ಆಟೋಗಳಿಗೆ ಅನಿಲ ಕೊರತೆ: ಚಾಲಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬೆಂಗಳೂರು,ಮಾ.17: ಆಟೋಗಳಿಗೆ ಸಿಲಿಂಡರ್ ಕೊರತೆ ಉಂಟಾಗಿರುವುದನ್ನು ವಿರೋಧಿಸಿ ನಗರದ ಪ್ರೀಡಂ ಪಾರ್ಕ್ ನಲ್ಲಿ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್, ಸಂಚಾರಿ ಚಾಲಕರ ಸೇವಾ ಟ್ರಸ್ಟ್ ಹಾಗೂ ಸ್ನೇಹಜೀವಿ ಚಾಲಕರ ಸಂಘ ಬೃಹತ್ ಪ್ರತಿಭಟನೆ ನಡೆಸಿತು.
ಫ್ರಿಡಂ ಪಾರ್ಕ್ ಮುಂಭಾಗ ಆಟೋಗೆ ಹಗ್ಗ ಕಟ್ಟಿ ಎಳೆಯುವ ಹಾಗೂ ಅಡುಗೆಯ ಖಾಲಿ ಸಿಲಿಂಡರ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ, ಆಟೋ ಚಾಲಕರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದ್ದು, ಪ್ರತಿಯೊಬ್ಬ ಆಟೋ ಚಾಲಕರ ಕುಟುಂಬಕ್ಕೆ ಹತ್ತು ಸಾವಿರ ರೂ ಪರಿಹಾರ ನೀಡಬೇಕು. ಆಟೋ ಚಾಲಕರ ಮನೆಗಳಲ್ಲಿ ಅಡುಗೆ ಸಿಲಿಂಡರ್ ದೊರೆಯುತ್ತಿಲ್ಲ. ಜೀವನದ ರಥ ಮುನ್ನಡೆಸುವ ಆಟೋಗಳಿಗೆ ಬಂಕ್ ಗಳಲ್ಲಿ ಅನಿಲ ದೊರೆಯುತ್ತಿಲ್ಲ. ಇದರಿಂದ ಆಟೋ ಚಾಲಕರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಸ್ನೇಹಜೀವಿ ಚಾಲಕರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಜು ಕನ್ನಡಿಗ, ಸಂಚಾರಿ ಸತೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು






Comments
Leave a Comment