PRABHAVAA.COM

ಮಂಗಳೂರು ಎಂ.ಆರ್.ಪಿ.ಎಲ್. ಪ್ರದೇಶದಲ್ಲಿ ಭಾರೀ ಸ್ಫೋಟ –ಮಂಗಳೂರು ಎಂ.ಆರ್.ಪಿ.ಎಲ್. ಸ್ಪೋಟದಲ್ಲಿ ಕಾರ್ಮಿಕ ಮನೀಶ್ ಕರ್ಕೇರಾ ದುರ್ಮರಣ

Dakshina Kannada:

Font size:

ಮಂಗಳೂರು ಎಂ.ಆರ್.ಪಿ.ಎಲ್. ಪ್ರದೇಶದಲ್ಲಿ ಭಾರೀ ಸ್ಫೋಟ – ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಮನೆಗಳು ಕಂಪಿಸಿದ ಘಟನೆ

from Jayaram Udupi

ಮಂಗಳೂರು:
ಸುರತ್ಕಲ್ ಜೋಕಟ್ಟೆ ಪರಿಸರದಲ್ಲಿರುವ ಮಂಗಳೂರು ತೈಲ ಶುದ್ದೀಕರಣಾಗಾರ ಎಂ.ಆರ್.ಪಿ.ಎಲ್‌ ಆವರಣದಲ್ಲಿ ಇಂದು, ಬುಧವಾರ ಸಂಭವಿಸಿದ ಸ್ಪೋಟ ಹಾಗು ಅಗ್ನಿ ದುರಂತದಲ್ಲಿ ಮುಲ್ಕಿ‌ ಮೂಲದ ಕಾರ್ಮಿಕ ಮನೀಶ್ ಕರ್ಕೇರಾ ಸಾವನ್ನಪ್ಪಿದ್ದಾರೆ.

ಮೊದಲು ಕಾಣೆಯಾಗಿದ್ದಾರೆ ಎಂದು ಭಾವಿಸಲಾಗಿದ್ದ ಮೂವತ್ತು ವರ್ಷದ ಮನೀಶ್ ಕರ್ಕೇರಾ ಅವರ ಮೃತದೇಹ ಬಳಿಕ ಸುಟ್ಟ ರೀತಿಯಲ್ಲಿ ಪತ್ತೆಯಾಗಿದೆ.
ಈ ದುರ್ಘಟನೆಯಲ್ಲಿ ಇತರ ಎಂಟು ಮಂದಿಗೆ ಗಾಯಗಳಾಗಿವೆ. ಆರು ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಓರ್ವರು ಶೇಕಡಾ ಮೂವತ್ತೈದರಷ್ಟು ಸುಟ್ಟ ಗಾಯಗಳೊಂದಿಗೆ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರ ದೇಹ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸ್ಪೋಟದ ರಭಸಕ್ಕೆ ಎಂ.ಆರ್.ಪಿ.ಎಲ್. ಸುತ್ತಮುತ್ತಲಿನ ಮನೆಗಳ ಹಂಚುಗಳು ಪುಡಿಯಾಗಿವೆ. ಗೋಡೆಗಳಲ್ಲಿ ಬಿರುಕುಂಟಾಗಿವೆ.ಕಿಟಕಿ ಬಾಗಿಲುಗಳ ಗಾಜು ಹುಡಿಯಾಗಿ ಬಿದ್ದ ದೃಶ್ಯಗಳು ಸ್ಪೋಟದ ತೀವ್ರತೆಗೆ ಸಾಕ್ಷಿ ಒದಗಿಸುತ್ತಿವೆ.

ಮಂಗಳೂರು: ಮಂಗಳೂರು ತೈಲಾಗಾರ ಎಂ.ಆರ್.ಪಿ.ಎಲ್.ನ ಹೈಡ್ರೋ ಸಲ್ಫರ್ ಸಂಸ್ಕರಣಾ ಘಟಕದಲ್ಲಿ ಬುಧವಾರ ಸಂಭವಿಸಿದ ಸ್ಪೋಟ ಸ್ಥಳೀಯರನ್ನು‌ ಭಯಗೊಳಿಸಿದೆ.

ಆದರೆ ಈ ಘಟಕದ ಮುಖ್ಯ ಕಾರ್ಯ ಉದ್ದೇಶವೇ ವಾತಾವರಣದ ಮಾಲಿನ್ಯವನ್ನು ಕಡಿಮೆ ಮಾಡುವುದಾಗಿದೆ.

ಅತ್ಯಂತ ಒತ್ತಡದಲ್ಲಿ ಮತ್ತು ಇನ್ನೂರ ತೊಂಬತ್ತರಿಂದ ನಾಲ್ಕುನೂರ ಐವತೈದು ಡಿಗ್ರಿಯಷ್ಟು ಭಾರೀ ಉಷ್ಣತೆಯಲ್ಲಿ ಈ ಘಟಕ ಕಾರ್ಯ ನಿರ್ವಹಿಸುತ್ತದೆ. ಕಚ್ಚಾ ತೈಲದಲ್ಲಿಯ ಸಲ್ಫರ್ ಮತ್ತು ಇತರ ಮಾಲಿನ್ಯಕಾರಕ ತ್ಯಾಜ್ಯ ವಸ್ತುಗಳನ್ನು ತೆಗೆದು ಹಾಕುವ ಕೆಲಸ ಈ ಘಟಕದ್ದು. ಈ ರಿಯಾಕ್ಟರಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯಲ್ಲಿ ವೇಗಪರಿವರ್ತಕಗಳನ್ನು ಬಳಸುತ್ತಾರೆ. ವಾಹನಗಳಲ್ಲಿ ತೈಲ ಉತ್ಪನ್ನಗಳನ್ನು ಇಂಧನವಾಗಿ ಬಳಸುವಾಗ ಸಲ್ಫರ್ ಡೈ ಆಕ್ಸೈಡ್ ಹೊರಸೂಸುವಿಕೆ ಕಡಿಮೆ‌ಮಾಡುವಲ್ಲಿ ಈ ಘಟಕದ ಪ್ರಾಮುಖ್ಯತೆ ಬಹಳ.

ರಿಯಾಕ್ಟರಿನಲ್ಲಿ ಸ್ಪೋಟ ಸಂಭವಿಸಿರುವುದರಿಂದ ರಾಸಾಯನಿಕ ಕ್ರಿಯೆ ಪೂರ್ಣಗೊಳ್ಳದೇ ಇರುವ ಸಂದರ್ಭದಲ್ಲಿ ಕೆಲವಂಶದ ಮಾಲಿನ್ಯ ವಾತಾವರಣಕ್ಕೆ ಸೇರ್ಪಡೆಯಾಗಿರಬಹುದು ಎಂಬ ಆತಂಕವಿದೆ.ಆದರೆ ಅದಿನ್ನೂ ದೃಢಪಟ್ಟಿಲ್ಲ.
ಕೆಲವು ಸಂದರ್ಭಗಳಲ್ಲಿ ಮಾಲಿನ್ಯಕಾರಕ ಅಂಶಗಳು ಜೀವುಗಳ ದೇಹವನ್ನು ಸೇರಿದಾಗ ಅವುಗಳ ದುಷ್ಪರಿಣಾಮ ತಕ್ಷಣಕ್ಕೆ ಕಂಡು ಬರದೇ ಇರಬಹುದು.ಇದಕ್ಕೆ ದೀರ್ಘಕಾಲೀನ ಅಧ್ಯಯನ ಬೇಕಾದೀತು ಎನ್ನಲಾಗುತ್ತಿದೆ.

ಮಂಗಳೂರು:
ಮಂಗಳೂರು ನಗರಕ್ಕೆ ಹೊರವಲಯದ ಎಂ.ಆರ್.ಪಿ.ಎಲ್. ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳು ಹಾಗೂ ಕಟ್ಟಡಗಳು ಕಂಪಿಸಿದ ಘಟನೆ ನಡೆದಿದೆ.

ಸ್ಫೋಟದ ಭಾರೀ ಶಬ್ದಕ್ಕೆ ಸ್ಥಳೀಯರು ಆತಂಕಗೊಂಡಿದ್ದು, ವ್ಯಯಹಲವು ಮನೆಗಳ ಬಾಗಿಲು, ಕಿಟಕಿಗಳು ಹಾಗೂ ಗಾಜುಗಳು ಹಾನಿಗೊಳಗಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕೆಲವು ಕಟ್ಟಡಗಳ ಗೋಡೆಗಳಿಗೂ ಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಜಪೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಸ್ಫೋಟದ ಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.

ಸ್ಫೋಟ ಸಂಭವಿಸಿದ ಪ್ರದೇಶದ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ದೂರದ ಪ್ರದೇಶಗಳಿಂದಲೂ ಹೊಗೆ ಕಾಣಿಸಿಕೊಂಡಿದೆ. ಘಟನೆಯ ನಿಖರ ಕಾರಣ ಹಾಗೂ ಸ್ಫೋಟದ ತೀವ್ರತೆ ಕುರಿತು ಇನ್ನಷ್ಟೇ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.

ಘಟನೆಯ ಬಳಿಕ ಸ್ಥಳೀಯರು ಆತಂಕದಿಂದ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದು, ಅಧಿಕಾರಿಗಳು ಹಾಗೂ ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Comments

Leave a Comment

Prev Post “ಅಕ್ಟೋಬರ್ 2ರಿಂದ ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ‘ಮಹಾತ್ಮಗಾಂಧಿ ಸುಧಾರಣೋತ್ಸವ’ ಅಭಿಯಾನ”
Next Post ಹೌದು, ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ: ಸಿಎಂ ಡಿ ಕೆ ಶಿವಕುಮಾರ್

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News