು‌ ಹೊರಟ್ಟಿದ್ದೇನೆ. ಕಾಂಗ್ರೆಸ್ ಪಕ್ಷದ ಎರಡು ವರ್ಷದ ಆಡಳಿತ ನೋಡಿದ್ದೀರಾ.? ಹೆಚ್ಚು ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷ
ಜನಪರ ಕಾರ್ಯಕ್ರಮ ಕೊಡಬಹುದಿತ್ತು. ಆದರೆ ಸಾಲದ ಹೊರೆ ಹೊರಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕುಮಾರಸಣ್ಣ ಅವರು ಮುಖ್ಯಮಂತ್ರಿ ಆಗಿದ್ದ 14 ತಿಂಗಳಲ್ಲಿ 25 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದ್ದಾರೆ.ಈ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಪರಿಸ್ಥಿತಿ ಏನಾಗಿದೆ.25 ಸಾವಿರ ಇದ್ದ ಟಿಸಿ ಬೆಲೆ 3-4 ಲಕ್ಷಕ್ಕೆ ಏರಿದೆ. ಪ್ರಾದೇಶಿಕ ಪಕ್ಷದ ಅಸ್ತಿತ್ವ ಕಾಪಾಡುವ ಜವಬ್ದಾರಿ ನಿಮ್ಮ ಮೇಲಿದೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದರು.

ಹಿರಿಯರು, ಯುವಕರು ಹಾಗೂ ತಾಯಂದಿರು ಜೆಡಿಎಸ್ ಪಕ್ಷವನ್ನು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಲಿಷ್ಠವಾಗಿ ಸಂಘಟಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸದಸ್ಯತ್ವ ನೋಂದಣಿ ಮಾಡಿಸಬೇಕು. ನನ್ನ ಮನವಿಗೆ ಸ್ಪಂದಿಸಿದ ಕಾರ್ಯಕರ್ತ ಬಂಧುಗಳು ಬೂತ್ ಮಟ್ಟದಲ್ಲಿ ತಂಡಗಳನ್ನು ಕಟ್ಟಿಕೊಂಡು ಪಕ್ಷ ಸಂಘಟಿಸುವ ಭರವಸೆ ನೀಡಿದರು

ನನ್ನ ಪ್ರೀತಿಯ ಯುವಕರು, ಹಿರಿಯರ ಮಾರ್ಗದರ್ಶನ ಪಡೆಯಬೇಕು ಆಗ ಮಾತ್ರ ನಮಗೆ ಅಧಿಕಾರ ದೊರೆಯಲು ಸಾಧ್ಯ, ನಾವೆಲ್ಲರೂ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದು ಯುವ ಸಮುದಾಯಕ್ಕೆ ಅವರು ಕರೆನೀಡಿದರು.

ಇದೇ ಸಂದರ್ಭದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯರರಾದ ತಿಪ್ಪೇಸ್ವಾಮಿ ರವರು, ಮಾಜಿ ಶಾಸಕರಾದ ಪಿ.ಆರ್ ಸುಧಾಕರ್ ಲಾಲ್ ರವರು, ಜಿಲ್ಲಾಧ್ಯಕ್ಷರಾದ ಆರ್.ಸಿ ಆಂಜಿನಪ್ಪ ರವರು, ಮಹಿಳಾ ಅಧ್ಯಕ್ಷರಾದ ಶ್ರೀಮತಿ ಸುಮಾ ರವರು, ತಾಲ್ಲೂಕು ಅಧ್ಯಕ್ಷರಾದ ಕಾಮರಾಜ್ ರವರು, ಕಾರ್ಯಧ್ಯಕ್ಷರಾದ ಲಕ್ಮೀಶ್ ರವರು, ಮುಖಂಡರಾದ ಶಿವರಾಮೇಗೌಡರು ಸೇರಿದಂತೆ ಪ್ರಮುಖ ಮುಖಂಡರು ಹಾಗೂ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Prev Post ಅಧ್ಯಯನಕ್ಕಾಗಿ ಮಲೇಶಿಯಾಕ್ಕೆ ತೆರಳಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್
Next Post ಗೃಹಲಕ್ಷ್ಮಿ ಯೋಜನೆಯಲ್ಲಿ ಪರಿಷ್ಕರಣೆ ಇಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್