PRABHAVAA.COM

ಸಿಂಗಪುರದ ಕೈಗಾರಿಕಾ ಸಚಿವೆ ಗಾನ್ ಸಿಯೌ ಹುವಾಂಗ್ ಜತೆ ಎಂ.ಬಿ.ಪಾಟೀಲ ಚರ್ಚೆ

Bengaluru Urban:

Font size:

ಕ್ಯಾಪಿಟಲ್ಯಾಂಡ್, ಎಸ್ ಟಿ ಟಿ ಜಿಡಿಸಿ ಕಂಪನಿಗಳಿಂದ ಕರ್ನಾಟಕದಲ್ಲಿ ವಿಸ್ತರಣೆಗೆ ಆಸಕ್ತಿ

ಸಿಂಗಪುರದ ಕೈಗಾರಿಕಾ ಸಚಿವೆ ಗಾನ್ ಸಿಯೌ ಹುವಾಂಗ್ ಜತೆ ಎಂ.ಬಿ.ಪಾಟೀಲ ಚರ್ಚೆ

ಕ್ಯಾಪಿಟಲ್ಯಾಂಡ್, ಎಸ್ ಟಿ ಟಿ ಜಿಡಿಸಿ ಕಂಪನಿಗಳಿಂದ ಕರ್ನಾಟಕದಲ್ಲಿ ವಿಸ್ತರಣೆಗೆ ಆಸಕ್ತಿ

ಬೆಂಗಳೂರು: ಬೆಂಗಳೂರಿನ ಇಂಟರ್ನ್ಯಾಷನಲ್ ಟೆಕ್ ಪಾರ್ಕ್ ನಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿ ಹೂಡಿಕೆಯಲ್ಲಿ ನಿರ್ಮಿಸುತ್ತಿರುವ 42 ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ನ ಜತೆಗೆ, ರಾಜ್ಯದಲ್ಲಿ ತನ್ನ ಡೇಟಾ ಸೆಂಟರ್ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸಲು ಕ್ಯಾಪಿಟಲ್ಯಾಂಡ್ ಇನ್ವೆಸ್ಟ್ಮೆಂಟ್ ಆಸಕ್ತಿ ಹೊಂದಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಶುಕ್ರವಾರ ತಿಳಿಸಿದ್ದಾರೆ.

ರಾಜ್ಯದ ಉದ್ಯಮ ವಲಯಕ್ಕೆ ಬಂಡವಾಳ ಹೂಡಿಕೆ ಸೆಳೆಯಲು ಸಿಂಗಪುರ ಪ್ರವಾಸದಲ್ಲಿರುವ ಸಚಿವರು, ಪ್ರಮುಖ ಡೇಟಾ ಸೆಂಟರ್ ವೇದಿಕೆಯಾದ ಎಸ್ ಟಿ ಟೆಲಿಮೀಡಿಯಾ ಗ್ಲೋಬಲ್ ಡೇಟಾ ಸೆಂಟರ್ಸ್ (ಎಸ್ ಟಿ ಟಿ ಜಿಡಿಸಿ) ರಾಜ್ಯದಲ್ಲಿ ತನ್ನ ಡೇಟಾ ಸೆಂಟರ್ಗಳ ಅಸ್ತಿತ್ವವನ್ನು ಮತ್ತಷ್ಟು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದೆ ಎಂದೂ ತಿಳಿಸಿದ್ದಾರೆ.

ಹಲವು ಕಂಪನಿಗಳೊಂದಿಗೆ ನಡೆಸಿದ ಮಾತುಕತೆಗಳ ಬಳಿಕ ಮಾಧ್ಯಮ ಪ್ರಕಟಣೆ ನೀಡಿರುವ ಪಾಟೀಲ ಅವರು, ಭಾರತದಲ್ಲಿ ಗಣನೀಯ ಅಸ್ತಿತ್ವ ಹೊಂದಿರುವ. ಎಸ್ ಟಿ ಟಿ ಜಿಡಿಸಿ ಭಾರತದ 10 ನಗರಗಳಲ್ಲಿ 34 ಡೇಟಾ ಸೆಂಟರ್ಗಳನ್ನು ನಿರ್ವಹಿಸುತ್ತಿದ್ದು, 613 ಮೆಗಾವ್ಯಾಟ್ಗೂ ಅಧಿಕ ಐಟಿ ಸಾಮರ್ಥ್ಯ ಹೊಂದಿದೆ. ಈ ಪೈಕಿ ಮೂರು ಡೇಟಾ ಸೆಂಟರ್ಗಳು ಬೆಂಗಳೂರಿನಲ್ಲಿವೆ. ದೇವನಹಳ್ಳಿಯಲ್ಲಿರುವ ಕೆಐಎಡಿಬಿ ಜಾಗದಲ್ಲಿ 100 ಮೆಗಾವ್ಯಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಕ್ಯಾಂಪಸ್ ಅಭಿವೃದ್ಧಿಪಡಿಸಲು ಕಂಪನಿಯು ಸುಮಾರು 5 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಮತ್ತು ಸಿಂಗಪುರ ನಡುವೆ ವೈಮಾಂತರಿಕ್ಷ, ರಕ್ಷಣೆ, ಸೆಮಿಕಂಡಕ್ಟರ್, ವಿಮಾನ ನಿರ್ವಹಣೆ ಮತ್ತು ದುರಸ್ತಿ (ಎಂ ಆರ್ ಓ) ಸೇರಿದಂತೆ ಇತರ ಆಧುನಿಕ ಉದ್ಯಮ ವಲಯಗಳಲ್ಲಿ ಹೆಚ್ಚಿನ ಸಹಭಾಗಿತ್ವಕ್ಕೆ ಸಾಕಷ್ಟು ಅವಕಾಶಗಳಿದ್ದು, ಈ ಅವಕಾಶಗಳ ಕುರಿತು ಸಿಂಗಪುರದ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ಗಾನ್ ಸಿಯೌ ಹುವಾಂಗ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ವಿವರಿಸಿದ್ದಾರೆ.

ಈ ನಿಟ್ಟಿನಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂ ಮತ್ತು ಬೆಂಗಳೂರಿನಲ್ಲಿರುವ ಸಿಂಗಪುರ ಎಂಟರ್ಪ್ರೈಸ್ ಸೆಂಟರ್ ಮೂಲಕ ಮುಂದಿನ ಪ್ರಗತಿಯನ್ನು ಸಾಧಿಸಲಾಗುವುದು. ಇದೇ ವೇಳೆ, ಮುಂದಿನ ವರ್ಷ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶ 2027ರಲ್ಲಿ ಸಹಭಾಗಿ ರಾಷ್ಟ್ರವಾಗಿ ಪಾಲ್ಗೊಳ್ಳುವಂತೆ ಸಿಂಗಪುರ ಸರ್ಕಾರವನ್ನು ಆಹ್ವಾನಿಸಲಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ತಯಾರಿಕಾ ಘಟಕ ಹೊಂದಿರುವ ಟಿವಿಎಸ್ ಮೋಟಾರ್ ಕಂಪನಿಗೆ ತಯಾರಿಕೆ, ವಿದ್ಯುತ್ ವಾಹನ, ಅಡ್ವಾನ್ಸ್ಡ್ ಆಟೋಮೋಟಿವ್ ತಂತ್ರಜ್ಞಾನ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವಂತೆ ಕರ್ನಾಟಕ ಸರ್ಕಾರ ಉತ್ತೇಜಿಸಿದೆ ಎಂದು ಪಾಟೀಲ ಹೇಳಿದ್ದಾರೆ.

ಕ್ಯಾಪಿಟಲ್ಯಾಂಡ್ ಇನ್ವೆಸ್ಟ್ಮೆಂಟ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇಂಡಿಯಾ ಪ್ರೈವೇಟ್ ಫಂಡ್ಸ್ ವಿಭಾಗದ ಮುಖ್ಯಸ್ಥ ಹಾರ್ದಿಕ್ ಜೆಸೋಟ, ಕ್ಯಾಪಿಟಲ್ಯಾಂಡ್ ಇಂಡಿಯಾ ಟ್ರಸ್ಟ್ನ ಹೂಡಿಕೆ ವಿಭಾಗದ ಮುಖ್ಯಸ್ಥ ರೋಹಿತ್ ಭಂಡಾರಿ, ಎಸ್ ಟಿ ಟೆಲಿಮೀಡಿಯಾ ಗ್ಲೋಬಲ್ ಡೇಟಾ ಸೆಂಟರ್ಸ್ನ ಇಂಡಿಯಾ ಹೂಡಿಕೆ ವಿಭಾಗದ ಮುಖ್ಯಸ್ಥೆ ರಿತು ಮೆಹ್ಲಾವತ್ ಹಾಗೂ ಹಿರಿಯ ಹೂಡಿಕೆ ವ್ಯವಸ್ಥಾಪಕ ಯುಜೀನ್ ಲಿಮ್ ಮತ್ತು ಟಿವಿಎಸ್ ಮೋಟಾರ್ ಕಂಪನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ಅವರು ಮಾತುಕತೆಯಲ್ಲಿ ಭಾಗವಹಿಸಿದ್ದರು.

ರಾಜ್ಯ ಸರ್ಕಾರದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಇತರ ಅಧಿಕಾರಿಗಳು ಇದ್ದರು.

Comments

Leave a Comment

Prev Post ಪೌರಕಾರ್ಮಿಕರ ಭತ್ಯೆ ಹೆಚ್ಚಳ, ಉಪಹಾರ ಭತ್ಯೆಯನ್ನು 35ರಿಂದ 70 ರೂ.ಗೆ ಏರಿಸಿ ಶೀಘ್ರವೇ ಆದೇಶ: ಸಿಎಂ ಡಿ ಕೆ ಶಿವಕುಮಾರ್
Next Post ರಾಜ್ಯ ಸರ್ಕಾರಕ್ಕೆ ಹೃದಯ ಇಲ್ಲ, ಸಿಎಂ ರಿಯಲ್ ಎಸ್ಟೇಟ್ ಏಜೆಂಟ್ ರೀತಿ ಮಾತನಾಡ್ತಿದ್ದಾರೆ - ನಿಖಿಲ್ ವಾಗ್ದಾಳಿ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಇನ್ನೆರಡು ತಿಂಗಳಲ್ಲಿ ಕಳೆದೆರಡು ಸಾಲಿನ ಉದ್ಯೋಗಿನಿ‌ ಯೋಜನೆಯ ಸಹಾಯ ಧನ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಸಚಿವರ ಉತ್ತರ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News