ಕೆ.ಎಸ್.ಟಿ.ಡಿ.ಸಿ ಯಲ್ಲಿ ಅವ್ಯವಹಾರ – ವರ್ಕರ್ಸ್ ಯೂನಿಯನ್ ಗಂಭೀರ ಆರೋಪ"
ಕೆ.ಎಸ್.ಟಿ.ಡಿ.ಸಿ ಯಲ್ಲಿ ಅವ್ಯವಹಾರ – ವರ್ಕರ್ಸ್ ಯೂನಿಯನ್ ಗಂಭೀರ ಆರೋಪ"
ಬೆಂಗಳೂರು, ಸೆಪ್ಟೆಂಬರ್ 28 – ಕೆ.ಎಸ್.ಟಿ.ಡಿ.ಸಿ. ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದ ಹೆಚ್.ಎಸ್. ದೇವರಾಜ್ ಅವರನ್ನು ನಿಯಮಾವಳಿಗಳನ್ನು ಉಲ್ಲಂಘಿಸಿ ಬಡ್ತಿ ನೀಡಲಾಗಿದ್ದು, ಇಡೀ ಸಂಸ್ಥೆಯ ಹೋಟೆಲ್ ಹಾಗೂ ಸಾರಿಗೆ ವಿಭಾಗದಲ್ಲಿ ಅನುಭವವಿಲ್ಲದವರನ್ನು ನೇಮಿಸಿ ಹಣದ ದಂಧೆ ನಡೆಸಲಾಗುತ್ತಿದೆ. ದೇವರಾಜ್ ವಿರುದ್ಧ ಹಲವು ಆಪಾದನೆಗಳಿದ್ದರೂ, ಯಾವುದೇ ತನಿಖೆ ನಡೆಸದೆ ನಿರಂತರವಾಗಿ ಬಡ್ತಿ ನೀಡಿರುವುದು ಕಾನೂನುಬಾಹಿರ ಎಂದು ಸಂಘಟನೆಯು ಆರೋಪಿಸಿದೆ.
ಕೆ.ಎಸ್.ಟಿ.ಡಿ.ಸಿ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಜಿ.ಆರ್. ಶಿವಶಂಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ
ಸಂಸ್ಥೆಯೊಳಗಿನ ಗಂಭೀರ ಅವ್ಯವಹಾರಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.
ಸಂಘಟನೆಯು ದೇವರಾಜ್ ರವರು ಸುರೇಂದ್ರನಾಥ್ ಹಾಗೂ ಅವರ ಅಂಗ ಸಂಸ್ಥೆಗಳ ಮೂಲಕ ರಾಜ್ಯದಾದ್ಯಂತ ನೂರಾರು ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಕಳಪೆ ಮಟ್ಟದಲ್ಲಿ ನಡೆಸಿ ಸರ್ಕಾರದ ಹಣ ದುರುಪಯೋಗ ಮಾಡಿರುವುದನ್ನು ಗಂಭೀರವಾಗಿ ಎತ್ತಿಹಿಡಿದಿದೆ. ಈ ಬಗ್ಗೆ ಪ್ರವಾಸೋದ್ಯಮ ಸಚಿವರಿಗೆ ಹಲವು ಬಾರಿ ಪತ್ರ ಬರೆದಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಯೋಜನೆಗಳನ್ನು ರೂಪಿಸಿರುವುದನ್ನು ಸಂಘಟನೆಯು ಸ್ವಾಗತಿಸಿದರೂ, ಅವು ಯಶಸ್ವಿಯಾಗಲು ದೇವರಾಜ್ ಅವರನ್ನು ಕೂಡಲೇ ಕೆಲಸದಿಂದ ತೆಗೆದು ಶಿಸ್ತಿನ ಕ್ರಮ ಕೈಗೊಳ್ಳಬೇಕು, ಅನುಭವ ಹೊಂದಿರುವ ಖಾಯಂ ನೌಕರರಿಗೆ ಬಡ್ತಿ ನೀಡಬೇಕು, ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು, ಹೋಟೆಲ್ ಹಾಗೂ ಸಾರಿಗೆ ವಿಭಾಗಕ್ಕೆ ನುರಿತ ಅಧಿಕಾರಿಗಳನ್ನು ನೇಮಿಸಬೇಕು, ದೇವರಾಜ್ ನಡೆಸಿರುವ ಎಲ್ಲಾ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಸುರೇಂದ್ರನಾಥ್ ಅವರ ಅಂಗ ಸಂಸ್ಥೆಗಳ ಗುತ್ತಿಗೆಗಳನ್ನು ರದ್ದುಪಡಿಸಬೇಕು , ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.






Comments
Leave a Comment