PRABHAVAA.COM

ವಿಶ್ವ ಪ್ರವಾಸೋದ್ಯಮ ದಿನದಂದು ‘ಆಕ್ಟಿವ್‌ ಕರ್ನಾಟಕ’ಗೆ ಯೋಜನೆಗೆ ಚಾಲನೆ: ಸಚಿವ ಕೆ.ಜೆ. ಜಾರ್ಜ್

Bengaluru Urban:

Font size:

ವಿಶ್ವ ಪ್ರವಾಸೋದ್ಯಮ ದಿನದಂದು ‘ಆಕ್ಟಿವ್‌ ಕರ್ನಾಟಕ’ಗೆ ಯೋಜನೆಗೆ ಚಾಲನೆ: ಸಚಿವ ಕೆ.ಜೆ. ಜಾರ್ಜ್

ಬೆಂಗಳೂರು, ಸೆಪ್ಟೆಂಬರ್ 25 : ರಾಜ್ಯದ ಕ್ರೀಡಾ ಕಾರ್ಯಕ್ರಮಗಳನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಿ ಹೊಸ ಪ್ರವಾಸಿ ಅನುಭವ ಮತ್ತು ಸ್ಥಳೀಯ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ‘Active Karnataka – Run. Ride. Surf. Explore.’ ಎಂಬ ಹೊಸ ಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮ ಯೋಜನೆಗೆ ವಿಶ್ವ ಪ್ರವಾಸೋದ್ಯಮ ದಿನದಂದು ಚಾಲನೆ ನೀಡಲಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಯೋಜನೆಯ ಮೊದಲ ಹಂತವಾಗಿ ಪ್ರಮುಖ ಕ್ರೀಡಾ ಕಾರ್ಯಕ್ರಮ ಆಯೋಜಕರೊಂದಿಗೆ ಪ್ರವಾಸೋದ್ಯಮ ಇಲಾಖೆ ಒಪ್ಪಂದಕ್ಕೆ ಸಹಿ ಹಾಕಲಿದ್ದು, ರಾಜ್ಯದಲ್ಲಿ ನಡೆಯುವ ಮ್ಯಾರಥಾನ್‌, ಸೈಕ್ಲಿಂಗ್‌, ಟ್ರಯಥ್ಲಾನ್‌ ಸೇರಿದಂತೆ ಪ್ರಮುಖ endurance events ಗಳನ್ನು ಸಂಬಂಧಿತ ಪ್ರವಾಸಿ ತಾಣಗಳೊಂದಿಗೆ ಜೋಡಿಸಲು ಉದ್ದೇಶಿಸಲಾಗಿದೆ.

“ಕ್ರೀಡಾ ಕಾರ್ಯಕ್ರಮಕ್ಕೆ ಬರುವವರು ಕೇವಲ ಸ್ಪರ್ಧಾಳುಗಳಾಗಿ ಹಿಂದಿರುಗಬಾರದು. ಅವರೊಂದಿಗೆ ಬರುವ ಕುಟುಂಬ ಮತ್ತು ಸ್ನೇಹಿತರೂ ಕರ್ನಾಟಕವನ್ನು ಅನುಭವಿಸುವ ಪ್ರವಾಸಿಗರಾಗಬೇಕು. ‘Come for the Sport, Stay for Karnataka’ ಎಂಬುದು ಈ ಉಪಕ್ರಮದ ಮೂಲ ಆಶಯ,” ಎಂದು ಕೆ.ಜೆ. ಜಾರ್ಜ್ ಹೇಳಿದರು.

ಬೆಂಗಳೂರು, ಮೈಸೂರು, ಕರಾವಳಿ ಮತ್ತು ಇತರೆ ತಾಣಗಳಲ್ಲಿ ನಡೆಯುವ ಕ್ರೀಡಾ ಕಾರ್ಯಕ್ರಮಗಳೊಂದಿಗೆ 2–3 ದಿನಗಳ ಪ್ರವಾಸಿ itinerary, ವಾಸ್ತವ್ಯ, ಸ್ಥಳೀಯ ಆಹಾರ, ಪರಂಪರೆ, ಸಂಸ್ಕೃತಿ ಮತ್ತು ಪ್ರವಾಸಿ ಅನುಭವಗಳನ್ನು ಜೋಡಿಸುವ ಯೋಜನೆ ರೂಪಿಸಲಾಗುತ್ತಿದೆ.

ಮುಂದಿನ ಹಂತದಲ್ಲಿ ಸರ್ಫಿಂಗ್‌, ಕಯಾಕಿಂಗ್‌, ವಾಟರ್‌ ಸ್ಪೋರ್ಟ್ಸ್‌, ಟ್ರೇಲ್‌ ರನ್ನಿಂಗ್‌, ಸೈಕ್ಲಿಂಗ್‌ ಮತ್ತು ಇತರೆ ಸಾಹಸ ಕ್ರೀಡೆಗಳನ್ನು ಒಳಗೊಂಡ ರಾಜ್ಯವ್ಯಾಪಿ Sports & Adventure Tourism Calendar ರೂಪಿಸುವ ಉದ್ದೇಶವಿದೆ.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್ ಮಾತನಾಡಿ, “ಪ್ರತಿಯೊಂದು ಪ್ರಮುಖ ಕ್ರೀಡಾ ಕಾರ್ಯಕ್ರಮವನ್ನೂ ಅದರ destination experience ಜೊತೆ ಜೋಡಿಸುವುದು ನಮ್ಮ ಉದ್ದೇಶ. ಇದರಿಂದ ಪ್ರವಾಸಿಗರ ವಾಸ್ತವ್ಯ ಅವಧಿ ಹೆಚ್ಚಿಸುವುದರ ಜೊತೆಗೆ ಹೋಟೆಲ್‌, ಹೋಂಸ್ಟೇ, ಸ್ಥಳೀಯ ಸಾರಿಗೆ, ಆಹಾರ, ಮಾರ್ಗದರ್ಶಕರು ಮತ್ತು ಸಣ್ಣ ಉದ್ಯಮಗಳಿಗೆ ನೇರ ಆರ್ಥಿಕ ಅವಕಾಶ ಸೃಷ್ಟಿಸಬಹುದು,” ಎಂದು ಹೇಳಿದರು.

‘Active Karnataka’ ಅನ್ನು ಹಂತ ಹಂತವಾಗಿ ರಾಜ್ಯದ ವಿವಿಧ ತಾಣಗಳಿಗೆ ವಿಸ್ತರಿಸಿ, ಕರ್ನಾಟಕವನ್ನು ಕ್ರೀಡೆ ಮತ್ತು ಸಾಹಸ ಪ್ರವಾಸೋದ್ಯಮದ ಪ್ರಮುಖ ತಾಣವಾಗಿ ರೂಪಿಸುವುದು ಇಲಾಖೆಯ ಗುರಿಯಾಗಿದೆ.

ಮೊದಲ ಹಂತವಾಗಿ ಎನ್‌ಇಬಿ ಸ್ಪೋರ್ಟ್ಸ್‌ ಸಂಸ್ಥೆಯ ಜೊತೆಗೆ ಪ್ರವಾಸೋದ್ಯಮ ಇಲಾಖೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಸಂಸ್ಥೆಯ ಜೊತೆಗೂಡಿ ಮ್ಯಾರಥಾನ್‌, ಸೈಕ್ಲಾಥಾನ್‌ ಹಾಗೂ ಟ್ರಯಥ್ಲಾನ್‌ ಚಟುವಟಿಕೆಗಳನ್ನು ಇವರ ಜೊತೆಗೂಡಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ.

Comments

Leave a Comment

Prev Post ಆಲ್ಕೋಹಾಲಿಕ್ಸ್ ಅನಾನಿಮಸ್‌ ಬೆಂಗಳೂರು 62ನೇ ವಾರ್ಷಿಕೋತ್ಸವ ಸೆಪ್ಟೆಂಬರ್ 27ರಂದು ಆಚರಣೆ
Next Post ಅನ್ಯಕಾರ್ಯಗಳಿಗೆ ಶಿಕ್ಷಕರ ಬಳಕೆ ತಡೆಗೆ ಮಸೂದೆ - ಮಧು ಬಂಗಾರಪ್ಪ ಆಗ್ರಹ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News