PRABHAVAA.COM

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ

Bengaluru Urban:

Font size:

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗಾಗಿ ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚನೆ

ಬೆಂಗಳೂರು.ಅ.8- ಕರ್ನಾಟಕ ಸರ್ಕಾರವು 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ಎರಡು ಪ್ರಮುಖ ಸಮಿತಿಗಳನ್ನು ರಚಿಸಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಆಯ್ಕೆ ಸಮಿತಿ ಕಾರ್ಯನಿರ್ವಹಿಸಲಿದ್ದು, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್, ಇಂಧನ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಕೆ.ಜೆ. ಜಾರ್ಜ್, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಶಿವರಾಜ ಎಸ್. ತಂಗಡಗಿ, ಲೋಕೋಪಯೋಗಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ಶ್ರೀ ಎಂ.ಬಿ. ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಸದಸ್ಯ ಕಾರ್ಯದರ್ಶಿಯಾಗಿ ಈ ಸಮಿತಿಯಲ್ಲಿ ಸೇರಿದ್ದಾರೆ.

ಇದರ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ಸಲಹಾ ಸಮಿತಿಯನ್ನೂ ರಚಿಸಲಾಗಿದೆ. ಈ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅಧ್ಯಕ್ಷರಾಗಿ, ಸರ್ಕಾರದ ಕಾರ್ಯದರ್ಶಿ ಸದಸ್ಯರಾಗಿ, ಸಮಾಜಸೇವೆಯ ಕ್ಷೇತ್ರದಿಂದ ಶ್ರೀಮತಿ ಶೈಲಜಾ ಹಿರೇಮರ್ (ಕೊಪ್ಪಳ), ಡಾ. ವೈ.ಬಿ. ಹಿಮ್ಮಡಿ (ಬೆಳಗಾವಿ), ಡಾ. ಕಾ.ವೆಂ. ಶ್ರೀನಿವಾಸಮೂರ್ತಿ (ಬೆಂಗಳೂರು), ಸಾಹಿತ್ಯ ಕ್ಷೇತ್ರದಿಂದ ಪ್ರೊ. ರಂಗಸ್ವಾಮಿ ಎಂ.ಜಿ (ಚಿತ್ರದುರ್ಗ), ಜಾನಪದ ಕ್ಷೇತ್ರದಿಂದ ಶ್ರೀ ಸಿ.ಎಂ. ನರಸಿಂಹಮೂರ್ತಿ (ಚಾಮರಾಜನಗರ) ಹಾಗೂ ಶ್ರೀ ಶರಣಪ್ಪ ವಡಗೇರಿ (ಕೊಪ್ಪಳ), ಕ್ರೀಡಾ ಕ್ಷೇತ್ರದಿಂದ ಶ್ರೀಮತಿ ಅಶ್ವಿನಿ ನಾಚಪ್ಪ (ಕೊಡಗು), ಮಾಧ್ಯಮ ಕ್ಷೇತ್ರದಿಂದ ಶ್ರೀ ಸತೀಶ್ (ರಾಮನಗರ/ಚನ್ನಪಟ್ಟಣ), ಶ್ರೀ ರವೀಂದ್ರ ಭಟ್ (ಉತ್ತರ ಕನ್ನಡ), ಶ್ರೀ ಗುರುಮೂರ್ತಿ (ಚಿಕ್ಕಮಗಳೂರು), ರಂಗಭೂಮಿ ಕ್ಷೇತ್ರದಿಂದ ಡಾ. ನಾಗೇಶ್ ಬೆಟ್ಟ ಕೋಟೆ (ಮೈಸೂರು), ಶ್ರೀ ಜೀವರ್ಗಿ ರಾಜಣ್ಯ (ಕಲಬುರಗಿ), ಲಲಿತಕಲೆ ಕ್ಷೇತ್ರದಿಂದ ಪ್ರೊ. ಪಾಂಚಾಳ (ವಿಜಯನಗರ-ಹಂಪಿ), ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದಿಂದ ಶ್ರೀ ವೈಜನಾಥ್ ಪಾಟೀಲ್ (ಬೀದರ್), ಶ್ರೀಮತಿ ವಸುಂಧರಾ ದೊರೆಸ್ವಾಮಿ (ಬೆಂಗಳೂರು), ಗಡಿನಾಡು ಕನ್ನಡಿಗರ ಪ್ರತಿನಿಧಿಯಾಗಿ ಶ್ರೀ ಕಾಸರಗೋಡು ಚಿನ್ನಾ (ಕಾಸರಗೋಡು), ನ್ಯಾಯಾಂಗ ಕ್ಷೇತ್ರದಿಂದ ಶ್ರೀ ಅಹಮ್ಮದ್ (ಬೆಂಗಳೂರು), ಕೃಷಿ-ಪರಿಸರ ಕ್ಷೇತ್ರದಿಂದ ಶ್ರೀ ಶಿವನಾಪುರ ರಮೇಶ್ (ಬೆಂಗಳೂರು ಗ್ರಾಮಾಂತರ), ಸಮಾಜಸೇವೆಯಿಂದ ಶ್ರೀ ಸುಬ್ಬರಾಜು (ಬೆಂಗಳೂರು ಗ್ರಾಮಾಂತರ), ವೈದ್ಯಕೀಯ ಕ್ಷೇತ್ರದಿಂದ ಡಾ. ರುದ್ರಪ್ರಸಾದ್ (ಬೆಂಗಳೂರು) ಹಾಗೂ ಡಾ. ಯೂಸುಫ್ ಕುಂಬ್ಳೆ (ದಕ್ಷಿಣ ಕನ್ನಡ), ಸಹಕಾರ ಕ್ಷೇತ್ರದಿಂದ ಶ್ರೀ ಶೇಖರಗೌಡ ಮಾಲಿ ಪಾಟೀಲ್ (ಕೊಪ್ಪಳ), ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಿಂದ ಶ್ರೀ ಚೇತನ್ ಕುಮಾರ್ ಜಿರಾಳೆ (ಕೊಪ್ಪಳ), ಜೊತೆಗೆ ಆಯುಕ್ತರು, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪದನಿಮಿತ್ತ ಸದಸ್ಯರಾಗಿ ಸೇರಿದ್ದಾರೆ.

ಈ ಸಮಿತಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರ ಆದೇಶಿಸಿದ್ದು, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗಿದೆ.

Comments

Leave a Comment

Prev Post ಸ್ಟಿಂಗ್ ಆಪರೇಷನ್‌ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್ ಮಾಡುವ ಚರಿತ್ರೆ ಕಾಂಗ್ರೆಸ್‌ನದ್ದು: ಬಿ.ವೈ. ವಿಜಯೇಂದ್ರ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News