ದಾವಣಗೆರೆ ಉಪಚುನಾವಣೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಡಿಸಿಎಂ ಡಿ.ಕೆ. ಶಿವಕುಮಾರ್

Bengaluru Urban:

Font size:

ಅಡುಗೆ ಅನಿಲ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಮೋಸ ಕೇಂದ್ರ ಸರ್ಕಾರದಿಂದ ಪಿಕ್ ಪಾಕೆಟ್

ಶಿವಶಂಕರಪ್ಪ ಅವರಿಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲುವು ವಿಶ್ವಾಸ

ಬೆಂಗಳೂರು, ಮಾ.27:

"ಕಾಂಗ್ರೆಸ್ ಪಕ್ಷವೇ ನಮಗೆ ಮುಖ್ಯ. ಉಪಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು. ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕೆ ಬೆಂಬಲ ಸೂಚಿಸಲಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿ ಹಾಗೂ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

"ನಮಗೆ ನಮ್ಮ ಪಕ್ಷ, ಕಾರ್ಯಕರ್ತರು, ಸಿದ್ದಾಂತದ ಮೇಲೆ ದೊಡ್ಡ ನಂಬಿಕೆಯಿದೆ. ದಾವಣಗೆರೆ ಉಪಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಸಾದಿಕ್ ಪೈಲ್ವಾನ್ ಅವರನ್ನು ಮನವೊಲಿಸಬೇಕು ಎಂದು ಯುವ ಶಾಸಕರಾದ ರಿಜ್ವಾನ್ ಹರ್ಷದ್ ಹಾಗೂ ಸಲೀಂ ಅಹಮದ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಅವರು ಯಶಸ್ವಿಯಾಗಿ ಮನವೊಲಿಸಿದ್ದಾರೆ" ಎಂದರು.

"ನಾಮಪತ್ರ ವಾಪಸ್ ಪಡೆಯಲು ಕಡಿಮೆ ಸಮಯ ಇದ್ದ ಕಾರಣಕ್ಕೆ ಹಿಂಪಡೆಯಲು ಆಗಲಿಲ್ಲ. ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಸಾದಿಕ್ ಪೈಲ್ವಾನ್ ಅವರು ಮಾತನಾಡಿ, 'ನಾನು ಹುಟ್ಟಿದಾಗಿನಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದೇನೆ. ಪಕ್ಷ ಬೆಳೆಸಿದ್ದೇನೆ. ನನ್ನ ಮಗ ಯೂತ್ ಕಾಂಗ್ರೆಸ್ ಅಧ್ಯಕ್ಷ, ತಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ' ಎಂದು ಹೇಳಿದರು" ಎಂದರು.

"ಅವಕಾಶ ನೀಡಿ ಎಂದು ಕೇಳುವುದರಲ್ಲಿ ತಪ್ಪಿಲ್ಲ. ಏಕೆಂದರೆ ಕಳೆದ 40 ವರ್ಷದಿಂದ ಪಕ್ಷದ ಕೆಲಸ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಹಾಗೂ ಸಾದಿಕ್ ಅವರು ರಾಮ ಲಕ್ಷ್ಮಣರಂತೆ ಒಟ್ಟಿಗೆ ಕೆಲಸ ಮಾಡಿದ್ದಾರೆ" ಎಂದರು.

"ನನ್ನ ಪಕ್ಷಕ್ಕೆ ನಾನು ದ್ರೋಹ ಮಾಡುವುದಿಲ್ಲ. ಕಾಂಗ್ರೆಸ್ಸಿಗನಾಗಿ ನಾನು ಇರುತ್ತೇನೆ ಎಂದು ಸಾದಿಕ್ ಅವರು ಹೇಳಿದ್ದಾರೆ. ಎಲ್ಲಾ ನಾಯಕರ ಪರವಾಗಿ ಸಾದಿಕ್ ಅವರಿಗೆ ಅಭಿನಂದಿಸುತ್ತೇನೆ. ಪಕ್ಷ ಯಾವಾಗಲೂ ಅವರ ನಿಯತ್ತು, ಶಿಸ್ತು, ತ್ಯಾಗಕ್ಕೆ ಗೌರವ ಸಲ್ಲಿಸುತ್ತದೆ. ಅವರಿಗೆ ಮತ್ತೆ ಪಕ್ಷದ ಶಾಲು ಹಾಕುವ ಅವಶ್ಯಕತೆ ಇಲ್ಲ ಏಕೆಂದರೆ. ಅವರ ಹೃದಯದಲ್ಲಿ ಕಾಂಗ್ರೆಸ್ ಪಕ್ಷವಿದೆ" ಎಂದರು.

ಶಿವಶಂಕರಪ್ಪ ಅವರಿಗಿಂತ ಹೆಚ್ಚು ಮತಗಳ ಅಂತರದಿಂದ ಸಮರ್ಥ್ ಗೆಲುವು

ಅಲ್ಪಸಂಖ್ಯಾತರ ಮತಗಳು ವಿಭಜನೆಯಾಗುತ್ತವೆಯೇ ಎಂದು ಕೇಳಿದಾಗ, "ಯಾವುದೇ ಕಾರಣಕ್ಕೂ ವಿಭಜನೆ ಆಗುವುದಿಲ್ಲ. ಬೇರೆ ಸಮುದಾಯಗಳೂ ಆಗುವುದಿಲ್ಲ. ಶಿವಶಂಕರಪ್ಪ ಅವರಿಗಿಂತ ಹೆಚ್ಚು ಮತಗಳ ಅಂತರದಿಂದ ಅವರ ಮೊಮ್ಮಗ ಸಮರ್ಥ್ ಗೆಲ್ಲುತ್ತಾರೆ. ಅವರು ಸಾಕಿದಂತಹ ಮಗ. ಗೆಲ್ಲುತ್ತಾನೆ ಎನ್ನುವ ವಿಶ್ವಾಸವಿದೆ. ದಾವಣಗೆರೆಗೆ ಕೊಡುಗೆಯನ್ನು ಇಡೀ ರಾಜ್ಯ ನೋಡುವಂತೆ ಆ ಕುಟುಂಬ ಕೊಟ್ಟಿದೆ. ಜನ ಅವರನ್ನ ಸ್ಮರಿಸುತ್ತಿದ್ದಾರೆ"ಎಂದರು.

ಉಪಚುನಾವಣೆಯಲ್ಲಿ ಒಂದಷ್ಟು ಜನರ ಅಸಮಾಧಾನ ಹಾಗೂ ಅಮಾನತು ಬಗ್ಗೆ ಕೇಳಿದಾಗ, "ಅಮಾನತಿಗೆ ನಾನು ಸಹಿ ಹಾಕಿಲ್ಲ. ಸ್ಥಳೀಯವಾಗಿ ಇದು ಆಗಿದೆ. ನಾನು ಹಾಗೂ ಮುಖ್ಯಮಂತ್ರಿಯವರು ಇದರ ಬಗ್ಗೆ ಮಾತನಾಡಿದ್ದೇವೆ. ಈ ವಿಚಾರವನ್ನ ಬಹಿರಂಗಗೊಳಿಸುವುದಿಲ್ಲ. ಜಮೀರ್, ಜಬ್ಬಾರ್, ನಜೀರ್ ಅವರು ಎಲ್ಲಾ ಕಾಂಗ್ರೆಸ್ ನಾಯಕರು ಪಕ್ಷದ ಏನು ಹೇಳುತ್ತದೆಯೋ ಅದನ್ನು ಕೇಳುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಪೈಲ್ವಾನ್, ಉಸ್ತಾದ್ ಇರಬಹುದು ಎಲ್ಲರೂ ನಮ್ಮವರೇ. ಚುನಾವಣೆ ಸಮಯದಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಬಂದೇ ಬರುತ್ತದೆ. ನಾವು ಅದನ್ನು ನಿಭಾಯಿಸುತ್ತೇವೆ" ಎಂದರು.

ಚುನಾವಣಾ ಕಣದಿಂದ ಹಿಂದೆ ಸರಿಯಲು ಏನಾದರೂ ಡಿಮ್ಯಾಂಡ್ ಇದೆಯೇ ಎಂದು ಕೇಳಿದಾಗ, "ಯಾವ ಡಿಮ್ಯಾಂಡ್ ಕೂಡ ಇಲ್ಲ. ಕಾಂಗ್ರೆಸ್ ಪಕ್ಷ ಗೆಲ್ಲಿಸುವುದೇ ಡಿಮ್ಯಾಂಡ್" ಎಂದರು.

ಜಮೀರ್ ಮುನಿಸಿಕೊಂಡಿಲ್ಲ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ

ಸಾಧಿಕ್ ಪೈಲ್ವಾನ್ ಅವರಿಗೆ ಯಾವ ಭರವಸೆ ನೀಡಲಾಗಿದೆ ಎಂದು ಕೇಳಿದಾಗ, "ಯಾವ ಭರವಸೆಯೂ ಇಲ್ಲ. ಬಿಜೆಪಿ ಮೇಲೆ ಕುಸ್ತಿ ಆಡುತ್ತಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆ. ಕಾಂಗ್ರೆಸ್ ಪಕ್ಷ ಅವರನ್ನು ಗೆಲ್ಲಿಸುತ್ತದೆ. ಎಲ್ಲರ ಗೌರವವನ್ನು ಕಾಪಾಡುವ ಕೆಲಸವನ್ನು ನಾವು ಮಾಡುತ್ತೇವೆ" ಎಂದರು.

ಜಮೀರ್ ಅಹಮದ್ ಅವರ ಬೆಂಬಲದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು ಎನ್ನುವ ಬಗ್ಗೆ ಕೇಳಿದಾಗ, "ನಾನು ಅದನ್ನೆಲ್ಲಾ ಹೇಳುವುದಿಲ್ಲ. ನನಗೆ ಅದರ ಬಗ್ಗೆ ಗೊತ್ತಿಲ್ಲ. ನಾಮಪತ್ರ ಸಲ್ಲಿಕೆ ಮಾಡಿದ್ದರು. ಸಮಯ ಆಗಿರುವ ಕಾರಣಕ್ಕೆ ನಾಮಪತ್ರ ಹಿಂಪಡೆಯಲು ಆಗಿಲ್ಲ. ಆದರೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ" ಎಂದರು.

ಜಮೀರ್ ಮುನಿಸಿಕೊಂಡಿದ್ದಾರೆಯೇ ಎಂದು ಕೇಳಿದಾಗ, "ಯಾರು ಇದನ್ನೆಲ್ಲಾ ಹೇಳಿದ್ದು. ಕೇರಳ ಚುನಾವಣೆ ಜವಾಬ್ದಾರಿ ಇರುವ ಕಾರಣಕ್ಕೆ ಆ ಕೆಲಸದಲ್ಲಿದ್ದಾರೆ. ಅವರು ನನ್ನ ಸಂಪರ್ಕದಲ್ಲಿದ್ದಾರೆ" ಎಂದರು.

ಶಾಸಕರಿಗೆ ಒಂದು,‌ ಕುಟುಂಬ ಸದಸ್ಯರಿಗೆ ಒಂದು ಐಪಿಎಲ್ ಟಿಕೆಟ್

ಶಾಸಕರಿಗೆ ಐಪಿಎಲ್ ಟಿಕೆಟ್ ಬಗ್ಗೆ ಕೇಳಿದಾಗ, "ಕೆಎಸ್ ಸಿಎ ಅಧ್ಯಕ್ಷರನ್ನು ಇದರ ಬಗ್ಗೆ ಕರೆದು ಮಾತನಾಡಿದ್ದೇನೆ. ಈಗ ಹೆಚ್ಚುವರಿ ಟಿಕೆಟ್ ನೀಡಿ ಎಂದು ಕೇಳಿದ್ದೇವೆ. ಒಂದು ನೀಡುತ್ತಿದ್ದರು. ಎರಡು ನೀಡಿ ಎಂದು ಕೇಳಿದ್ದೇವೆ. ಅವರು ಒಪ್ಪಿಕೊಂಡು ಹೋಗಿದ್ದಾರೆ. ಆರ್ ಸಿಬಿ ಅವರಿಗೂ ಕೇಳಲಾಗಿದೆ. ಸಮಯ ಕಡಿಮೆಯಿದೆ. ಮುಂದಕ್ಕೆ ನೋಡೋಣ" ಎಂದರು.

ಶಾಸಕರ ಬೇಡಿಕೆ ಬಗ್ಗೆ ಕೇಳಿದಾಗ, "ಶಾಸಕರಿಗೆ ಹಕ್ಕಿದೆ. ಏಕೆಂದರೆ ಅವರು ಸರ್ಕಾರ ಹಾಗೂ ವ್ಯವಸ್ಥೆಯ ಭಾಗ. ಈಗ ನಾವು ಒತ್ತಡಗಳ ಮಧ್ಯೆ ಪಂದ್ಯ ಆಯೋಜನೆಗೆ ಅನುಮತಿ ನೀಡಿದ್ದೇವೆ. ನಾನು ಕೆಎಸ್ ಸಿಎ ಸದಸ್ಯನಾಗಿರಬಹುದು. ಅದು ಬೇರೆ ಪ್ರಶ್ನೆ. ನಮ್ಮ ಶಾಸಕರಿಗೆ ಪಂದ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು" ಎಂದು ತಿಳಿಸಿದರು.

"ವಿಧಾನಸಭೆ ಸ್ಪೀಕರ್ ಅವರು ನಾಲ್ಕು ಜನಕ್ಕೆ ಹೇಳಿದ್ದರು. ಆದರೆ ಈಗಾಗಲೇ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿದೆ. ಮುಂದಕ್ಕೆ ಹೆಚ್ಚುವರಿ ಟಿಕೆಟ್ ಬಗ್ಗೆ ಚರ್ಚೆ ನಡೆಸಲಾಗುವುದು" ಎಂದರು.

ತೇಜಸ್ವಿಸೂರ್ಯ ಅವರು ಇದು ಅವಶ್ಯಕತೆ ಇರಲಿಲ್ಲ ಎಂದು ಹೇಳಿರುವ ಬಗ್ಗೆ ಕೇಳಿದಾಗ, " ತೇಜಸ್ವಿ ಸೂರ್ಯ ಅವರ ಪಕ್ಷದ ನಾಯಕರಿಗೆ ಜ್ಞಾ‌ನ ನೀಡಲಿ‌. ನಮಗಲ್ಲ" ಎಂದರು.

Comments

Leave a Comment

Prev Post ದೇಶ ಹಾಗೂ ರಾಜ್ಯದ ಬೆಳವಣಿಗೆಗೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಡಿಸಿಎಂ ಡಿ.ಕೆ. ಶಿವಕುಮಾರ್
Next Post ದೇಶದ ಸಾಮಾನ್ಯ ಜನರ ಪರವಾಗಿ ಪ್ರಧಾನಿ ದೃಢನಿರ್ಧಾರ: ವಿಜಯೇಂದ್ರ ಅಭಿನಂದನೆ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News