ಚಿನ್ನಸ್ವಾಮಿ ಸ್ಟೇಡಿಯಂ ಪಾಕಿಸ್ತಾನದಲ್ಲಿಲ್ಲ, ಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ

Banglore:

Font size:

ಇದು ನಿಮ್ಮ ರಾಜ್ಯ, ನಿಮ್ಮ ನಗರ, ನಿಮ್ಮ ಜನರು ಅತಿಥಿಯಂತೆ ವರ್ತಿಸುವುದನ್ನು ನಿಲ್ಲಿಸಿ, ಫೋಟೋ-ಶೋ ‌ಗಳಿಗಾಗಿ ನಿಮ್ಮನ್ನ ನೇಮಿಸಿಲ್ಲ ಎಂದು ನಿಖಿಲ್ ಕಿಡಿ

ಬೆಂಗಳೂರು: ಕಾಲ್ತುಳಿತ ಆಗಿರುವುದು ವಿಧಾನಸೌಧದ ಮುಂದೆ ಅಲ್ಲ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು; ಚಿನ್ನಸ್ವಾಮಿ ಸ್ಟೇಡಿಯಂ ಪಾಕಿಸ್ತಾನದಲ್ಲಿಲ್ಲ, ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿದೆ. ಅದು ಪಾಕಿಸ್ತಾನವಲ್ಲ. ಇದು ನಿಮ್ಮ ರಾಜ್ಯ, ನಿಮ್ಮ ನಗರ, ನಿಮ್ಮ ಜನರು ಎಂದು ಸಿಎಂ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ.

ಆರ್‌ಸಿಬಿಯ ಗೆಲುವಿಗಾಗಿ ಎರಡು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು, ಒಂದು ವಿಐಪಿಗಳಿಗಾಗಿ ವಿಧಾನಸೌಧದಲ್ಲಿ, ಇನ್ನೊಂದು ಜನಸಾಮಾನ್ಯರಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೆ ಹೊರತು ಜನಸಾಮಾನ್ಯರನಲ್ಲ ಎಂದು ವಾಗ್ದಾಳಿ ನಡೆಸಿದರು.

11 ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದಾಗ, ಸಚಿವರ ಕುಟುಂಬಗಳು ಸೆಲ್ಫಿ ತೆಗೆದುಕೊಳ್ಳುವದರಲ್ಲಿ ನಿರತರಾಗಿದ್ದರು. ಆದರೂ ಕೂಡ! ಮುಖ್ಯಮಂತ್ರಿಗಳ ಪ್ರತಿಕ್ರಿಯೆ? "ಅದು ನಮ್ಮ ಕಾರ್ಯಕ್ರಮವಾಗಿರಲಿಲ್ಲ." ಸಿಎಂ ಹೇಳಿಕೆಯನ್ನು ಖಂಡಿಸಿದ್ದಾರೆ.

ಜನರ ಜೀವಗಳನ್ನು ರಕ್ಷಿಸಲು ನಿಮ್ಮನ್ನು ನೇಮಿಸಲಾಗಿದೆ. ಆದರೆ ನೀವು ಮಾತ್ರ ಜನರ ಜೀವಗಳನ್ನು ರಕ್ಷಿಸಲು ವಿಫಲರಾಗಿದ್ದಿರಿ ಎಂದು ಅವರು ಟೀಕಿಸಿದ್ದಾರೆ.

Prev Post ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ: ಸಮೀಕ್ಷೆ ಮರುಗಣತಿಗೆ ನಿರ್ಧಾರ: ಸಿ.ಎಂ‌ ಸಿದ್ದರಾಮಯ್ಯ
Next Post ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸ್ನಾತಕೋತ್ತರ ಮಹಿಳೆಯರ ವಿದ್ಯಾರ್ಥಿ ನಿಲಯಕ್ಕೆ ಸಚಿವ ಜಿ . ಪರಮೇಶ್ವರ್ ಭೇಟಿ