PRABHAVAA.COM

ಲಿವರ್ ಪೂಲ್ ವಿವಿ ಬೆಂಗಳೂರು ಕ್ಯಾಂಪಸ್ ಆರಂಭ; 2 ವರ್ಷಗಳಲ್ಲೇ ಫಲ ಕೊಟ್ಟ ಉಪಕ್ರಮ: ಎಂ ಬಿ ಪಾಟೀಲ

Bengaluru Urban:

Font size:

ವೈಟ್ ಫೀಲ್ಡ್ ನಲ್ಲಿ ದಕ್ಷಿಣ ಭಾರತದ ಪ್ರಪ್ರಥಮ ಕ್ಯಾಂಪಸ್

ಲಿವರ್ ಪೂಲ್ ವಿವಿ ಬೆಂಗಳೂರು ಕ್ಯಾಂಪಸ್ ಆರಂಭ

ವೈಟ್ ಫೀಲ್ಡ್ ನಲ್ಲಿ ದಕ್ಷಿಣ ಭಾರತದ ಪ್ರಪ್ರಥಮ ಕ್ಯಾಂಪಸ್

2 ವರ್ಷಗಳಲ್ಲೇ ಫಲ ಕೊಟ್ಟ ಉಪಕ್ರಮ: ಎಂ ಬಿ ಪಾಟೀಲ

ಬೆಂಗಳೂರು: ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಅಗ್ರಪಂಕ್ತಿಯಲ್ಲಿರುವ ಲಿವರ್ ಪೂಲ್ ವಿ.ವಿ.ಯ ಇಲ್ಲಿನ ವೈಟ್ ಫೀಲ್ಡ್ ನಲ್ಲಿರುವ ಅಲೆಂಬಿಕ್ ಸಿಟಿಯಲ್ಲಿ ಅಭಿವೃದ್ಧಿ ಪಡಿಸಿರುವ ದಕ್ಷಿಣ ಭಾರತದ ತನ್ನ ಪ್ರಪ್ರಥಮ ಕ್ಯಾಂಪಸ್ಸನ್ನು ಗುರುವಾರ ವಿಧ್ಯುಕ್ತವಾಗಿ ಉದ್ಘಾಟಿಸಲಾಯಿತು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಲಿವರ್ ಪೂಲ್ ವಿವಿ ಕುಲಪತಿ ಟಿಮ್ ಜೋನ್ಸ್, ಲಿವರ್ ಪೂಲ್ ನಗರದ ಮೇಯರ್ ಸ್ಟೀವ್ ರೋದರ್ ಹ್ಯಾಂ, ಕರ್ನಾಟಕದಲ್ಲಿರುವ ಬ್ರಿಟಷ್ ಡೆಪ್ಯುಟಿ ಹೈಕಮಿಷನರ್ ಹರ್ಷವೀರ್ ಸಂಘಾ, ಬ್ರಿಟಿಷ್ ಕೌನ್ಸಿಲ್ ಆಫ್ ಇಂಡಿಯಾ ಕಂಟ್ರಿ ಡೈರೆಕ್ಟರ್ ಆಲಿಸನ್ ಬಾರೆಟ್ ಅವರು ನೂತನ ಕ್ಯಾಂಪಸ್ ಅನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವ ಪಾಟೀಲರು, ತಾವು 2024ರ ನವೆಂಬರಿನಲ್ಲಿ ರಾಜ್ಯದ ಸಂಶೋಧನೆ, ಉನ್ನತ ಶಿಕ್ಷಣ ಮತ್ತು ಔದ್ಯಮಿಕ ವಲಯಕ್ಕೆ ಬಂಡವಾಳ ಆಕರ್ಷಿಸಲು ಲಂಡನ್ ನಗರದಲ್ಲಿ ರೋಡ್-ಶೋ ನಡೆಸಿದಾಗ ಅನೇಕ ವಿಶ್ವವಿದ್ಯಾಲಯಗಳನ್ನು ಹೊಂದಿರುವ ರಸೆಲ್ ಸಮೂಹದ ಜತೆಗಿನ ಮಾತುಕತೆಯಲ್ಲಿ ಈ ಕ್ಯಾಂಪಸ್ ಆರಂಭಕ್ಕೆ ಬೀಜಾಂಕುರವಾಗಿತ್ತು. ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಬೆಂಗಳೂರಿನ ಕ್ಯಾಂಪಸ್ ಆರಂಭವಾಗುತ್ತಿರುವುದು ಒಂದು ದಾಖಲೆಯಾಗಿದೆ. ಇದರಿಂದ ರಾಜ್ಯದ ಯುವಜನರು ಇಲ್ಲೇ ಜಾಗತಿಕ ಗುಣಮಟ್ಟದ ಪಠ್ಯಕ್ರಮ ಓದಿ, ಪದವೀಧರರಾಗಿ ಹೊರಹೊಮ್ಮಬಹುದು ಎಂದಿದ್ದಾರೆ.

ಈ ಕ್ಯಾಂಪಸ್ ಸ್ಥಾಪಿಸುವ ಕನಸು ನನಸಾಗಲು ನೆರವಾದ ಆಗಿನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್, ಸಹ ಕುಲಾಧಿಪತಿ ಪ್ರೊ ತಾರೀಖ್ ಅಲಿ ಸೇರಿ ಇತರರನ್ನೂ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುತ್ತೇನೆ ಎಂದು ಸಚಿವರು ಹೇಳಿದರು.

ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ 27 ಲಕ್ಷ ವಿದ್ಯಾರ್ಥಿಗಳಿದ್ದು, 4,500 ಕಾಲೇಜುಗಳು ನಮ್ಮಲ್ಲಿವೆ. ಇನ್ನೊಂದೆಡೆ, ನಾವು ಪ್ರತೀವರ್ಷ 1.6 ಲಕ್ಷ ಎಂಜಿನಿಯರಿಂಗ್ ಪದವೀಧರರನ್ನು ಸೃಷ್ಟಿಸುತ್ತಿದ್ದೇವೆ. ಇವುಗಳಿಗೆ ಪೂರಕವಾಗಿ 24 ಸಾವಿರಕ್ಕೂ ಹೆಚ್ಚು ನವೋದ್ಯಮಗಳು ಮತ್ತು 50ಕ್ಕೂ ಅಧಿಕ ಯೂನಿಕಾರ್ನ್ ದರ್ಜೆಯ ಉದ್ದಿಮೆಗಳಿವೆ. ಲಿವರ್ ಪೂಲ್ ವಿ.ವಿ.ಯು ಇವುಗಳೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳಬೇಕು. ಇದರಿಂದ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಮತ್ತು ಕೈಗಾರಿಕಾ ರಂಗಗಳ ನಡುವೆ ಹೊಸ ಬಾಂಧವ್ಯ ಸಾಧ್ಯವಾಗಲಿದೆ ಎಂದು ಅವರು ಆಶಿಸಿದ್ದಾರೆ.

ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ, ಆಧುನಿಕ ತಯಾರಿಕೆ, ಜೈವಿಕ ತಂತ್ರಜ್ಞಾನ, ಶುದ್ಧ ಇಂಧನ, ನಗರ ನಾವೀನ್ಯತೆ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆ ಮತ್ತು ನಾವೀನ್ಯತೆಗೆ ಒಳ್ಳೆಯ ಅವಕಾಶಗಳಿವೆ. ಇದರಿಂದ ಅಂತಿಮವಾಗಿ ನಮ್ಮ ಕೈಗಾರಿಕಾ ಕಾರ್ಯಪರಿಸರಕ್ಕೆ ಲಾಭವಾಗಲಿದೆ. ಇಂತಹ ಸಿದ್ಧತೆ ನಮಗೆ ಅತ್ಯಗತ್ಯವಾಗಿದೆ ಎಂದು ಅವರು ನುಡಿದಿದ್ದಾರೆ.

ಜಗತ್ತಿನ ಬೇರೆಬೇರೆ ದೇಶಗಳ 14ಕ್ಕೂ ಹೆಚ್ಚು ವಿ.ವಿ.ಗಳು ರಾಜ್ಯದಲ್ಲಿ ತಮ್ಮ ಕ್ಯಾಂಪಸ್ ತೆರೆಯಲು ಮುಂದೆ ಬಂದಿವೆ. ಹಾಗೆಯೇ ರಾಜ್ಯದ ಮತ್ತು ದೇಶದ ಅತ್ಯುತ್ತಮ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ಆಸಕ್ತಿ ತೋರಿಸಿ, ಒಡಂಬಡಿಕೆ ಮಾಡಿಕೊಂಡಿವೆ. ಈ ಸಂಸ್ಥೆಗಳ ಕ್ಯಾಂಪಸ್ಸುಗಳು ಮತ್ತು ಸಂಶೋಧನಾಲಯಗಳು ಮುಂಬರುವ ದಿನಗಳಲ್ಲಿ ಕ್ವಿನ್ ಸಿಟಿಯಲ್ಲಿ ನೆಲೆಯೂರಲಿವೆ. ಈ ನಿಟ್ಟಿನಲ್ಲಿ ಸರಕಾರವು ಆಸಕ್ತ ಸಂಸ್ಥೆಗಳಿಗೆ ಅಗತ್ಯ ಅನುಕೂಲಗಳನ್ನು ಒದಗಿಸಲಿದೆ ಎಂದು ಪಾಟೀಲ ವಿವರಿಸಿದ್ದಾರೆ.

Comments

Leave a Comment

Prev Post ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್
Next Post ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕರಾಗಿ ಲುಕ್ಮಾನ್ ಬಂಟ್ವಾಳ ನೇಮಕ

ದೇಶ ಹಾಗೂ ರಾಜ್ಯದ ಬೆಳವಣಿಗೆಗೆ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ: ಡಿಸಿಎಂ ಡಿ.ಕೆ. ಶಿವಕುಮಾರ್

ಎಲ್ಲರೂ ಜ್ಞಾನ ಹಂಚಿಕೊಂಡು ಬಾಳಬೇಕು ಬೆಂಗಳೂರಿನ ಹೆಮ್ಮೆ ಜ್ಯೋತಿ ನಿವಾಸ್ ಕಾಲೇಜು

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ ; ಗೌರವ ಡಾಕ್ಟರೇಟ್ ಪ್ರದಾನ.

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ಕರ್ನಾಟಕ ಸರ್ಕಾರದ ಮಹತ್ವದ ಆದೇಶ: ಹದಿಹರೆಯದವರ ಆರೋಗ್ಯಕ್ಕಾಗಿ ‘ಸ್ನೇಹ ಕೇಂದ್ರ’ಗಳ ವಿಸ್ತರಣೆ, ಸಮಗ್ರ ಸಮಾಲೋಚನಾ ಕೇಂದ್ರಗಳ ಸ್ಥಾಪನೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ National Academic Depository (NAD) – DigiLocker ಮೂಲಕ ಫಲಿತಾಂಶದ ದಿನವೇ ಅಂಕಪಟ್ಟಿ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆ ಗೆಜೆಟ್ ಪ್ರಕಟಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

ಸಹಾಯಧನ ಪಡೆಯುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ

Read all News