ಎ.ಆರ್.ಎ.ಐ ಕೇಂದ್ರದ ಜತೆಗೆ ಕೈಗಾರಿಕಾ ಹಬ್ ಸ್ಥಾಪನೆ ಚಿಂತನೆ: ಎಂ ಬಿ ಪಾಟೀಲ

Bengaluru Urban:

Font size:

ಎ.ಆರ್.ಎ.ಐ ಕೇಂದ್ರದ ಜತೆಗೆ ಕೈಗಾರಿಕಾ ಹಬ್ ಸ್ಥಾಪನೆ ಚಿಂತನೆ: ಎಂ ಬಿ ಪಾಟೀಲ

*ಎ.ಆರ್.ಎ.ಐ ಕೇಂದ್ರದ ಜತೆಗೆ ಕೈಗಾರಿಕಾ ಹಬ್ ಸ್ಥಾಪನೆ ಚಿಂತನೆ: ಎಂ ಬಿ ಪಾಟೀಲ*

*ಕೇಂದ್ರ ಸಚಿವ ಎಚ್ ಡಿ ಕೆ ಜತೆ ಚರ್ಚೆ, ಮಂಡ್ಯ ಜಿಲ್ಲೆಯಲ್ಲಿ 500 ಎಕರೆ ಗುರುತಿಸಲು ಸೂಚನೆ*

ಬೆಂಗಳೂರು:

ಕೇಂದ್ರ ಸರಕಾರ, ಮಂಡ್ಯ ಜಿಲ್ಲೆಯಲ್ಲಿ ಎ.ಆರ್.ಎ.ಐ. (ಆಟೊಮೋಟೋವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ) ಕೇಂದ್ರ ಸ್ಥಾಪನೆಗೆ ಆಸಕ್ತಿ ತೋರಿದ್ದು ಅದಕ್ಕೆ ನಿಗದಿಪಡಿಸಿರುವ 100 ಎಕರೆಗಿಂತ ಪರ್ಯಾಯವಾಗಿ ಕನಿಷ್ಠ 500 ಎಕರೆಯಲ್ಲಿ ಪೂರಕ ಕೈಗಾರಿಕಾಭಿವೃದ್ಧಿ ಪಾರ್ಕ್ ಸ್ಥಾಪನೆ ಬಗ್ಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ಇಂದು ಚರ್ಚಿಸಿ, ಸೂಕ್ತ ಸ್ಥಳ ಹುಡುಕಲು ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಸೌಧದ ಸಮಿತಿ ಸಭಾಂಗಣದಲ್ಲಿ ಇಬ್ಬರೂ ಸಚಿವರು ಸೋಮವಾರ ಅಧಿಕಾರಿಗಳ ಜತೆ ವಿಸ್ತೃತ ಮಾತುಕತೆ ನಡೆಸಿದರು.

'ಬರೇ 100 ಎಕರೆಯಲ್ಲಿ ಎ ಆರ್ ಎ ಐ ಕೇಂದ್ರ ಸ್ಥಾಪಿಸಿದರೆ ಅದು ಕೇವಲ ಒಂದು ಕೇಂದ್ರವಾಗಿ ಇರುತ್ತದೆ. ಅದರ ಬದಲು ಪೂರಕ ಆಟೊಮೊಬೈಲ್ ಕ್ಷೇತ್ರದ ಅಭಿವೃದ್ಧಿಗೆ ಬೇಕಾಗುವ ಹಾಗೆ ಕನಿಷ್ಠ 500 ಎಕರೆಯಲ್ಲಿ ಆ ಕೇಂದ್ರವನ್ನೂ ಸೇರಿಸಿಕೊಂಡು ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವುದು ಸೂಕ್ತ. ಇದನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಒಪ್ಪಿದ್ದಾರೆ. ಈ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ಇರುವ ಸರಕಾರಿ/ಖಾಸಗಿ ಜಮೀನನ್ನು ಗುರುತಿಸುವಂತೆ ವಿಶೇಷ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಚಿವ ಪಾಟೀಲ ತಿಳಿಸಿದ್ದಾರೆ.

ಕುಮಾರಸ್ವಾಮಿಯವರು ವಾಹನಗಳ ಪರೀಕ್ಷೆ ನಡೆಸಿ, ಪ್ರಮಾಣಪತ್ರ ಕೊಡುವ ಎ.ಆರ್.ಎ.ಐ ಕೇಂದ್ರ ಸ್ಥಾಪನೆಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಕೇಳಿದ್ದರು. ನಾವು ಬಸರಾಳು ಬಳಿ 105 ಎಕರೆ ತೋರಿಸಿದ್ದೇವೆ. ಇದು ಬಹುಮಟ್ಟಿಗೆ ಅವರಿಗೆ ಒಪ್ಪಿಗೆಯಾಗಿದೆ. ಆದರೆ ಈಗ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಚಿಂತನೆ ಬಂದಿದ್ದು ಪರ್ಯಾಯ ಜಾಗಕ್ಕೆ ಸಲಹೆ ನೀಡಲಾಗಿದೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಬೆಳ್ಳೂರಿನ ಬಳಿ 2021ರಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 425 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಪರಿಹಾರ ವಿತರಣೆ ಮಾತ್ರ ಬಾಕಿ ಇದೆ. ಈ ಜಾಗವನ್ನೂ ನೋಡುವಂತೆ ಕೇಂದ್ರ ಸರಕಾರವನ್ನು ಕೋರಲಾಗಿದೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ, ಮಂಡ್ಯ ಸಮೀಪದ ತೂಬಿನಕೆರೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಿರುವ ಪಾಂಡವಪುರ ಹಾಗೂ ಮಂಡ್ಯ ತಾಲ್ಲೂಕುಗಳ ಅಂಚಿನಲ್ಲಿಯೂ ಕೈಗಾರಿಕಾ ಹಬ್ ಸ್ಥಾಪಿಸಬಹುದು ಎಂದು ಸಭೆಯಲ್ಲಿ ಹಾಜರಿದ್ದ ಕೆಲವರು ಸಲಹೆ ನೀಡಿದರು.

ಅಧಿಕಾರಿಗಳ ವರದಿ ಬಳಿಕ ಮತ್ತೊಂದು ಸುತ್ತು ಸಭೆ ಸೇರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೈಗಾರಿಕಾ ಹಬ್ ಬಂದರೆ ಬಂಡವಾಳ ಹೂಡಿಕೆ, ಆರ್ಥಿಕ ವಹಿವಾಟು ಮತ್ತು ಉದ್ಯೋಗ ಸೃಷ್ಟಿ ಎರಡೂ ಸಾಧ್ಯವಾಗುತ್ತದೆ ಎಂದು ಪಾಟೀಲ ವಿವರಿಸಿದ್ದಾರೆ.

ಇದಲ್ಲದೆ ಮಂಡ್ಯ ಜಿಲ್ಲೆಯಲ್ಲೇ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಆ್ಯಂಡ್ರ್ಯೂ ಲೂಯಿ ಕಂಪನಿ ಲಿಮಿಟೆಡ್ ಸಂಸ್ಥೆಗೆ (ಎ.ಎಲ್.ಸಿ.ಎಲ್) ಕೂಡ 25-50 ಎಕರೆ ಭೂಮಿ ಬೇಕು ಎಂದು ಗಮನಕ್ಕೆ ತಂದಿದ್ದಾರೆ. ಈ ಕಂಪನಿಯು ಕೈಗಾರಿಕೆಗಳಿಗೆ ಬೇಕಾದ ಎಲೆಕ್ಟ್ರಿಕ್ ಸಾಧನಗಳು, ಬೃಹತ್ ಫ್ಯಾನುಗಳು, ವಿದ್ಯುತ್ ಪರಿವರ್ತಕ ಮುಂತಾದವನ್ನು ತಯಾರಿಸುತ್ತದೆ. ಅದಕ್ಕೆ ಅಗತ್ಯ ಭೂಮಿಯನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಹೆಚ್ಚು ಉದ್ಯಮಗಳು ಬರಬೇಕು. ಇದಕ್ಕೆ ಸೂಕ್ತ ನೀತಿ ಮತ್ತು ಕಾರ್ಯಪರಿಸರ ನಮ್ಮಲ್ಲಿದೆ. ಹೊಸ ಕೈಗಾರಿಕಾ ನೀತಿಯಲ್ಲಿ ಇವುಗಳಿಗೆ ಒತ್ತು ಕೊಡಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಭೆಯಲ್ಲಿ ಮಂಡ್ಯ ಶಾಸಕ ರವಿ ಗಣಿಗ, ಶಾಸಕ ಎಚ್.ಡಿ.ರೇವಣ್ಣ, ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು‌ ಮತ್ತು ಡಿ ಸಿ ತಮ್ಮಣ್ಣ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಕೆಐಎಡಿಬಿ ಸಿಇಒ ಡಾ.ಮಹೇಶ, ಎ.ಆರ್.ಎ.ಐ ಸಂಘಟನೆಯ ನಿರ್ದೇಶಕ ಡಾ.ರೆಜಿ ಮಥಾಯ್ ಮತ್ತು ಹಿರಿಯ ಉಪನಿರ್ದೇಶಕ ಡಾ. ಶಾಮಸುಂದರ ಮುಂತಾದವರು ಸಭೆಯಲ್ಲಿ ಇದ್ದರು.

Comments

Leave a Comment

Prev Post 2026-27ನೇ ಸಾಲಿನ ವರ್ಗಾವಣೆ ಮಾರ್ಗಸೂಚಿ ಪ್ರಕಟ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಶಾಸಕ ಕೆ ಎನ್ ರಾಜಣ್ಣರವರಿಂದ ವಿಶೇಷ ಪೂಜೆ

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ಕರ್ನಾಟಕ ಎಂ.ಎಸ್.ಎಂ.ಇ. ನೀತಿ - ರಾಜ್ಯ ಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಗಾರ-

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ನಮಗೆ ನಿಜವಾದ ಗುರು ನಾವೇ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ;ಇಲಾಖೆಯ ಸಿಬ್ಬಂದಿ ಕ್ರೀಡಾಕೂಟಕ್ಕೆ ಸಚಿವರಿಂದ ಚಾಲನೆ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ಎಲ್ಲ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ರಾಜಕೀಯವಾಗಿ ಸೋಲುಗೆಲುವು ಕಂಡಿದ್ದರೂ, ಜನಸೇವೆಯನ್ನು ಮರೆಯಲಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ವ್ಯಸನಮುಕ್ತ ಸಮಾಜಕ್ಕಾಗಿ ಸಹಾಯವಾಣಿ ಸ್ಥಾಪನೆ

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

ಮುನ್ನೂರು ಕುಟುಂಬಗಳಿಗೆ ೫೦ ಲಕ್ಷ ಮೊತ್ತದ ಬೆಂಬಲ ವಿತರಣೆ.

Read all News