ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಾಹುತ ಆದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿಗೆ ದೌಡಾಯಿಸಿ ಬಂದಿದ್ದು ವಿಪತ್ತು ಸಂಭವಿಸಿದ ಮಂಜನಾಡಿ ಮತ್ತು ಕೊಣಾಜೆ ಬಳಿಯ ಬೆಳ್ಳ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ
From Jayaram Udupi
ಮಂಗಳೂರು: ಮಳೆ ಸಂಬಂಧಿತ ಅನಾಹುತಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ ಐದಕ್ಕೇರಿದೆ.
ವಿದ್ಯುತ್ ಶಾಕ್ ಹೊಡೆದು ಪವರ್ ಮ್ಯಾನ್ ಬಲಿಯಾದ ಘಟನೆ
ಓಡಿನ್ಮಾಳ ಗ್ರಾಮದ ಕುಮ್ಮಂಜ ಎಂಬಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವಿಜೇಶ್ ಜೈನ್ (27) ಮೃತ ಸಹಾಯಕ ಪವರ್ ಮ್ಯಾನ್.
ಕೆಂಜಿಲ ಮನೆ ನಿವಾಸಿ ಸುಕುಮಾರ್ ಜೈನ್ ಮತ್ತು ಪೂರ್ಣಿಮಾ ದಂಪತಿಯ ಎರಡನೇ ಪುತ್ರರಾಗಿರುವ ಇವರು
ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ ಮಳೆಯ ಜೊತೆ ಕಡಲಬ್ಬರ ಹೆಚ್ಚಿದ್ದು, ಮೀನುಗಾರಿಕೆ ನಡೆಸುತ್ತಿದ್ದ ನಾಡದೋಣಿ ಮಗುಚಿ ಇಬ್ಬರು ನೀರು ಪಾಲಾಗಿದ್ದಾರೆ.
ಮಂಗಳೂರು ಕಡಲತೀರದ ತೋಟಬೆಂಗ್ರೆ ಅಳಿವೆ ಬಾಗಿಲು ಎಂಬಲ್ಲಿ ಈ ಘಟನೆ ಸಂಭವಿಸಿದೆ.
ತೋಟಬೆಂಗ್ರೆ ನಿವಾಸಿಗಳಾದ ಯಶವಂತ, ಕಮಲಾಕ್ಷ ನೀರು ಪಾಲಾದ ಮೀನುಗಾರರು.
ಕಡಲ ಅಲೆಯ ಅಬ್ಬರಕ್ಕೆ
ನಾಡದೋಣಿ ಪಲ್ಟಿಯಾಗಿದ್ದು, ಅದರ ಅವಶೇಷಗಳು ಕಡಲತೀರದಲ್ಲಿ ಬಂದು ಬಿದ್ದಿವೆ.
ದಿನೇಶ್ ಗುಂಡೂರಾವ್ ಭೆಟಿ
.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಾಹುತ ಆದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿಗೆ ದೌಡಾಯಿಸಿ ಬಂದಿದ್ದು ವಿಪತ್ತು ಸಂಭವಿಸಿದ ಮಂಜನಾಡಿ ಮತ್ತು ಕೊಣಾಜೆ ಬಳಿಯ ಬೆಳ್ಳ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ ,ಮನೆ ಕುಸಿದು ಮೃತಪಟ್ಟ ಅಜ್ಜಿ ಮತ್ತು ಮೊಮ್ಮಕ್ಕಳು ಹಾಗೂ ದೇರಳಕಟ್ಟೆಯ ಕಾನಕೆರೆಯಲ್ಲಿ ಮನೆಯ ಆವರಣ ಗೋಡೆ ಕುಸಿದು ಮೃತಪಟ್ಟ ಬಾಲಕಿಯ ಕುಟುಂಬಸ್ಥರಿಗೆ ಸಚಿವ ದಿನೇಶ್ ಗುಂಡೂರಾವ್ ಅವರು ತಲಾ ಐದು ಲಕ್ಷ ರೂ. ಪರಿಹಾರ ಧನದ ಚೆಕ್ ವಿತರಿಸಿದರು.
ಶುಕ್ರವಾರ ಸಂಜೆ ಮನೆ ಕುಸಿದು ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ದುರ್ಮರಣ ಹೊಂದಿದ ಮಂಜನಾಡಿ ಗ್ರಾಮದ ಮೊಂಟೆಪದವಿನ ಕೋಡಿ ಕೊಪ್ಪಲದ ಮನೆ ಮತ್ತು ಬೆಳ್ಳದಲ್ಲಿ ಮನೆ ಆವರಣ ಗೋಡೆ ಕುಸಿದು ಮೃತಪಟ್ಟ ಬಾಲಕಿಯ ಮನೆಗೆ ಭೇಟಿ ನೀಡಿದ ಬಳಿಕ ಸಚಿವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ಜಿಲ್ಲೆಯಲ್ಲಿ ಮಳೆಯಿಂದಾಗಿ ನೂರಾರು ಮನೆಗಳು ಜಲಾವೃತಗೊಂಡಿದೆ. ಉಳ್ಳಾಲ ಭಾಗದಲ್ಲಿ ಎರಡು ಕುಟುಂಬಗಳಲ್ಲಿ ನಾಲ್ಕು ಸಾವುಗಳು ಸಂಭವಿಸಿದೆ. ಮನೆ ಕಳೆದುಕೊಂಡವರಿಗೆ ಪುನರ್ವಸತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಮೇ ತಿಂಗಳಲ್ಲಿ ಇಂತಹ ಮಳೆ ಅನಿರೀಕ್ಷಿತ. ಮುಂಜಾಗ್ರತಾ ಕ್ರಮದ ಭಾಗವಾಗಿ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಅಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಳಿಕ ಸಚಿವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಭೇಟಿ ನೀಡಿ ಮೊಂಟೆಪದವು ಕೋಡಿ ಕೊಪ್ಪಲದಲ್ಲಿ ಮನೆ ಕುಸಿತ ಘಟನೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಬೆಳ್ಳದಲ್ಲಿ ಮೃತಪಟ್ಟ ಬಾಲಕಿ ಫಾತಿಮ ನಯೀಮ ಹೆತ್ತವರಾದ ನೌಶಾದ್‌ಗೆ ಐದು ಲಕ್ಷ ರೂ. ಪರಿಹಾರ ಧನದ ಚೆಕ್ಕನ್ನು ಸಚಿವ ಗುಂಡೂರಾವ್ ಹಸ್ತಾಂತರಿಸಿದರು. ಮಂಜನಾಡಿಯಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೂ ತಲಾ ಐದು ಲಕ್ಷ ರೂ. ಪರಿಹಾರಧನದ ಚೆಕ್ಕನ್ನ ಸಚಿವರು ವಿತರಣೆ ಮಾಡಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಂಜುನಾಥ ಭಂಡಾರಿ, ಹಾಗು ಪದ್ಮರಾಜ್ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು