ಆಲ್ಕೋಹಾಲಿಕ್ಸ್ ಅನಾನಿಮಸ್ ಬೆಂಗಳೂರು 62ನೇ ವಾರ್ಷಿಕೋತ್ಸವ ಸೆಪ್ಟೆಂಬರ್ 27ರಂದು ಕಾರ್ಮೆಲ್ ಕಾನ್ವೆಂಟ್ ಮದರ್ ವೆರೋನಿಕಾ ಹಾಲ್‌ನಲ್ಲಿ ಆಚರಣೆ
ಆಲ್ಕೋಹಾಲಿಕ್ಸ್ ಅನಾನಿಮಸ್ ಬೆಂಗಳೂರು 62ನೇ ವಾರ್ಷಿಕೋತ್ಸವ ಸೆಪ್ಟೆಂಬರ್ 27ರಂದು ಕಾರ್ಮೆಲ್ ಕಾನ್ವೆಂಟ್ ಮದರ್ ವೆರೋನಿಕಾ ಹಾಲ್‌ನಲ್ಲಿ ಆಚರಣೆ
ಬೆಂಗಳೂರು, ಸೆ. 25 –ಆಲ್ಕೋಹಾಲಿಕ್ಸ್ ಅನಾನಿಮಸ್' ಸಂಸ್ಥೆಯು 62ನೇ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ 27ರಂದು ಕಾರ್ಮೆಲ್ ಕಾನ್ವೆಂಟ್ ಮದರ್ ವೆರೋನಿಕಾ ಹಾಲ್‌ನಲ್ಲಿ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 2:00ರವರೆಗೆ ಆಚರಿಸಲಿದೆ, ಈ ಸಮಾರಂಭಕ್ಕೆ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಜೆ. ಅರುಣ್ ಚಕ್ರವರ್ತಿ (ಐಪಿಎಸ್) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆಲ್ಕೋಹಾಲಿಕ್ಸ್ ಅನಾನಿಮಸ್' ಕರ್ನಾಟಕ ಪ್ರದೇಶ ಸಮಿತಿ-1 (KAC-1) ತನ್ನ 62ನೇ ವಾರ್ಷಿಕೋತ್ಸವದ ಅಂಗವಾಗಿ .
ಸಂಸ್ಥೆಯ ಅಧ್ಯಕ್ಷರು ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರಗಳನ್ನು ನೀಡಿದರು.
ಮದ್ಯಪಾನದಿಂದ ದೂರವಿರುವುದು ಮತ್ತು ಇತರರಿಗೆ ಸಹಾಯ ಮಾಡುವುದೇ AA ಯ ಪ್ರಮುಖ ಉದ್ದೇಶ ಎಂದು ತಿಳಿಸಿದರು. ಸದಸ್ಯತ್ವಕ್ಕೆ ಯಾವುದೇ ಶುಲ್ಕ ಅಥವಾ ದೇಣಿಗೆಯ ಕಡ್ಡಾಯವಿಲ್ಲದೆ, ಸ್ವಯಂ ಆರ್ಥಿಕ ಬೆಂಬಲದ ಮೂಲಕ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದಾಗಿ ವಿವರಿಸಿದರು.
AA ಬೆಂಗಳೂರು ಒಕ್ಕೂಟವು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿದಿನ 120ಕ್ಕೂ ಹೆಚ್ಚು ಸಭೆಗಳನ್ನು ನಡೆಸುತ್ತಿದ್ದು, 3000 ಕ್ಕೂ ಹೆಚ್ಚು ಸದಸ್ಯರು ‘ಚೇತರಿಕೆಯ 12 ಹೆಜ್ಜೆಗಳ ಕಾರ್ಯಕ್ರಮ’ದ ಮೂಲಕ ಮದ್ಯಪಾನದಿಂದ ಮುಕ್ತರಾಗುತ್ತಿದ್ದಾರೆ.
ಸಂಸ್ಥೆಯು 62ನೇ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ 27ರಂದು ಕಾರ್ಮೆಲ್ ಕಾನ್ವೆಂಟ್ ಮದರ್ ವೆರೋನಿಕಾ ಹಾಲ್‌ನಲ್ಲಿ ಬೆಳಿಗ್ಗೆ 9:30ರಿಂದ ಮಧ್ಯಾಹ್ನ 2:00ರವರೆಗೆ ಆಚರಿಸಲಿದ್ದು, ಈ ಸಮಾರಂಭಕ್ಕೆ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಜೆ. ಅರುಣ್ ಚಕ್ರವರ್ತಿ (ಐಪಿಎಸ್) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
AA ಯ ಸಾರ್ವಜನಿಕ ಸಂಪರ್ಕ ನೀತಿಯು ಪ್ರಚಾರಕ್ಕಿಂತ ಆಕರ್ಷಣೆಯ ಮೇಲೆ ಆಧಾರಿತವಾಗಿದ್ದು, ಸದಸ್ಯರ ವೈಯಕ್ತಿಕ ಗುರುತಿನ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವೆಂದು ಸಂಸ್ಥೆ ಪತ್ರಿಕಾಗೋಷ್ಠಿಯಲ್ಲಿ ಒತ್ತಿ ಹೇಳಿತು. ಸದಸ್ಯರ ಭಾವಚಿತ್ರಗಳನ್ನು ತೆಗೆಯುವುದು, ವಿಡಿಯೋ ಮಾಡುವುದು ಅಥವಾ ಅವರ ಪೂರ್ಣ ಹೆಸರನ್ನು ಬಹಿರಂಗಪಡಿಸುವುದನ್ನು ತಪ್ಪಿಸಲು ಮಾಧ್ಯಮಗಳನ್ನು ವಿನಂತಿಸಲಾಯಿತು.
ಸಂಸ್ಥೆಯು, ವ್ಯಕ್ತಿಗಳಿಗಿಂತ ತತ್ವಗಳೇ ಮುಖ್ಯ ಎಂಬ ಸಂದೇಶವನ್ನು ಪುನರುಚ್ಚರಿಸಿ, ಮದ್ಯಪಾನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ತನ್ನ ಪ್ರಯತ್ನವನ್ನು ಮುಂದುವರಿಸುತ್ತಿರುವುದಾಗಿ ತಿಳಿಸಿದೆ.
ಈ ಪ್ರಯತ್ನದ ಭಾಗವಾಗಿ, 'ಅಲ್ಲೊಹಾಲಿಕ್ಸ್ ಅನಾನಿಮಸ್ ಬೆಂಗಳೂರು' ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವಿವಿಧ ಭಾಗಗಳಲ್ಲಿ ಸುಮಾರು 120 ಸಭೆಗಳನ್ನು ನಡೆಸುತ್ತಿದೆ. ಪ್ರತಿದಿನ ನಡೆಯುವ ಈ ಸಭೆಗಳು, 'ಚೇತರಿಕೆಯ 12 ಹೆಜ್ಜೆಗಳ ಕಾರ್ಯಕ್ರಮ'ದ ಮೂಲಕ ಮದ್ಯಪಾನದಿಂದ ಮುಕ್ತರಾದ ಸಾವಿರಾರು ಸದಸ್ಯರಿಗೆ ಸಹಾಯ ಮಾಡುತ್ತಿವೆ. ಪ್ರಸ್ತುತ ಬೆಂಗಳೂರಿನಲ್ಲಿ 3000 ಕ್ಕೂ ಹೆಚ್ಚು ಸದಸ್ಯರು AA ಅನ್ನು ತಮ್ಮ ಚೇತರಿಕೆಯ ಸಾಧನವಾಗಿ ಬಳಸಿಕೊಂಡು ಮದ್ಯಪಾನದಿಂದ ಹೊರಬರುತ್ತಿದ್ದಾರೆ.
ಬೆಂಗಳೂರಿನ AA ಒಕ್ಕೂಟವು 2026ಕ್ಕೆ 62 ವರ್ಷಗಳನ್ನು ಪೂರೈಸಿದೆ. ನಾವು ನಮ್ಮ 62ನೇ ವಾರ್ಷಿಕೋತ್ಸವವನ್ನು 27 ಸೆಪ್ಟೆಂಬರ್ 2025 ರಂದು ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 200 ರವರೆಗೆ, ಕಾರ್ಮೆಲ್ ಕಾನ್ವೆಂಟ್ ಮದರ್ ವೆರೋನಿಕಾ ಹಾಲ್ ಇಲ್ಲಿಆಚರಿಸಲಿದ್ದೇವೆ ಎಂದು ಅವರು ವಿವಿರಿಸಿದರು.
ಸೆಪ್ಟೆಂಬರ್ 27ರಂದು ನಡೆಯಲಿರುವ ನಮ್ಮ 62ರ್ನೇವಾರ್ಷಿಕೋತ್ಸವ ಸಮಾರಂಭಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಜೆ, ಅರುಣ್ ಚಕ್ರವರ್ತಿ (ಐಪಿಎಸ್) ಅವರು ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.









Comments
Leave a Comment