ಅಧ್ಯಯನಕ್ಕಾಗಿ ಮಲೇಶಿಯಾಕ್ಕೆ ತೆರಳಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್

Bangalore:

Font size:

ಅಧ್ಯಯನಕ್ಕಾಗಿ ಮಲೇಶಿಯಾಕ್ಕೆ ತೆರಳಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್

*ಅಧ್ಯಯನಕ್ಕಾಗಿ ಮಲೇಶಿಯಾಕ್ಕೆ ತೆರಳಿರುವ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್*

ಮಲೇಶಿಯಾ ದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿರುವ, ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರು ಮತ್ತು ಕಾಮನ್‌ವೆಲ್ತ್ ಸಂಸದೀಯ ಸಂಘ, ಕರ್ನಾಟಕ ಶಾಖೆಯ ಜಂಟಿ ಅಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು‌ ಇಂದು‌ ಜನ ಪ್ರತಿನಿಧಿಗಳ ಸಭೆ (ದಿವಾನ್ ರಖ್ಯತ್)ನ ಸಭಾಧ್ಯಕ್ಷರು ಮತ್ತು ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್, ಮಲೇಶಿಯಾದ ಜಂಟಿ ಅಧ್ಯಕ್ಷರಾದ ಡಾ.ಜೋಹರಿ ಬಿನ್ ಅಬ್ದುಲ್ ಅವರನ್ನು ಕೌಲಾಲಾಂಪುರದಲ್ಲಿರುವ ಸಂಸತ್ ಭವನದಲ್ಲಿ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ಸಂಸದೀಯ ವ್ಯವಹಾರಗಳು ಹಾಗೂ ಪ್ರಜಾಪ್ರಭುತ್ವ ತತ್ವಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿದರು. ಅಲ್ಲದೆ ಭವಿಷ್ಯದಲ್ಲಿ ಕರ್ನಾಟಕ ಹಾಗೂ ಮಲೇಶಿಯಾದ ರಾಜಕೀಯ, ಸಂಸದೀಯ ವ್ಯವಹಾರಗಳು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಕಾಯ್ದುಕೊಳ್ಳುವ ಬಗ್ಗೆ ಸಹ ಚರ್ಚಿಸಿದರು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಇತರೆ ಅಧಿಕಾರಿಗಳು ಹಾಜರಿದ್ದರು.

Prev Post ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ನೇತೃತ್ವದಲ್ಲಿ ಸ್ವೀಡನ್ ಪ್ರವಾಸ ಮೈಸೂರಿನಲ್ಲಿನ ಸೀಲ್ಸ್‌ ತಯಾರಿಕಾ ಘಟಕದ ಸಾಮರ್ಥ್ಯ ದುಪ್ಪಟ್ಟು: ಎಸ್‌ಕೆಎಫ್‌
Next Post ರಾಜ್ಯ ಪ್ರವಾಸ ಬೈಕ್ ರ‍್ಯಾಲಿ ಮೂಲಕ ಕೊರಟಗೆರೆ ಕ್ಷೇತ್ರದಲ್ಲಿ "ಜನರೊಂದಿಗೆ ಜನತಾದಳ"