ಮಂಗಳೂರು;ಮೊಂಟೆಪದವಿನಲ್ಲಿ ಗುಡ್ಡ ಜರಿದು ಮನೆ ಮೇಲೆ ಬಿದ್ದ ಪರಿಣಾಮ ಒಂದೇ‌ ಮನೆಯ ಮೂವರು ದಾರುಣವಸಾವು

Mangalore:

Font size:

ಮಂಗಳೂರು;ಮೊಂಟೆಪದವಿನಲ್ಲಿ ಗುಡ್ಡ ಜರಿದು ಮನೆ ಮೇಲೆ ಬಿದ್ದ ಪರಿಣಾಮ ಒಂದೇ‌ ಮನೆಯ ಮೂವರು ದಾರುಣವಸಾವು

FRom Jayaram Udupi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಇಪ್ಪತ್ತನಾಲ್ಕು ಗಂಟೆಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ‌ಕುಸಿತ, ಮನೆ ಗೋಡೆ ಕುಸಿತಗಳು ಸಂಭವಿಸಿವೆ.ಮೊಂಟೆಪದವಿನಲ್ಲಿ ಗುಡ್ಡ ಜರಿದು ಮನೆ ಮೇಲೆ ಬಿದ್ದ ಪರಿಣಾಮವಾಗಿ ಒಂದೇ‌ ಮನೆಯ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಈ ದುರಂತ ಸಂಭವಿಸಿದೆ.
ಅವಶೇಷಗಳಡಿಯಲ್ಲಿ ಸಿಲುಕಿದ್ದ ಅಶ್ವಿನಿಯವರ ಇಬ್ಬರು ಮಕ್ಕಳೂ ಮೃತಪಟ್ಟಿದ್ದಾರೆ. ಈ ನಡುವೆ ಅಶ್ವಿನಿಯವರನ್ನು ರಕ್ಷಿಸಲಾಗಿದೆ. ಒಂದೂವರೆ ವರ್ಷ ಪ್ರಾಯದ ಮಗು ಆಯುಷ್ ಮೃತಪಟ್ಟಿದೆ. ಕೆಲಹೊತ್ತಿನ ಮೊದಲು ಮೂರು ವರ್ಷದ ಮಗು ಆರ್ಯನ್ ಕೂಡಾ ಮೃತಪಟ್ಟಿತ್ತು.
ಶುಕ್ರವಾರ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಸಂಭವಿಸಿದ ಈ ದುರಂತದಲ್ಲಿ ಮನೆ ಮಾಲಕ ಕಾಂತಪ್ಪ ಪೂಜಾರಿಯವರ ಪತ್ನಿ ಪ್ರೇಮಾ(58) ಸ್ಥಳದಲ್ಲೇ ಮೃತಪಟ್ಟಿದ್ದರು. ಕಾಂತಪ್ಪರ ಮಗ ಸೀತಾರಾಮ ಅವರ ಪತ್ನಿ ಅಶ್ವಿನಿ ಹಾಗೂ ಅವರ ಇಬ್ಬರು ಸಣ್ಣ ಮಕ್ಕಳು ಕುಸಿದ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದರು. ಈ ಪೈಕಿ ಮೂರು ವರ್ಷದ ಮಗು ಆರ್ಯನ್ ನನ್ನು ಮಧ್ಯಾಹ್ನದ ವೇಳೆ ರಕ್ಷಣಾ ತಂಡ ಅವೇಷಗಳಡಿಯಿಂದ ಹೊರ ತೆಗೆದಿತ್ತು. ಆದರೆ ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು. ಬಳಿಕ ತಾಯಿ ಹಾಗೂ ಇನ್ನೊಂದು ಮಗು ಆಯುಷ್ ನನ್ನು ಹೊರತೆಗೆಯಲಾಗಿತ್ತು. ಆ ಮಗು ಬಳಿಕ ಮೃತಪಟ್ಟಿತ್ತು. ಅಶ್ವಿನಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಸಿದ ಮನೆಯೊಳಗೆ ಸಿಲುಕಿದ್ದ ಕಾಂತಪ್ಪ ಪೂಜಾರಿ ಹಾಗೂ ಅವರ ಪುತ್ರ ಸೀತಾರಾಮರನ್ನು ರಕ್ಷಿಸಲಾಗಿದೆ. ಕಾಂತಪ್ಪರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಾದ್ಯಂತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಉಳ್ಳಾಲದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದವರನ್ನು ದೋಣಿ ಬಳಸಿ ಸ್ಥಳಾಂತರಿಸಲಾಗಿದೆ. ನಗರದ ಪಿ.ವಿ.ಎಸ್. ವೃತ್ತದ ಬಳಿ ಕಟ್ಟಡದ ಪಾರ್ಕಿಂಗ್ ಪ್ರದೇಶಕ್ಕೆ ನೀರು ನುಗ್ಗಿದೆ. ನಗರದಲ್ಲಿ ಚರಂಡಿ ಹೂಳೆತ್ತದಿರುವುದರಿಂದ ರಸ್ತೆಗಳಲ್ಲಿ ನೀರು ನಿಂತು ಟ್ರಾನ್ಸ್ ಫಾರ್ಮರ್ ಗಳು ನೀರಿನಲ್ಲಿ ಮುಳುಗಿದ್ದು ಅಪಾಯಕಾರಿ ಸ್ಥಿತಿಯುಂಟಾಗಿತ್ತು.

Prev Post ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಎಂಎಸ್ಎಂಇ ಬೆನ್ನೆಲುಬು: ಎಂ ಬಿ ಪಾಟೀಲ
Next Post ಡಿಸಿಎಂ ಡಿಕೆಶಿ ಯವರನ್ನು ಭೇಟಿ ಮಾಡಿದ ಮಣಿವಣ್ಣನ್