PRABHAVAA.COM

ಆಡಳಿತದಲ್ಲಿ ಪಾರದರ್ಶಕತೆ ಮತ್ತು ಶೀಘ್ರ ಸೇವೆಗಾಗಿ ‘ಭಾಷಿಣಿ’ ಎಐ ತಂತ್ರಜ್ಞಾನ ಅಳವಡಿಕೆ: ಸಚಿವ ಪ್ರಿಯಾಂಕ್ ಖರ್ಗೆ

Bengaluru Urban:

Font size:

- ​ವಿಕಾಸ ಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಭಾಷಿಣಿ-ರಾಜ್ಯಂ’ ಕಾರ್ಯಾಗಾರ ಉದ್ಘಾಟನೆ

- ​ಇ-ಆಡಳಿತ ಮತ್ತು ಜನಸೇವೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಕ್ರಿಯ ಬಳಕೆ

- ​ಕನ್ನಡ ಸೇರಿದಂತೆ ದೇಶದ 22 ಭಾಷೆಗಳಲ್ಲಿ ಸುಲಭ ಸಂವಹನ ಮತ್ತು ಅನುವಾದಕ್ಕೆ ಅನುಕೂಲ

​ಬೆಂಗಳೂರು, ಅಕ್ಟೋಬರ್ 08 (ಕರ್ನಾಟಕ ವಾರ್ತೆ) :

ಜನಸಾಮಾನ್ಯರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಮತ್ತು ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರಲು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಸಾರ್ವಜನಿಕ ಸೇವೆಗಳನ್ನು ಸುಲಭಗೊಳಿಸುವ ಸಲುವಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ‘ಭಾಷಿಣಿ’ ತಂತ್ರಜ್ಞಾನ ಸಾಧನವನ್ನು (Tool) ಅಳವಡಿಸಿಕೊಳ್ಳಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ (IT/BT) ಸಚಿವರಾದ ಪ್ರಿಯಾಂಕ್ ಖರ್ಗೆ ತಿಳಿಸಿದರು.

​ಪ್ರಜಾ ಸೇವಾ ಇಲಾಖೆಯ ಇ.ಡಿ.ಸಿಎಸ್ ನಿರ್ದೇಶನಾಲಯವು ವಿಕಾಸ ಸೌಧದಲ್ಲಿ ಆಯೋಜಿಸಿದ್ದ ‘ಭಾಷಿಣಿ-ರಾಜ್ಯಂ’ ಎಂಬ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕರ್ನಾಟಕದ ಪ್ರಗತಿ ಮತ್ತು ಭಾಷಾ ವೈವಿಧ್ಯತೆ:
ಕರ್ನಾಟಕವು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ಪ್ರಸ್ತುತ ವಿಶ್ವದ 4ನೇ ಅತಿ ದೊಡ್ಡ ತಂತ್ರಜ್ಞಾನ ಕ್ಲಸ್ಟರ್ ಆಗಿ ಹೊರಹೊಮ್ಮಿದೆ. ಕೃತಕ ಬುದ್ಧಿಮತ್ತೆ (AI) ಕೌಶಲ್ಯದಲ್ಲಿ 5ನೇ ಸ್ಥಾನದಲ್ಲಿದ್ದು, ಅತ್ಯಂತ ದಕ್ಷ ಮಾನವ ಸಂಪನ್ಮೂಲವನ್ನು ಹೊಂದಿದೆ. ಭಾಷಿಣಿ ಯೋಜನೆಯನ್ನು ವೇಗವಾಗಿ ಮುನ್ನಡೆಸಲು ಕರ್ನಾಟಕ ಅತ್ಯಂತ ಸೂಕ್ತವಾದ ರಾಜ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

​"ಕರ್ನಾಟಕದಲ್ಲಿ ಪ್ರತಿ 150 ಕಿಲೋಮೀಟರ್‌ಗೆ ಭಾಷಾ ಶೈಲಿ ಬದಲಾಗುತ್ತದೆ. ಗಡಿಭಾಗಗಳಲ್ಲಿ ಮರಾಠಿ, ಉರ್ದು, ತೆಲುಗು, ತಮಿಳು, ಮಲಯಾಳಂ ಹಾಗೂ ಕರಾವಳಿಯಲ್ಲಿ ತುಳು ಮತ್ತು ಬ್ಯಾರಿ ಭಾಷೆಗಳ ಪ್ರಭಾವವಿದೆ. ಈ ಪ್ರಾದೇಶಿಕ ಭಾಷಾ ವೈವಿಧ್ಯತೆಯಿಂದಾಗಿ ಸ್ಥಳೀಯ ಮಟ್ಟದಲ್ಲಿ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ತಲುಪಿಸುವುದು ಸವಾಲಿನ ಕೆಲಸವಾಗಿದೆ. ಈ ಸವಾಲನ್ನು ಭಾಷಿಣಿ ತಂತ್ರಜ್ಞಾನದ ಮೂಲಕ ಸುಲಭವಾಗಿ ಮೆಟ್ಟಿಬಾರಬಹುದು" ಎಂದು ಹೇಳಿದರು.

​ವಾಟ್ಸಾಪ್, ಚಾಟ್‌ಬಾಟ್‌ಗಳ ಮೂಲಕ ನಾಗರಿಕ ಸೇವೆ:

ಪ್ರಸ್ತುತ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರು ದೊಡ್ಡ ಅರ್ಜಿಗಳನ್ನು ಭರ್ತಿ ಮಾಡುವ ಬದಲಿಗೆ ವಾಟ್ಸಾಪ್, ಚಾಟ್‌ಬಾಟ್‌ಗಳು, ಧ್ವನಿ ಮತ್ತು ವೀಡಿಯೊ ಸಂದೇಶಗಳ ಮೂಲಕ ದೂರು ಸಲ್ಲಿಸಲು ಬಯಸುತ್ತಿದ್ದಾರೆ. ಈ ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಭಾಷಿಣಿ ಹಾಗೂ AI ಸಾಧನಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ವಿವರಿಸಿದರು.

​ಇ-ಆಫೀಸ್‌ನಲ್ಲಿ ಭಾಷಿಣಿ ತಂತ್ರಜ್ಞಾನದ ಬಳಕೆ:

ಪ್ರಜಾ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಮಾತನಾಡಿ, "ಇ-ಆಫೀಸ್ ವ್ಯವಸ್ಥೆಯಲ್ಲಿ ಭಾಷಿಣಿ ಸಾಧನವನ್ನು ಅಳವಡಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಅಧಿಕಾರಿಗಳು ಇದನ್ನು ಸುಲಭವಾಗಿ ಬಳಸುತ್ತಿದ್ದಾರೆ. ಟೈಪ್ ಮಾಡುವ ಬದಲಿಗೆ ಧ್ವನಿಯಿಂದ ಪಠ್ಯಕ್ಕೆ ರೂಪಾಂತರಿಸಲು ಮತ್ತು ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳ ನಡುವೆ ಟಿಪ್ಪಣಿಗಳನ್ನು ತಕ್ಷಣ ಅನುವಾದಿಸಲು ಇದು ನೆರವಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ರೋಗಿಗಳ ಜೊತೆ ಮಾತನಾಡುವಾಗಲೇ ವರದಿ ಸಿದ್ಧಪಡಿಸಲು ಕೂಡ ಈ ತಂತ್ರಜ್ಞಾನ ಸಹಕಾರಿಯಾಗಲಿದೆ" ಎಂದು ತಿಳಿಸಿದರು.

​ಕಾರ್ಯಾಗಾರದಲ್ಲಿ ದೆಹಲಿಯಿಂದ ಆಗಮಿಸಿದ್ದ ಭಾಷಿಣಿ ತಂಡದ ಸಿಇಒ ಅಮಿತಾಭ್ ನಾಗ್ ಅವರು ಭಾಷಿಣಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆ (Demo) ನಡೆಸಿಕೊಟ್ಟರು.

​ಈ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಇ-ಗವರ್ನೆನ್ಸ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ವಾರ್ತಾ ಇಲಾಖೆಯ ಕಾರ್ಯದರ್ಶಿ ಮಂಜುನಾಥ್, ಟಿಸಿಎಸ್ ನಿರ್ದೇಶಕ ಹರ್ಷಲ್ ಗೋಯಲ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಮತ್ತು ಸ್ಟಾರ್ಟ್‌ಅಪ್ ಆವಿಷ್ಕಾರಕರು ಭಾಗವಹಿಸಿದ್ದರು

Comments

Leave a Comment

Prev Post ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳಿಂದ ಪುಕ್ಕಟೆ ಘೋಷಣೆ: ಬಿ.ವೈ.ವಿಜಯೇಂದ್ರ
Next Post ಮೈಸೂರು ದಸರಾ: ವೈಭವದ ಜಂಬೂ ಸವಾರಿ, ಅರಮನೆ ಬೆಳಕು ಮತ್ತು ಪೊಲೀಸ್ ಭದ್ರತೆಯೊಂದಿಗೆ ಸುರಕ್ಷಿತ ಸಂಭ್ರಮ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News