ಮೋಡಬಿತ್ತನೆಯ ವೈಜ್ಞಾನಿಕ ತಂತ್ರಜ್ಞಾನವನ್ನು ಎಲ್ಲರೂ ನಂಬಬೇಕು - ಹೆಚ್. ಕೆ. ಪಾಟೀಲ್
ಮೋಡಬಿತ್ತನೆಯ ವೈಜ್ಞಾನಿಕ ತಂತ್ರಜ್ಞಾನವನ್ನು ಎಲ್ಲರೂ ನಂಬಬೇಕು - ಹೆಚ್. ಕೆ. ಪಾಟೀಲ್
ಇಂದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಲ್ಲಗೆಳೆಯುವಂತಿಲ್ಲ. ಮೋಡಬಿತ್ತನೆಯ ವೈಜ್ಞಾನಿಕ ತಂತ್ರಜ್ಞಾನವನ್ನು ಎಲ್ಲರೂ ನಂಬಬೇಕು ಎಂದು ಮಾಜಿ ಸಚಿವರು ಹಾಗೂ ಹಿರಿಯ ಶಾಸಕರಾದ ಹೆಚ್. ಕೆ. ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಮಧ್ಯಾಹ್ನದ ನಂತರ ವಿಧಾನಸಭೆಯಲ್ಲಿ ಬರದ ಮೇಲಿನ ಚರ್ಚೆಯಲ್ಲಿ ಮಾತನಾಡುವಾಗ, ಬಹಳಷ್ಟು ರಾಜಕಾರಣಿಗಳಿಗೆ ಮೋಡಬಿತ್ತನೆಯ ಮೇಲೆ ನಂಬಿಕೆ ಇಲ್ಲ. ಆದರೆ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ತುಂಬಾ ಬೆಳೆದಿದೆ. ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ ಮಳೆ ಕೊರತೆ ಉಂಟಾದಾಗ ಕೂಡ ಮೋಡಬಿತ್ತನೆಯ ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೖತಕವಾಗಿ ಮಳೆ ಬರಿಸಲಾಗುತ್ತದೆ. ಆದರೆ ಬಹಳಷ್ಟು ರಾಜಕಾರಣಿಗಳಿಗೆ ಇದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ ಎಂದರು.
ಒಲಂಪಿಕ್ಸ್, ಕೃಷಿಗೆ ನೀರು ಕಡಿಮೆಯಾದ ಸಂದರ್ಭಗಳಲ್ಲಿ ಮೋಡಬಿತ್ತನೆ ಮಾಡುವ ಮೂಲಕ ಕೃತಕ ಮಳೆಯನ್ನು ಪಡೆಯುತ್ತಾರೆ. ಅಂತಹದರಲ್ಲಿ ನಾವು ರೈತರ ಬೆಳೆಗಳನ್ನು ರಕ್ಷಣೆ ಮಾಡುವ ಸಲುವಾಗಿ ಏಕೆ ಮೋಡ ಬಿತ್ತನೆ ಮಾಡಬಾರದು ಎಂದರು.
ಬರದ ಚರ್ಚೆಯಲ್ಲಿ ವಿಪಕ್ಷದ ಸದಸ್ಯರು ಸರ್ಕಾರ ಮೋಡಬಿತ್ತನೆಗೆ ದುಂದುವೆಚ್ಚ ಮಾಡುತ್ತಿದೆ ಎಂದು ಹೇಳಿದ್ದಕ್ಕೆ ಅವರು ಮೋಡಬಿತ್ತನೆ ಮಾಡುವುದು ದುಂದುವೆಚ್ಚವಾಗುವುದಿಲ್ಲ. ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮಳೆ ಬರಿಸುವುದರಿಂದ ರೈತರ ಕೃಷಿ ಚಟುವಟಿಕೆಗೆ ನೆರವಾಗುತ್ತದೆ ಎಂದರು.
ಈಗಾಗಲೇ ಮುಂಗಾರು ಹೋಗಿ, ಹಿಂಗಾರು ಮಳೆ ಪ್ರಾರಂಭವಾಗುತ್ತಿದೆ. ಈಗಾಗಲೇ ಬರದಿಂದ ತತ್ತರಿಸಿರುವ ರೈತರಿಗೆ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪ್ರೋತ್ಸಾಹ ನೀಡಿ ಉತ್ತೇಜನ ನೀಡಬೇಕು. ನೈಸರ್ಗಿಕವಾಗಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಸಿರಿಧಾನ್ಯಗಳನ್ನು ಬೆಳೆಯುವಂತೆ, ಮರಗಳ ಕೖಷಿ ಮಾಡುವಂತೆ ಅವರಿಗೆ ತಿಳಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದರು.






Comments
Leave a Comment