ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

Bengaluru Urban:

Font size:

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಬೆಂಗಳೂರು,ಮಾ.11:

ಎಂ.ಎಸ್.ಎಂ.ಇ. ಗಳನ್ನು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಸಂಯೋಜಿಸಲು ಕ್ಲಸ್ಟರ್ ನೇತೃತ್ವ ವಿಧಾನ ಮಹತ್ವದ್ದಾಗಿದೆ. ರಾಜ್ಯಾದ್ಯಂತ ಕ್ಲಸ್ಟರ್ ಆಧಾರಿತ ಎಂ.ಎಸ್.ಎಂ.ಇ. ಅಭಿವೃದ್ಧಿಯನ್ನು ಬಲಪಡಿಸಲು ಸರ್ಕಾರ ಬದ್ಧತೆಯೊಂದಿಗೆ ಪ್ರಯತ್ನಿಸುತ್ತಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ (ಎಂ.ಎಸ್.ಎಂ.ಇ, ಜವಳಿ ಮತ್ತು ಸಕ್ಕರೆ) ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ದಾಸರಿ ಹೇಳಿದರು.

ಬೆಂಗಳೂರಿನ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಸಭಾಂಗಣದಲ್ಲಿ ಬಹುನಿರೀಕ್ಷಿತ ಕರ್ನಾಟಕ ಎಂ.ಎಸ್.ಎಂ.ಇ. ನೀತಿ ರಾಜ್ಯ ಮಟ್ಟದ ಪಾಲುದಾರರ ಪ್ರಾಥಮಿಕ ಸಮಾಲೋಚನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು,

ಇಂದಿನ ರಾಜ್ಯ ಮಟ್ಟದ ಸಮಾಲೋಚನೆಯೊಂದಿಗೆ ಜಿಲ್ಲಾ ಮತ್ತು ವಿಭಾಗೀಯ ಮಟ್ಟದ ಕಾರ್ಯಾಗಾರಗಳ ಸರಣಿಯು ಕೂಡ ಪ್ರಾರಂಭವಾಗಲಿವೆ. ಎಂ.ಎಸ್.ಎಂ.ಇ.ಗಳ ಪ್ರಾಯೋಗಿಕ ಒಳನೋಟಗಳನ್ನು ಹಂಚಿಕೊಳ್ಳಲು, ಸವಾಲುಗಳನ್ನು ಎದುರಿಸಲು ಮತ್ತು ನೀತಿಯನ್ನು ಬಲಪಡಿಸುವ ರಚನಾತ್ಮಕ ಪ್ರತಿಕ್ರಿಯೆಗಳನ್ನು ಕ್ರೋಢೀಕರಿಸಲು ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಎಂ ಎಸ್ ಎಂ ಇ ನಿರ್ದೇಶಕ ಡಾ. ಸತೀಶ ಬಿ. ಸಿ. ಮಾತನಾಡಿ,ಕರ್ನಾಟಕವು ಭಾರತದ ಪ್ರಮುಖ ಎಂ.ಎಸ್.ಎಂ.ಇ. ವ್ಯವಸ್ಥೆಗಳಲ್ಲಿ ಒಂದಾಗಿದ್ದು ಮತ್ತು ಎಂ.ಎಸ್.ಎಂ.ಇ.ಗಳ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು, ಸರ್ಕಾರವು ರಾಜ್ಯದಲ್ಲಿ ಎಂ.ಎಸ್.ಎಂ.ಇ. ವ್ಯವಸ್ಥೆಯನ್ನು ಬಲಪಡಿಸುವ ಕಡೆಗೆ ಸಮಗ್ರ ವಿಧಾನವನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ರಾಜ್ಯವು "ಮೊದಲ ಎಂ.ಎಸ್.ಎಂ.ಇ. ನೀತಿ"ಯನ್ನು ಪರಿಚಯಿಸಲು ಸಜ್ಜಾಗಿದೆ ಎಂದು ತಿಳಿಸಿದರು.

ಎಂ.ಎಸ್.ಎಂ.ಇ. ಗಳ ನೈಜ ಅಗತ್ಯತೆಗಳನ್ನು ಅರಿತು ನೀತಿಯನ್ನು ರೂಪಿಸಲು ಮತ್ತು ಪ್ರಮುಖ ಸವಾಲುಗಳು, ನಿರ್ಣಾಯಕ ಬೆಳವಣಿಗೆ ಸಕ್ರಿಯಗೊಳಿಸುವಂತಹ ನೀತಿ ಮಧ್ಯಸ್ಥಿಕೆಗಳ ಕುರಿತು ಚರ್ಚಿಸಲು ಈ ಕಾರ್ಯಕ್ರಮವು ವೇದಿಕೆಯಾಗಿ ಕಾರ್ಯನಿರ್ವಹಿಸಿತು.

ಸಮಾಲೋಚನೆಯ ಫಲಿತಾಂಶಗಳು, ಕಾರ್ಯಸಾಧ್ಯ ಶಿಫಾರಸುಗಳು ಮತ್ತು ಪಾಲುದಾರ-ಚಾಲಿತ ತಂತ್ರಗಳ ಮೂಲಕ ರಾಜ್ಯದಲ್ಲಿ ಎಂ.ಎಸ್.ಎಂ.ಇ. ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ನೇರ ಕೊಡುಗೆಗಳನ್ನು ನೀಡಿತು. ಸುಮಾರು 120 ಕ್ಕೂ ಅಧಿಕ ಪಾಲುದಾರರು ಭಾಗವಹಿಸಿದ್ದರು. ಸರ್ಕಾರವು ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸಿ ಎಂ.ಎಸ್.ಎಂ.ಇ. ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಭವಿಷ್ಯಕ್ಕೆ ಅನುಗುಣವಾದ ನೀತಿ ಚೌಕಟ್ಟನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆದವು.

ಹೊಸ ಎಂಎಸ್‌ಎಂಇ ನೀತಿಯಲ್ಲಿ ಎಐ ಮತ್ತು ಡಿಜಿಟಲ್‌ ಮಾರ್ಗಸೂಚಿ ಅಳವಡಿಸಲು ಚಿಂತನೆ: ಎಂಎಸ್‌ಎಂಇ ಕಾರ್ಯದರ್ಶಿ ರೋಹಿಣಿ ಸಿಂಧೂರಿ

Comments

Leave a Comment

Prev Post ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

Read all News