ವಂದನಾ ಪ್ರಶಸ್ತಿ - 2026" ಕ್ಕೆ ಡಾ. ಆರ್.ಕೆ.ನಾಯರ್ ಆಯ್ಕೆ
From Jayaram Udupi
ಮಂಗಳೂರು: ಡಾ. ಆರ್.ಕೆ.ನಾಯರ್ ಅವರನ್ನು ಈ ವರ್ಷದ ವಂದನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 21 ರಂದು ರಾಜ್ಯ ಮಟ್ಟದ “ವಂದನಾ ಪ್ರಶಸ್ತಿ - 2026" ಪ್ರದಾನ ಸಮಾರಂಭ ನಡೆಯಲಿದೆ. ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್ ಅಧ್ಯಕ್ಷ, ಭಾಸ್ಕರ್ ರೈ ಕಟ್ಟಾ ಈ ವಿಷಯ ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಸರಗೋಡು ಮೂಲದ ಹಸಿರು ಕ್ರಾಂತಿಕಾರ ಹಾಗೂ ಪರಿಸರ ಪ್ರೇಮಿ ಡಾ. ಆರ್. ಕೆ. ನಾಯರ್‌ರವರು ಭಾರತ ದೇಶದ ಹಸಿರು ನಾಯಕ ಎಂದು ಖ್ಯಾತಿ ಪಡೆದವರು. ಅವರು ದೇಶದ 12 ರಾಜ್ಯಗಳಲ್ಲಿ ಸಾವಿರಾರು ಎಕ್ರೆ ಬಂಜರು ಭೂಮಿಯನ್ನು ಜಪಾನ್ ಮಾದರಿಯ ಮಿಯಾವಾಕಿ ಅರಣ್ಯ ಪ್ರದೇಶವಾಗಿ ಪರಿವರ್ತಿಸಿದ್ದನ್ನು ಪರಿಗಣಿಸಿ ಅವರ ಅಮೂಲ್ಯ ಕೊಡುಗೆಯನ್ನು ಪ್ರಶಂಸಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಆಯ್ಕೆ ಸಮಿತಿಯ ಸಭಾಪತಿಯಾದ ಡಾ। ದೇವದಾಸ್ ರೈ , ರೋಟರಿ ಸಂಸ್ಥೆಯ ಕಾರ್ಯದರ್ಶಿ, ವಿಕಾಸ್ ಕೋಟ್ಯಾನ್, ರೋಟರ್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷರಾದ ಅಕ್ಷಯ್ ಬಿ. ರೈ ಮತ್ತು ಮಾಧ್ಯಮ ಸಲಹೆಗಾರರಾದ ಎಂ.ವಿ. ಮಲ್ಯ ಸಹಿತ ಇನ್ನಿತ್ತರರು ಉಪಸ್ಥಿತರಿದ್ದರು .
0000
ಮಂಗಳೂರು :
ಉಜಿರೆಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪುತ್ತೂರು ಎಸಿ ಸ್ಟೆಲ್ಲಾ ವರ್ಗಿಸ್ ಅವರು ಮತ್ತೆ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಹೈಕೋರ್ಟ್ ಆದೇಶದಂತೆ ಮಾ.16 ರಿಂದ ಸೆ.16 ರವರೆಗೆ ಪುತ್ತೂರು ಎಸಿ ಸ್ಟೆಲ್ಲಾ ವರ್ಗಿಸ್ ಅವರು, ಆರು ತಿಂಗಳು ಕಾಲ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.
ಪುತ್ತೂರು ಎ.ಸಿ ಗಡಿಪಾರು ಆದೇಶದಂತೆ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ .ಸಿ.ಕೆ ಅವರ ನೇತೃತ್ವದಲ್ಲಿ ಪೊಲೀಸರು ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಮನೆಗೆ ಮಾ.16 ರಂದು ಮದ್ಯರಾತ್ರಿ ತೆರಳಿದ್ದರು.
ಗಡಿಪಾರು ಆದೇಶ ಪ್ರತಿಯನ್ನು ಜಾರಿ ಮಾಡಲು ಹೋದಾಗ ಮಹೇಶ್ ಶೆಟ್ಟಿ ತಿಮರೋಡಿ ಅವರು ಮನೆಯಲ್ಲಿರದೆ ನಾಪತ್ತೆಯಾಗಿದ್ದರು. ಬಳಿಕ ಮನೆಯ ಗೋಡೆಗೆ ನೋಟಿಸ್ ಅಂಟಿಸಿದ್ದಾರೆ
00000
ಮಂಗಳೂರು :
ಮೂಡುಬಿದಿರೆ ಬಳಿ ಮಿನಿ ಗೂಡ್ಸ್ ಟೆಂಪೋಗೆ ಕೆ.ಎಸ್.ಆರ್.ಟಿ.ಸಿ.ಬಸ್ ಢಿಕ್ಕಿಯಾಗಿ ಟೆಂಪೊ ಚಾಲಕ ಸ್ಥಳದಲ್ಲೇ ಮೃತರಾಗಿದ್ದಾರೆ.
ಕಾರ್ಕಳ–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಸಮೀಪ ಕೆಎಸ್‌ಆರ್‌ಟಿಸಿ ಬಸ್ಸೊಂದು ಗೂಡ್ಸ್ ಮಿನಿ ಟೆಂಪೋಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ಚಾಲಕ ಬಂಟ್ವಾಳ ತಾಲೂಕು ಕೆಲಿಂಜೆ ನಿವಾಸಿ ಲೆಸ್ಟರ್ ಡೇವಿಡ್ ಡಿ’ಸೋಜ (30 ) ಮೃತಪಟ್ಟರು.
ಮೂಡುಬಿದಿರೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ವಿರುದ್ಧ ದಿಕ್ಕಿನಲ್ಲಿ ಬಂದು ಕಾರ್ಕಳ ಕಡೆಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಮಿನಿ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ.
ಇದೀಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಸೂಕ್ತ ರೀತಿಯಲ್ಲಿ ರಸ್ತೆ ಡೈವರ್ಷನ್ ವ್ಯವಸ್ಥೆ ಮಾಡದೇ ಇರುವುದರಿಂದ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.




Comments
Leave a Comment