PRABHAVAA.COM

ಕ್ವಿನ್ ಸಿಟಿ ಯೋಜನೆ ಪರಾಮರ್ಶನಾ ಸಭೆ ಮಾರ್ಚ್ ಒಳಗೆ ನಿವೇಶನ ಹಂಚಿಕೆ ಗುರಿ: ಎಂ ಬಿ ಪಾಟೀಲ

Bengaluru Urban:

Font size:

15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ, ಪ್ರತ್ಯೇಕ ತಂಡ ರಚನೆಗೆ ಸೂಚನೆ, 24x7 ಮಾದರಿಯಲ್ಲಿ ಕೆಲಸ

ಬೆಂಗಳೂರು:

ರಾಜ್ಯ ಸರಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕ್ವಿನ್ ಸಿಟಿ ಅಭಿವೃದ್ಧಿಯ ವಿಚಾರದಲ್ಲಿ ಮುಂಬರುವ ಫೆಬ್ರವರಿ-ಮಾರ್ಚ್ ವೇಳೆಗೆ ನಿರ್ಣಾಯಕ ಪ್ರಗತಿ ಆಗಬೇಕು. ಇದಕ್ಕೆ ಆಗಬೇಕಾಗಿರುವ ಕೆಲಸಗಳನ್ನು ಕೆಐಎಡಿಬಿ ಸಮರೋಪಾದಿಯಲ್ಲಿ 24x7 ಮಾದರಿಯಲ್ಲಿ ಕೂಡಲೇ ಆರಂಭಿಸಬೇಕು. ಜತೆಗೆ ಪ್ರತೀ 15 ದಿನಗಳಿಗೊಮ್ಮೆ ಯೋಜನೆಯ ಪ್ರಗತಿಗೆ ಸಂಬಂಧಿಸಿದ ವರದಿಯನ್ನು ತಮಗೆ ಕೊಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅವರು ಇಲ್ಲಿನ ಖನಿಜ ಭವನದಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶುಕ್ರವಾರ ಯೋಜನೆಯ ಪರಾಮರ್ಶನಾ ಸಭೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಅವರು, ಕ್ವಿನ್ ಸಿಟಿ ಯೋಜನೆ ನಮ್ಮ ಸರಕಾರದ ಕನಸಿನ ಕೂಸಾಗಿದೆ. ಇದರ ಸಾಕಾರಕ್ಕಾಗಿ ಕೈಗಾರಿಕಾ ಇಲಾಖೆಯು ಪ್ರತ್ಯೇಕ ತಂಡವನ್ನೇ ರಚಿಸಿ, ಇಡೀ ತಂಡದ ಸಿಬ್ಬಂದಿ ಯೋಜನಾ ಪ್ರದೇಶದಲ್ಲೇ ಕಾರ್ಯನಿರತವಾಗಬೇಕು. ಅಂದರೆ ಭೂಸ್ವಾಧೀನ, ಸಂಪರ್ಕ ರಸ್ತೆ, ಚರಂಡಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದಾರೆ.

ಕ್ವಿನ್ ಸಿಟಿ ಪ್ರದೇಶಕ್ಕೆ ಜಾಗತಿಕ ಮಟ್ಟದ ಉದ್ದಿಮೆಗಳು, ವಿಶ್ವವಿದ್ಯಾಲಯಗಳು, ಕಾನೂನು ಶಾಲೆಗಳು, ಐಐಎಸ್ಸಿ ತರಹದ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಆಸ್ಪತ್ರೆಗಳು, ನಾವೀನ್ಯತಾ ಸಂಸ್ಥೆಗಳು, ನವೋದ್ಯಮಗಳು ಬಂದು ಹೂಡಿಕೆ ಮಾಡಲಿವೆ. ಅಂದ ಮೇಲೆ ನಾವು ಇಲ್ಲಿ ಒದಗಿಸುವ ಸೌಕರ್ಯಗಳು ಕೂಡ ವಿಶ್ವದರ್ಜೆಯದೇ ಆಗಿರಬೇಕು. ಆದ್ದರಿಂದ ಯೋಜನೆಯ ವಿನ್ಯಾಸ ಸಂಸ್ಥೆಯ ಜತೆ ಸಮನ್ವಯ ಸಾಧಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಇಲ್ಲಿಗೆ ಬರುವ ಹೂಡಿಕೆದಾರರಿಗೆ ಉತ್ಕೃಷ್ಟ ವಸತಿ ಸೌಕರ್ಯ, ಕಾಮನ್ ಫೆಸಿಲಿಟಿ ಸೆಂಟರ್, ಕ್ರೀಡಾ ಸಂಕೀರ್ಣ, ಸಂಪರ್ಕ ರಸ್ತೆಗಳು, ಉದ್ಯಾನ, ವಿದ್ಯುತ್ ಸಂಪರ್ಕ ಮುಂತಾದ ಮೂಲಸೌಕರ್ಯಗಳನ್ನು ಕೊಡಬೇಕಾಗಿದೆ. ಇವುಗಳನ್ನು ಸಮರೋಪಾದಿಯಲ್ಲಿ ಮುಗಿಸಲು ಅಗತ್ಯವೆನಿಸಿದರೆ ಮತ್ತೊಂದು ಚೀಫ್ ಎಂಜಿನಿಯರ್ ಹುದ್ದೆಯನ್ನು ಸೃಷ್ಟಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಒಟ್ಟಾರೆ ಯೋಜನೆಯು 5 ಸಾವಿರ ಎಕರೆ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಇಲ್ಲಿಗೆ ಬರುವವರಲ್ಲಿ‌ ಕೆಲವರು ಅವರೇ ತಮ್ಮ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬಹುದು. ಇನ್ನು ಕೆಲವರು ಬಿಲ್ಡ್-ಟು-ಸೂಟ್ ಮಾದರಿಯ ವ್ಯವಸ್ಥೆಯನ್ನು ಬಯಸಬಹುದು. ಮತ್ತೆ ಕೆಲವರು ನಿರ್ಮಾಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಕೆಐಎಡಿಬಿ ಇವೆಲ್ಲಕ್ಕೂ ಸಿದ್ಧವಾಗಿರಬೇಕು. ಒಟ್ಟಿನಲ್ಲಿ ಐದು ತಿಂಗಳಲ್ಲಿ ಗರಿಷ್ಠ ಮಟ್ಟದ ಪ್ರಗತಿಯನ್ನು ಸಾಧಿಸಲೇಬೇಕು ಎಂದು ಅವರು ಗುರಿ ನಿಗದಿಪಡಿಸಿದ್ದಾರೆ.

ಹೂಡಿಕೆದಾರರಿಗೆ ಯೋಜನೆಯ ವೈಶಿಷ್ಟ್ಯವನ್ನು ಮನದಟ್ಟು ಮಾಡಿಕೊಟ್ಟು, ತ್ವರಿತವಾಗಿ ಅವರಿಗೆ ನಿವೇಶನ ಒದಗಿಸಬೇಕು. ನಿಧಾನ ಮಾಡಿದರೆ ಬಂಡವಾಳ ಹೂಡುವವರು ಬೇರೆ ಕಡೆಗೆ ಹೋಗುತ್ತಾರೆ. ಎರಡನೆಯ ಹಂತದ ಕೆಲಸಗಳನ್ನು ಕೂಡ ಬೇಗನೆ ಕೈಗೆತ್ತಿಕೊಳ್ಳಬೇಕು. ಒಟ್ಟಾರೆಯಾಗಿ ಇಲ್ಲಿ 50 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದು ಬರುವಂತೆ ಎಲ್ಲರೂ ಶ್ರಮಿಸಬೇಕು ಎಂದು ಪಾಟೀಲರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ವಿಶೇಷ ಜಿಲ್ಲಾಧಿಕಾರಿ ರಘುನಂದನ್, ಮುಖ್ಯ ಎಂಜಿನಿಯರ್ ವೀರಭದ್ರಯ್ಯ ಉಪಸ್ಥಿತರಿದ್ದರು.

Comments

Leave a Comment

Prev Post ನವರಾತ್ರಿ ಸಂಭ್ರಮ: ಕಂಗ್ರಾಳಿ ಕೆ.ಎಚ್. ಮತ್ತು ಹಿಂಡಲಗಾದಲ್ಲಿ ದೇವಿಯ ವಿಶೇಷ ಪೂಜೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಭಾಗಿ
Next Post ಕರ್ನಾಟಕದ ಜನಜೀವನ ಸುಧಾರಣೆಗೆ ಮಾರ್ಗದರ್ಶನ ನೀಡಿ: ರಾಜ್ಯಪಾಲೆಗೆ ಸಿಎಂ ಮನವಿ

ವಿಮಾನ ನಿಲ್ದಾಣ: ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಜತೆ ಚರ್ಚಿಸಿ ತೀರ್ಮಾನ

ಸಿಎಂ ನೇತೃತ್ವದಲ್ಲಿ ಸಭೆ ಮಾಡಿ ಅಂತಿಮ ನಿರ್ಧಾರ: ಎಂ ಬಿ ಪಾಟೀಲ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ ಮಕ್ಕಳಿಂದ ವಯಸ್ಕರವರೆಗೆ ಎಲ್ಲರಿಗೂ ಲಸಿಕೆ!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಭೇಟಿಯಾದ ಆಸ್ಟ್ರೇಲಿಯಾ ನಿಯೋಗ

ಅಕ್ಕಪಡೆ, ಗೃಹಲಕ್ಷ್ಮಿ, ಶಕ್ತಿ ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಅತಿ ಹೆಚ್ಚು ಸಾಲ ಮಾಡಿ ಜನರನ್ನು ಸಾಲದ ಸುಳಿಗೆ ಸಿಲುಕಿ ಹಾಕಿಸಿರುವುದು ಸುಳ್ಳಲ್ಲ ಆರ್ಥಿಕ, ಬೌದ್ಧಿಕ ದಿವಾಳಿತನದ ಪ್ರದರ್ಶನ: ವಿಜಯೇಂದ್ರ

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

ಮೇ ವೇಳೆಗೆ ತುಂಗಭದ್ರಾ ಅಣೆಕಟ್ಟು ಎಲ್ಲಾ ಗೇಟ್ ಗಳ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News