PRABHAVAA.COM

ಸಾಮಾಜಿಕ ನ್ಯಾಯಕೊಟ್ಟ ಸಮಾಜವೇ ನ್ಯಾಯ ಕೇಳುವಂತಾಗಿರುವುದು ವಿಪರ್ಯಾಸ: ಈಶ್ವರ ಖಂಡ್ರೆ

Bengaluru Urban:

Font size:

ಸಾಮಾಜಿಕ ನ್ಯಾಯಕೊಟ್ಟ ಸಮಾಜವೇ ನ್ಯಾಯ ಕೇಳುವಂತಾಗಿರುವುದು ವಿಪರ್ಯಾಸ: ಈಶ್ವರ ಖಂಡ್ರೆ

ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಭಾಗಿ
ಡಿ.ಕೆ. ಶಿವಕುಮಾರ್ ಜಾತ್ಯತೀತ ನಾಯಕ: ಈಶ್ವರ ಖಂಡ್ರೆ

ಸಾಮಾಜಿಕ ನ್ಯಾಯಕೊಟ್ಟ ಸಮಾಜವೇ ನ್ಯಾಯ ಕೇಳುವಂತಾಗಿರುವುದು ವಿಪರ್ಯಾಸ: ಈಶ್ವರ ಖಂಡ್ರೆ
ಬೆಂಗಳೂರು, ಸೆ.27: ಇಡೀ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ನ್ಯಾಯಕೊಟ್ಟ ವೀರಶೈವ, ಲಿಂಗಾಯತ ಸಮಾಜವೇ ಇಂದು ಸಾಮಾಜಿಕ ನ್ಯಾಯ ಕೇಳುವಂತಾಗಿರುವುದು ವಿಪರ್ಯಾಸ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ವಿಷಾದ ವ್ಯಕ್ತಪಡಿದ್ದಾರೆ.
ಬೆಂಗಳೂರಿನ ಸುಜ್ಞಾನ ಮಂದಿರದಲ್ಲಿಂದು ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಎಲ್ಲ ಜಾತಿ, ಜನಾಂಗದಲ್ಲಿ ಇರುವಂತೆಯೇ ನಮ್ಮಲ್ಲೂ ಕಡು ಬಡವರಿದ್ದಾರೆ. ಅವರಿಗೂ ಸೂಕ್ತ ನ್ಯಾಯ ಸಿಗಬೇಕು ಎಂದು ಪ್ರತಿಪಾದಿಸಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದರು. ಅದೇ ಆದರ್ಶವನ್ನು ಮುಂದಿಟ್ಟುಕೊಂಡು, ಎಲ್ಲ ಜಾತಿ ಜನಾಂಗದವರಿಗೂ ಆಶ್ರಯ, ಅನ್ನ, ಅಕ್ಷರ ಕೊಟ್ಟ ಕೊಡುಗೆ ನಮ್ಮ ಮಠಮಾನ್ಯಗಳಿಗೆ ಸಲ್ಲುತ್ತದೆ. ಆದರೆ ಇಂದು ನಾವೇ ಸಾಮಾಜಿಕ ನ್ಯಾಯ ಕೇಳುವಂತಾಗಿದೆ ಇದು ದುರ್ದೈವ ಎಂದರು.
ತಮ್ಮ ಸ್ವಾರ್ಥಕ್ಕಾಗಿ ಕೆಲವರು ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟು ಹಾಕುತ್ತಿದ್ದು, ಇಂತಹ ಕಾಲಘಟ್ಟದಲ್ಲಿ ಆಯೋಜಿಸಿರುವ ಈ ಧರ್ಮ ಸಮ್ಮೇಳನ ಅರ್ಥಪೂರ್ಣವಾಗಿದೆ ಎಂದ ಈಶ್ವರ ಖಂಡ್ರೆ, ಹಸಿದವರಿಗೆ ಅನ್ನ ನೀಡುವುದು ಶ್ರೇಷ್ಠ ಧರ್ಮ. ಬಾಯಾರಿ ಬಳಲಿ ಬಂದವರಿಗೆ ನೀರು, ಮಜ್ಜಿಗೆ ನೀಡುವುದು ಮಾನವೀಯ ಧರ್ಮ, ಬಿದ್ದವರನ್ನು ನೋಡಿ ನಗದೆ, ಅವರ ಕೈಹಿಡಿದು ಎತ್ತುವುದು ಧರ್ಮ. ಅಜ್ಞಾನಿಗಳಿಗೆ ಸುಜ್ಞಾನದ ಬೆಳಕು ತೋರುವುದು ಪರ ಧರ್ಮ ಎಂದರು.
ಇಂದು ಜಗತ್ತಿನಾದ್ಯಂತ ದೇಶ ದೇಶಗಳ ನಡುವೆ ಸಂಘರ್ಷಗಳು ನಡೆಯುತ್ತಿವೆ. ವೈಮಾನಿಕ ದಾಳಿಗಳಲ್ಲಿ ಸೈನಿಕರಷ್ಟೇ ಅಲ್ಲ, ಸಾವಿರಾರು ಮುಗ್ಧ ಜನರು ಸಾವು ನೋವು ಅನುಭವಿಸುತ್ತಿದ್ದಾರೆ. ಆದರೆ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಗುರುಪರಂಪರೆಯ ಮಹಾಮಹಿಮರು ಮಾನವ ಧರ್ಮ, ಮಾನವೀಯತೆ, ವಿಶ್ವಶಾಂತಿಯ ಬಗ್ಗೆ ಮಾತನಾಡಿದ್ದರು. ಮಾನವ ಧರ್ಮಕ್ಕೆ ಜಯವಾಗಲೀ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಇಡೀ ಮಾನವ ಕುಲದ ಹಿತ ಬಯಸಿದ್ದರು ಎಂದರು.
ಪಂಚಾಚಾರ್ಯರು ಸಾವಿರಾರು ವರ್ಷಗಳ ಹಿಂದೆಯೇ ಕನ್ಯಾಕುಮಾರಿಯಿಂದ ಆಸೇತು ಹಿಮಾಚಲ ಪರ್ಯಂತ ಸಂಚರಿಸಿ ಜಗದ್ ಕಲ್ಯಾಣ ಮಾಡಿದ್ದಾರೆ. ಮಾನವಧರ್ಮದ ಉಪದೇಶ ಮಾಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಉತ್ತರಾಖಂಡದ ಕೇದಾರನಾಥದಲ್ಲಿ "ಕೇದಾರ ವೈರಾಗ್ಯ ಸಿಂಹಾಸನ ಪೀಠ" ಇದೆ ಎಂದು ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಈಶ್ವರ ಖಂಡ್ರೆ ಹೇಳಿದರು.
ಡಿ.ಕೆ. ಶಿವಕುಮಾರ್ ಜಾತ್ಯತೀತ ನಾಯಕ: ಈಶ್ವರ ಖಂಡ್ರೆ
ನಿಸ್ವಾರ್ಥವಾದ ಅಚಲ ಭಕ್ತಿ, ಶ್ರದ್ಧೆಗೆ ಭಗವಂತ ಸದಾ ಒಲಿಯುತ್ತಾನೆ. ಕೋಳೂರು ಕೊಡಗೂಸು ಇದಕ್ಕೆ ಸಾಕ್ಷಿ. ಭಕ್ತಿ, ಶ್ರದ್ಧೆ ಇದ್ದರೆ ಸಾಧನೆ ಖಂಡಿತಾ ಸಾಧ್ಯ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಲ್ಲೂ ಅಚಲವಾದ ಭಕ್ತಿ ವಿಶ್ವಾಸವಿದೆ. ಅವರು ಬಾಳೆ ಹೊನ್ನೂರು ಮಠಕ್ಕೂ ನಡೆದುಕೊಳ್ಳುತ್ತಾರೆ. ತಮ್ಮ ಆರಾಧ್ಯದೈವ, ನೊಣವಿನಕೆರೆ ಅಜ್ಜಯ್ಯ ಎಂದು ಹೇಳುವ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇ ತಮ್ಮ ಆಧ್ಯಾತ್ಮಿಕ ಗುರು ಹಾಗೂ ಆರಾಧ್ಯ ದೈವವಾದ ವೀರ ಗಂಗಾಧರ ಅಜ್ಜಯ್ಯ ಅವರ ಹೆಸರಿನಲ್ಲಿ. ಇದು ಅವರ ಜಾತ್ಯತೀತ ಮನೋಭಾವದ ಹಾಗೂ ಸರ್ವಧರ್ಮ, ಜಾತಿಯ ಮೇರು ವ್ಯಕ್ತಿಗಳಿಗೆ ಮಹಾಮಹಿಮರಿಗೆ ನೀಡುವ ಗೌರವದ ಸಂಕೇತವಾಗಿದೆ ಎಂದು ಹೇಳಿದರು.
ಇಂದು ರಾಜ್ಯದಲ್ಲಿ ಅಷ್ಟೇ ಅಲ್ಲ ಇಡೀ ದೇಶದಲ್ಲಿ ಭೀಕರ ಬರಗಾಲವಿದೆ. ರೈತಾಪಿ ಜನರು ಮುಗಿಲಿನತ್ತ ಮುಖ ಮಾಡಿದ್ದಾರೆ. ಇಂದು ಈ ಧರ್ಮ ಸಮ್ಮೇಳನದಲ್ಲಿ ಸೇರಿರುವ ಎಲ್ಲ ನಿಷ್ಕಲ್ಮಶ ಮನಸ್ಸಿನ ಶರಣ ಶರಣೆಯರು ಬರದ ಸಂಕಷ್ಟ ದೂರವಾಗಲಿ, ರಾಜ್ಯದಲ್ಲಿ ಮಳೆ ಬೆಳೆ ಸುಭಿಕ್ಷವಾಗಿರಲಿ, ಹಿಂಗಾರು ಮಳೆ ಸಮೃದ್ಧವಾಗಿ ಬರಲಿ, ರೈತಾಪಿ ಜನರ, ಸಾರ್ವಜನಿಕರ ಕಷ್ಟ ದೂರವಾಗಲಿ ಎಂದು ಪ್ರಾರ್ಥಿಸಬೇಕು. ಪಂಚಾಚಾರ್ಯ ಪೀಠಗಳ ಪ್ರತಿನಿಧಿಗಳು ರಾಜ್ಯಕ್ಕೆ ಒಳಿತಾಗಲಿ, ಮಳೆ, ಬೆಳೆ ಆಗಲಿ ಎಂದು ಹರಸಬೇಕು ಎಂದರು.
ಮುಂದಿನ ವರ್ಷಾಂತ್ಯದೊಳಗೆ ಅನುಭವ ಮಂಟಪ ಸಾಕಾರ:ಈಶ್ವರ ಖಂಡ್ರೆ
750 ಕೋಟಿ ರೂಪಾಯಿ ವೆಚ್ಚದಲ್ಲಿ ದಿವ್ಯ, ಭವ್ಯ ಬೃಹತ್ ಅನುಭವ ಮಂಟಪ ನಿರ್ಮಾಣ ಆಗುತ್ತಿದೆ. 770 ಅಮರ ಗಣಂಗಳನ್ನು ಸಂಕೇತಿಸುವ 770 ಕಂಬಗಳ ಮೇಲೆ ನಿರ್ಮಾಣವಾಗುತ್ತಿರುವ ಈ ಅನುಭವ ಮಂಟಪದ ಕಂಬಗಳ ಮೇಲೆ ಎಲ್ಲ 770 ಅಮರ ಗಣಂಗಳ ವಚನಗಳನ್ನು ಕೆತ್ತಿಸಲಾಗಿದೆ. ಇದರ ನಿರ್ಮಾಣಕ್ಕೆ ನಿಕಟಪೂರ್ವ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 280 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಈಗ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ವರ್ಷದೊಳಗೆ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಉದಾರವಾಗಿ ಹಣ ನೀಡುವಂತೆ ಮುಖ್ಯಮಂತ್ರಿ ಶಿವಕುಮಾರ್ ಅವರನ್ನು ಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಜ್ಜಯನಿ ಪೀಠದ ಶ್ರೀಸಿದ್ದಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಹಿಮವತ್ ಕೇದಾರ ಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಕಾಶಿ ಪೀಠದ ಶ್ರೀ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಷ.ಬ್ರ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು, ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮಿಗಳು, ಡಾ. ಜಯಶಾಂತಲಿಂಗ ಶಿವಾಚಾರ್ಯ ಸ್ವಾಮಿಜಿಗಳು, ಸೊಲ್ಲಾಪುರದ ಶ್ರೀ ಡಾ. ಜಯಸಿದ್ದ ಶಿವಾಚಾರ್ಯ ಸ್ವಾಮಿಗಳು, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು, ಸಚಿವರಾದ ಈಶ್ವರ ಖಂಡ್ರೆ, ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವೀಣಾ ಕಾಶಪ್ಪನವರ ಮತ್ತಿತರರು ಉಪಸ್ಥಿತರಿದ್ದರು.

Comments

Leave a Comment

Prev Post ಎಲ್ಲ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್‌ ಅನುಮಾನ, ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪ:
Next Post ಕರಾವಳಿಯಲ್ಲಿ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ಉತ್ತೇಜನ: ಸಿಎಂ ಡಿ ಕೆ ಶಿವಕುಮಾರ್

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News