PRABHAVAA.COM

ಎಫ್‍ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ ಪೊಲೀಸ್ ಠಾಣೆಗೆ ಮುತ್ತಿಗೆ: ವಿಜಯೇಂದ್ರ ಎಚ್ಚರಿಕೆ

Bengaluru Urban:

Font size:

ಎಫ್‍ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ ಪೊಲೀಸ್ ಠಾಣೆಗೆ ಮುತ್ತಿಗೆ: ವಿಜಯೇಂದ್ರ ಎಚ್ಚರಿಕೆ

ಬೆಂಗಳೂರು,ಅ.11-ಸ್‍ಐಆರ್ ಫಾರಂ 7 ವಿಚಾರದಲ್ಲಿ ರಾಜ್ಯ ಸರಕಾರವು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ದಾಖಲಿಸುವುದನ್ನು ಮುಂದುವರಿಸಿದರೆ, ಬಿಜೆಪಿ ವತಿಯಿಂದ ಪೆÇಲೀಸ್ ಸ್ಟೇಷನ್ ಸೇರಿದಂತೆ ಎಸ್ಪಿ ಕಚೇರಿಗಳಿಗೂ ಮುತ್ತಿಗೆ ಹಾಕಬೇಕು ಎಂಬ ತೀರ್ಮಾನಕ್ಕೆ ಇವತ್ತು ನಾವು ಬಂದಿದ್ದೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ಬಾರಿ ರಾಜ್ಯದ ಸಹ ಉಸ್ತುವಾರಿಗಳಾಗಿ ಜವಾಬ್ದಾರಿ ಸ್ವೀಕರಿಸಿರುವ ಕಾಸಂ ವೆಂಕಟೇಶ್ವರಲು ಅವರ ಸಮ್ಮುಖದಲ್ಲಿ ಇವತ್ತಿನ ಕೋರ್ ಕಮಿಟಿ ನಡೆದಿದೆ ಎಂದ ಅವರು, ಎಸ್‍ಐಆರ್ ಫಾರಂ 7 ವಿಚಾರದಲ್ಲಿ ಕಾಂಗ್ರೆಸ್ ಸರಕಾರವು ಗೊಂದಲ ನಿರ್ಮಾಣ ಮಾಡಿದೆ. ಅಲ್ಲದೇ ಭಾಜಪದ ಕಾರ್ಯಕರ್ತರ ಮೇಲೆ ಎಫ್‍ಐಆರ್‍ಗಳನ್ನು ದಾಖಲೆ ಮಾಡುವ ಈ ಸಂದರ್ಭದಲ್ಲಿ ರಾಜ್ಯದ ಹೈಕೋರ್ಟ್ ಈ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ಗಮನ ಸೆಳೆದರು.

ಪಿಆರ್‍ಸಿ ನೀಡುವ ಅಧಿಕಾರ..

ರಾಜ್ಯ ಸರಕಾರವು ಖಾಯಂ ನಿವಾಸಿ ದೃಢಪತ್ರ (ಪಿಆರ್‍ಸಿ) ನೀಡಲು ಪಿಡಿಒಗಳು, ಮುನ್ಸಿಪಲ್ ಕಮಿಷನರ್ ಗಳಿಗೂ ಅಧಿಕಾರ ಕೊಟ್ಟಿದ್ದು, ಇದು ಸರಿಯಲ್ಲ. ತಹಶೀಲ್ದಾರ್ ಮತ್ತು ತಹಶೀಲ್ದಾರ್ ಮೇಲ್ಪಟ್ಟಂತಹ ಅಧಿಕಾರಿಗಳಿಗೆ ಮಾತ್ರ ಈ ಅಧಿಕಾರ ಕೊಡಬೇಕು ಎಂದು ಆಗ್ರಹಿಸಿದರು. ತಕ್ಷಣ ರಾಜ್ಯ ಸರಕಾರ ಈ ಅಧಿಕಾರವನ್ನು ಹಿಂಪಡೆಯಬೇಕು. ಈ ನಿಟ್ಟಿನಲ್ಲಿ ಪತ್ರವನ್ನು ಕೂಡ ಬರೆದು ಚುನಾವಣಾ ಆಯೋಗದ ಗಮನಕ್ಕೂ ಕೂಡ ತರಬೇಕು ಅಂತ ಹೇಳಿ ಚರ್ಚೆ ಮಾಡಿದ್ದೇವೆ ಎಂದು ವಿವರ ನೀಡಿದರು.

ಜಿಪಂ, ತಾಪಂ ಚುನಾವಣೆ ಮುಂದೂಡದಿರಿ..

ಮುಂಬರುವ ಉಪಚುನಾವಣೆಯನ್ನು ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುದು ಚರ್ಚೆಯಾಗಿದೆ. ವಿಶೇಷವಾಗಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರ ಮೀಸಲಾತಿ ವಿವರ ಪ್ರಕಟಿಸಿದೆ. ರಾಜ್ಯ ಸರಕಾರವು ಇನ್ಯಾವುದೇ ನೆಪ ಒಡ್ಡಿ ಈ ಚುನಾವಣೆ ಮುಂದೂಡುವ ಕುತಂತ್ರಗಳನ್ನು ಮಾಡಬಾರದು ಎಂದು ಆಗ್ರಹಿಸಿದರು.

ಪ್ರತಿ ಜಿಲ್ಲೆಗೂ ಪ್ರಭಾರಿಗಳ ನೇಮಕ..

ನಾವು ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೂ ಪ್ರಭಾರಿಯನ್ನು ನೇಮಕ ಮಾಡಬೇಕು, ಮತ್ತು ಪ್ರತಿ ಜಿಲ್ಲೆಯಲ್ಲಿ ತಕ್ಷಣವೇ ಚುನಾವಣಾ ನಿರ್ವಹಣಾ ಸಮಿತಿ ರಚಿಸಬೇಕೆಂದು ಕೋರ್ ಕಮಿಟಿನಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ನುಡಿದರು.
ಪ್ರಶ್ನೆಗೆ ಉತ್ತರಿಸಿದ ಅವರು, ಕೋರ್ ಕಮಿಟಿಗೆ ಕೆಲವು ಹೆಸರುಗಳನ್ನು ಸೇರಿಸಬೇಕು ಎಂಬ ಬಗ್ಗೆ ನಮ್ಮೆಲ್ಲರ ಅಭಿಪ್ರಾಯ ಇದೆ. ರಾಷ್ಟ್ರೀಯ ಅಧ್ಯಕ್ಷರು ಕೋರ್ ಕಮಿಟಿ ಬಗ್ಗೆ ತೀರ್ಮಾನ ಮಾಡಬೇಕಾಗುತ್ತದೆ. ಈಗಾಗಲೇ ಅವರ ಗಮನಕ್ಕೆ ತಂದಿದ್ದೇವೆ. ಸೂಕ್ತ ಸಂದರ್ಭದಲ್ಲಿ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಆಂತರಿಕ ಕಚ್ಚಾಟ..

ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಸ್ಟಿಂಗ್, ಡಿಂಗ್ ವಿಷಯದಲ್ಲಿ ಆಡಳಿತ ಪಕ್ಷದ ಶಾಸಕರು, ಆಡಳಿತ ಪಕ್ಷದ ಸಚಿವರು ತಗಲಾಕಿಕೊಂಡಿದ್ದಾರೆ. ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟ, ಹಗ್ಗಜಗ್ಗಾಟದಲ್ಲಿ ಅವರವರೇ ಸ್ಟಿಂಗ್ ಮಾಡ್ಕೊಂಡಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಈ ಸ್ಟಿಂಗ್ ಆಪರೇಷನ್‍ನಲ್ಲಿ ನಾವು ಮಾತಾಡುವ ಪ್ರಶ್ನೆ ಉದ್ಭವ ಆಗೋದಿಲ್ಲ. ಉಪ್ಪು ತಿಂದವನು ನೀರು ಕುಡಿಯಲೇಬೇಕಾಗುತ್ತದೆ. ಇದರ ಸತ್ಯಾಸತ್ಯತೆ ಏನು ಅಂತ ಹೊರಗೆ ಬರಲಿ ಎಂದು ನುಡಿದರು.
ಮುಖ್ಯಮಂತ್ರಿ ಸೇರಿ ಕ್ಯಾಬಿನೆಟ್ ಸಚಿವರ ಮುಖದಲ್ಲಿ ಆತಂಕ ಇರುವುದಂತೂ ಸತ್ಯ. ಇನ್ನು ಇನ್ನಷ್ಟು ಅಂಶಗಳು ಹೊರಗೆ ಬರಲಿ. ನಾನು ರವಿ ಗಣಿಗ ಅವರ ಹೇಳಿಕೆಯನ್ನು ನೋಡಿದ್ದೇನೆ. ಎಲ್ಲಾದರೂ ಅವರ ಗುರುಗಳು ತಗಲಾಕೊಂಡು ಬಿಟ್ಟರೆÀ ಅಂತ ಅವರಿಗೂ ಕಾಡುವಂತಿದೆ ಎಂದು ತಿಳಿಸಿದರು.

ಅವರದೇ ರಾಜ್ಯ ಸರಕಾರ ಇದೆ..

ಕೆಪಿಎಸ್‍ಸಿ ವಿಷಯÀದಲ್ಲಿ ತನಿಖೆ ಮಾಡುವಂತೆ ಆಗ್ರಹಿಸುವಿರಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರದೇ ರಾಜ್ಯ ಸರಕಾರ ಇದೆ. ಏನೇನು ಮಾಡಬೇಕೋ ಅವರೇ ಅವರೇ ಮಾಡಲಿ. ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ಕೆಪಿಎಸ್‍ಸಿ ವಿಚಾರದಲ್ಲಿ ಯಾಕೋ ಬಿಜೆಪಿ ಅವರು ಏನೂ ಮಾತಾಡುತ್ತಿಲ್ಲ ಎಂದಿದ್ದರು. ಎಸ್‍ಐಟಿ ಮಾಡಿದಾಗ, ತಡೆಯಾಜ್ಞೆ ಪಡೆಯಲು ಸುಪ್ರೀಂ ಕೋರ್ಟಿಗೆ ಹೋದವರು ಯಾರು? ಪ್ರಿಯಾಂಕ್ ಖರ್ಗೆಗೆ, ಈ ಸರ್ಕಾರಕ್ಕೆ ಆತಂಕ ಯಾಕೆ ಎಂದರು. ಕೆಪಿಎಸ್‍ಸಿ ವಿಚಾರದಲ್ಲಿ ನಮ್ಮದೇನೂ ತಕರಾರಿಲ್ಲ, ಸರಿಯಾದ ರೀತಿ ತನಿಖೆ ಆಗಲಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ಅದರ ಬಗ್ಗೆ ಯಾವುದೇ ರೀತಿ ಗೊಂದಲ ಇಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮೀಸಲಾತಿ ಕುರಿತ ಗೊಂದಲಗಳ ಕುರಿತು ಪತ್ರಕರ್ತರು ಗಮನಕ್ಕೆ ತಂದರು. ಆಡಳಿತ ಪಕ್ಷಕ್ಕೆ ಅನುಕೂಲ ಆಗುವ ರೀತಿಯಲ್ಲೂ ಮಾಡ್ಕೊಂಡಿದ್ದಾರೆ, ಗೊಂದಲವನ್ನೂ ಮಾಡಿದ್ದಾರೆ. ಮೀಸಲಾತಿ ಪಟ್ಟಿನಲ್ಲಿ ಕೆಲವು ಗೊಂದಲಗಳನ್ನು ನೋಡಿದಾಗ ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸುವ ಇಚ್ಛಾಶಕ್ತಿ ಇದೆಯೇ ಅನ್ನುವ ಅನುಮಾನವೂ ಕಾಡುತ್ತಿದೆ ಎಂದು ತಿಳಿಸಿದರು.

Comments

Leave a Comment

Prev Post ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ವೃತ್ತಿಪರ ಕೋರ್ಸ್‌ಗಳಲ್ಲಿ 15% ಅಡ್ಡ ಮೀಸಲಾತಿ ಜಾರಿ
Next Post ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ಮೈಸೂರು ದಸರಾ 2026ಕ್ಕೆ ಭವ್ಯ ಚಾಲನೆ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ: ಬಿ.ವೈ. ವಿಜಯೇಂದ್ರ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ಬಿಜೆಪಿ ಕಾಲದ ನೇಮಕಾತಿಗಳನ್ನು ಕಾಂಗ್ರೆಸ್ ತನ್ನದು ಎಂದು ಹೇಳಿಕೊಂಡು ಜನರನ್ನು ವಂಚಿಸುತ್ತಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ

ನ್ಯಾ.‌ನಾಗಮೋಹನ್ ದಾಸ್ ವರದಿಯಂತೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ:ಬಸವರಾಜ ಬೊಮ್ಮಾಯಿ

ಸಿಎಂ ಒಳ ಮೀಸಲಾತಿ ವಿರೋಧಿಗಳ ಒತ್ತಡಕ್ಕೆ ಮಣಿದಿದ್ದಾರೆ: ಬಸವರಾಜ ಬೊಮ್ಮಾಯಿ

ಒಡಿಶಾ ಶಾಸಕರನ್ನು ನಾನು ಕರೆಸಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಪಕ್ಷ ಹೇಳಿದ್ದನ್ನು ಮಾಡುತ್ತೇನೆ ನನಗೆ ಇದು ಹೊಸತಲ್ಲ, ವಿಲಾಸ್ ರಾವ್ ದೇಶಮುಖ್ ಅವರ ಸರ್ಕಾರದಿಂದಲೂ ಇದನ್ನು ಮಾಡುತ್ತಿರುವೆ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಪ್ರಧಾನಿ ಮೋದಿ ರಾಜತಾಂತ್ರಿಕ ನೈಪುಣ್ಯತೆಯಿಂದ ಜಾಗತಿಕ. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ: ಬಸವರಾಜ ಬೊಮ್ಮಾಯಿ

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯುಕೆಪಿ ಯೋಜನೆಗೆ ಆಂಧ್ರ ತಕರಾರು ಬಗ್ಗೆ ಕರ್ನಾಟಕದ ಸಂಸದರ ಜತೆ ದೆಹಲಿಯಲ್ಲಿ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್

Read all News