PRABHAVAA.COM

ಕೃಷಿ ಮತ್ತು ತೋಟಗಾರಿಕಾ ನಷ್ಟವನ್ನು ತಗ್ಗಿಸಲು ಮತ್ತು ರೈತರ ಆದಾಯವನ್ನು ರಕ್ಷಿಸಲು ಕರ್ನಾಟಕ ರಾಜ್ಯದ ಹೆಜ್ಜೆ

Bengaluru Urban:

Font size:

ಕೃಷಿ ಮತ್ತು ತೋಟಗಾರಿಕಾ ನಷ್ಟವನ್ನು ತಗ್ಗಿಸಲು ಮತ್ತು ರೈತರ ಆದಾಯವನ್ನು ರಕ್ಷಿಸಲು ಕರ್ನಾಟಕ ರಾಜ್ಯದ ಹೆಜ್ಜೆ

'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್'
ಕೃಷಿ ಮತ್ತು ತೋಟಗಾರಿಕಾ ನಷ್ಟವನ್ನು ತಗ್ಗಿಸಲು ಮತ್ತು ರೈತರ ಆದಾಯವನ್ನು ರಕ್ಷಿಸಲು ಕರ್ನಾಟಕ ರಾಜ್ಯದ ಹೆಜ್ಜೆ

ಬೆಂಗಳೂರು, ಸೆ. 25 -

ರಾಜ್ಯದ ರೈತರ ಬೆಳೆಗಳ ಕಟಾವಿನ ನಂತರದ ನಷ್ಟ ಮತ್ತು ಆಹಾರ ಸಂರಕ್ಷಣೆಯ ಮೂಲಕ ವ್ಯರ್ಥವನ್ನು ತಡೆಯಲು ಹಾಗೂ ರೈತರ ಆದಾಯವನ್ನು ಹೆಚ್ಚಿಸಲು ಮಾದರಿ ಪರಿಹಾರಗಳನ್ನು ಗುರುತಿಸುವ ಗುರಿಯೊಂದಿಗೆ ಕನಾಟಕ ಸರ್ಕಾರ 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026' ನ್ನು ಹಮ್ಮಿಕೊಂಡಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026' ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕರ್ನಾಟಕ ಸರ್ಕಾರದ ನಾವೀನ್ಯತಾ ಉಪಕ್ರಮವಾದ 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026' ಮೂಲಕ ಆರು ನಾವೀನ್ಯತಾ ಪರಿಹಾರಗಳನ್ನು ಅಂತಿಮಗೊಳಿಸಲಾಗಿದ್ದು, ಇವು ಮುಂದಿನ ಹಂತದಲ್ಲಿ ಸರ್ಕಾರಿ, ಮಾರುಕಟ್ಟೆ ಮತ್ತು ಹೂಡಿಕೆ ಸಂಪರ್ಕಗಳನ್ನು ಪಡೆದುಕೊಳ್ಳಲಿವೆ ಎಂದು ಹೇಳಿದರು.

ಉನ್ನತ ಮಟ್ಟದ ಸ್ಟೀರಿಂಗ್ ಸಮಿತಿಯ ಈ ಸಭೆಯಲ್ಲಿ ಭಾರತದಾದ್ಯಂತದ ಆಹಾರ ಮತ್ತು ಪಾನೀಯ, ಅಗ್ರಿಟೆಕ್, ಕೃಷಿ-ವ್ಯಾಪಾರ, ಪರಿಸರ ವಿಜ್ಞಾನ ಮತ್ತು ಲೋಕೋಪಕಾರಿ ಕ್ಷೇತ್ರಗಳ ಹಿರಿಯ ಮಾರುಕಟ್ಟೆ ನಾಯಕರು ಭಾಗವಹಿಸಿದ್ದರು.

'ಸಂಪೂರ್ಣ 2026' ವೇದಿಕೆಯ ಭಾಗವಾಗಿ ಕರ್ನಾಟಕ ಸರ್ಕಾರದ ದೂರದೃಷ್ಟಿ ಮತ್ತು ಮಾರ್ಗದರ್ಶನದಲ್ಲಿ ಈ ಉಪಕ್ರಮವನ್ನು ನಡೆಸಲಾಗುತ್ತಿದೆ. ನಾವೀನ್ಯಕಾರರು, ಉದ್ಯಮಿಗಳು, ಸಂಶೋಧಕರು, ಹೂಡಿಕೆದಾರರು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಂದೆಡೆ ಸೇರಿಸಿ ಆಹಾರ ನಷ್ಟದ ಸಮಸ್ಯೆಯನ್ನು ಬೃಹತ್ ಮಟ್ಟದಲ್ಲಿ ಪರಿಹರಿಸುವುದು ಇದರ ಆಶಯವಾಗಿದೆ.

ಕರ್ನಾಟಕ ಸರ್ಕಾರದ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಆರ್. ಗಿರೀಶ್ ಐ.ಎ.ಎಸ್. ಅವರ ಬೆಂಬಲದೊಂದಿಗೆ ಈ ವೇದಿಕೆಯನ್ನು ರೂಪಿಸಲಾಗಿದೆ. ಕರ್ನಾಟಕದ ಕೃಷಿ ಮತ್ತು ತೋಟಗಾರಿಕೆ ಮೌಲ್ಯ ಸರಪಳಿಯಲ್ಲಿ ಆಹಾರ ನಷ್ಟ ಮತ್ತು ಕಟಾವಿನ ನಂತರದ ಅಡಚಣೆಗಳನ್ನು ತಡೆಯಬಲ್ಲ ತಂತ್ರಜ್ಞಾನ ಆಧಾರಿತ ಹಾಗೂ ತಂತ್ರಜ್ಞಾನೇತರ ಪರಿಹಾರಗಳನ್ನು ಗುರುತಿಸಲು 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್' ಅನ್ನು ವಿನ್ಯಾಸಗೊಳಿಸಲಾಗಿದೆ.

ಆಹಾರ ನಷ್ಟವನ್ನು ಕೇವಲ ವ್ಯರ್ಥದ ಸಮಸ್ಯೆಯಾಗಿ ನೋಡದೆ, ರೈತ ಸಮುದಾಯದ ನೇರ ಆರ್ಥಿಕ ಸವಾಲಾಗಿ ಪರಿಗಣಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸಂಪೂರ್ಣ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಈ ನಷ್ಟವನ್ನು ಕಡಿಮೆ ಮಾಡುವ ಮೂಲಕ ರೈತರ ಉತ್ಪನ್ನಗಳ ಮೌಲ್ಯವನ್ನು ಕಾಪಾಡಿಕೊಳ್ಳಬಹುದು, ರೈತರ ಆದಾಯವನ್ನು ಬಲಪಡಿಸಬಹುದು ಮತ್ತು ಕೃಷಿ-ತೋಟಗಾರಿಕಾ ಆರ್ಥಿಕ ಲಾಭವನ್ನು ಹೆಚ್ಚಿಸಬಹುದಾಗಿದೆ.

ಥಿಂಕ್ ಥ್ರೂ ಕನ್ಸಲ್ಟಿಂಗ್ ಸಂಸ್ಥಾಪಕಿ ಹಾಗೂ ಎಬಿಡಬ್ಲ್ಯುಸಿಐ ಪ್ರಧಾನ ಕಾರ್ಯದರ್ಶಿ ಡಾ. ಪರುಲ್ ಸೋನಿ ಮತ್ತು ಗೇನ್ ಭಾರತದ ದೇಶಿ ನಿರ್ದೇಶಕಿ ಡಾ. ಭುವನೇಶ್ವರಿ ಬಾಲಸುಬ್ರಮಣಿಯನ್ ಅವರು ಈ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ. ಆವಿಷ್ಕಾರಗಳನ್ನು ಗುರುತಿಸುವುದರ ಜೊತೆಗೆ ಅವುಗಳನ್ನು ಸರ್ಕಾರದ ಯೋಜನೆಗಳಲ್ಲಿ ಅಳವಡಿಕೆ, ಮಾರುಕಟ್ಟೆ ಪ್ರವೇಶ ಮತ್ತು ಹೂಡಿಕೆ ಅವಕಾಶಗಳತ್ತ ಕೊಂಡೊಯ್ಯಲು ಈ ಕಾರ್ಯಕ್ರಮವು ಒಂದು ವ್ಯವಸ್ಥಿತ ಮಾರ್ಗವನ್ನು ಒದಗಿಸುತ್ತದೆ.

ಕೃಷಿ-ಉದ್ಯಮಗಳು, ಎಫ್.ಪಿ.ಓ ಸಂಬಂಧಿತ ಉದ್ಯಮಗಳು, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು, ಇನ್ಕ್ಯುಬೇಟರ್ಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡ ವ್ಯಾಪಕ ಸಂಪರ್ಕ ಅಭಿಯಾನದ ಮೂಲಕ ಈ ಗ್ರ್ಯಾಂಡ್ ಚಾಲೆಂಜ್ ಗೆ ಒಟ್ಟು 210 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪ್ರಚಾರ ಅಭಿಯಾನವು ಸರಿಸುಮಾರು 1,062 ಹಾಗೂ 442 ಸಾಂಸ್ಥಿಕ ಸಂಸ್ಥೆಗಳನ್ನು ತಲುಪಿದ್ದು, 10 ವೆಬಿನಾರ್ ಗಳ ಮೂಲಕ 1,162 ನೋಂದಣಿಗಳು ಮತ್ತು 1,047 ಭಾಗವಹಿಸುವಿಕೆ ದಾಖಲಾಗಿದೆ.

ಸರ್ಕಾರ, ಶಿಕ್ಷಣ ಕ್ಷೇತ್ರ ಮತ್ತು ಹೂಡಿಕೆದಾರರನ್ನು ಒಳಗೊಂಡ 14 ಸದಸ್ಯರ ತಜ್ಞರ ಗುಂಪು ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಿದೆ. ಆಯ್ಕೆಯಾದ ಆರು ಪರಿಹಾರಗಳನ್ನು 'ಸಂಪೂರ್ಣ' ಪರಿಸರ ವ್ಯವಸ್ಥೆಯ ಮೂಲಕ ಮುನ್ನಡೆಸಲಾಗುತ್ತಿದ್ದು, ಕರ್ನಾಟಕದಲ್ಲಿ ಇವುಗಳಅನುಷ್ಠಾನ ಮತ್ತು ವಿಸ್ತರಣೆಗಾಗಿ ಸರ್ಕಾರಿ ಬೆಂಬಲ, ಹೂಡಿಕೆದಾರರ ಸಂಪರ್ಕ ಮತ್ತು ಮಾರುಕಟ್ಟೆ ನಂಟು ಕಲ್ಪಿಸಲು ವಿಶೇಷ ಗಮನಹರಿಸಲಾಗುತ್ತದೆ.

ಈ ನಾವೀನ್ಯತಾ ವೇದಿಕೆಯು ನೈಜ ಜಗತ್ತಿನಲ್ಲಿ ಹೇಗೆ ಅನುಷ್ಠಾನಗೊಳ್ಳಲಿದೆ ಎಂಬುದರ ಕುರಿತು ಸ್ಟೀರಿಂಗ್ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್ 2026' ಕಾರ್ಯಕ್ರಮದ ಸಮಾರೋಪ ಸಮಾರಂಭವು ಅಕ್ಟೋಬರ್ 15 ರಿಂದ 18 ರವರೆಗೆ ಬೆಂಗಳೂರಿನ ಜಿ.ಕೆ.ವಿ.ಕೆ ಕ್ಯಾಂಪಸ್ ನಲ್ಲಿ ನಡೆಯಲಿರುವ 'ಕೃಷಿಮೇಳ 2026'ರಲ್ಲಿ ಜರುಗಲಿದೆ. ಇಲ್ಲಿ ಆಯ್ಕೆಯಾದ ಪರಿಹಾರಗಳನ್ನು ಗೌರವಿಸಲಾಗುವುದು ಮತ್ತು ಸರ್ಕಾರಿ, ಮಾರುಕಟ್ಟೆ ಹಾಗೂ ಬಂಡವಾಳ ಕ್ಷೇತ್ರದ ಪ್ರಮುಖರೊಂದಿಗೆ ಸಂಪರ್ಕ ಕಲ್ಪಿಸಲಾಗುತ್ತದೆ.

ಸಂಪೂರ್ಣ 2026ರ ಕುರಿತು: ಸಂಪೂರ್ಣ 2026 ಎಂಬುದು ಕರ್ನಾಟಕ ಸರ್ಕಾರದ ಬೆಂಬಲದೊಂದಿಗೆ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಆಶ್ರಯದಲ್ಲಿ, GAIN ನ್ಯೂಟ್ರಿಷನ್ ಕನೆಕ್ಟ್, ಥಿಂಕ್ ಥ್ರೂ ಕನ್ಸಲ್ಟಿಂಗ್ ಮತ್ತು ABWCI ಸಹಯೋಗದೊಂದಿಗೆ ರೂಪುಗೊಂಡ ಬಹು-ಕ್ಷೇತ್ರದ ವೇದಿಕೆಯಾಗಿದೆ. ಇದು ಕೃಷಿ ಮತ್ತು ತೋಟಗಾರಿಕಾ ಮೌಲ್ಯ ಸರಪಳಿಯಲ್ಲಿ ನಾವೀನ್ಯತಾ ಪರಿಹಾರಗಳನ್ನು ವೇಗವಾಗಿ ಗುರುತಿಸಲು, ಅಳವಡಿಸಿಕೊಳ್ಳಲು ಮತ್ತು ವಿಸ್ತರಿಸಲು ಸಹಾಯ ಮಾಡುತ್ತದೆ.

ಕೃಷಿ ಮತ್ತು ತೋಟಗಾರಿಕಾ ಆಹಾರ ನಷ್ಟವನ್ನು ಕಡಿಮೆ ಮಾಡುವ, ರೈತರ ಆದಾಯವನ್ನು ರಕ್ಷಿಸುವ ಹಾಗೂ ಹವಾಮಾನ-ಸ್ಥಿತಿಸ್ಥಾಪಕ ಆಹಾರ ವ್ಯವಸ್ಥೆಗಳಿಗೆ ಕೊಡುಗೆ ನೀಡುವ ಪರಿಹಾರಗಳ ಮೇಲೆ 'ಸಂಪೂರ್ಣ' ವೇದಿಕೆಯು ಗಮನ ಕೇಂದ್ರೀಕರಿಸುತ್ತದೆ. 'ಸಂಪೂರ್ಣ ಗ್ರ್ಯಾಂಡ್ ಚಾಲೆಂಜ್' ನಂತಹ ಉಪಕ್ರಮಗಳ ಮೂಲಕ, ಕಟಾವಿನ ನಂತರದ ಅಡಚಣೆಗಳಿಂದ ರೈತ ಸಮುದಾಯದ ಆದಾಯ ನಷ್ಟವಾಗುವುದನ್ನು ತಡೆಗಟ್ಟಿ, ಹೆಚ್ಚಿನ ಮೌಲ್ಯವನ್ನು ಉಳಿಸಿಕೊಳ್ಳಲು ಈ ವೇದಿಕೆ ಸಹಾಯ ಮಾಡುತ್ತದೆ.

ಈ ಉಪಕ್ರಮಕ್ಕೆ ಎಂಎಂ ಆ್ಯಕ್ಟಿವ್ ಸೈ-ಟೆಕ್ ಕಮ್ಯುನಿಕೇಷನ್ಸ್ ಮತ್ತು ಕೃಷಿ ಕಲ್ಪ ಫೌಂಡೇಶನ್ ಸಹಯೋಗಿ ಪಾಲುದಾರರಾಗಿ ಬೆಂಬಲ ನೀಡುತ್ತಿವೆ.

Comments

Leave a Comment

Prev Post ರಾಜ್ಯ ಸರ್ಕಾರಕ್ಕೆ ಹೃದಯ ಇಲ್ಲ, ಸಿಎಂ ರಿಯಲ್ ಎಸ್ಟೇಟ್ ಏಜೆಂಟ್ ರೀತಿ ಮಾತನಾಡ್ತಿದ್ದಾರೆ - ನಿಖಿಲ್ ವಾಗ್ದಾಳಿ
Next Post ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ನೋಟೀಸ್

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News