PRABHAVAA.COM

ರಾಹುಲ್ ಗಾಂಧಿಯವರು ದೇಶದ್ರೋಹಿಗಳ ಜೊತೆ ಸೇರುವಷ್ಟು ಅಸಹಾಯಕರಾದುದೇಕೆ?: ವಿಜಯೇಂದ್ರ

Bengaluru Urban:

Font size:

ರಾಹುಲ್ ಗಾಂಧಿಯವರು ದೇಶದ್ರೋಹಿಗಳ ಜೊತೆ ಸೇರುವಷ್ಟು ಅಸಹಾಯಕರಾದುದೇಕೆ?: ವಿಜಯೇಂದ್ರ

ರಾಹುಲ್ ಗಾಂಧಿಯವರು ದೇಶದ್ರೋಹಿಗಳ ಜೊತೆ
ಸೇರುವಷ್ಟು ಅಸಹಾಯಕರಾದುದೇಕೆ?: ವಿಜಯೇಂದ್ರ

ಮುಖ್ಯಾಂಶಗಳು
• ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ ದೇಶದ ಜನರು
• ಕಾಂಗ್ರೆಸ್ ಪಕ್ಷ ದೇಶದ ಜನರಿಂದ ದೂರವಾದುದೇಕೆ ಎಂದು ವಿಮರ್ಶಿಸಿ
• ಎಸ್‍ಐಟಿ ವಿಷಯದಲ್ಲಿ ಪ್ರಿಯಾಂಕ್ ಖರ್ಗೆಗೆ ಭಯವೇಕೆ?
• ಭಯಭೀತ ಕಾಂಗ್ರೆಸ್ ಸರಕಾರದ ಸಚಿವರು
• ಹೈಕೋರ್ಟ್ ನೇಮಿಸಿದ ಅಧಿಕಾರಿಗಳಿಂದ ತನಿಖೆ ಮಾಡಿಸಿ..

ಬೆಂಗಳೂರು: ನೇಹಾ ಬೋರಾಗೆ ಬಾಂಗ್ಲಾ ದೇಶ, ನೇಪಾಳ ದಂಗೆಯೇ ಮಾದರಿ. ಫ್ರಾನ್ಸ್ ಗೊಂದಲವೇ ಮಾದರಿ. ರಾಹುಲ್ ಗಾಂಧಿಯವರು ಇಂಥ ದೇಶದ್ರೋಹಿಗಳ ಜೊತೆ ಸೇರಿ ಇಷ್ಟೊಂದು ಅಸಹಾಯಕರಾದುದು ಯಾಕೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.
ಬಿ.ವೈ. ವಿಜಯೇಂದ್ರ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಉತ್ತರ ಹಾಗೂ ಪ್ರಮುಖರು ಇಂದು ಪಾಟರಿ ಟೌನ್‍ನಲ್ಲಿ ಓಕಲ್ ಫಾರ್ ಲೋಕಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಜಯೇಂದ್ರ ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಾಗದು..
ನಮ್ಮ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಾಗದು ಎಂದು ತಿಳಿಸಿದರು. ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದ ಜನರಿಂದ ದೂರವಾದುದೇಕೆ ಎಂದು ವಿಮರ್ಶೆ ಮಾಡಿ ಎಂದು ಕಿವಿಮಾತು ಹೇಳಿದರು.

ಸರಕಾರ, ಪ್ರಿಯಾಂಕ್ ಖರ್ಗೆಗೆ ಆತಂಕವೇಕೆ?
ಕೆಪಿಎಸ್ಸಿ ಹಗರಣದ ತನಿಖಾಧಿಕಾರಿ ಅಲೋಕ್ ಕುಮಾರ್ ಅವರನ್ನು ದೂರ ಇಟ್ಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನು ಮುಚ್ಚಿಹಾಕಿದ್ದರು. ಎಸಿಬಿಯನ್ನು ರಚಿಸಿ ಆಯಕಟ್ಟಿನ ಸ್ಥಳಗಳಲ್ಲಿ ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿ ಕ್ಲೀನ್ ಚಿಟ್ ಪಡೆದುದನ್ನು ನೋಡಿದ್ದೇವೆ. ಈಗಲೂ ಅದೇ ಪ್ರಯತ್ನ ನಡೆಯುತ್ತಿದೆ. ರಾಜ್ಯ ಹೈಕೋರ್ಟ್ ಕೆಲವು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಎಸ್‍ಐಟಿ ರಚಿಸಿತ್ತು. ಆದರೆ, ಕಾಂಗ್ರೆಸ್ ಸರಕಾರ, ಪ್ರಿಯಾಂಕ್ ಖರ್ಗೆಯವರಿಗೆ ಆತಂಕ ಆದುದೇಕೆ ಎಂದು ಕೇಳಿದರು.
ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಅಲೋಕ್ ಕುಮಾರ್, ಇತರ ಪ್ರಾಮಾಣಿಕ ಅಧಿಕಾರಿಗಳನ್ನು ಕೈಬಿಡುವ ಷಡ್ಯಂತ್ರ ಮಾಡುತ್ತಿದ್ದಾರೆ; ಕೆಪಿಎಸ್ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರದ ಚರ್ಚೆ ಆಗುತ್ತಿತ್ತು. ಅದಕ್ಕೆ ಪುಷ್ಟಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರಕಾರವೇ ಮಾಡುತ್ತಿದೆ ಎಂದು ಟೀಕಿಸಿದರು. ಪ್ರಿಯಾಂಕ್ ಖರ್ಗೆಯವರು ಬಿಜೆಪಿ ಕಡೆ ಬೆಟ್ಟು ಮಾಡಿ ಆರೋಪ ಮಾಡುತ್ತಿದ್ದರು. ನಿಮಗೆ ನಿಜವಾದಲೂ ಪ್ರಾಮಾಣಿಕತೆ ಇದ್ದರೆ ಕೆಪಿಎಸ್ಸಿಯ ಹಗರಣದ ತನಿಖೆಯ ಇಚ್ಛಾಶಕ್ತಿ ಇದ್ದರೆ ಹೈಕೋರ್ಟ್ ಯಾವ ಅಧಿಕಾರಿಗಳನ್ನು ನೇಮಿಸಿದೆಯೋ ಅದೇ ಅಧಿಕಾರಿಗಳಿಂದ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು. ಹಗರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆ ಎಂದು ಆಕ್ಷೇಪಿಸಿದರು.

ಸ್ಟಿಂಗ್ ಆಪರೇಷನ್ ಕಲಾವಿದರು ಯಾರೆಂದು ಗೊತ್ತಿದೆ..
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಮಾಡುವ ಕಲಾವಿದರು ಯಾರೆಂದು ಜನತೆಗೆ ಗೊತ್ತಿದೆ. ಕಾಂಗ್ರೆಸ್ ಸರಕಾರದ ಸಚಿವರೇ ಇವತ್ತು ಭಯಭೀತರಾಗಿದ್ದಾರೆ. ತಮ್ಮ ಕರ್ಮಕಾಂಡವನ್ನು ಅವರ ಪಕ್ಷದವರೇ ಹೊರಕ್ಕೆ ತರುವ ಭಯ ಅವರಲ್ಲಿದೆ. ಸ್ವತಃ ಮುಖ್ಯಮಂತ್ರಿಗಳು ಮೌನ ತಾಳಿದ್ದಾರೆ. ಇದೆಲ್ಲದಕ್ಕೂ ಇತಿಶ್ರೀ ಹಾಡಲು ಸಮರ್ಪಕ ತನಿಖೆ ಆಗಲಿ ಎಂದು ಒತ್ತಾಯಿಸಿದರು. ಸತ್ಯಾಂಶ ಹೊರಕ್ಕೆ ಬರಲು ಸಿಬಿಐ ತನಿಖೆ ಮಾಡಿಸಿ ಎಂದು ಆಗ್ರಹವನ್ನು ಮುಂದಿಟ್ಟರು. ಆಡಳಿತ ಪಕ್ಷ ಎಲ್ಲವನ್ನೂ ಗೌಪ್ಯವಾಗಿ ಇಡುವ ಗುಮಾನಿ ಎಲ್ಲರನ್ನೂ ಕಾಡುತ್ತಿದೆ ಎಂದರು.

ಹತಾಶರಾದ ರಾಹುಲ್ ಗಾಂಧಿ..
ಕಾಕ್ರೋಚ್ ಪಾರ್ಟಿ ಮತ್ತು ಕಾಂಗ್ರೆಸ್ ಪಕ್ಷ ಎರಡೂ ಒಂದೇ ಎಂಬ ವಿಚಾರದಲ್ಲಿ ಯಾರಿಗೂ ಅನುಮಾನ ಉಳಿದಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಗದೇ, ಮೋದಿಜೀ ಅವರ ಜನಪ್ರಿಯತೆಯಿಂದ ಹತಾಶರಾಗಿದ್ದಾರೆ. ಪ್ರಧಾನಿಯಾಗುವ ಕನಸು ಕಾಣುತ್ತಿದ್ದ ರಾಹುಲ್ ಗಾಂಧಿಯವರು ತಮ್ಮ ಕನಸು ನನಸಾಗದೆಂದು ಹತಾಶರಾಗಿ ಬೇರೆ ಸಂಘಟನೆಗಳೊಂದಿಗೆ ಪ್ರತಿಭಟನೆಗೆ ಇಳಿದಿದ್ದಾರೆ. ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿಯವರಿಗೆ ಇವಿಎಂ ಬಗ್ಗೆ, ಚುನಾವಣಾ ಆಯೋಗ, ಸುಪ್ರೀಂ ಕೋರ್ಟ್ ಬಗ್ಗೆ ವಿಶ್ವಾಸ ಇಲ್ಲ ಎಂದು ಆಕ್ಷೇಪಿಸಿದರು.
ಎಡಪಕ್ಷದ ಸಂಘಟನೆಗಳ ಜೊತೆ ಸೇರಿ ಇವರು ದಂಗೆ ಏಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಮೋದಿಜೀ ಅವರು ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ಇವರದು ಅರಾಜಕತೆಯ ಪ್ರಯತ್ನ ಎಂದು ಟೀಕಿಸಿದರು. ಇದೆಲ್ಲವನ್ನೂ ದೇಶದ ಜನರು ಗಮನಿಸುತ್ತಿದ್ದಾರೆ. ಜನತೆ ಎನ್‍ಡಿಎ, ಮೋದಿಜೀ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂದು ನುಡಿದರು.

ಕಪ್ಪು ಚುಕ್ಕಿ ಇಲ್ಲದ ಸಾರ್ವಜನಿಕ ಜೀವನ..
ಯಾವುದೇ ಕಪ್ಪು ಚುಕ್ಕಿ ಇಲ್ಲದ ಪ್ರಧಾನಿ ನರೇಂದ್ರ ಮೋದಿಜೀಯವರ 25 ವರ್ಷಗಳ ಸಾರ್ವಜನಿಕ ಜೀವನವನ್ನು ಅವರು ಪ್ರಶಂಸಿಸಿದರು. ಓಕಲ್ ಫಾರ್ ಲೋಕಲ್ ಸಂಬಂಧ ಪಾಟರಿ ಟೌನ್‍ಗೆ ಬಂದಿರುವುದಾಗಿ ತಿಳಿಸಿದರು. ಕುಂಬಾರರ ಸವಾಲುಗಳನ್ನು ತಿಳಿದುಕೊಂಡಿದ್ದಾಗಿ ವಿವರಿಸಿದರು.

Comments

Leave a Comment

Prev Post ಕರ್ನಾಟಕದ ಜನಜೀವನ ಸುಧಾರಣೆಗೆ ಮಾರ್ಗದರ್ಶನ ನೀಡಿ: ರಾಜ್ಯಪಾಲೆಗೆ ಸಿಎಂ ಮನವಿ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News