PRABHAVAA.COM

ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳಿಂದ ಪುಕ್ಕಟೆ ಘೋಷಣೆ: ಬಿ.ವೈ.ವಿಜಯೇಂದ್ರ

Bengaluru Urban:

Font size:

ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳಿಂದ ಪುಕ್ಕಟೆ ಘೋಷಣೆ: ಬಿ.ವೈ.ವಿಜಯೇಂದ್ರ

ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳಿಂದ ಪುಕ್ಕಟೆ
ಘೋಷಣೆ: ಬಿ.ವೈ.ವಿಜಯೇಂದ್ರ

ಬಾಗಲಕೋಟೆ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ಮೇಲೆಯೇ ಎಲ್ಲಾ ಆಸಕ್ತಿ ಇದೆ. ರಾಜ್ಯದ ರೈತರ ಬಗ್ಗೆ, ಅವರ ಸಂಕಷ್ಟಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು, ರಿಯಲ್ ಎಸ್ಟೇಟ್ ಬಗ್ಗೆ ಮುಖ್ಯಮಂತ್ರಿಗಳು ಪರಿಣತರು. ಕಸದಿಂದ ರಸ ತೆಗೆಯಬಲ್ಲರು. ಆದರೆ ತೀವ್ರ ಬರದಿಂದ ನೋವಿನಲ್ಲಿರುವ ರೈತರ ಬಗ್ಗೆ ಅವರ ಗಮನವೇ ಇಲ್ಲ ಎಂದು ದೂರಿದರು.

ರೈತರಿಗೆ ಭಿಕ್ಷೆ ರೀತಿ ಪರಿಹಾರ ಘೋಷಣೆ...

ಬಳ್ಳಾರಿ ಚಲೋ ನಡೆಸಿದಾಗ ನಾವು ಬರದಿಂದ ತತ್ತರಿಸಿರುವ ರೈತರ ರಕ್ಷಣೆಗೆ ರಾಜ್ಯ ಸರ್ಕಾರ ಬರಬೇಕು. ಪ್ರತಿ ಹೆಕ್ಟೇರ್‍ಗೆ 50 ಸಾವಿರ ಪರಿಹಾರ ಕೊಡಬೇಕು, 5 ಲಕ್ಷದವರೆಗೆ ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಹೈನುಗಾರಿಕೆಗೆ ಪೆÇ್ರೀತ್ಸಾಹ ನೀಡಬೇಕು ಎಂದು ಆಗ್ರಹಿಸಿದ್ದೆವು. ಬಳ್ಳಾರಿ ಚಲೋ ನಂತರ ವಿಶೇಷ ಅಧಿವೇಶನ ಕರೆದರು. ಇದರಲ್ಲಿ ಪ್ರಚಾರ ಗಿಟ್ಟಿಸಿಕೊಂಡರು. ರೈತರಿಗೆ ಭಿಕ್ಷೆ ರೀತಿ ಎರಡೂವರೆ ಸಾವಿರ ಕೊಡ್ತೇವೆ ಎಂದರು. ಆದರೆ ಅದನ್ನೂ ಕೊಡಲಿಲ್ಲ. ಕೇವಲ ಘೋಷಣೆಗೆ ಸೀಮಿತವಾಯಿತು ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಮಳೆ ಇಲ್ಲದೆ ಜನ ಮತ್ತು ಜಾನುವಾರುಗಳ ಸ್ಥಿತಿ ನೋಡಿದರೆ ದುಃಖವಾಗುತ್ತದೆ. ಕೆಲಸವಿಲ್ಲದೆ ಬೇರೆ ಕಡೆಗೆ ಜನ ಗುಳೇ ಹೋಗುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಯಾವುದರ ಕಡೆಗೂ ತಲೆಕೆಡಿಸಿಕೊಂಡಿಲ್ಲ ಎಂದು ಆಕ್ಷೇಪಿಸಿದರು.

ಹಣವಿಲ್ಲದಿದ್ದರೂ ಕೋಟಿ ಕೋಟಿ ಘೋಷಣೆ....

ಬೊಕ್ಕಸದಲ್ಲಿ ಹಣವಿಲ್ಲದಿದ್ದರೂ ಮುಖ್ಯಮಂತ್ರಿಗಳು ಕೋಟಿ ಕೋಟಿ ಯೋಜನೆ ಘೋಷಣೆ ಮಾಡುತ್ತಾರೆ. ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ಆ ಭಾಗದಲ್ಲಿ 32 ಸಾವಿರದ ಯೋಜನೆಗಳನ್ನು ಘೋಷಣೆ ಮಾಡಿದರು. ಎಲ್ಲವೂ ಪುಕ್ಕಟ್ಟೆ ಘೋಷಣೆ. ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳೇ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ. ಆದರೆ ಸಿಎಂ ಮಾತ್ರ ಹೊಸ ಹೊಸ ಘೋಷಣೆ ಮಾಡುತ್ತಲೇ ಇದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಹಣ ಇಲ್ಲ. ಆಸ್ಪತ್ರೆ ಇದ್ದರೆ ವೈದ್ಯರಿಲ್ಲ. ಶಾಲೆ ಇದ್ದರೆ ಶಿಕ್ಷಕರಿಲ್ಲದ ಸ್ಥಿತಿ ಇದೆ. ಮುಖ್ಯಮಂತ್ರಿಗಳು ಕೇವಲ ಬೆಂಗಳೂರು ಅಭಿವೃದ್ಧಿಗೆ ಸೀಮಿತವಾಗಿದ್ದಾರೆ. ಆದರೆ ಬೆಂಗಳೂರೂ ಅಭಿವೃದ್ಧಿ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ರಿಂಗ್ ರಸ್ತೆ ಯಾವುದಕ್ಕೆ....

ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವರ್ತುಲ ರಸ್ತೆ ಮಾಡಲು ಸಂಪುಟ ಸಭೆ ತೀರ್ಮಾನ ಮಾಡಿದೆ. ಇರುವ ರಸ್ತೆಗಳನ್ನೇ ಅಭಿವೃದ್ಧಿ ಮಾಡಿಲ್ಲ. ಬಾಗಲಕೋಟೆಯಲ್ಲಿ ಕೃμÁ್ಣ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ ಹತ್ತು ಸಾವಿರ ಕೋಟಿ ಕೊಡ್ತೇವೆ ಎಂದು ಹೇಳಿದ್ದರು. ಯಾವುದೇ ಪರಿಹಾರ ನೀಡಿಲ್ಲ. ಇರುವ ಯೋಜನೆಗಳನ್ನೇ ಮುಗಿಸದೆ ಹೊಸ ಯೋಜನೆ ಘೋಷಣೆ ಯಾಕೆ ಎಂದು ಕೇಳಿದರು.

ಮುಂದೆ ನಮ್ಮದೇ ಸರ್ಕಾರ...

ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಹಲವಾರು ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ನೀಡುವ ಯೋಗ್ಯತೆ ಈ ರಾಜ್ಯ ಸರ್ಕಾರಕ್ಕೆ ಇಲ್ಲ. ಏಕೆಂದರೆ ಸರ್ಕಾರದ ಬಳಿ ಹಣ ಇಲ್ಲ. ಮುಂದೆ ಎನ್‍ಡಿಎ ನೇತೃತ್ವದ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಮಾತ್ರವೇ ಇಂತಹ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದರು. ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಅಧಿಕಾರಕ್ಕೆ ಬರಲು ಯಾವ ಮಟ್ಟಕ್ಕೆ ಬೇಕಾದರೂ ಕೆಲವರು ಇಳಿಯುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಡಿಂಗ್ ಡಿಂಗ್ ಆಪರೇಷನ್ ಮಾಡಿದವರು...

ಷಡ್ಯಂತ್ರ, ಕುತಂತ್ರ, ಪಿತೂರಿ, ಸ್ಟಿಂಗ್ ಆಪರೇಷನ್, ಡಿಂಗ್ ಡಿಂಗ್ ಆಪರೇಷನ್ ಮಾಡಿಸುವ ಕೀರ್ತಿ ಈ ರಾಜ್ಯ ಚುಕ್ಕಾಣಿ ಹಿಡಿದವರಿಗೆ ಸಲ್ಲುತ್ತದೆ. ಅದನ್ನು ಯಾರು ಮಾಡುವುದು ಹೆಸರನ್ನು ಕಾಂಗ್ರೆಸ್ ಶಾಸಕರು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು. ತಮ್ಮದೇ ಪಕ್ಷದ ಶಾಸಕರು ಮತ್ತು ಸಚಿವರ ಮೇಲೆ ಸ್ಟಿಂಗ್ ಆಪರೇಷನ್, ಡಿಂಗ್ ಡಿಂಗ್ ಆಪರೇಷನ್ ಮಾಡಿ ಅಧಿಕಾರ ಪಡೆದವರು ಯಾರು ಅಂತ ಕಾಂಗ್ರೆಸ್ ಶಾಸಕರನ್ನು ಕೇಳಿದರೆ ಅವರೇ ಹೇಳುತ್ತಾರೆ. ರಮೇಶ್ ಜಾರಕಿಹೊಳಿ ಅವರ ಪ್ರಕರಣದಲ್ಲಿ ಅವರಿಗೆ ಯಾರು ರಕ್ಷಣೆ ನೀಡಿದರು, ವಾದ ಮಂಡಿದವರು ಯಾರು ಜನರಿಗೆ ಗೊತ್ತಿದೆ ಎಂದರು.

ಸಿಎಂ ಹಗಲುಗನಸು ಕಾಣಲಿ ಬಿಡಿ...

ಮತ್ತೆ ನಾನೇ ಮುಖ್ಯಮಂತ್ರಿ ಎಂದು ಡಿಕೆಶಿ ಅವರು ಹಗಲುಗನಸು ಕಾಣಲಿ. ಇದಕ್ಕೆ ನಮ್ಮ ವಿರೋಧವಿಲ್ಲ. ಈ ಸ್ಟೀಂಗ್ ಆಪರೇಷನ್, ಡಿಂಗ್ ಆಪರೇಷನ್ ಬಿಟ್ಟು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಲಿ. ಸಿಎಂ ಆಗಿದ್ದಾಗ ಕೆಲಸ ಮಾಡಿದ್ದನ್ನು ಜನರು ನೋಡುತ್ತಾರೆ. ಮೂರು ಸಾವಿರ ಮಠದ ಬಗ್ಗೆ ಸಿಎಂ ದುರಂಕಾರದಿಂದ ಮಾತನಾಡಿದ್ದಾರೆ. ಅಧಿಕಾರಕ್ಕೆ ಬರಲು ಎಲ್ಲಾ ಸಮಾಜದ ಜನ, ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದೇ ರೀತಿ ಅಭಿವೃದ್ಧಿ ಸಹ ಮಾಡಬೇಕು. ಅಹಂಕಾರದಿಂದ ಮಾತನಾಡಿ ಅಧಿಕಾರಕ್ಕೆ ಬರುವ ಭ್ರಮೆ ಒಳ್ಳೆಯದಲ್ಲ. ದಿನೇ ದಿನೇ ಮತದಾರರು ಬಿಜೆಪಿ ಕಡೆ ವಿಶ್ವಾಸ ತೋರಿಸುತ್ತಿದ್ದಾರೆ ಎಂದರು.

Comments

Leave a Comment

Prev Post ‘ಹನಿ ಟ್ರ್ಯಾಪ್’ ಬಗ್ಗೆ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ನಿಲ್ಲಿಸಿ, ಸತ್ಯವನ್ನು ಬಹಿರಂಗಪಡಿಸಿ: ಆರ್. ಅಶೋಕ್
Next Post ಆಡಳಿತದಲ್ಲಿ ಪಾರದರ್ಶಕತೆ ಮತ್ತು ಶೀಘ್ರ ಸೇವೆಗಾಗಿ ‘ಭಾಷಿಣಿ’ ಎಐ ತಂತ್ರಜ್ಞಾನ ಅಳವಡಿಕೆ: ಸಚಿವ ಪ್ರಿಯಾಂಕ್ ಖರ್ಗೆ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News